ಏನಿದು ಏಪಿಎಂಸಿ ಕಾಯ್ದೆ? ಬ್ರಿ-ಟಿ-ಷ-ರ ಕಾ-ನೂ-ನಿ-ಗೂ ಮೋದಿ ಸರ್ಕಾರ ಜಾರಿಗೆ ತಂದ ಕೃಷಿ ಕಾ-ನೂ-ನು-ಗಳಿಗಿರುವ ಅಂತರವೇನು?

in Kannada News/News/ಕನ್ನಡ ಮಾಹಿತಿ 455 views

ಏನಿದು ಎಪಿಎಂಸಿ ಕಾಯ್ದೆ?

ಎ ಪಿ ಎಂ ಸಿ ಕಾಯ್ದೆಯನ್ನು 1855 ರ ಸುಮಾರಿನಲ್ಲಿ ಬ್ರಿ-ಟಿ-ಷ-ರು ಮೊದಲು ತಂದದ್ದು. ಇದರ ಒಂದು ಸ್ಯಾಂಪಲ್ ಓದಿರಿ

ಬ್ರಿ-ಟಿ-ಷ-ರ ಉದ್ದೇಶ ಎಪಿಎಂಸಿ ಸ್ಥಾಪಿಸಿ ಅದರಲ್ಲಿ ಅತ್ಯಂತ ಕಡಿಮೆ ದರದಲ್ಲಿ ಭಾರತದ ಹತ್ತಿಯನ್ನು ಖರೀದಿಸುವುದು  ಆ ಹತ್ತಿಯಿಂದ ಇಂಗ್ಲೆಂಡ್ನಲ್ಲಿ ಕಾಟನ್ ಬಟ್ಟೆಯನ್ನು  ತಯಾರಿಸಿ  ಎಂಟರಷ್ಟು ಹೆಚ್ಚಿನ ಬೆಲೆಗೆ ಭಾರತಕ್ಕೇನೇ ಮಾರುವುದು .

ರೈತರ ಹಲವಾರು ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಜನರಿಗೆ ಮಾರುವುದು ಬ್ರಿ-ಟಿ-ಷ-ರಿ-ಗೆ ಸಿದ್ಧಿಸಿತ್ತು. ಬ್ರಿ-ಟಿಷ-ರು ಭಾರತಕ್ಕೆ ಬಂದದ್ದೇ ವ್ಯಾಪಾರಕ್ಕೆ ತಾನೆ.

1920 ರಲ್ಲಿ ಕಾಂ-ಗ್ರೆ-ಸ್ ನ ನಾಗಪುರದ ಅಧಿವೇಶನದಲ್ಲಿ  ಡಾ. ಹೆಡ್ಗೆವಾರ್ ಕಾಂ-ಗ್ರೆ-ಸ್ ಅಧಿವೇಶನದ ಸ್ವಾಗತ ಸಮಿತಿಯಲ್ಲಿದ್ದರು. ಡಾ. ಹೆಡ್ಗೆ ವಾರ್ ಮಧ್ಯಪ್ರಾಂತದ ಅಸಹಕಾರ ಚ-ಳು-ವ-ಳಿ-ಯ ನೇತಾರರಾಗಿ ನಿಯುಕ್ತಿಗೊಂಡಿದ್ದರು ರೈತರ ಹಿತಾಸಕ್ತಿಯನ್ನು ಗಮನಕ್ಕೆ ತಂದು ಮುಂದೆ ಅವರು ಗ್ರಾಮೀಣ ಸಂಪರ್ಕ ರೈತ ಬಂಧುಗಳ ಸಭೆ ಮುಂತಾದುವುಗಳನ್ನು ಮಾಡಿದರು.

ಗಾಂಧೀಜಿಯವರು ಬ್ರಿ-ಟಿಷ-ರ ವಸ್ತುಗಳನ್ನು ಸು-ಡು-ವು-ದರ ಮೂಲಕ ಖಾದಿಗೆ ಒತ್ತು ಕೊಟ್ಟರು. ಅದೇ ಕಾಂ-ಗ್ರೆ-ಸ್ ಸಮ್ಮೇಳನದಲ್ಲಿ ಗೋ-ರ-ಕ್ಷೆ-ಯ ನಿರ್ಣಯ ಬರುವುದಿತ್ತು ಮುಂದೆ ಖಿಲಾಫತ್ ಚ-ಳ-ವ-ಳಿಗೆ ಕಾಂಗ್ರೆಸ್ ಸಹಕರಿಸಿದುರರಿಂದ  ಅದನ್ನು ದೂರವಿಡಲಾಯಿತು. ಮುಂದೆ ಗೊತ್ತೇ ಇದೆ 1925 ರಲ್ಲಿ ಡಾ.ಹೆಡ್ಗೆವಾರ್ ಆರ್‌ಎಸ್‌‌‌‌‌ಎಸ್ ಸ್ಥಾಪಿಸಿದರು. ಕಾಂ-ಗ್ರೆ-ಸ್ ನಲ್ಲಿ  ಮುಂದೆ ಕೃಷಿಯ ವಿಷಯ ಸರಿಯಾಗಿ ಮುನ್ನೆಲೆಗೆ ಬರಲೇ ಇಲ್ಲ .

Advertisement

ಈ ಎಪಿಎಂಸಿ ಕಾ-ಯ್ದೆ-ಯನ್ನು ಸ್ವತಂತ್ರ ಭಾರತದ ಈ ಹಿಂದಿನ ಸರಕಾರಗಳು ಇದನ್ನು ತಿದ್ದುಪಡಿ ಮಾಡಬೇಕಿತ್ತು. ಹೊಸ ಕಾ-ಯ್ದೆ-ಯನ್ನು ರೂಪಿಸಬೇಕಿತ್ತು. ಇಲ್ಲ ರೂಪಿಸಲಿಲ್ಲ ಯಾಕೆ? ರೈತನನ್ನು ಬ-ಡ-ವ-ನನ್ನಾಗಿ ಮಾಡಿ ಅವರ ಸಿಂಪತಿ ಗಳಿಸಲು ಇತ್ತ ತಕಾವಿ ಸಾ-ಲ ಕೊಡುತ್ತಲೇ ಕೊನೆಗೆ ಸಾ-ಲ ಮನ್ನಾದಂತಹ ಆಸೆಗೆ  ಅವನನ್ನು ನೂ-ಕಿ ಕೃಷಿಯಿಂದ ವಿಮುಖನಾದಂತೆ ಮಾಡುತ್ತ  ಮತ್ತು ಮಾಡದೆಯೂ ಅವನನ್ನು ಹಿಂ-ಸಿ-ಸಿ-ತು.

ರೈತನಿಂದಲೇ ತಾನು ಬೆಳೆಸಿದ ಬೆಳೆಗಳನ್ನು ಎಪಿಎಂಸಿ ಗೆ ತೆಗೆದು  ಕೊಂಡು ಹೋಗುವ ಚಾರ್ಜ್ ಅವನಿಂದಲೇ ವ-ಸೂ-ಲಿ ಮಾಡುತ್ತಿದ್ದವು ಎಪಿಎಂಸಿ ಗಳು. ಇಂದಿಗೂ ಅದೇ ಪದ್ಧತಿ ಇದೆ ಇತ್ತು ಈ ಹೊಸ ಕಾ-ಯ್ದೆ ಬರುವವರೆಗೂ. ತನ್ನ ಬೆಳೆಗಳನ್ನು ಯಾರಿಗೆ ಎಷ್ಟು ಬೆಲೆಗೆ ಮಾರಬೇಕೆಂದು ದ-ಳ್ಳಾ-ಳಿ-ಗಳು  ನಿರ್ಧರಿಸುತ್ತಿದ್ದರು.

ಹೇಗಿದೆ ಈ ವಿಷಯ ರೈತನ ಸ್ವಾ-ತಂ-ತ್ರ  ಹ-ರ-ಣ-ವಲ್ಲದೆ ಮತ್ತೇನು ಇದು? ರೈತನು ತಾನು ಬೆಳೆದುದನ್ನು ಎಪಿಎಂಸಿ ಬಾಗಿಲಲ್ಲಿ  ದಿನಗಟ್ಟಲೆ ನಿಂತು ಅವನ ಸರದಿ ಬರುವವರೆಗೆ ಕಾದು ನಿರಾಶೆ ಹೊಂದುವಂತೆ ಮಾಡಿ ದ-ಲ್ಲಾ-ಳಿ-ಗಳು ಕೇಳಿದ ಬೆಲೆಗೆ  ಕೊಡುವಂತಾಗಿದ್ದು ಇಂದಿನ  ಹಾಗೂ ಇದುವರೆಗಿನ ಪದ್ಧತಿ. ಹೇಗಿದೆ ದು-ಷ್ಟ ಕೂಟದ ಮ-ಸ-ಲ-ತ್ತು. ಈಗ ಎಪಿಎಂಸಿ ಗಳೇನೂ ರ-ದ್ದಾ-ಗಿವೆಯೇ ಇಲ್ಲ ರ-ದ್ದಾ-ಗಿಲ್ಲ ಆದರೆ ಅದರ ಹೊರಗೆ ಕೂಡಾ ರೈತ ವ್ಯವಹಾರ ಮಾಡಬಹುದು.

ಹೊಸ ಕಾ-ಯ್ದೆ-ಯಲ್ಲಿ ಏನಿದೆ ಹಾಗಾದರೆ? ಕಾಯ್ದೆಯ ಬಗ್ಗೆ ಪುಟಗಟ್ಟಲೆ ವಿವರಗಳನ್ನು ಬರೆದು ರೈತನ ಉನ್ನತಿ ಬಗ್ಗೆ ಕಾ-ಯ್ದೆ ರೂಪಿಸಿ ಲೋಕಸಭೆ ಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಹಂಚಲಾಯ್ತು. ಅದನ್ನು ಓದಿ ಕಾಂ-ಗ್ರೆ-ಸ್ ಹೆ-ದ-ರಿ-ಕೊಂಡಿತು. ಲೋಕಸಭೆಯಲ್ಲಿ ಮತ್ತೆ ರಾಜ್ಯಸಭೆಯಲ್ಲಿಯೂ ಮಸೂದೆ ಪಾಸಾಯಿತು.

ಒಟ್ಟು ಮೂರು ಕಾ-ಯ್ದೆ-ಗಳಿವೆ ಇದರಲ್ಲಿ. ಒಂದನೆಯದು  ರೈತರ ವ್ಯಾಪಾರ  ಮತ್ತು ವಾಣಿಜ್ಯ ಮಸೂದೆ. 2. ರೈತರ ಬೆಳೆಗಳಿಗೆ ಬೆಳೆ ಭರವಸೆ ಮತ್ತು ಸೇವಾ ಒಪ್ಪಂದ  ಮತ್ತು 3. ಅಗತ್ಯ ಸರಕುಗಳ ಮಸೂದೆ. ಇವನ್ನು ಜಾರಿಗೊಳಿಸುತ್ತಲೇ ಮೋದಿ ಸಂಪುಟ ಎಂಟು ಲಕ್ಷ ಕೋಟಿ ರೂಪಾಯಿಯನ್ನು ಕನಿಷ್ಠ ಬೆಂಬಲ ಬೆಲೆ ಗಳಿಗೆ ನಿಗದಿಪಡಿಸಿತು. ಯುಪಿಎ ಬರೀ 3.74 ಲಕ್ಷ ನಿಗದಿ ಪಡಿಸಿತ್ತು.

ರೈತ ಯಾವ ಸಂಘ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡರೂ ಅದು ರೈತನ ಬೆಳೆ ಉತ್ಪನ್ನಗಳಿಗೆ ಮಾತ್ರ ಹೊರತು ಬೇರೆ ಯಾವ ಕಾರಣಕ್ಕೂ ಅ-ಡ-ಮಾ-ನ ದಂತಹ ಅಗ್ರಿಮೆಂಟ್ ಮಾಡುವಂತಿಲ್ಲ. ಆ ಸಂಘ ಸಂಸ್ಥೆಗಳು  ರೈತರ ಜಾಗಗಳಲ್ಲಿ ಕಟ್ಟಡ ಕಟ್ಟುವಂತಿಲ್ಲ.  ರೈತನಿಗೆ ಬೆಳೆ ಮಾರಾಟ ಮಾಡಿದ ದಿನದಿಂದ ಮೂರು ದಿನಗಳ ಒಳಗೆ ಹಣ ಪಾವತಿಯಾಗಬೇಕು. ಇಲ್ಲವಾದಲ್ಲಿ ರೈತ ಕೇ-ಸ್ ಹಾಕಬಹುದು ಮೂವತ್ತು ದಿನಗಳಲ್ಲಿ ಇತ್ಯರ್ಥ ಆಗಲೇ ಬೇಕು  ಇಲ್ಲವಾದಲ್ಲಿ ಬಡ್ಡಿ ಸಮೇತ ಹಣ ಕೊಡಬೇಕು. ಭಾರತದಲ್ಲಿ ಕೋಲ್ಡ್ ಸ್ಟೋರೇಜ್ ಬಗ್ಗೆ ಯೋಚನೆಗಳು ಕಮ್ಮಿ ಇದ್ದ ಕಾರಣ  ಈಗ ಅದೂ ಕೂಡಾ ಎಸೆನ್ಷಿಯಲ್ ಕಮಾಡಿಟಿಯಾಗಿದೆ.

ರೈತನಿಗೆ ಅನುಕೂಲವಾದ ವಿಷಯಗಳು ಹಲವಾರಿವೆ ಈ ಹೊಸ ಕಾ-ಯ್ದೆ-ಯಲ್ಲಿ ಒಂದೆರಡು ವಿಷಯಗಳನ್ನು ನಿಮಗಾಗಿ ಬರೆಯುವೆ.

ಈ ಕಾಯ್ದೆಯಿಂದಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಸಾಸಿವೆಯನ್ನು ಆಯಿಲ್ ಮಿಲ್ಲಿನವರು 25% ಹೆಚ್ಚಿನ ಬೆಲೆಗೆ ರೈತನಿಂದ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಅಲಿಘರ್ ನಲ್ಲಿ 1300 ರೈತರು ಒಟ್ಟುಗೂಡಿ ಫಾರ್ಚೂನ್ ರೈಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದಾಗಿ ರೈತರಿಗೆ 22 ಪರ್ಸೆಂಟ್ ಹೆಚ್ಚು ದರ ದೊರೆಯುತ್ತಿದೆ. ಇವು ಸ್ಯಾಂಪಲ್ ಅಷ್ಟೆ. ಇನ್ನೂ ಹಲವಾರು ವಿಷಯಗಳು ನಮ್ಮ ಕಣ್ಣ ಮುಂದೇನೇ ಇವೆ.

ಕಾಂ-ಗ್ರೆ-ಸ್ ಯಾಕೆ ವಿ-ರೋ-ಧಿ-ಸುತ್ತಿದೆ ಹಾಗಾದ್ರೆ? ಯಾಕೆಂದ್ರೆ ಆ ಕಾಯ್ದೆ ಅವರ 2019 ರ ಪ್ರಣಾಳಿಕೆಯಲ್ಲಿ ಇತ್ತು. 2004 ರಲ್ಲೇ  ಈ ವಿಷಯವಾಗಿ ಬಿಜೆಪಿ ತನ್ನ  ರೈತಪರ ನಿಲುವನ್ನು ಪ್ರಕಟಿಸಿದಾಗಲೇ ಕಾಂ-ಗ್ರೆ-ಸ್ ಎಚ್ಚೆತ್ತುಕೊಂಡಿತ್ತು. ಬಿ-ಜೆ-ಪಿ ಮಾಡಿದ ಗ್ರಾಮೀಣ ರಸ್ತೆಗಳು ಹಾಗೂ ಹೈವೇಗಳು ಇಂಡಿಯಾ ಶೈನಿಂಗ್ ನ್ನು ನಿರೂಪಿಸುತ್ತಿದ್ದರೆ ವಾಜಪೇಯಿ ಅವರನ್ನು ಸೋ-ಲಿ-ಸಿ ಕಾಂ-ಗ್ರೆ-ಸ್ ಭಾರತದ ರಸ್ತೆಗಳ ಮುಂದಿದ್ದ ಫಲಕಗಳನ್ನು ತೆ-ಗೆ-ದು ಬಿ-ಸಾ-ಕಿ-ತು.

2010 ರಲ್ಲಿ ಶರದ್ ಪವಾರ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದು  ಹೊಸ ಕಾ-ಯ್ದೆ ಬಗ್ಗೆ ಹೊಸ ಕಾ-ಯ್ದೆ ಬೇಕೆನ್ನುವ ಸೂಚನೆ ಕೊಟ್ಟಿತ್ತು. ಆದರೆ ತನ್ನ ಆಡಳಿತ ವೈ-ಫ-ಲ್ಯ-ದ ಕಾರಣ ಮತ್ತು ಕುಟುಂಬ ಕೇಂದ್ರಿತ ರಾಜಕಾರಣದಿಂದ ತನ್ನ ನೆಲೆಯನ್ನು ಕಳೆದುಕೊಂಡಿದ್ದು ಈಗ ಇತಿಹಾಸ. ಅದು ತಾನು ಪಾಠ ಕಲಿಯುವುದನ್ನು ಬಿಟ್ಟು ಮತ್ತೆ ಇದನ್ನು ವಿ-ರೋ-ಧಿ-ಸುತ್ತಿದೆ ಎಂದರೆ?

ವಿಷಯ ವಿಷ್ಟೇ. ಒಟ್ಟಾರೆ ಮೋ-ದಿ-ಯವರನ್ನು ಹ-ಣಿ-ಯ-ಬೇಕು. ರೈತನನ್ನು ಬ-ಲಿ-ಪ-ಶು-ಮಾಡಿಯಾದರೂ ಅ-ಡ್ಡಿ ಇಲ್ಲ. ರೈತನು ನೇಗಿಲ ಯೋಗಿ ಅಲ್ಲವೇ. ಅವನು ಹೇಗಾದರೂ ಕೆ-ಸ-ರ-ಲ್ಲೇ ಇರುವವನು ಎಂಬ ದಾ-ರ್ಷ್ಠ್ಯ ಬೇರೆ. ತಮ್ಮ ಬಿಳೇ ದಿರಿಸುಗಳಿಗೆ ಏನೂ ಆಗಬಾರದು ಅಷ್ಟೆ. ಚು-ನಾ-ವ-ಣಾ ಸಮಯದಲ್ಲಿ ಹೇಗೂ ರೈತರು ಇದನ್ನು ಮರೆತು ವ್ಯಕ್ತಿ ಜಾ-ತಿ ಕೇಂದ್ರೀಕೃತವಾಗಿ ಓಟು ಬರುವಂತೆ ನೋಡಿಕೊಂಡರಾಯ್ತು ಎಂದು ವೋ-ಟ್ ಬಾ-ಚು-ತ್ತಾ-ರೆ ಎಂಬ ಹುಂ-ಬ ಆಲೋಚನೆ.

ಹೇಗೆ ಮನುಷ್ಯನಿಗೆ ಆಹಾರದ ಆಯ್ಕೆ ಇದೆಯೋ ಆ ಆಹಾರ ಎಲ್ಲಿಂದ ಬರುತ್ತದೆ ಎಂದು ಕೂಡಾ ಮುಖ್ಯವಾಗಿ ನೋಡುತ್ತಾನೆ ಈಗ ಬ್ರಾಂಡುಗಳ ಮೊರೆ ಹೋಗುವುದೂ ಅದಕ್ಕೇನೆ .

ಪಂಜಾಬಿನಲ್ಲಿ ನಮ್ಮ ದೇಶದಲ್ಲಿಯ ಅತ್ಯಧಿಕ ರೋ-ಗ ರು-ಜಿ-ನ-ಗಳ ನಾಡು ಎಂದು ವರದಿಯೊಂದು ಹೇಳುತ್ತದೆ. ಕ್ಯಾ-ನ್ಸ-ರ್ ಪೀ-ಡಿ-ತ-ರಿಗಾಗಿಯೇ ರೈಲಿನಲ್ಲಿ ವ್ಯವಸ್ಥೆ ಇದೆಯಂತೆ. ಪಂಜಾಬು ಗೋಧಿಯ ಕಣಜ ಎಂದು ನಾವು ಶಾಲೆಗಳಲ್ಲಿ ಕಲಿತೆವು.

ಆದರೆ ಅತಿಯಾದ ಯೂರಿಯಾ ಮತ್ತು ಕ್ರಿ-ಮಿ-ನಾ-ಶ-ಕ-ಗಳನ್ನು ಉಪಯೋಗಿಸಲು ಹೇಳಿ ಹೆಚ್ಚು ಬೆಳೆಗಳು ಬರುವಂತೆ ಮಾಡಿದರು ವಿ-ಜ್ಞಾ-ನಿ-ಗಳು. ವಿ-ಜ್ಞಾ-ನಿ-ಗಳೆಂಬ ಈ ಪಾ-ಪಿ-ಗಳನ್ನು ಎಷ್ಟು ಬೈ-ದ-ರೂ ಸಾಲದು. ರೋ-ಗ ರು-ಜಿ-ನ-ಗಳನ್ನೇ ಬಿ-ತ್ತಿ-ದ-ರು ಅಲ್ಲಿ ಇಂತಹ ವಿ-ಜ್ಞಾ-ನಿ-ಗಳು.

ಅಮೆರಿಕಾ ದೇಶಕ್ಕೆ ನಾವು ಕೊತ್ತಂಬರಿ ಸೊಪ್ಪನ್ನಾಗಲೀ ಕರಿಬೇವು ಸೊಪ್ಪನ್ನಾಗಲೀ ಯಾವುದೇ ಸಸ್ಯವನ್ನು ವಿಮಾನದಲ್ಲಿ ಒಯ್ಯುವಂತಿಲ್ಲ. ಒಂದು ಕಟ್ಟು ಕೊತ್ತಂಬರಿ ಸೊಪ್ಪು ಕಂಡರೂ ಐವತ್ತು ಸಾವಿರದಷ್ಟು ದಂ-ಡ ಹಾಕುತ್ತಾರೆ ಹಾಗೂ ವಿಮಾನ ನಿಲ್ದಾಣದಿಂದಲೇ ವಾ-ಪ-ಸ್ ತನ್ನ ದೇಶಕ್ಕೆ ಕಳುಹಿಸುತ್ತಾರೆ. ನಮ್ಮಲ್ಲಿ  ಹೆಲಿಕಾಪ್ಟರ್ ನಲ್ಲಿ  ಬೋರ್ಡೋ ದ್ರಾವಣವೋ ಮೈಲು ತುತ್ತೋ ಏನೋ 40 ವರ್ಷಗಳ ಹಿಂದೆ ಗೇರುಬೀಜಗಳ ತೋ-ಪು-ಗಳಿಗೆ ಸಿಂಪಡಿಸಿ ಶಾಶ್ವತ ಬು-ದ್ಧಿ-ಮಾಂ-ದ್ಯ-ತೆ-ಯನ್ನು ಉಂಟು ಮಾಡಿದ ಉದಾಹರಣೆ ಕರ್ನಾಟಕದಲ್ಲೇ ಇದೆ. ಆದೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.

ಮೋ-ದಿ ಸರಕಾರ ಬಂದಮೇಲೆ ಬೇವು ಲೇಪಿತ ಯೂರಿಯಾ , ಭೀಡ್ ಸೇ ಬಜಾರ್ ತಕ್, ಕೃಷಿ ಸಮ್ಮಾನ್, ಕೃಷಿಕರಿಗೂ ಪದ್ಮಶ್ರೀ ಕೃಷಿಕರೊಂದಿಗೆ ಮಾತುಕತೆ ಇವೆಲ್ಲ ನೋಡಿ  ಶತಾಯ ಗತಾಯ     ಮೋ-ದಿ-ಯನ್ನು ಹ-ಣಿ-ಯುವ ಪ್ಲಾನ್ ಅಷ್ಟೇ ಅಲ್ಲದೆ ಬೇರೇನೂ ಅಲ್ಲ ಈಗಿನ ಕೃತಕ ರೈತ ಧ-ರ-ಣಿ-ಗಳು ಮೆರವಣಿಗೆಗಳು. ಕಾಂ-ಗ್ರೆ-ಸ್ ಬಿಟ್ಟುಹೋದ ಕ-ಮ್ಯುನಿ-ಸ್ಟ್ ಮು-ಳ್ಳು-ಗಳಿವು.

ಎರಡು ರಾಜ್ಯಗಳನ್ನು ಬಿಟ್ಟರೆ ಮೊನ್ನೆಯ ಧ-ರ-ಣಿ ಎಲ್ಲಿಯೂ ಸಕ್ಸೆಸ್ ಆಗಲಿಲ್ಲ. ರೈತರೇ ಅಲ್ಲದ ಮಹಿಳಾ ಮಣಿಗಳನ್ನೂ ವಿದ್ಯಾರ್ಥಿ ಮುಖಂಡರನ್ನೂ ಮೊನ್ನೆ ಮೈಸೂರಿನಲ್ಲಿ ನೋಡಿದೆ. ಪತ್ರಿಕೆಗಳು ಸುಮ್ಮನೆ ದನಿಗೂಡಿಸಿದವು. ಟಿವಿಗಳು ಅ-ರ-ಚಿ-ದ-ವು. ದೆಹಲಿಯಲ್ಲಿ ನಡೆಯುತ್ತಿರುವ ವಿ-ಧ್ವಂ-ಸ-ಕ ಕೃ-ತ್ಯ-ವನ್ನು ಖಂ-ಡಿ-ಸು-ವ ಗೋ-ಜಿ-ಗೇ ಹೋಗಲಿಲ್ಲ ಇವು.

ಈ ಧ-ರ-ಣಿ-ಗ-ಳ ಹಿಂದೆ ಯಾರಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ನಿನ್ನೆಯೇ ಎಲ್ಲ ಪತ್ರಿಕೆಗಳಲ್ಲಿ ಓದಿದೆವು. ರೈತ ಆರಾಮ್ ಇದ್ದಾನೆ. ಕೋವಿಡ್ ನಡುವೆಯೂ ಮಳೆರಾಯನ ಆ-ರ್ಭ-ಟ ಎದುರಿಸಿಯೂ ರೈತ ನೂರಕ್ಕೆ ನೂರಾ ಮೂವತ್ತರಷ್ಟು ಬೆಳೆ ಬೆಳೆದಿದ್ದಾನೆ. ನೇಗಿಲ ಯೋಗಿ ಅವನು. ಅವನನ್ನು ಗೌರವಿಸುವ ಕೆಲಸ ಮೋದಿಯವರಿಂದ ಆಗುತ್ತಿದೆ. ವಿ-ರೋ-ಧ ಪಕ್ಷಗಳು ರೈತರನ್ನು ಅ-ವ-ಮಾ-ನಿ-ಸುತ್ತಿವೆ.

ಇನ್ನೂ ಸ್ವಲ್ಪ:  ಬ್ಯಾಂಕಿಂಗ್ ಕ್ಷೇತ್ರದ ಮಂಚೂಣಿಯಲ್ಲಿದ್ದ ಸಿಂಡಿಕೇಟ್ ಬ್ಯಾಂಕ್ ಬಹಳಷ್ಟು ಹಿಂದೆಯೇ ಅಂದರೆ ರಾಷ್ಟ್ರೀಕೃತ ಗೊಳ್ಳುವ ಮೊದಲೇ ಇನ್ನೂ ಭಾರತಕ್ಕೆ ಸ್ವಾತಂತ್ರ ಬರುವ ಮೊದಲೇ ಕೃಷಿಗೆ ಸಾ-ಲ-ವನ್ನು ಕೊಡಲು ಪ್ರಾರಂಭಿಸಿದಾಗ ಅಂದಿನ  ರಿಸರ್ವ್ ಬ್ಯಾಂಕ್ ಕೂಡಾ ಆ-ಕ್ಷೇ-ಪಿ-ಸಿತ್ತಂತೆ. ಈಗಂತೂ ಸಾ-ಲ-ಗಳ ಆದ್ಯತಾ ಪಟ್ಟಿಯಲ್ಲಿ ಮೊದಲನೆಯದೇ ಕೃಷಿ ಅದರಲ್ಲೂ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು ಮಾತ್ರ ದೊಡ್ಡ ರೈತರಿಗೆ ಕೊಟ್ಟ ಸಾ-ಲ ಆದ್ಯತಾ ಪಟ್ಟಿಯಲ್ಲಿ ಇಲ್ಲ.

ಚಿಕ್ಕದೊಂದು ಉದಾಹರಣೆಯೊಂದಿಗೆ ನಾನು ಈ ಲೇಖನವನ್ನು ಕೊನೆಗೊಳಿಸುತ್ತಿದ್ದೇನೆ. ತರಕಾರಿ ಬೆಳೆದು ಮಾರಾಟ ಮಾಡುವ ರೈತರಿಗೆ ಆಪೇ (Ape) ದಂತಹ ಮಿನಿ ಲಾರಿಗಳಿಗೆ ಸಾ-ಲ ಕೊಟ್ಟಿವೆ. ಬಿಜಾಪುರ ಜಿಲ್ಲೆಯ ಹಳ್ಳಿಗಳಿಂದ  ಮಧ್ಯರಾತ್ರಿ ಊರಿಂದ ಹೊರಟು ಬೆಳಗಿನ ಜಾವ ಬೆಳಗಾವಿ ಗೋವಾ ಗಳಿಗೆ  ತರಕಾರಿ ಬೆಳಗಿನ ಜಾವ ತಲುಪುವಂತೆ ಮಾಡುವಲ್ಲಿ ಅಲ್ಲಿ ಯೋಗ್ಯ ಬೆಲೆಗೆ ಮಾರುವಲ್ಲಿ ಅಂದಿನ ವಾಜಪೇಯಿ ಸರ್ಕಾರದ  ಭಾರತ ಪ್ರಕಾಶಿಸುತ್ತಿದೆ ಎಂಬ ಪ್ರತೀಕದ ನಯವಾದ ರಸ್ತೆಗಳು  ಹಳ್ಳಿ ಪೇಟೆಗಳನ್ನು ಜೋಡಿಸುವಲ್ಲಿ ನೆರವಾದವು.

ಕೋವಿಡ್ ಸಮಯದಲ್ಲಿ ರೈತರ ಉತ್ಪನ್ನಗಳನ್ನು ವಾತಾನುಕೂಲಿತ ಸುಸಜ್ಜಿತ ರೈಲುಗಳಲ್ಲಿ ಬೇರೆ ಬೇರೆ ಗಮ್ಯ ತಲುಪಲು ಮಾಡಿದ ಪ್ರಯತ್ನವನ್ನು ಪೇಪರುಗಳು ಮುಖ್ಯಸುದ್ದಿಯಾಗಿ ಬರೆಯದೆ ಎಲ್ಲೋ ಮೂಲೆಯಲ್ಲಿ ಬರೆದವು . 2020 ರಲ್ಲಿ ಬಜೆಟ್ ನಲ್ಲಿ ಘೋಷಿಸಿದಂತೆ ಈಗಲೂ ರೈತರ  ಉತ್ಪನ್ನಗಳನ್ನು ಬೇರೆ ಬೇರೆ ಸ್ಥಳಗಳಿಗೆ ಒಯ್ಯಲು ಕಿಸಾನ್ ರೈಲುಗಳು ಬಂದಿವೆ. ಇನ್ನೂ ಬರುತ್ತಿವೆ. ರೈತರ ಉತ್ಪನ್ನಗಳಿಗೆ ಪೆಟ್ರೋಲ್ ಬೆಲೆ ಏರಿಕೆಗೂ ಸಂಬಂಧ ಇಲ್ಲ ರೈಲ್ವೆಯ ಸಂಪೂರ್ಣ ವಿದ್ಯುದ್ದೀಕರಣವು 2023 ಕ್ಕೆ ಮುಗಿಯುತ್ತದೆ. ಎಲ್ಲವೂ ಟೈಮ್ ಬೌಂಡ್ .

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಗಿನ ಜಾವವೇ ಗ್ಲಾಡಿಯೋಲಾ ಹೂಗಳು ತಲುಪುವಲ್ಲಿ ಅವು ವಿದೇಶಗಳಿಗೆ ಅದೇ ದಿನ ತಲುಪುವಲ್ಲಿ ಮತ್ತು ಪಪ್ಪಾಯಿ ಹಣ್ಣುಗಳನ್ನು ಒಯ್ಯಲು ಕಾರುಗಳನ್ನು ಖರೀದಿಸಲು ಕೂಡಾ ಸಾಲ ಕೊಟ್ಟಿದ್ದಿದೆ. ದಕ್ಷಿಣ ಕನ್ನಡದ ನನ್ನ ಬ್ಯಾಂಕಿಂಗ್ ಸ್ನೇಹಿತರು ಮಲ್ಲಿಗೆ ಹೂ ಮುಂಬೈಗೆ ಬೆಳಿಗ್ಗೆಯೇ ತಲುಪಿಸಲು ಅನುವಾಗುವಂತೆ ಬೆಳೆಗಾರರಿಗೆ ವಾಹನ ಖರೀದಿಸಲು ಸಾ-ಲ ಕೊಟ್ಟಿದ್ದಾರೆ.

ನೈಜ ರೈತನಿಗೆ ಶರಣು ರೈತ ನೀನು ಯೋಗಿಯೇ ಸೈ. ಕುವೆಂಪು ಬರೆದದ್ದು ಅದನ್ನೇ. ಉಳುವಾ ರೈತನ ನೋಡಲ್ಲಿ. ಟ್ರಾಕ್ಟರ್ ನಲ್ಲಿ ದಿಲ್ಲಿಯಲ್ಲಿ ಧರಣಿ ಹೂಡುವ ರೈತನ ಬಗ್ಗೆ ಅವರು ಬರೆದಿಲ್ಲ .  ಕೊನೆಗೊಂದು ಹಾಡಿನ ಕೊಂಡಿ ಕೊಟ್ಟಿರುವೆ. ರೈತ ಹೆಣ್ಣು ಮಕ್ಕಳು ಗದ್ದೆಯಲ್ಲಿ ಆನಂದದಿಂದ ಹಾಡುವುದು. ನಿನ್ನೆ ವಿ-ರೋ-ಧ ಪಕ್ಷದ ಮಹಿಳಾ ಮಣಿಗಳು. ಗುಲಾಬಿ ಮು-ಳ್ಳು-ಗಳನ್ನು ಆರಿಸುವುದರಲ್ಲಿ ಮಗ್ನರಾಗಿದ್ದವು.

Advertisement
Share this on...