ನವದೆಹಲಿ: ಇತ್ತೀಚೆಗಷ್ಟೇ NIA ದೇಶದ ವಿವಿಧ ರಾಜ್ಯಗಳಲ್ಲಿ PFI, SDPI ಸಂಸ್ಥೆಗಳ ಕಛೇರಿಗಳ ಮೇಲೆ ದಾಳಿ ನಡೆಸಿತ್ತು. ದಾಳಿಯ ಸಂದರ್ಭದಲ್ಲಿ, ವಿವಿಧ ರಾಜ್ಯಗಳಿಂದ PFI ಮುಖ್ಯಸ್ಥರನ್ನೂ ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಲಕ್ಷಾಂತರ ರೂಪಾಯಿಯನ್ನೂ ವಶಕ್ಕೆ ಪಡೆಯಲಾಗಿತ್ತು. PFI ದೇಶವಿರೋಧಿ ಚಟುವಟಿಕೆಗಳು ಸೇರಿದಂತೆ ಗಲಭೆಗಳನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ NIA PFI ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಆದರೆ ಕೆಲವರಿಗೆ NIA ಯ ಈ ಕಾರ್ಯಾಚರಣೆಯಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಈ ಜನರು NIA ಕಾರ್ಯಾಚರಣೆಯನ್ನು ವಿರೋಧಿಸುತ್ತಿದ್ದಾರೆ.
#WATCH | Maharashtra: ‘Pakistan Zindabad’ slogans were heard outside the District Collector's office yesterday in Pune City where PFI cadres gathered against the recent ED-CBI-Police raids against their outfit. Some cadres were detained by Police; they were arrested this morning. pic.twitter.com/XWEx2utZZm
— ANI (@ANI) September 24, 2022
ಏನಿದು ಪ್ರಕರಣ?
ವಾಸ್ತವವಾಗಿ, PFI ವಿರುದ್ಧ NIA ನಡೆಸಿರುವ ದಾಳಿಯನ್ನ ವಿರೋಧಿಸಿ PFI ಬೆಂಬಲಿಗರು ಪುಣೆಯ ಕಲೆಕ್ಟರ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತ ಎನ್‌ಐಎ ಕಾರ್ಯಾಚರಣೆಯನ್ನ ವಿರೋಧಿಸಿದರು. ಇದೇ ವೇಳೆ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಯಾರ ವೀಡಿಯೋ ಕೂಡ ಬೆಳಕಿಗೆ ಬಂದಿದೆ, ಆದರೆ ಪೋಲಿಸ್ ಹಾಗು ಸ್ಥಳೀಯ ಆಡಳಿತಕ್ಕೆ ಈ ಇಡೀ ವಿಷಯವನ್ನು ತಿಳಿದ ಬಳಿಕ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಎತ್ತಿರುವ ಪ್ರಕರಣವನ್ನು PFI ಬೆಂಬಲಿಗರು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಇಡೀ ಪ್ರಕರಣದ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ಈಗ ಮುಂದಿನ ದಿನಗಳಲ್ಲಿ ಈ ಇಡೀ ಪ್ರಕರಣ ಏನಾಗಲಿದೆ ಎಂಬುದರ ಮೇಲೆ ಎಲ್ಲರ ದೃಷ್ಟಿಯೂ ಇದರ ಮೇಲೆಯೇ ಇರಲಿದೆ. ಇದೇ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದವರನ್ನೆಲ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರು ಬಂಧಿಸಿದ ನಂತರವೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಲು ಈ ಜನರು ಹಿಂಜರಿಯುತ್ತಿಲ್ಲ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈಗ ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಇವರೆಲ್ಲರ ವಿರುದ್ಧ ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ. ಎಲ್ಲರೂ ಇದಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಜನರು ಪೊಲೀಸರ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದರು, ನಂತರ ಇವರ ವಿರುದ್ಧ ಕ್ರಮ ನಡೆಯುತ್ತಿದೆ. ಆದಾಗ್ಯೂ, ಈಗ ಈ ಸಂಪೂರ್ಣ ವಿಷಯವು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ.