ರಾಮ ನಾಮ ಹಾಡಿರೋ ರಾಮ ಬರುವನೋ ಹಾಡು ಹಾಡುತ್ತಿದ್ದಂತೆ ಎದ್ದು ಹೋದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ. ಸಂಗೀತೋತ್ಸವ ಕಾರ್ಯಕ್ರಮದಿಂದಲೇ ಹೊರನಡೆದ ಸಚಿವ. ಹೋಗು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ರಾಮನ ಹಾಡು ಕೇಳಿ ಎದ್ದು ಹೋಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಚಾಮರಾಜನಗರ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ ಯಾವಾಗಲೂ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ವೇಳೆ ರಜೆ ಕೊಡದಿರುವುದು, ಮಂಡ್ಯದ ಹನುಮಧ್ವಜ ತೆರವು ಗೊಳಿಸಿರುವಂಥ ಘಟನೆಗಳು ಅನುಮಾನಗಳಿಗೆ ಇಂಬು ಕೊಡುತ್ತಿವೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಗಾಯಕ ರಾಮನ ಕುರಿತು ಹಾಡು ಹಾಡುತ್ತಿದ್ದಂತೆ ಕಾಂಗ್ರೆಸ್ ಉಸ್ತುವಾರಿ ಸಚಿವನೋರ್ವ ಅಸಮಾಧಾನದಿಂದ ಎದ್ದು ಹೋದ ಘಟನೆ ನಡೆದಿದೆ.
ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನ ಆವರಣದಲ್ಲಿ ಸಂಗೀತೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಂಗೀತ ಮಾಂತ್ರಿಕ ಅರ್ಜುನ ಜನ್ಯರ ಗಾಯನಕ್ಕೆ ಜನರು ಮನಸೋತು ಕೇಳುತ್ತಿದ್ದರು.
ರಾಮ ನಾಮ ಹಾಡಿರೋ ರಾಮ ಬರುವನೋ ಹಾಡು ಹಾಡುತ್ತಿದ್ದಂತೆ ಎದ್ದು ಹೋದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ. ಸಂಗೀತೋತ್ಸವ ಕಾರ್ಯಕ್ರಮದಿಂದಲೇ ಹೊರನಡೆದ ಸಚಿವ. ಹೋಗು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ರಾಮನ ಹಾಡು ಕೇಳಿ ಎದ್ದು ಹೋಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ರಾಮನ ಕುರಿತು ಹಾಡುತ್ತಿದ್ದ ವೇಳೆ ಕಾರ್ಯಕ್ರಮದಿಂದಲೇ ಹೊರನಡೆದ ಸಚಿವ ನಡೆಯ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ನ ನೈಜ ಮನಸ್ಥಿತಿ ಎಂದು ಕೆಲವರು ಕಿಡಿಕಾರಿದ್ದಾರೆ. ಇನ್ನು ಕೆಲವರು ರಾಮನ ಹಾಡು ಕೇಳಿದ್ರೆ ಕಾಂಗ್ರೆಸ್ನವರಿಗೆ ಆಗಿಬರೋಲ್ಲ ಹೀಗಾಗಿ ಅವರು ಎದ್ದು ಹೋಗಿರುವುದು ಸಹಜವೇ ಎಂದಿದ್ದಾರೆ.