ಇನ್ಸ್ಟಾಗ್ರಾಂ ನಲ್ಲಿ @TheFigen_ ಅಲೌಂಟ್ ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಲಾಗಿದ್ದು ಇದರಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿ ತನ್ನ ಜೀವವನ್ನು ಲೆಕ್ಕಿಸದೆ ಮಕ್ಕಳ ಜೀವ ಉಳಿಸಿರುವ ದೃಶ್ಯ ಸೆರೆಯಾಗಿದೆ. ರಭಸದಿಂದ ಹರಿಯಿತ್ತಿದ್ದ ನದಿಯ ಅಲೆಗಳ ಮುಂದೆ ಬಂಡೆಗಲ್ಲಿನಂತೆ ನಿಂತು ಇಬ್ಬರು ಮಕ್ಕಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದನು. ಈ ವಿಡಿಯೋವನ್ನು 38 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಆಗಾಗ ನಾವು ತೆರೆಯ ಮೇಲೆ ಗೂಂಡಾಗಳೊಂದಿಗೆ ಹೋರಾಡುವ ಹೀರೋಗಳನ್ನು ನೋಡುತ್ತೇವೆ. ಆದರೆ ವಾಸ್ತವದಲ್ಲಿ ಹೀರೋ ಕ್ಯಾಮೆರಾದಲ್ಲಿ ತನ್ನ ಕೈಚಳಕ ತೋರಿಸುವವನಲ್ಲ. ನಿಜ ಜೀವನದಲ್ಲಿ ಬೇರೊಬ್ಬರಿಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಡಲು ಹಿಂಜರಿಯದವರು ನಿಜವಾದ ಹೀರೋಗಳು. ಅಂತಹ ವ್ಯಕ್ತಿಯ ವೀಡಿಯೊವೊಂದು ಈಗ ವೈರಲ್ ಆಗುತ್ತಿದೆ, ಜನರು ಈತನನ್ನ ನಿಜವಾದ ಹೀರೋ ಎಂದು ಕರೆಯುತ್ತಿದ್ದಾರೆ. ನದಿಯ ರಭಸವಾದ ಪ್ರವಾಹದಲ್ಲಿ ಸಿಲುಕಿದ ಮಕ್ಕಳನ್ನು ರಕ್ಷಿಸಲು ಈತ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ.
ಇನ್ಸ್ಟಾಗ್ರಾಂ ನಲ್ಲಿ @TheFigen_ ಅಲೌಂಟ್ ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಲಾಗಿದ್ದು ಇದರಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿ ತನ್ನ ಜೀವವನ್ನು ಲೆಕ್ಕಿಸದೆ ಮಕ್ಕಳ ಜೀವ ಉಳಿಸಿರುವ ದೃಶ್ಯ ಸೆರೆಯಾಗಿದೆ. ರಭಸದಿಂದ ಹರಿಯಿತ್ತಿದ್ದ ನದಿಯ ಅಲೆಗಳ ಮುಂದೆ ಬಂಡೆಗಲ್ಲಿನಂತೆ ನಿಂತು ಮಕ್ಕಳು ಕೊಚ್ಚಿ ಹೋಗದಿರಲಿ ಎಂದು ಇಬ್ಬರು ಮಕ್ಕಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದನು. ಈ ವಿಡಿಯೋವನ್ನು 38 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಇಬ್ಬರು ಮಕ್ಕಳ ಜೀವ ಉಳಿಸಲು ರಭಸವಾದ ನದಿಗೆ ಹಾರಿದ ವ್ಯಕ್ತಿ
ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ನದಿಯ ವೇಗದ ಪ್ರವಾಹದಲ್ಲಿ ಸಿಕ್ಕಿಬಿದ್ದಿರುವುದನ್ನು ಕಾಣಬಹುದು, ವಾಸ್ತವವಾಗಿ ಇದು ಅವನ ಮೂರ್ಖತನದ ಸಂಕೇತವಲ್ಲ ಬದಲಾಗಿ ಆತನ ಧೈರ್ಯದ ಸಂಕೇತವಾಗಿದೆ. ಆತ ಈ ರಿಸ್ಕ್ ತೆಗೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿನ ವೀವ್ಸ್ ಆಥವ ಲೈಕ್‌ಗಳಿಗಾಗಿ ಅಲ್ಲ ಬದಲಾಗಿ ಇಬ್ಬರು ಮಕ್ಕಳ ಜೀವ ಉಳಿಸಲು. ನದಿಯಲ್ಲಿ ನೀರಿನ ಪ್ರಮಾಣ ಏಕಾಏಕಿ ಹೆಚ್ಚಾದ ಪರಿಣಾಮ ಇಬ್ಬರು ಮಕ್ಕಳು ಸಿಲುಕಿಕೊಳ್ಳುತ್ತಾರೆ. ಅವರನ್ನು ರಕ್ಷಿಸುವ ಸಲುವಾಗಿ, ವ್ಯಕ್ತಿಯೊಬ್ಬನು ನದಿಗೆ ಹಾರಿ, ನಂತರ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವರನ್ನು ನದಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ, ಆದರೆ ರಭಸವಾದ ಪ್ರವಾಹದ ಮುಂದೆ ಆ ವ್ಯಕ್ತಿಯೂ ಹಲವು ಬಾರಿ ಕೊಚ್ಚಿ ಹೋಗುವ ಅಪಾಯ ಎದುರಿಸುತ್ತಾನೆ, ಅನೇಕ ಬಾರಿ ಅವನ ಧೈರ್ಯವೂ ಕುಗ್ಗಿತು, ಆದರೆ ಆತ ತನ್ನ ಧೈರ್ಯ ಬಿಡಲಿಲ್ಲ ಮತ್ತು ಕೊನೆಯವರೆಗೂ ಮಕ್ಕಳನ್ನು ಹಿಡಿದುಕೊಂಡೇ ನಿಂತಿದ್ದನು.
He is a hero! 💞pic.twitter.com/wKcUKVQpmH
— Figen (@TheFigen_) December 21, 2022
ಅಪರಿಚಿತ ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಆ ವ್ಯಕ್ತಿಯ ಧೈರ್ಯಕ್ಕೆ ಜನ ಸೆಲ್ಯೂಟ್ ಹೊಡೆದು ರಿಯಲ್ ಹೀರೋ ಎಂದು ಹೇಳುತ್ತಿದ್ದಾರೆ. ಆ ವ್ಯಕ್ತಿ ಮಕ್ಕಳಿಬ್ಬರನ್ನೂ ದಡಕ್ಕೆ ಎಳೆದೊಯ್ದ ತಕ್ಷಣ ಅಲ್ಲಿದ್ದವರು ಕೂಡಲೇ ಅವರನ್ನು ಹಿಡಿದು ಸಹಾಯ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಬ್ಬ ಯೂಸರ್ ಕಮೆಂಟ್ ಮಾಡುತ್ತ – “ಈ ವ್ಯಕ್ತಿ ನಿಜಕ್ಕೂ ಅದ್ಭುತ. ಗಾಡ್ ಬ್ಲೆಸ್ ಯೂ ರೆಸ್ಕ್ಯೂ ಮ್ಯಾನ್. ಇಬ್ಬರು ಮಕ್ಕಳಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ತುಂಬಾ ನಿಸ್ವಾರ್ಥ ಮತ್ತು ಧೈರ್ಯಶಾಲಿಯಾಗಿದ್ದಕ್ಕಾಗಿ. ನೀನು ನಿಜವಾದ ಹೀರೋ. ಇದು ಸುಲಭದ ಸಾಧನೆಯಾಗಿರಲಿಲ್ಲ!” ಎಂದಿದ್ದಾರೆ.