VIDEO| ಮದುವೆಯಾಗುತ್ತಿದ್ದೇನೆ ಎಂಬ ಖುಷಿಯಲ್ಲಿ ಯುವತಿ ತನ್ನ ಭಾವಿ ಪತಿಯನ್ನೇ…..ನೆರೆದ ಜನರೆಲ್ಲರಿಗೂ ಬಿಗ್ ಶಾಕ್

in Kannada News/News/Story 172 views

ಮದುವೆಯ ದಿನ ಎಲ್ಲರ ಜೀವನದ ಅವಿಸ್ಮರಣೀಯ ಘಳಿಗೆಗಳಲ್ಲಿ ಒಂದಾಗಿದೆ. ಅಂದುಕೊಂಡಂತೆ ವಿವಾಹ ನಡೆದರೆ ದಂಪತಿಗೆ ಖುಷಿ. ಇನ್ನು ಕೆಲವರಿಗೆ ವಿವಾಹದ ಸಂದರ್ಭವೇ ಬಹಳ ಸಂತಸದ ಕ್ಷಣವಾಗಿರುತ್ತದೆ. ಆ ನಿಟ್ಟಿನಲ್ಲಿ ಒಟ್ಟಿಗೆ ಜೀವನ ಕಳೆಯುವ ಮಧುರ ಕ್ಷಣದ ಬಗ್ಗೆ ಯೋಚಿಸುತ್ತಿರುತ್ತಾರೆ. ಕೆಲವು ಮದುವೆಗಳಲ್ಲಿ ತಮ್ಮ ಸಂತೋಷವನ್ನು ಕೂಡಲೇ ಪ್ರದರ್ಶಿಸುವ ಮೂಲಕ ಮದುವೆ ಎಲ್ಲರ ನೆನಪಿನಲ್ಲೂ ಇರುವಂತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಮದುವೆ ಸಂದರ್ಭದಲ್ಲಿ ವರ ಕ್ಬೂಲ್ ಹೈ ಎಂದು ಉಚ್ಚರಿಸಿದಾಗ ವಧು ಸಂತೋಷಪಡುವ ವಿಡಿಯೋ ವೈರಲ್ ಆಗಿದೆ. ವಧು-ವರರು ವಿಡಿಯೋದಲ್ಲಿ ಮದುವೆಯ ಅತಿಥಿಗಳು ಮತ್ತು ಮೌಲ್ವಿಗಳೊಂದಿಗೆ ಕುಳಿತಿದ್ದಾರೆ. ಈ ಸಮಯದಲ್ಲಿ ವರನು ‘ಕುಬೂಲ್ ಹೈ’ (ಮದುವೆಗೆ ಒಪ್ಪಿಗೆ ಇದೆ) ಎಂದು ಹೇಳಿದ ತಕ್ಷಣ ವಧು ಸಂತೋಷ ಮತ್ತು ಸಡಗರದಿಂದ ಕುಳಿತಲ್ಲೇ ಕುಪ್ಪಳಿಸಿ ಸಂತೋಷ ಪಟ್ಟಿದ್ದಾಳೆ.

Advertisement

ಒಂದು ಕ್ಷಣ ವಧು ತಾನು ಇನ್ನೂ ಮದುವೆಯ ಶಾಸ್ತ್ರದಲ್ಲಿದ್ದೇನೆ ಎನ್ನುವುದನ್ನು ಮರೆತು ವರನಿಗೆ ಚುಂಬಿಸಿದ್ದಾಳೆ. ತಕ್ಷಣವೇ ವಾಸ್ತವಕ್ಕೆ ಮರಳಿ ತನ್ನ ಭಾವನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಆಕೆಯ ಸುತ್ತ ಮುತ್ತಲಿನ ಜನರು ಆಕೆಯ ಸಂತೋಷದಲ್ಲಿ ಪಾಲುದಾರರಾಗಿ ಹರ್ಷವ್ಯಕ್ತಪಡಿಸಿದಾಗ ಆಕೆ ಮುಕ್ತವಾಗಿ ತನ್ನ ಭಾವನೆ ವ್ಯಕ್ತಪಡಿಸುತ್ತಾಳೆ. ಕಡೆಗೆ ಅವಳು ವರನನ್ನು ಅಪ್ಪಿಕೊಂಡು ಮುದ್ದಿಸುತ್ತಾಳೆ.

ಅತ್ಯಂತ ಸಂತೋಷದಾಯಕ ಅಪರೂಪದ ಹೆಂಡತಿ ಎಂದು ವಿಡಿಯೋ ಶೀರ್ಷಿಕೆ ಹೊಂದಿದೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆದ ನಂತರ 15,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವಧುವಿನ ಸಂತೋಷವನ್ನು ಗಮನಿಸಿ ನೆಟ್ಟಿಗರು ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ ಮತ್ತು ದಂಪತಿಗೆ ನೆಮ್ಮದಿಯ ದಾಂಪತ್ಯವನ್ನು ಹಾರೈಸಿದ್ದಾರೆ.

“ಮುದ್ದಾದ ಪ್ರತಿಕ್ರಿಯೆ” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ” ರಕ್ತವನ್ನು ತಕ್ಷಣವೇ ಹೀರಲು ಪ್ರಾರಂಭಿಸಲು ಪರವಾನಗಿ ಪಡೆಯಿರಿ” ಎಂದು ಒಬ್ಬರು ತಮಾಷೆಯಾಗಿ ಹೇಳಿದ್ದಾರೆ.

“ಅಬ್ ಭಿ ಮಿಯಾ ಬೀಬಿ ಮೆ ಟಕ್ಕರ್ ಹೋ ಈಸ್ ಪಾಲ್ ಕೋ ಯಾದ್ ಕರ್ ಲಿಯಾ ಕರೀನ್. ” ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ. “ನಿಮ್ಮಿಬ್ಬರಿಗೂ ಅಭಿನಂದನೆಗಳು” ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ಹಿಂದೆ ಮದುವೆಯ ಸಂದರ್ಭದಲ್ಲಿ ಮಾತ್ರವೇ ವಧು-ವರರು ಪರಸ್ಪರ ಮುಖ ನೋಡಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಮದುವೆಯ ತನಕ ಮದುವೆಯ ಹೆಣ್ಣು ತನ್ನ ಕುತೂಹಲ, ತಾಳ್ಮೆ ಕಾಪಾಡಿಕೊಳ್ಳಬೇಕಿತ್ತು. ಆದರೆ ಕಾಲಾನಂತರದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ವಧು ಮದುವೆಯ ದಿನ ತನ್ನ ಸಂತೋಷವನ್ನು ಎಲ್ಲರೆದುರು ಮುಕ್ತವಾಗಿ ಅಭಿವ್ಯಕ್ತಿಸುವ ಮಟ್ಟಿಗೆ ಆಕೆ ಈಗ ಮುಕ್ತಳಾಗಿದ್ದಾಳೆ ಎನ್ನುವ ಅಂಶ ಖುಷಿ ಮೂಡಿಸುವುದು ಸುಳ್ಳಲ್ಲ.

ಇದಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ನೂತನ ವಧುವೊಬ್ಬರು ಮದುವೆಯಾದ ಬಳಿಕ ಮದುವೆ ಮನೆಯಿಂದ ತನ್ನ ಪತಿ, ಅತ್ತೆ ಮತ್ತು ಮಾವನನ್ನು ಸ್ವತಃ ತಾವೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ವಧುವಿನ ಈ ನಡೆ ಎಲ್ಲೆಡೆ ಶ್ಲಾಘನೆಗೆ ಒಳಗಾಗಿತ್ತು.

Advertisement
Share this on...