ಗಾಂಧೀನಗರ: ಗುಜರಾತಿನ ಜಮಾನಗರದಲ್ಲಿ ಸಿನಿಮಾ ಶೈಲಿಯ ಶಾಕಿಂಗ್ ವೀಡಿಯೋ ವೈರಲ್ ಆಗಿದೆ. ಒಂದು ಕಡೆ ರೈಲು ಬರುತ್ತಿದ್ರೆ, ಇತ್ತ ಓರ್ವ ವ್ಯಕ್ತಿ ಹಳಿಯಲ್ಲಿ ಸಿಲುಕಿದ್ದ ಸ್ಕೂಟಿ ತೆಗೆಯಲು ಹರಸಾಹಸ ಪಡುತ್ತಿರೋ ವೀಡಿಯೋ ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿದೆ.
ಯುವಕನೋರ್ವ ತನ್ನ ಸ್ಕೂಟಿ ಜೊತೆ ರೈಲ್ವೇ ಹಳಿಯನ್ನ ಕ್ರಾಸ್ ಮಾಡುತ್ತಿದ್ದನು. ಅಷ್ಟರಲ್ಲಿಯೇ ರೈಲು ಆಗಮಿಸುತ್ತಿರೋದು ಕಾಣಿಸಿದೆ. ಯುವಕ ಸಹ ಅವಸರದಲ್ಲಿ ಹಳಿ ಕ್ರಾಸ್ ಮಾಡುವಾಗ ಸ್ಕೂಟರ್ ಅಲ್ಲಿಯೇ ಸಿಲುಕಿಕೊಂಡಿದೆ. ಯುವಕ ಹಳಿಯಿಂದ ಸ್ಕೂಟಿ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ರೆ, ದೂರದಲ್ಲಿದ್ದ ಜನರ ಎದೆ ಬಡಿತ ಪಕ್ಕದಲ್ಲಿದವರಿಗೂ ಕೇಳಿಸುತ್ತಿತ್ತು.
ಯುವಕ 100 ಮೀಟರ್ ಸಮೀಪ ಬರೋವರೆಗೂ ಸ್ಕೂಟಿ ತೆಗೆಯಲು ಪ್ರಯತ್ನಿಸಿದ್ದಾನೆ. ಆದ್ರೆ ಸ್ಕೂಟಿ ಅಲ್ಲಿಯೇ ಸಿಲುಕಿದ ಪರಿಣಾಮ ರೈಲು ಸಮೀಪಕ್ಕೆ ಬರುತ್ತಿದ್ದಂತೆ ಪಕ್ಕಕ್ಕೆ ಜಿಗಿದು ಉಳಿಸಿಕೊಂಡಿದ್ದಾನೆ. ರೈಲು ಸ್ಕೂಟಿಯನ್ನ ಸುಮಾರು 100 ಮೀಟರ್ ವರೆಗೂ ಎಳೆದೊಯ್ದು ನಿಂತಿದೆ. ರೈಲು ನಿಲ್ಲಿಸಿದ ಬಳಿಕ ಚಾಲಕರು ಅಪ್ಪಚ್ಚಿಯಾಗಿದ್ದ ಸ್ಕೂಟಿಯನ್ನ ತೆಗೆದಿದ್ದಾರೆ.
ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎದೆ ಝಲ್ಲೆನ್ನಿಸುವ ವೀಡಿಯೋ ಹೆಚ್ಚು ಶೇರ್ ಆಗುತ್ತಿದೆ. ವಾಹನ ಸವಾರರು ಸೂಚಿತ ಮಾರ್ಗದಲ್ಲಿಯೇ ರೈಲು ಹಳಿಯನ್ನ ಕ್ರಾಸ್ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ನೋಡು ನೋಡುತ್ತಿದ್ದಂತೆ ಕಂದಕದ ಪಾಲಾದ ಹ್ಯುಂಡೈ ವೆನ್ಯೂ ಕಾರು
ಕೆಲವೊಮ್ಮೆ ಮನುಷ್ಯರು ಸಹ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಹಲವಾರು ಘಟನೆಗಳು ವರದಿಯಾಗಿವೆ. ಕಳೆದ ವರ್ಷ ಕೊಡಗಿನಲ್ಲಿ ಸುರಿದ ಭಾರೀ ಮಳೆ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಭಾರೀ ಮಳೆಯಿಂದಾಗಿ ತಲಕಾವೇರಿ ಬಳಿ ಗು ಡ್ಡ ಕು ಸಿ ದು ಅಲ್ಲಿನ ಅರ್ಚಕರು ವಾಸವಿದ್ದ ಮನೆ ಕುಸಿದು, ಅರ್ಚಕರು ಸಾ ವ ನ್ನ ಪ್ಪಿ ದ್ದರು.
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಅಲ್ಲಿನ ಹಲವು ಪ್ರದೇಶಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿವೆ. ಭಾರಿ ಮಳೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
ಮುಂಬೈನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರೊಂದು ಇದ್ದಕ್ಕಿದ್ದಂತೆ ಕಂದಕಕ್ಕೆ ಬಿದ್ದು ಕಣ್ಮರೆಯಾದ ಘಟನೆ ವರದಿಯಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಂಬೈನ ಘಾಟ್ಕೊಪರ್’ನ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಹ್ಯುಂಡೈ ವೆನ್ಯೂ ಕಾರು ಇದ್ದಕ್ಕಿದ್ದಂತೆ ಅಲ್ಲಿದ್ದ ಕಂದಕದಲ್ಲಿ ಮುಳುಗಿದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ ಆ ಕಾರು ಕಂದಕದ ನೀರಿನಲ್ಲಿ ಮುಳುಗಿದೆ.
ಆ ಪಾರ್ಕಿಂಗ್ ಪ್ರದೇಶದ ಬಳಿ ವಾಸಿಸುವ ನಿವಾಸಿಯೊಬ್ಬರು ಈ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕಾರು ಕಂದಕಕ್ಕೆ ಬಿದ್ದು ಕಣ್ಮರೆಯಾಗುವುದನ್ನು ಕಾಣಬಹುದು.
ವರದಿಗಳ ಪ್ರಕಾರ ಈ ಕಾರು ಮುಳುಗಿದ ಸ್ಥಳದ ಕೆಳಗೆ ಬಾವಿಯಿದೆ. ಆ ಬಾವಿಯನ್ನು ಕಾಂಕ್ರೀಟ್ ಚಪ್ಪಡಿಗಳಿಂದ ಮುಚ್ಚಲಾಗಿತ್ತು. ಕಾರನ್ನು ಆ ಬಾವಿಯ ಮೇಲೆ ನಿಲ್ಲಿಸಲಾಗಿತ್ತು. ಭಾರಿ ಮಳೆಯಿಂದಾಗಿ ಕಾಂಕ್ರೀಟ್ ಚಪ್ಪಡಿ ಮುರಿದು ಕಾರು ಕೆಳಗಿರುವ ಬಾವಿಯೊಳಗೆ ಬಿದ್ದಿದೆ.
ಬಾವಿ ಚಿಕ್ಕ ಗಾತ್ರದಲ್ಲಿದ್ದ ಕಾರಣ ಒಂದು ಕಾರು ಮಾತ್ರ ಆ ಬಾವಿಯೊಳಗೆ ಬಿದ್ದಿದೆ. ಹಲವು ಕಾರುಗಳನ್ನು ಆ ಬಾವಿಯ ಸಮೀಪದಲ್ಲೇ ನಿಲ್ಲಿಸಲಾಗಿದ್ದರೂ ಅವುಗಳಿಗೆ ಯಾವುದೇ ತೊಂದರೆಯಾಗಿಲ್ಲ.
ಮನೆಯ ಹೊರಗೆ ಕಾರುಗಳನ್ನು ಪಾರ್ಕ್ ಮಾಡುವಾಗ ಬಹಳ ಜಾಗರೂಕರಾಗಿರುವುದು ಅವಶ್ಯಕ. ಅದರಲ್ಲೂ ಮಳೆಗಾಲದಲ್ಲಿ ಕಾರುಗಳನ್ನು ಸುರಕ್ಷಿತ ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಒಳಚರಂಡಿ, ಬಾವಿ, ಹಳೆಯ ಕಟ್ಟಡ, ಶಿಥಿಲವಾದ ಗೋಡೆ, ಮರ ಸೇರಿದಂತೆ ವಾಹನಗಳಿಗೆ ಹಾನಿಯುಂಟು ಮಾಡುವ ವಸ್ತುಗಳಿಂದ ದೂರ ವಾಹನಗಳನ್ನು ಪಾರ್ಕ್ ಮಾಡುವುದು ಉತ್ತಮ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳಿಗೆ ಹಾನಿಯಾಗುವುದು ಖಚಿತ.