VIDEO| ವೇದಿಕೆಯ ಮೇಲೆ ಅಯ್ಯಪ್ಪ ಸ್ವಾಮಿಯ ಬಗ್ಗೆ ಕಾಮಿಡಿ ಮಾಡುತ್ತ ಅವಹೇಳನಕಾರಿ ಮಾತುಗಳನ್ನಾಡಿದ #ಬೈರಿ_ನರೇಶ್: ಹೊರಗೆ ಬರುತ್ತಲೇ ಅಟ್ಟಾಡಿಸಿ ಹೊಡೆದ ಅಯ್ಯಪ್ಪ ಸ್ವಾಮಿ ಭಕ್ತರು

in Uncategorized 11,052 views

ಅಯ್ಯಪ್ಪ ಸ್ವಾಮಿ ಮತ್ತು ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ಬೈರಿ ನರೇಶ್‌ನನ್ನ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೊಡಂಗಲ್ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬೈರಿ ನರೇಶ್ ಅಯ್ಯಪ್ಪ ಸ್ವಾಮಿಯ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದ. ನರೇಶ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ನರೇಶ್ ವಿರುದ್ಧ ಹೈದರಾಬಾದ್ ಪೊಲೀಸ್ ವಿಭಾಗದ ಸೈಬರ್ ಕ್ರೈಮ್ ಸೆಲ್ ನಿಂದ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಈತನ ವಿರುದ್ಧ ಪ್ರಕರಣ ದಾಖಲಿಸಿತ್ತು.

Advertisement

ಬೈರಿ ನರೇಶ್‌ನ ಅವಹೇಳನಕಾರಿ ಹೇಳಿಕೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅಯ್ಯಪ್ಪ ಸ್ವಾಮಿಯ ಭಕ್ತರು ಆಕ್ರೋಶಗೊಂಡಿದ್ದಾರೆ. ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರಿಂದ ಪ್ರತಿಭಟನೆಗಳು ನಡೆದವು. ‘ಭಾರತ್ ನಾಸ್ತಿಕ್ ಸಮಾಜಂ’ ಅಧ್ಯಕ್ಷ ಬ್ಯಾರಿ ನರೇಶ್‌ನನ್ನ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಮಾಹಿತಿಯ ಪ್ರಕಾರ ತೆಲಂಗಾಣ ಪೊಲೀಸರು ಹನಮಕೊಂಡ ಜಿಲ್ಲೆಯ ನರೇಶ್‌ನನ್ನು ಬಂಧಿಸಿದ್ದಾರೆ.

ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತರು ನರೇಶ್ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ನರೇಶ್ ವಿರುದ್ಧ ರಾಜ್ಯಾದ್ಯಂತ ಐಪಿಸಿ ಸೆಕ್ಷನ್ 153ಎ, 295ಎ, 208 ಮತ್ತು 505(2) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಲ್ಲದೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಇಡೀ ಪ್ರಕರಣದ ಕುರಿತು ತೆಲಂಗಾಣದ ಭಾರತ ರಾಷ್ಟ್ರ ಸಮಿತಿಯನ್ನು (BRS) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಸಿಆರ್ ಧರ್ಮನಿಂದನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತೆಲಂಗಾಣದಲ್ಲಿ ಹಿಂದೂ ದೇವತೆಗಳನ್ನು ನಿಂದಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಂಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಕೆಸಿಆರ್ ಅವರು ನಿಜವಾದ ಹಿಂದೂ ಎಂದು ಹೇಳಿಕೊಳ್ಳುತ್ತಾರೆ ಆದರೆ ಇಲ್ಲಿಯವರೆಗೆ ಕೊಡಂಗಲ್‌ನಲ್ಲಿ ವಿಷ್ಣು, ಶಿವ ಮತ್ತು ಅಯ್ಯಪ್ಪನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಕೇಳಿದರು.

ಮತ್ತೊಂದು ಟ್ವೀಟ್ ಮಾಡುತ್ತ ಅವರು, “TRS ಸರ್ಕಾರ ಸೀತಾಮಾತೆಯನ್ನ ಅಪಮಾನ ಮಾಡಿದ್ದ ಮುನವ್ವರ್ ಫಾರುಕಿಗೆ ಭದ್ರತೆ ನೀಡುತ್ತೆ. ಇದರ ಜೊತೆ ಜೊತೆಗೆ ಭಗವಾನ್ ಅಯ್ಯಪ್ಪ ಸ್ವಾಮಿಯ ಜನ್ಮದಿನದಂದೇ ಅವಹೇನಕಾರಿ ಹೇಳಿಕೆ ನೀಡುವಂತಹ ಬೈಠಕ್ ಮತ್ತು ಕಾರ್ಯಕ್ರಮ ಆಯೋಜನೆ ಮಾಡಲೂ ಅನುಮತಿ ನೀಡುತ್ತೆ” ಎಂದಿದ್ದಾರೆ.

ಎರಡು ದಿನಗಳ ಹಿಂದೆ ಕೊಡಂಗಲ್ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬೈರಿ ನರೇಶ್ ಅಯ್ಯಪ್ಪ ಸ್ವಾಮಿಯ ಕುರಿತು ಅವಹೇಳನಕಾರಿ ಪದ ಬಳಸಿದ್ದ. ಇದಕ್ಕಾಗಿ ಶುಕ್ರವಾರ (ಡಿಸೆಂಬರ್ 30, 2022) ಅಯ್ಯಪ್ಪ ಸ್ವಾಮಿಯ ಭಕ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು ಮತ್ತು ಬೈರಿ ನರೇಶ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಮತ್ತೊಂದು ವರದಿಯ ಪ್ರಕಾರ ನರೇಶ್ ಮತ್ತು ಆತನ ಸಂಗಡಿಗರನ್ನ ಅಯ್ಯಪ್ಪ ಭಕ್ತರು ಅಟ್ಟಾಡಿಸಿ ಹೊಡೆದಿದ್ದಾರೆ ಎಂಬ ವಿಡಿಯೋ ಕೂಡ ವೈರಲ್ ಆಗಿದೆ.

Advertisement
Share this on...