ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವನ್ನು ಅಪಹಾಸ್ಯ ಮಾಡಲಾಗುತ್ತಿರುವಾಗ, ಅದರ ಹಿರಿಯ ಸೇನಾಧಿಕಾರಿ ಇತ್ತೀಚೆಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿರುವ ಹೇಳಿಕೆಯೊಂದು ವೈರಲ್ ಆಗುತ್ತಿದೆ.
ಪಾಕಿಸ್ತಾನದ ಹಿರಿಯ ಸೇನಾಧಿಕಾರಿಯೊಬ್ಬ ತಮ್ಮ ಮುಂದಿದ್ದ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತವನ್ನು ವಶಪಡಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂಧಿಸಿ ಇಸ್ಲಾಮಿಕ್ ರಾಷ್ಟವನ್ನಾಗಿ ಮಾಡುತ್ತೇವೆ ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಭಾರತವನ್ನು ಆಕ್ರಮಿಸಿದ ನಂತರ ಪ್ಯಾಲೆಸ್ತೀನ್ ನನ್ನು ವಿಮೋಚನೆಗೊಳಿಸುವುದಾಗಿ ಪಾಕಿಸ್ತಾನಿ ಸೇನೆಯ ಹಿರಿಯ ಅಧಿಕಾರಿ ಹೇಳಿದ್ದು ವಿಚಿತ್ರವೆಂದರೆ ಅಲ್ಲಿ ನಿಂತಿದ್ದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
#BREAKING In this video now viral on social media, a senior #PakistanArmy officer is seen talking to a crowd about invading and occupying #India and imprisoning #Modi. And then liberating Palëst¡ne followed by the return of the mythical Imam Mehdi. What grandeur delusions! pic.twitter.com/g9PunTnoST
— Taha Siddiqui (@TahaSSiddiqui) December 5, 2023
ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ನಿವೃತ್ತ ಮೇಜರ್ ಜನರಲ್ ಗೌರವ್ ಆರ್ಯ ಅವರು ಪಾಕಿಸ್ತಾನಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಮೇಲೆ ಆಕ್ರಮಣ ಮಾಡುವ ಬಗ್ಗೆ ಮಾತನಾಡುವ ಮೊದಲು ತೂಕ ಇಳಿಸಿಕೊಳ್ಳಲು ನಾನು ಈ ಪಾಕಿಸ್ತಾನದ ಸೇನಾ ಅಧಿಕಾರಿಗೆ ಸಲಹೆ ನೀಡಲು ಬಯಸುತ್ತೇನೆ ಎಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಮಾತನಾಡುತ್ತಾ, ದೇಶದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಇತ್ತೀಚೆಗೆ ಹವಾಮಾನ ಶೃಂಗಸಭೆಗಾಗಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ವಿಶ್ವ ನಾಯಕರ ಫೋಟೋ ಸೆಷನ್ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರೊಂದಿಗೆ ಮೊದಲ ಸಾಲಿನಲ್ಲಿ ನಿಂತರೆ, ಅನ್ವರ್ ಉಲ್ ಹಕ್ ಕಾಕರ್ ಅವರು ಮೂಲೆಯಲ್ಲಿ ಕೊನೆಯ ಸಾಲಿನಲ್ಲಿ ನಿಂತರು. ಇತ್ತೀಚೆಗಷ್ಟೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.