Viral video: ಒಬ್ಬ ಆ ರೋ ಪಿ, 2 ಬೈಕ್ ಇದ್ದರೆ ಯಾವ ರೀತಿ ಬೈಕ್ ಶೇರ್ ಮಾಡಿಕೊಳ್ಳಬೇಕು ಎಂದು ಇದರಿಂದ ಗೊತ್ತಾಯಿತು ಅಂತ ನೆಟ್ಟಿಗರು ತಮಾಷೆಯಾಗಿ ಕಮೆಂಟಿಸಿದ್ದಾರೆ.
ಕ ಳ್ಳ ನಾಗಲಿ, ಪೊಲೀಸ್ ಆಗಲಿ, ರಾಜಕಾರಣಿ ಆಗಲಿ, ದೊಡ್ಡ ವಿಜ್ಞಾನಿ-ಮೇಧಾವಿಯೇ ಆಗಲಿ ಕಾಮನ್ ಸೆನ್ಸ್ಅನ್ನೋದು ಎಷ್ಟು ಮುಖ್ಯ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಕೋ ಲು ಕೊಟ್ಟು ಹೊ ಡೆ ಸಿ ಕೊಳ್ಳೋದು ಎಂಬ ಮಾತಿಗೆ ಪಕ್ಕಾ ಉದಾಹರಣೆಯಿದು. ಪೊ ಲೀ ಸ್ ಪೇದೆಯೊಬ್ಬರು ಆ ರೋ ಪಿ ಯನ್ನು ಬಂ ಧಿ ಸಿ ಠಾಣೆಗೆ ಕರೆದೊಯ್ಯುವಾಗ ತ ಲೆ ಯನ್ನು ಮನೆಯಲ್ಲೇ ಬಿಟ್ಟು ಬಂದಂತೆ ಕಾಣುತ್ತೆ. ಆ ರೋ ಪಿ ಯನ್ನು ಸ್ಟೇಷನ್ ಕರೆದೊಯ್ಯುವಾಗ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದಾರೆ.
ಒಂದು ಬೈಕ್ನಲ್ಲಿ ಇಬ್ಬರು ಪೇದೆಗಳು ಕುಳಿತುಕೊಂಡು, ಆ ರೋ ಪಿ ಗೆ ಪ್ರತ್ಯೇಕವಾಗಿ ಒಂದು ಬೈಕ್ ಕೊಟ್ಟಿದ್ದಾರೆ. ಠಾಣೆಗೆ ಹೋಗುವ ಮಾರ್ಗ ಮಧ್ಯೆ ಆ ರೋ ಪಿ ತ ಪ್ಪಿ ಸಿ ಕೊಳ್ಳದಿರಲಿ ಎಂದು ಬೈಕ್ ಚಲಾಯಿಸುವಾಗ ಆ ರೋ ಪಿ ಯ ಕೈಯನ್ನು ಹಿಡಿದುಕೊಂಡಿದ್ದಾರೆ. ಬೈಕ್ ಹಿಂಬದಿಯಲ್ಲಿದ್ದ ಪೇದೆ ಆ ರೋ ಪಿ ಕೈನ ಹಿಡಿದುಕೊಂಡೇ ಸಾಗಿದ್ದಾರೆ. ಆ ರೋ ಪಿ ಒಂದು ಕೈನಲ್ಲಿ ಬೈಕ್ ಓಡಿಸಿಕೊಂಡು, ಇನ್ನೊಂದು ಕೈಯನ್ನ ಪೇದೆಗೆ ಕೊಟ್ಟು ಸವಾರಿ ನಡೆಸಿದ್ದಾನೆ.
ಕ ಳ್ಳ ನಿಗೆ ಪ್ರತ್ಯೇಕವಾಗಿ ಬೈಕ್ ಕೊಟ್ಟು, ತಪ್ಪಿಸಿಕೊಳ್ಳದಂತೆ ಕೈ ಹಿಡಿದುಕೊಂಡು ಸವಾರಿ ನಡೆಸಿರುವ ಘಟನೆಯ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋಗೆ ತರಹೇವಾರಿ ಕಮೆಂಟ್ಗಳು ಬಂದಿವೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುಪಿ ಪೊ ಲೀ ಸ ರ ಕಾರ್ಯ ವೈಖರಿ ಬಗ್ಗೆ ಟೀಕೆಗಳ ಸುರಿಮಳೆಯೇ ಹರಿದು ಬಂದಿದೆ. ಇಷ್ಟು ಮಾತ್ರದ ಬುದ್ಧಿ ಇರುವವರು ಕ್ರಿ ಮಿ ನ ಲ್ ಗಳನ್ನು ಹೇಗೆ ಹಿಡಿಯುತ್ತಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಟ್ರೋಲ್ ಪೇಜ್ಗಳು, ಮೀಮ್ ಪೇಜ್ಗಳಂತೂ ವಿಡಿಯೋಗೆ ತರಹೇವಾರಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಕಾ ನೂ ನಿ ನ ಕೈ ದೊಡ್ಡಿದೆ ಎಂದು ಕೇಳಿದ್ದೆ, ಈಗ ನೋಡಿದ್ದು ಆಯ್ತು ಎಂದು ಒಬ್ಬರು ಬರೆದಿದ್ದಾರೆ. ಇಬ್ಬರು ಪೊ ಲೀ ಸ ರು, ಒಬ್ಬ ಆ ರೋ ಪಿ, 2 ಬೈಕ್ ಇದ್ದರೆ ಯಾವ ರೀತಿ ಬೈಕ್ ಶೇರ್ ಮಾಡಿಕೊಳ್ಳಬೇಕು ಎಂದು ಇದರಿಂದ ಗೊತ್ತಾಯಿತು ಅಂತ ಮತ್ತೊಬ್ಬರು ಕಮೆಂಟಿಸಿದ್ದಾರೆ. ಕಾಮನ್ ಸೆನ್ಸ್ ಇಲ್ಲದವರು ಪೊ ಲೀ ಸ್ ಹೇಗೆ ಆದರು ಅಂತ ಹಲವರು ಪ್ರಶ್ನಿಸಿದ್ದಾರೆ. ತಮಾಷೆಭರಿತ ಕಮೆಂಟ್ಗಳು ಎಂತವರಲ್ಲೂ ನಗೆ ಉಕ್ಕಿಸುತ್ತಿವೆ.