VIDEO| ಶಾಲೆಯೊಂದಕ್ಕೆ ಇನ್ಸ್ಪೆಕ್ಷನ್‌ಗಾಗಿ ಹೋಗಿ ಅಲ್ಲಿದ್ದ ಹೊಲಸು ಟಾಯ್ಲೆಟ್ ಕಂಡು ತಾನೇ ಸ್ವಚ್ಛ ಮಾಡಿದ ಬಿಜೆಪಿ ಸಂಸದ, ಎಲ್ಲೆಡೆ ಭಾರೀ ಶ್ಲಾಘನೆ

in Uncategorized 91 views

ನವದೆಹಲಿ: ಭಾರತೀಯ ಜನತಾ ಪಕ್ಷದ ರೀವಾ ಸಂಸದ ಜನಾರ್ದನ್ ಮಿಶ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಿಜೆಪಿ ಸಂಸದ ಮಿಶ್ರಾ ತಮ್ಮ ವಿಡಿಯೋ ಒಂದರಿಂದ ಸುದ್ದಿಯಾಗಿದ್ದಾರೆ. ಜನಾರ್ದನ್ ಮಿಶ್ರಾ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ವಿಡಿಯೋವೊಂಸನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಸ್ವಚ್ಛ ಭಾರತ ಅಭಿಯಾನದ ಸಂದೇಶವನ್ನು ನೀಡುತ್ತಿದ್ದಾರೆ. ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದರು ಬಂದಿದ್ದರು. ಸರ್ಕಾರಿ ಬಾಲಕಿಯರ ಶಾಲೆಗೂ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರ ಕಣ್ಣು ಬಾಲಕಿಯರ ಶೌಚಾಲಯದ ಮೇಲೆ ಬಿದ್ದಿತು. ಅದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಆಗ ಸ್ವತಃ ಬಿಜೆಪಿ ಸಂಸದರೇ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ ತಾವೇ ಹೆಣ್ಣು ಮಕ್ಕಳ ಶೌಚಾಲಯ ಸ್ವಚ್ಛಗೊಳಿಸಲು ಆರಂಭಿಸಿದರು. ಇದೀಗ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ಶೌಚಾಲಯದ ಅವ್ಯವಸ್ಥೆಯನ್ನು ಕಂಡು ಸ್ವಚ್ಚತೆಯ ಬಗ್ಗೆ ಸ್ವತಃ ಜನಾರ್ದನ್ ಮಿಶ್ರಾ ಅವರಢ ಕಾಳಜಿ ವಹಿಸಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲ ಹುಡುಗಿಯರ ಶೌಚಾಲಯವನ್ನು ತಮ್ಮ ಕೈಯಿಂದಲೇ ಸ್ವಚ್ಛಗೊಳಿಸಲು ಆರಂಭಿಸುತ್ತಾರೆ. ಇದಲ್ಲದೇ ಬಿಜೆಪಿ ಸಂಸದರು ಈ ಕೆಲಸಕ್ಕೆ ಯಾರ ಸಹಾಯವನ್ನೂ ತೆಗೆದುಕೊಳ್ಳುವುದಿಲ್ಲ, ಕೈಯಲ್ಲಿ ಗ್ಲೌಸ್ ಕೂಡ ಇಲ್ಲ ಎನ್ನುವುದನ್ನು ವಿಡಿಯೋದಲ್ಲಿ ಕಾಣಬಹುದು. ಜನಾರ್ದನ್ ಮಿಶ್ರಾ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಳ್ಳುತ್ತ, “ಪಕ್ಷವು ನಡೆಸುತ್ತಿರುವ ಸೇವಾ ಪಖವಾಡದ ಅಡಿಯಲ್ಲಿ ಯುವ ಮೋರ್ಚಾದಿಂದ ಬಾಲಕಿಯರ ಶಾಲೆಯ ಖತ್ಖಾರಿಯಲ್ಲಿ ಸಸಿ ನೆಡುವ ಕಾರ್ಯಕ್ರಮದ ನಂತರ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದೆ” ಎಂದು ಬರೆದುಕೊಂಡಿದ್ದಾರೆ.

ಜನರ ಪ್ರತಿಕ್ರಿಯೆಗಳು

ಈ ವೀಡಿಯೋ ಮೂಲಕ ಅವರು ಜನರಿಗೆ ಸ್ವಚ್ಛತೆಯ ಸಂದೇಶವನ್ನೂ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ವೇಳೆ ಬಿಜೆಪಿ ಸಂಸದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯೂಸರ್ ಗಳು ಈ ವೀಡಿಯೊಗೆ ತಮ್ಮ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ.

 

Advertisement
Share this on...