ವೈ#ರಿಗಳ ಸತತ ದಾ*ಳಿ ನಡೆಯುತ್ತಿದ್ದರೂ, ಇಸ್ರೇಲ್ ನಿಶ್ಚಿಂತೆಯಿಂದಿದೆ ಹೇಗೆ? ಬೆಂಜನಮಿನ್ ನೇತನ್ಯಾಹು ಏನ್ ಮಾಡುತ್ತಿದ್ದಾರೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 318 views

ಇಸ್ರೇಲ್ ರಾಜಧಾನಿ ಜೆರುಸಲೆಮ್ ನ ಬೀದಿಗಳು ಮತ್ತೊಮ್ಮೆ ರ#ಕ್ತಸಿ#ಕ್ತವಾಗಿವೆ. ಆಕಾಶದಲ್ಲಿ ಕ್ಷಿ#ಪಣಿಗಳು ಹಾರಾಡುತ್ತಿವೆ. ಗಾಜಾ ಪ್ರದೇಶದಿಂದ ಹಾರಿ ಬರುವ ಕ್ಷಿ#ಪಣಿಗಳನ್ನು ಇಸ್ರೇಲಿ ಪ-ಡೆ-ಗಳು ಹೊ#ಡೆದು%ರುಳಿಸುತ್ತಿವೆ. ಕಳೆದ ಒಂದು ವಾರದಿಂದ ‘ಪವಿತ್ರ ಭೂಮಿ’ (Holy Land) ಎಂದು ಕರೆಯಿಸಿಕೊಂಡ ಜೆರುಸಲೆಮ್  ಕಲ್ಲವಿಲಗೊಂಡಿದೆ. ಯಾವ ಕ್ಷಣದಲ್ಲಾದರೂ ಕ್ಷಿ#ಪಣಿ ದಾ#ಳಿ ನಡೆಯಬಹುದು ಎಂಬ ಆತಂಕ, ಕುದಿಮೌನದಲ್ಲಿ ಯಹೂದಿಯರು ಬದುಕು ಸಾಗಿಸುತ್ತಿದ್ದಾರೆ. ಹಾಗಂತ ಇಸ್ರೇಲಿಗಳು ವಿಚಲಿತರಾಗಿಲ್ಲ. ತಮ್ಮ ಮೇಲೆ ಯಾರೇ ದಾ-ಳಿ ಮಾಡಲಿ ಅವರ ಮೇಲೆ ಪ್ರ#ತೀಕಾ-ರ ತೀರಿಸಿಕೊಳ್ಳದೇ ಬಿಟ್ಟಿಲ್ಲ. ಗಾಜಾ ಪ್ರದೇಶದಲ್ಲಿರುವ ಹಮಾಸ್ ಉಗ್ರರು ಮತ್ತು ಪ್ಯಾಲಸ್ತೀನಿ ಪ್ರತಿಭಟನಾಕಾರರು ಸತತ ಕ್ಷಿ#ಪಣಿ ದಾ-ಳಿ ಮಾಡುತ್ತಿದ್ದರೂ, ಇಸ್ರೇಲ್ ಪ್ರತಿದಾ#ಳಿ ನಡೆಸದೇ ಬಿಟ್ಟಿಲ್ಲ.

Advertisement

ಮೊನ್ನೆ ಮೇ 6 ರಂದು, ಇಸ್ರೇಲಿನ ಸುಪ್ರೀಂ ಕೋರ್ಟ್, ಪೂರ್ವ ಜೆರುಸಲೇಮ್ ನ ಶೇಕ್ ಜರ್ರಾಹ್ ಪ್ರದೇಶದಲ್ಲಿ ನೆಲೆಸಿರುವ ಪ್ಯಾಲಸ್ತೀನಿಯರನ್ನು ತೆರವುಗೊಳಿಸಬೇಕು ಎಂದು ತೀರ್ಪು ನೀಡಿದ ಬಳಿಕ, ಜೆರುಸಲೆಮ್ ಬೀದಿಗಳು ಅಕ್ಷರಶಃ ರಣರಂ#ಗವಾಯಿತು. ಮು-ಸ್ಲಿಮ-ರಿಗೆ ಪವಿತ್ರವಾದ ಅಲ್-ಆಕ್ಸ ಮಸೀದಿಯಲ್ಲಿರುವವರ ಮೇಲೆ ಇಸ್ರೇಲಿ ಸೈ#ನಿಕ-ರು ಗುಂ-ಡು ಹಾ#ರಿಸಿ ಪ್ರ#ತೀಕಾ-ರ ತೀರಿಸಿಕೊಂಡರು. ಆಗ ಗಾಜಾದಿಂದ ಒಂದೇ ಸಮನೇ ಕ್ಷಿ#ಪಣಿ ದಾ-ಳಿ ಶುರುವಾಯಿತು. ಇಸ್ರೇಲ್ ಕೂಡ ಅದನ್ನು ಅಷ್ಟೇ ಸಮರ್ಥವಾಗಿ ಎದುರಿಸಿ ಪ್ರತಿದಾ#ಳಿಯನ್ನೂ ಮಾಡಿತು. ತನ್ನ ವಿರುದ್ಧ ಯಾರೇ ದಾ-ಳಿ ಮಾಡಿದರೂ, ಇಸ್ರೇಲ್ ಇಲ್ಲಿ ತನಕ ಶಾಂತಿ ಮಾತ್ರ ಬೋಧಿಸಿಲ್ಲ. ಹೇಡಿಯಂತೆ ಸುಮ್ಮನಾಗಿಲ್ಲ. ದಾ-ಳಿಗೆ ಪ್ರ#ತಿದಾ-ಳಿ ಮಾಡಿ ವೈರಿಯನ್ನು ಸುಮ್ಮನಾಗಿಸಿದೆ. ಹೀಗಾಗಿಯೇ ಅದು ಒಂದು ದೇಶವಾಗಿ ಅಸ್ತಿತ್ವದಲ್ಲಿದೆ.

ಇಂದು ಇಸ್ರೇಲ್ ಒಂದು ರಾಷ್ಟ್ರವಾಗಿ ಅಸ್ತಿತ್ವದಲ್ಲಿದ್ದರೆ ಅದು ಪವಾಡವೂ ಹೌದು, ಜಾದೂ ಸಹ ಹೌದು. ಇಸ್ರೇಲ್ ನ ಚರಿತ್ರೆಯನ್ನು ಓದಿದರೆ ಇಂದು ಅದು ಅಸ್ತಿತ್ವದಲ್ಲಿ ಇರಲೇಬಾರದು ಎಂದು ಎಂಥವರಿಗಾದರೂ ಅನಿಸುತ್ತದೆ. ಇನ್ನು, ವಿಶ್ವ ಭೂಪಟದಲ್ಲಿ ಅದನ್ನು ನೋಡಿದರೆ ಅದು ಇನ್ನೂ ಹೇಗೆ ಅಸ್ತಿತ್ವದಲ್ಲಿದೆ ಎಂದು ಎಂಥವರಿಗಾದರೂ ಸೋಜಿಗವಾಗುತ್ತದೆ. ಕಾರಣ, ಇಸ್ರೇಲ್ ಅತ್ಯಂತ ಆಯಕಟ್ಟಿನ ಮತ್ತು ಅಪಾಯಕಾರಿ ಭೌಗೋಳಿಕ ಪ್ರದೇಶದಲ್ಲಿದೆ.  ಇಸ್ರೇಲನ್ನು ಸುತ್ತಲೂ ವೈ#ರಿ ದೇಶಗಳೇ ಸುತ್ತುಗಟ್ಟಿಕೊಂಡಿವೆ.

ಉತ್ತರಕ್ಕೆ ಲೆಬನಾನ್, ಸಿರಿಯಾ, ಪೂರ್ವಕ್ಕೆ ಜೋರ್ಡನ್ ಮತ್ತು ಸೌದಿ ಅರೇಬಿಯಾ, ಇರಾಕ್ ಮತ್ತು ಪಶ್ಚಿಮಕ್ಕೆ ಈಜಿಪ್ಟ್ ದೇಶಗಳಿವೆ. ಇವೆಲ್ಲ ಮು-ಸ್ಲಿಂ ದೇಶಗಳು. ಇಸ್ರೇಲ್ ನ್ನು ಕಬಳಿಸಲು ತುದಿಗಾಲ ಮೇಲೆ ನಿಂತಿವೆ. ಇಷ್ಟು ಸಾಲದೆಂಬಂತೆ, ಇಸ್ರೇಲ್ ಒಳಗೆ ಪ್ಯಾಲೇಸ್ತೀನ್ ಎಂಬ ಮತ್ತೊಂದು ಮು-ಸ್ಲಿಂ ದೇಶ. ಬಗಲಲ್ಲಿ ಮು-ಸ್ಲಿಮ-ರಿಂದಲೇ ಗಿಜಿಗುಡುವ ಗಾಜಾ ಪ್ರದೇಶ!  ಸ್ವಲ್ಪ ಮೈ ಮರೆತರೂ ಇಸ್ರೇಲ್ ಸರ್ವನಾ#ಶ ನಿಶ್ಚಿತ. ಎಲ್ಲ ದೇಶಗಳು ಹಸಿದ ಹೆಬ್ಬುಲಿಯಂತೆ ಕಾದು ಕುಳಿತಿವೆ. ಆದರೆ ಇಸ್ರೇಲ್ ಕಳೆದ ಎಪ್ಪತ್ತೆರಡು ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಈ ಎಲ್ಲಾ ವೈರಿ ರಾಷ್ಟ್ರಗಳು ಒಂದಲ್ಲ ಒಂದು ಸಂದರ್ಭದಲ್ಲಿ ಇಸ್ರೇಲ್ ಮೇ-ಲೆ ದಾ#ಳಿ ಮಾಡಿವೆ, ಕಾಲು ಕೆರೆದು ಯುದ್ಧಕ್ಕೆ ಬಂದಿವೆ. ನಿತ್ಯವೂ ಒಂದಲ್ಲ ಒಂದು ರೀತಿಯ ಉಪಟಳ ನೀಡುತ್ತಿವೆ. ಜಗತ್ತಿನ ಅರಬ್ ದೇಶಗಳು ಇಸ್ರೇಲ್ ಗೆ ಒಂದಿಲ್ಲೊಂದು ರೀತಿಯಲ್ಲಿ ಕಂಟಕವಾಗಿವೆ.

ಈಗ ಹಮಾಸ್ ಉ-ಗ್ರ-ರು ಇಸ್ರೇಲ್ ಮೇಲೆ ರಾಕೆಟ್ ಮತ್ತು ಕ್ಷಿ#ಪಣಿ ದಾ-ಳಿ ಮಾಡುತ್ತಿದ್ದರೂ, ಇಸ್ರೇಲ್ ನಿರಾತಂಕವಾಗಿದೆಯೆಂದೂ, ಪ್ಯಾಲಸ್ತೀನಿ ಪ್ರತಿಭಟನೆಕಾರರು ಮತ್ತು ಹಮಾಸ್ ಉ-ಗ್ರ-ರ ವೈಮಾನಿಕ ದಾ#ಳಿ-ಯನ್ನು ಇಸ್ರೇಲ್ ನ ಐರನ್ ಡೋಮ್ ನಿಷ್ಕ್ರಿಯಗೊಳಿಸುತ್ತಿದೆಯೆಂದೂ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ವರದಿಯಾಗುತ್ತಿರುವುದನ್ನು ಗಮನಿಸಿರಬಹುದು. ಇಂದು ಇಸ್ರೇಲ್ ಅಕ್ಷರಶಃ ಬಚಾವ್ ಆಗಿದ್ದರೆ ಅದಕ್ಕೆ ಐರನ್ ಡೋಮ್ ಗಳೇ ಕಾರಣ. ಇಸ್ರೇಲಿನ ಯಹೂದಿಯರು ಶತಶತಮಾನಗಳಿಂದ ಒಂದಷ್ಟು ಭರವಸೆ, ಧೈರ್ಯವನ್ನು ಹೊಟ್ಟೆಯಲ್ಲಿ ಹಾಕಿಕೊಂಡಿದ್ದರೆ ಅದಕ್ಕೆ ಕಾರಣ ಅವರಲ್ಲಿರುವ ಒಂದು ನಂಬಿಕೆ. ಅದೇನೆಂದರೆ, ‘ಹಕ್ಕಿಗಳು ಆಗಸದಲ್ಲಿ ಹಾರಾಡುವಂತೆ ಸ್ವರ್ಗದ ದೇವಸೇನಾಧಿಪತಿ ಅಲ್ಲಿಂದಲೇ ಜೆರುಸಲೇಮನ್ನು ರಕ್ಷಿಸುತ್ತಾನೆ. ಅವನೇ ಪೊರೆಯುತ್ತಾನೆ, ಅವನೇ ಸಲಹುತ್ತಾನೆ. ಆಗಸದಲ್ಲಿ ಆತ ದಾಟಿ ಹೋಗುವಾಗ ಅಲ್ಲಿಂದಲೇ ನಮ್ಮನ್ನು ಕಾಪಾಡುತ್ತಾನೆ’ ಎಂಬುದು. ಈ ನಂಬಿಕೆ ಐರನ್ ಡೋಮ್ ರೂಪದಲ್ಲಿ ಅವರನ್ನು ಕಾಯುತ್ತಿದೆ.

ಜೆರುಸಲೆಮ್ ನಿಂದ ಗಾಜಾ ಪ್ರದೇಶ ಕೇವಲ 79 ಕಿಮಿ ದೂರದಲ್ಲಿದೆ. ಅಂದರೆ ಬರೋಬ್ಬರಿ ಬೆಂಗಳೂರಿನಿಂದ ಮದ್ದೂರಿಗೆ ಹೋದಷ್ಟು ದೂರ. ಅಷ್ಟು ಸನಿಹದಲ್ಲಿ ವೈ#ರಿ-ಯನ್ನು ಇಟ್ಟುಕೊಂಡು ನಿಶ್ಚಿಂತೆಯಿಂದ ಮಲಗುವುದು ಸಣ್ಣ ಮಾತಲ್ಲ. ಗಾಜಾದಿಂದ ಒಂದು ಕಿ.ಮೀ ಸನಿಹದಲ್ಲಿರುವ ಸೆಡರೊಟ್ ಎಂಬ ಪುಟ್ಟ ಊರಿಂದ ಆಗಾಗ ಕ್ಷಿ#ಪ-ಣಿಗಳು ಹಾರಿ ಬರುತ್ತಲೇ ಇರುತ್ತವೆ. 2001 ರಿಂದ ದಕ್ಷಿಣ ಇಸ್ರೇಲ್‌ನಲ್ಲಿ ಇಂತಹ ಕ್ಷಿ-ಪ-ಣಿ ದಾ-ಳಿ-ಗಳು ಪ್ರತಿದಿನ ಸರ್ವೇಸಾಮಾನ್ಯ ಎಂಬಂತಾಗಿದೆ. ಎಷ್ಟು ಸಾಧ್ಯವೋ ಅಷ್ಟು ಜನಜೀವನವನ್ನು ಅಸ್ತವ್ಯಸ್ತಗೊಳಿಸಬೇಕು ಎಂದು ಸೆಡರೊಟ್ ಹಾಗೂ ಇಸ್ರೇಲಿನ ಇತರ ನಗರಗಳ ಮೇ-ಲೆ ಹಮಾಸ್ ಉ#ಗ್ರ-ರು ನಿರಂತರವಾಗಿ ಕ್ಷಿ#ಪ-ಣಿ ದಾ-ಳಿ ನಡೆಸುತ್ತಿದ್ದಾರೆ. ಈ ಮೊದಲು ಉತ್ತರದ ಲೆಬನಾನ್ ಗಡಿಯಲ್ಲಿ ಕೂಡ ಹಿಜ್ಬುಲ್ಲಾದವರು ಇಸ್ರೇಲ್ ಮೇ-ಲೆ ದಾ-ಳಿ ಮಾಡುತ್ತಿದ್ದರು.

ಕಳೆದ ಎರಡು ದಶಕಗಳಲ್ಲಿ ಈ ಭ#ಯೋ-ತ್ಪಾ&ದಕ ಗುಂಪುಗಳು ಸಾವಿರಾರು ರಾಕೆಟ್ ಗಳನ್ನು ತಯಾರಿಸಿ ಗುಡ್ಡೆ ಹಾಕಿಕೊಂಡಿವೆ. ಇವರ ಜತೆ ಶಾಂತಿಯಿಂದಿರುವುದು ಸಾಧ್ಯವೇ ಇಲ್ಲ,  ಇವರೊಂದಿಗೆ ನಿರಂತರ ಯು#ದ್ಧ ಅನಿವಾರ್ಯ ಎಂಬುದು ಆಗಲೇ ಇಸ್ರೇಲಿಗಳಿಗೆ ಮನದಟ್ಟಾಗಿತ್ತು. ಇಸ್ರೇಲಿ ಮಿ-ಲಿ-ಟ-ರಿಗೆ ಈ ಕ್ಷಿ#ಪ-ಣಿ ದಾ-ಳಿ-ಗೊಂದು ಪರಿಹಾರ ಬೇಕಾಗಿತ್ತು. ಆದರೆ, ಸೇ-ನೆ-ಯ ತಜ್ಞರು ಕಂಗಾಲಾಗಿ ಕುಳಿತಿದ್ದರು. ಇಸ್ರೇಲ್‌ನಲ್ಲಿ ಜನಸಾಮಾನ್ಯರ ಬದುಕು ದಿನೇ ದಿನೆ ಅಸಹನೀಯವಾಗುತ್ತಿತ್ತು. ಕೊನೆಗೆ ಇದಕ್ಕೊಂದು ಪರಿಹಾರ ಕಂಡುಹಿಡಿಯುವ ಹೊಣೆ ಇಸ್ರೇಲ್ ಮಿಲಿಟರಿಯ ಹೊಸ ಶ#ಸ್ತ್ರಾ-ಸ್ತ್ರ-ಗಳನ್ನು ಅಭಿವೃದ್ಧಿಪಡಿಸುವ ವಿಭಾಗದ ಅಧಿಕಾರಿ ಡ್ಯಾನಿ ಗೋಲ್ಡ್ ಮೇಲೆ ಬಿತ್ತು. ಆತ ನೀಡಿದ ಐಡಿಯಾವನ್ನು  ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆತ ಹೇಳಿದ್ದೇ – ಐರನ್ ಡೋಮ್!

ಆದರೆ ಅದನ್ನು ಸೈನ್ಸ್ ಫಿಕ್ಷನ್ ನಲ್ಲಿ ಓದಲು ಚೆನ್ನಾಗಿರುತ್ತದೆ ಎಂದು ಎಲ್ಲರೂ ಗೇಲಿ ಮಾಡಿಬಿಟ್ಟರು. 1980 ರಲ್ಲಿ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಇಂಥದ್ದೇ ಒಂದು ಕ್ಷಿ#ಪ-ಣಿ ನಿರೋಧಕ ವ್ಯವಸ್ಥೆ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಆ ಯೋಜನೆಗೆ ಸ್ಟ್ರಾಟಜಿಕ್ ಡಿಫೆನ್ಸ್ ಇನಿಶಿಯೇಟಿವ್ ಎಂದೂ ಹೆಸರಿಟ್ಟಿದ್ದರು. ಅದಕ್ಕೆ ಟೀಕಾಕಾರರು ‘ಸ್ಟಾರ್ ವಾರ್’ ಎಂದು ವ್ಯಂಗ್ಯವಾಡಿದ್ದರು. ಇಸ್ರೇಲ್‌ನ ಸೇನಾಪಡೆಯಲ್ಲಿದ್ದ ಪ್ರಮುಖ ನಾಯಕರೆಲ್ಲರ ಮುಂದೆ ಡ್ಯಾನಿ ಗೋಲ್ಡ್ ಈ ಯೋಚನೆ ಮುಂದಿಟ್ಟಾಗ, ಇಂಥದ್ದೊಂದು ವ್ಯವಸ್ಥೆ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ ಎಂದು ಒಳಗೊಳಗೇ ನಿರ್ಧರಿಸಿದರು. ಸ್ವತಃ ಗೋಲ್ಡ್ ನ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳು ಕೂಡ ಇದೊಂದು ಭ್ರಮೆ ಎಂದರು. ಪ್ಯಾಲಸ್ತೀನ್ ಹಾಗೂ ಹಿಜ್ಬುಲ್ಲಾದ ಬಹುತೇಕ ರಾಕೆಟ್‌ಗಳು ಕೆಲವೇ ಅಡಿ ಉದ್ದ ಮತ್ತು ಅಗಲವಾಗಿರುತ್ತಿದ್ದವು. ಅವು ಸಾಮಾನ್ಯವಾಗಿ ನಿರ್ದಿಷ್ಟ ಪಥದಲ್ಲಿ ಹಾರದೇ ಯದ್ವಾತದ್ವಾ ಹಾರಿ ಬಂದು ಕ್ಷಣಮಾತ್ರದಲ್ಲಿ ಇಸ್ರೇಲ್‌ಗೆ ಅ&ಪ್ಪಳಿ#ಸುತ್ತಿದ್ದವು. ಅಂತಹ ಅನಿರೀಕ್ಷಿತ ಕ್ಷಿ#ಪ-ಣಿ ದಾಳಿಯನ್ನು ಯಾವುದಾದರೂ ರಕ್ಷಣಾ ವ್ಯವಸ್ಥೆ ಹೇಗೆ ತಡೆಯಲು ಸಾಧ್ಯ?

ಆದರೆ ಗೋಲ್ಡ್ ಗೆ ತನ್ನ ಐಡಿಯಾದಲ್ಲಿ ಅಪರಿಮಿತ ನಂಬಿಕೆಯಿತ್ತು.

ಈ ಮಧ್ಯೆ ಶನೋಚ್ ಲೀವೈನ್ ಎಂಬ ರಕ್ಷಣಾ ವಿಜ್ಞಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಎರಡು ವರ್ಷ ಇದ್ದು ಬೇಸಿಗೆಯಲ್ಲಷ್ಟೇ ಇಸ್ರೇಲ್‌ಗೆ ಮರಳಿದ್ದ. ಅಮೆರಿಕದಲ್ಲಿ ಅವನು ರಕ್ಷಣಾ ಇಲಾಖೆಯ ಜೊತೆ ಕೆಲಸ ಮಾಡುತ್ತಿದ್ದ. ಉತ್ತರ ಇಸ್ರೇಲ್‌ನಲ್ಲಿ ರಫೇಲ್‌ನ ಕಚೇರಿಯ ಸಮೀಪದಿಂದಲೇ ಕ್ಷಿ#ಪಣಿ-ಗಳ ಸುರಿಮಳೆಯಾಗುವುದನ್ನು ಕಂಡು ಲೀವೈನ್ ನನ್ನು ಸೇನಾ ಅಧಿಕಾರಿಗಳು ಕರೆಯಿಸಿಕೊಂಡಿದ್ದರು. ಯು#ದ್ಧ ನಡೆಯುತ್ತಲೇ ಇದ್ದುದರಿಂದ ಸೇ-ನಾ-ಪ-ಡೆಯ ಅಧಿಕಾರಿಗಳು ಆದಷ್ಟು ಬೇಗ ರಾಕೆಟ್‌ಗಳನ್ನು ತಡೆಯಲು ಏನಾದರೊಂದು ವ್ಯವಸ್ಥೆ ಕಂಡುಹಿಡಿಯಲೇಬೇಕು ಎಂದು ಒತ್ತಡ ಹಾಕಿದರು. ಲೆಬನಾನ್‌ನಲ್ಲಿ ಇಸ್ರೇಲ್‌ನ ಯು-ದ್ಧ 34 ದಿನಗಳ ಕಾಲ ನಡೆಯಿತು. ಸಾ-ವು ಮತ್ತು ಆಸ್ತಿಪಾಸ್ತಿಯ ಹಾ-ನಿ ಭಯಾನಕ ಪ್ರಮಾಣದಲ್ಲಾಗಿತ್ತು. ಯು-ದ್ಧ-ದ ವೇಳೆ 1200 ಲೆಬನೀಸ್‌ಗಳು ಮತ್ತು 165 ಇಸ್ರೇಲಿಗಳು ಸ-ತ್ತಿ-ದ್ದರು. ಇವರಲ್ಲಿ ಹೆಚ್ಚಿನವರು ಮುಗ್ಧ ನಾಗರಿಕರಾಗಿದ್ದರು. ಈ ಘರ್ಷಣೆಯಿಂದಾಗಿ ಸುಮಾರು 10 ಲಕ್ಷ ಲೆಬನೀಸ್‌ಗಳು ಮತ್ತು ಮೂರರಿಂದ ಐದು ಲಕ್ಷ ಇಸ್ರೇಲಿಗಳು ಜೀವ ಉಳಿಸಿಕೊಳ್ಳಲು ಮನೆ-ಮಠ ತೊರೆದಿದ್ದರು. ಸುಮಾರು ಮೂರು ತಿಂಗಳ ನಂತರ 2006 ರ ನವೆಂಬರ್‌ನಲ್ಲಿ ಲೀವೈನ್ ಮತ್ತು ಅವನ ತಂಡದವರು ಟೆಲ್ ಅವಿವ್‌ನಲ್ಲಿರುವ ಇಸ್ರೇಲ್‌ನ ರಕ್ಷಣಾ ಸಚಿವಾಲಯದಲ್ಲಿ ಗೋಲ್ಡ್ ಗೆ ತಮ್ಮ ಯೋಜನೆಯ ಐಡಿಯಾವನ್ನು ತೋರಿಸಿದರು. ನಂತರ ಸುಮಾರು ಒಂದು ತಿಂಗಳ ಮಾತುಕತೆ, ಸಭೆ, ಸರಣಿ ಚರ್ಚೆಗಳ ನಂತರ ಗೋಲ್ಡ್ ಕೊನೆಗೂ ಲೀವೈನ್‌ನ ತಂಡವನ್ನು ಈ ಯೋಜನೆಗಾಗಿ ಆಯ್ಕೆ ಮಾಡಿದ. ಆದರೆ ಈ ಯೋಜನೆಗೆ ಅಪಾರ ಹಣ ಬೇಕಾಗಿತ್ತು.

ಆಗ ಇಸ್ರೇಲ್‌ಗೆ ನೆನಪಾಗಿದ್ದು ಅಮೆರಿಕ. ತನ್ನ ಬಹುಕಾಲದ ಗೆಳೆಯ ಹಾಗೂ ತಾನು ಆವಿಷ್ಕರಿಸುವ ಹೊಸ ತಂತ್ರಜ್ಞಾನಗಳ ಪ್ರಯೋಜನ ಪಡೆಯುವ ಅಮೆರಿಕದಿಂದ ಇಸ್ರೇಲ್ ನೆರವು ಕೇಳಿತು. 2010 ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಇಸ್ರೇಲ್‌ನಾದ್ಯಂತ ಐರನ್ ಡೋಮ್ ಬ್ಯಾಟರಿಗಳನ್ನು ಅಳವಡಿಸಲು 205 ದಶಲಕ್ಷ ಡಾಲರ್ ನೆರವು ನೀಡುವುದಕ್ಕೆ ಕಾಂಗ್ರೆಸ್‌ನ ಒಪ್ಪಿಗೆ ಕೇಳಿದರು. ಅದೇ ತಿಂಗಳಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಕೂಡ ಇಸ್ರೇಲ್‌ಗೆ ನೆರವು ನೀಡಲು ಅವಿರೋಧವಾಗಿ ಒಪ್ಪಿಗೆ ನೀಡಿತು.

ಯೋಜನೆಯೆಲ್ಲಾ ಸಿದ್ಧವಾಗಿತ್ತು. ಅದನ್ನು ಜಾರಿಗೊಳಿಸುವುದೊಂದೇ ಬಾಕಿಯಿತ್ತು. ಅದಾಗಿ ಒಂದು ವರ್ಷದ ಅವಧಿಯಲ್ಲಿ ಇಸ್ರೇಲಿ ವಿಜ್ಞಾನಿಗಳು ಬಹು ಚರ್ಚಿತ ‘ಐರನ್ ಡೋಮ್’ ಕನಸನ್ನು ನನಸಾಗಿ ಮಾಡಿದ್ದರು. 2011 ರ ಮಾರ್ಚ್ ವೇಳೆಗೆ ಐರನ್ ಡೋಮ್ ಶತ್ರುಗಳ ರಾಕೆಟ್‌ಗಳನ್ನು ಹೊ#ಡೆದು-ಹಾಕಲು ಸಿದ್ಧವಾಗಿ ನಿಂತಿತು. ಅದರ ಸಾಮರ್ಥ್ಯ ಅಗಾಧವಾಗಿತ್ತು. ಅದು ರಾಕೆಟ್‌ಗಳನ್ನು, ಆರ್ಟಿಲರಿಗಳನ್ನು ಹಾಗೂ ಮಾರ್ಟರ್‌ಗಳಿಗೆ ಗು-ರಿ-ಯಿಟ್ಟು ಕ್ಷಿ#ಪಣಿ-ಗಳನ್ನು ಹಾರಿಸುವ ಚಾಕಚಕ್ಯತೆ ಹೊಂದಿತ್ತು. ವಿಮಾನಗಳನ್ನು, ಹೆಲಿಕಾಪ್ಟರ್‌ಗಳನ್ನು ಹಾಗೂ ಡ್ರೋನ್‌ಗಳನ್ನು ಕೂಡ  ಹೊ#ಡೆದು-ರುಳಿ-ಸುವ ಸಾಮರ್ಥ್ಯ ಅದಕ್ಕಿತ್ತು. 43 ಮೈಲುಗಳ ರೇಂಜ್‌ನಲ್ಲಿ ಎಲ್ಲಾ ರೀತಿಯ ಕ್ಷಿ#ಪಣಿ-ಗಳು ಹಾಗೂ ಹಾರುವ ಯಂತ್ರಗಳನ್ನು ಪತ್ತೆ ಹಚ್ಚಿ ಹೊ#ಡೆಯು-ವಂತೆ ಅದನ್ನು ರೂಪಿಸಲಾಗಿತ್ತು. ಮಳೆ, ಹಿಮ, ಇಬ್ಬನಿ ಹಾಗೂ ಧೂಳಿನ ಗಾಳಿ ಹೀಗೆ ಯಾವ ರೀತಿಯ ವಾತಾವರಣದಲ್ಲಿ ಬೇಕಾದರೂ ಅದು ಕೆಲಸ ಮಾಡುತ್ತಿತ್ತು.

ಈ ಐರನ್ ಡೋಮ್ ಎಷ್ಟು ಬುದ್ಧಿವಂತ ಯಂತ್ರವೆಂದರೆ, ಇದರಲ್ಲಿರುವ ಸಾಫ್ಟ್ ವೇರ್ ಒಬ್ಬ ಚಾಣಾಕ್ಷ ಮನುಷ್ಯನಿಗಿಂತ ಬುದ್ಧಿವಂತಿಕೆಯಿಂದ  ಕೆಲಸ ಮಾಡುತ್ತದೆ. ಶ-ತ್ರು-ವಿನ ಕ್ಷಿ-ಪ-ಣಿ ಯಾವ ವೇ#ಗದಲ್ಲಿ ಬರುತ್ತಿದೆ ಮತ್ತು ಯಾವ ಪ್ರದೇಶವನ್ನು ಗು#ರಿ-ಯಾಗಿಸಿಕೊಂಡಿದೆ, ಅದು ಬಂದು ಅಪ್ಪಳಿಸುವ ಜಾಗ ಜನವಸತಿಯ ಪ್ರದೇಶವೋ ಅಥವಾ ಖಾಲಿ ಪ್ರದೇಶವೋ, ಆ ಜಾಗ ಮಿ-ಲಿ-ಟ-ರಿ-ಗೆ ಸೇರಿದ್ದೇ ಇತ್ಯಾದಿ ಪ್ರತಿಯೊಂದು ಸಂಗತಿಯನ್ನೂ ಅದು ಕ್ಷಣ ಮಾತ್ರದಲ್ಲಿ ಲೆಕ್ಕ ಹಾಕುತ್ತದೆ. ನಂತರ ಅದಕ್ಕೆ ತಕ್ಕಂತೆ ಕ್ಷಿ#ಪಣಿ-ಯನ್ನು ಉ#ಡಾಯಿ-ಸುತ್ತದೆ. ಸಾಮಾನ್ಯವಾಗಿ ಐರನ್ ಡೋಮ್ ಪ್ರತಿ ಬಾರಿಯೂ ಎರಡು ಪ್ರತಿ-ಕ್ಷಿ#ಪಣಿ#ಗಳನ್ನು ಹಾರಿಸುತ್ತದೆ. ಮೊದಲನೆಯದು ಗುರಿ ತಲುಪದಿದ್ದರೆ ಎರಡನೆಯದಾದರೂ ಶ-ತ್ರು-ವಿನ ಕ್ಷಿ#ಪಣಿ-ಯನ್ನು ಹೊಡೆಯಲಿ ಎಂದು. ಅತ್ಯಂತ ಕ್ಲುಪ್ತ ಕಾಲಕ್ಕೆ ಇಸ್ರೇಲ್‌ಗೆ ಈ ವ್ಯವಸ್ಥೆ ಒದಗಿಬಂದಿತ್ತು. 2012 ರಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಯು#ದ್ಧ ಆರಂಭವಾದಾಗ ಇಸ್ರೇಲ್‌ನ ಪ್ರತಿಯೊಬ್ಬರಿಗೂ ಐರನ್ ಡೋಮ್‌ನ ಮಹತ್ವ ಅರಿವಿಗೆ ಬಂತು.

2014 ರ ಜುಲೈ ವೇಳೆಗೆ ಐರನ್ ಡೋಮ್ ಇಸ್ರೇಲ್‌ನ ಬಹುತೇಕ ಎಲ್ಲಾ ನಗರಗಳನ್ನೂ ಹಮಾಸ್‌ನ ಕ್ಷಿ#ಪಣಿ-ಗಳಿಂದ ರಕ್ಷಿಸಿತ್ತು. ಅದರ ಯಶಸ್ಸಿನ ದರ ಶೇ.90 ರಷ್ಟಿತ್ತು. ಇದರಿಂದಾಗಿ ಕೊನೆಗೂ ಇಸ್ರೇಲಿಗಳಿಗೆ ತಮ್ಮ ಜೀವದ ಮೇಲಿದ್ದ ಅನುಕ್ಷಣದ ಭ-ಯ ಮಾಯವಾಯಿತು. ಅದರ ಪರಿಣಾಮವಾಗಿ, ಅಟ್ಲಾಂಟಿಕ್ ಸಾಗರದ ಎರಡೂ ಕಡೆಯಿರುವವರಿಗೆ ಅರಬ್ಬರನ್ನೂ , ಯಹೂದಿಗಳನ್ನೂ ಮಾತುಕತೆಯ ಮೇಜಿಗೆ ಕರೆತರುವ ಶಕ್ತಿ ಹಾಗೂ ಗ-ಡಿಯ ಎರಡೂ ಕಡೆ ಜೀವಗಳನ್ನು ರಕ್ಷಿಸುವ ಶಕ್ತಿ ಈ ಐರನ್ ಡೋಮ್‌ಗಳಿಗಿದೆ ಎಂದು ಅನ್ನಿಸತೊಡಗಿತು.

2014 ರ ಯು-ದ್ಧ-ದ ನಂತರವೂ, ಇಂದು ಹತ್ತಾರು ಸಾವಿರ ಕ್ಷಿ#ಪಣಿ-ಗಳು ಗಾಜಾದಲ್ಲಿವೆ ಮತ್ತು ಲೆಬನಾನ್‌ ಕೂಡ ಸಾವಿರಾರು ಕ್ಷಿ#ಪಣಿ-ಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಆದರೆ, ಅದರ ಬಗ್ಗೆ ಇಸ್ರೇಲಿಗಳಿಗೆ ಹೆದರಿಕೆಯಿಲ್ಲ. ಆ ಕ್ಷಿ#ಪಣಿ-ಗಳು ಇಸ್ರೇಲ್‌ನತ್ತ ತೂರಿಬಂದರೆ ಐರನ್ ಡೋಮ್ ನೋಡಿಕೊಳ್ಳುತ್ತದೆ ಎಂಬ ವಿಶ್ವಾಸ ಅವರಿಗಿದೆ.  ಐರನ್ ಡೋಮ್‌ಗೆ ಎಷ್ಟು ಬ್ಯಾಟರಿಗಳನ್ನು ಖರೀದಿಸಬೇಕು ಎಂಬುದಷ್ಟೆ ಅವರ ಚಿಂತೆ. ಒಮ್ಮೆ ಬ್ಯಾಟರಿ ಅಳವಡಿಸಿ ಐರನ್ ಡೋಮ್‌ಗಳನ್ನು ಸಿದ್ಧ ಮಾಡಿಟ್ಟ ನಂತರ ನಿಶ್ಚಿಂತೆಯಿಂದಿರಬಹುದು. ಐರನ್ ಡೋಮ್‌ಗಳನ್ನು ಅಧಿಕೃತವಾಗಿ ಅಳವಡಿಸಿದ ನಂತರ ಇಲ್ಲಿಯವರೆಗೆ ಅವು 1200 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹೊಡೆದುರುಳಿಸಿವೆ.

ಹಮಾಸ್ ಉ#ಗ್ರ-ರು ಮತ್ತು ಪ್ಯಾಲಸ್ತೀನಿ ಪ್ರತಿಭಟನಾಕಾರರು ಇಂದು ಇಷ್ಟೆಲ್ಲಾ ದುಪಳಿ ಮಾಡುತ್ತಿದ್ದರೂ, ಇಸ್ರೇಲ್ ಡೋಂಟ್ ಕೇರ್ ಆಗಿದ್ದರೆ ಅದಕ್ಕೆ ಕಾರಣ ಐರನ್ ಡೋಮ್ ಎಂಬ ಅಗೋಚರ ‘ಕಬ್ಬಿಣದ ಗುಮ್ಮಟ’!

– ವಿಶ್ವೇಶ್ವರ ಭಟ್, ನೂರೆಂಟು ವಿಶ್ವ, ವಿಶ್ವವಾಣಿ

Advertisement
Share this on...