ಕಳೆದ ಹಲವು ದಿನಗಳಿಂದ ಬಾಲಿವುಡ್‌ಗೆ ಹಣೆಬರಹ ಕೆಟ್ಟಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ಮತ್ತು ಅದಕ್ಕೆ ಸಂಬಂಧಿಸಿದ ಕೆಲವರ ವಿರುದ್ಧ ಜನರು ಬಾಯ್‌ಕಾಟ್ ಅಭಿಯಾನ ನಡೆಸುತ್ತಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ನಡೆಯುತ್ತಿರುವ ಈ ಬಾಯ್‌ಕಾಟ್ ಅಭಿಯಾನದ ಪರಿಣಾಮವು ಇತ್ತೀಚೆಗೆ ಬಿಡುಗಡೆಯಾದ ಅನೇಕ ಚಲನಚಿತ್ರಗಳ ಮೇಲೆ ಕಂಡುಬಂದಿದೆ. ಈ ಚಿತ್ರಗಳ ಬಗ್ಗೆ ಮಾತನಾಡುವುದಾದರೆ, ಕಳೆದ ತಿಂಗಳು ಆಗಸ್ಟ್ 11 ರಂದು ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’, ಅಕ್ಷಯ್ ಕುಮಾರ್ ಅವರ ಚಿತ್ರ ‘ರಕ್ಷಾ ಬಂಧನ’ ಮತ್ತು ತಾಪ್ಸಿ ಪನ್ನು ಅವರ ‘ದೊಬಾರಾ’ ಬಿಡುಗಡೆಯಾಗಿದ್ದವು. ಈ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿವೆ. ನಟ ಅಮೀರ್ ಖಾನ್ ಕೂಡ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ ತೆಗೆದುಕೊಂಡ ಶುಲ್ಕವನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು.
ಬಾಲಿವುಡ್‌ನ ಅತ್ಯಂತ ದುಬಾರಿ ಚಿತ್ರ ಬ್ರಹ್ಮಾಸ್ತ್ರ ಶುಕ್ರವಾರ (ಸೆಪ್ಟೆಂಬರ್ 9, 2022) ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ನಡೆದಿರುವ ಬಾಯ್‌ಕಾಟ್ ಟ್ರೆಂಡ್‌ನ ಪರಿಣಾಮ ದೊಡ್ಡ ಮಟ್ಟದಲ್ಲಿ ಗೋಚರಿಸುತ್ತಿದೆ. ಆದರೂ ಚಿತ್ರ ಗಳಿಸುತ್ತಲೇ ಇದೆ. ಆದರೆ, 410 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಬ್ರಹ್ಮಾಸ್ತ್ರ, ತಾನು ಖರ್ಚು ಮಾಡಿದ ಹಣವನ್ನ ವಸೂಲಿ ಮಾಡಲು ಬಹಳ ಸಮಯ ಹಿಡಿಯಬಹುದು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ರಣಬೀರ್ ಕಪೂರ್ (Ranbir Kapoor) ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ರಣಬೀರ್ ತಮ್ಮ ಚಿತ್ರದ ಸ್ಪಾಯ್ಲರ್ ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಬೇಡಿ ಎಂದು ಪ್ರೇಕ್ಷಕರಲ್ಲಿ ವಿನಂತಿಸುತ್ತಿದ್ದಾರೆ.
ವಾಸ್ತವವಾಗಿ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಬಿಡುಗಡೆಯಾದ ನಂತರ, ಸೋಶಿಯಲ್ ಮೀಡಿಯಾಗಳಲ್ಲಿ ಈ ಚಿತ್ರದ ಕಥೆ ಮತ್ತು ವಿಶೇಷವಾಗಿ ಸಂಭಾಷಣೆಗಳ (Dialogues) ಬಗ್ಗೆ ಅಪಹಾಸ್ಯ ಮಾಡಲಾಗುತ್ತಿದೆ. ಇದಾದ ನಂತರ, ರಣಬೀರ್ ಕಪೂರ್ ಅವರ ವೀಡಿಯೊ ವೈರಲ್ ಆಗಿತ್ತು. ಇದರಲ್ಲಿ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಯಾವುದೇ ಸ್ಪಾಯಿಲರ್ ಹಾಕಬೇಡಿ ಮತ್ತು ಜನರು ಥಿಯೇಟರ್‌ಗಳಲ್ಲಿ ಚಿತ್ರವನ್ನು ಆನಂದಿಸಲು ಅವಕಾಶ ಮಾಡಿಕೊಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ, ರಣಬೀರ್ ಕಪೂರ್ ಸಿನಿಮಾ ಹಾಲ್‌ನಲ್ಲಿ ಮೈಕ್‌ನಲ್ಲಿ ಮಾತನಾಡುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ, ರಣಬೀರ್ ಕಪೂರ್, “ಚಿತ್ರವನ್ನು ಸ್ವಲ್ಪ ಸ್ಪಾಯಿಲರ್ ಇದೆ ದಯವಿಟ್ಟು ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಬರೆಯದಿರಲು ಪ್ರಯತ್ನಿಸಿ. ಏಕೆಂದರೆ ಇಲ್ಲಿಯವರೆಗೂ ಸಿನಿಮಾ ನೋಡದವರು ಅದನ್ನು ಅನುಭವಿಸಲು ಬಯಸುತ್ತಾರೆ” ಎಂದಿದ್ದಾರೆ.
#RanbirKapoor request to all the fans not to post spoilers who watching #Brahmastra today pic.twitter.com/PIle9WtW2I
— k🚬 (@itsKabir16) September 8, 2022
ಕರಣ್ ಜೋಹರ್ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಗಳಲ್ಲಿ ‘ಬ್ರಹ್ಮಾಸ್ತ್ರ’ ಕೂಡ ಒಂದು. ಈ ಸಿನಿಮಾ ನಿರ್ಮಾಣಕ್ಕೆ ಅವರು 410 ಕೋಟಿ ಖರ್ಚು ಮಾಡಿದ್ದಾರೆ. ಅಲ್ಲದೆ, ಈ ಚಿತ್ರದ ನಿರ್ಮಾಣಕ್ಕೆ ಸುಮಾರು 9 ವರ್ಷಗಳು ಹಿಡಿದಿವೆ ಎನ್ನಲಾಗಿದೆ. ಇಷ್ಟೆಲ್ಲಾ ಆದರೂ ಚಿತ್ರ ಪ್ರೇಕ್ಷಕರಲ್ಲಿ ನೆಲೆಯೂರುವಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಗೆ ನಾಗಾರ್ಜುನ, ಅಮಿತಾಬ್ ಬಚ್ಚನ್ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಗಳಿಕೆಯ ಬಗ್ಗೆ ಹೇಳುವುದಾದರೆ, ಮೊದಲ ದಿನ ಅಂದರೆ ಬಿಡುಗಡೆಯಾದ ಮೊದಲ ದಿನವೇ ಸುಮಾರು 37 ಕೋಟಿ ಗಳಿಸಿತ್ತು. ಅದೇ ಸಮಯದಲ್ಲಿ, ಈ ಚಿತ್ರದ ಒಟ್ಟು ಗಳಿಕೆ (ಮೊದಲ ದಿನ) ಸುಮಾರು 75 ಕೋಟಿ ಎಂದು ಹೇಳಲಾಗುತ್ತಿದೆ. ಚಿತ್ರ ಇದೇ ರೀತಿ ಗಳಿಕೆ ಕಂಡರೆ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಎಂದು ಹೇಳಲಾಗುತ್ತಿದೆ.