ಮದುವೆ ಹಾಗು ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದಾದರೆ ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲೇ ಚಿನ್ನವನ್ನ ಜನ ಹೆಚ್ಚು ಬಳಸುತ್ತಾರೆ. ಇಷ್ಟೊಂದು ಚಿನ್ನವನ್ನ ಬಳಸುವ ಭಾರತವೇ ಚಿನ್ನ ಹೊಂದಿರುವ ಜಗತ್ತಿನ ಮೊದಲ ರಾಷ್ಟ್ರವೆಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಭಾರತವನ್ನೂ ಮೀರಿಸಿ ಅತಿ ಹೆಚ್ಚು ಚಿನ್ನ ಹೊಂದಿರುವ ಜಗತ್ತಿನ ಅನೇಕ ರಾಷ್ಟ್ರಗಳಿವೆ. ಈ ಕ್ರಮಸಂಖ್ಯೆ ಯಲ್ಲಿ ಭಾರತಕ್ಕೆ ಎಷ್ಟನೆಯ ಸ್ಥಾನವಿದೆ ಎಂದು ತಿಳಿದುಕೊಳ್ಳೋಕೂ ಮುನ್ನ ಜಗತ್ತಿನ ಅತಿ ಹೆಚ್ಚು ಚಿನ್ನ ಹೊಂದಿರುವ ಟಾಪ್ 10 ರಾಷ್ಟ್ರಗಳ ಬಗ್ಗೆ ತಿಳಿಯೋಣ ಬನ್ನಿ.
10. ಟರ್ಕಿ: ಮಾಹಿತಿಗಳ ಪ್ರಕಾರ ಚಿನ್ನವನ್ನ ಮೊಟ್ಟ ಮೊದಲ ಬಾರಿಗೆ ಕಂಡುಹಿಡಿದದ್ದೇ ಟರ್ಕಿಯಲ್ಲಿ ಎಂದು ಹೇಳಲಾಗುತ್ತದೆ. ಆದರೆ ಜಗತ್ತಿನ ಅತಿ ಹೆಚ್ಚು ಚಿನ್ನ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಟರ್ಕಿ 10 ನೆಯ ಸ್ಥಾನದಲ್ಲಿದೆ ಈ ದೇಶದಲ್ಲಿ ಅಧೀಕೃತ ರೂಪದಲ್ಲಿ ನೋಡಿವುದಾದರೆ 595 ಟನ್ ಚಿನ್ನ ಲಭ್ಯವಿದೆ.
9. ನೆದರ್ಲೆಂಡ್ಸ್: ನೆದರ್ಲೆಂಡ್ಸ್ ಒಂದು ಪ್ರಾಕೃತಿಕ ಸೌಂದರ್ಯ ಹೊಂದಿರುವ ಸುಂದಿರ ರಾಷ್ಟ್ರವಾಗಿದೆ. ಈ ದೇಶ ಅತಿ ಹೆಚ್ಚು ಚಿನ್ನ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 9 ನೆಯ ಸ್ಥಾನದಲ್ಲಿದ್ದು ಈ ದೇಶದ ಬಳಿ 612 ಟನ್ ಚಿನ್ನವಿದೆ.
8. ಜಪಾನ್: ಟೆಕ್ನಾಲಜಿಗೆ ಮತ್ತೊಂದು ಹೆಸರೆಂದರೆ ಅದು ಜಪಾನ್, ವಿಶ್ವಕ್ಕೆ ತಂತ್ರಜ್ಞಾನ, ಆಟೋಮೊಬೈಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಕೊಡುಗೆ ನೀಡಿರುವ ದೇಶ ಅದು ಜಪಾನ್. ಈ ರಾಷ್ಟ್ರ ಅತೊ ಹೆಚ್ಚು ಚಿನ್ನವಿರುವ ರಾಷ್ಟ್ರಗಳ ಪಟ್ಟಿಯಲ್ಲಿ 8 ನೆಯ ಸ್ಥಾನದಲ್ಲಿದ್ದು ಇದರ ಬಳಿ 765 ಟನ್ ಚಿನ್ನವಿದೆ.
7. ಸ್ವಿಟ್ಜರ್ಲೆಂಡ್: ತನ್ನ ಸುಂದರವಾದ ಪ್ರಕೃತಿ ಹಾಗು ಪ್ರಕೃತಿ ತಾಣಗಳಿಗೆ ಹೆಸರುವಾಸಿಯಾಗಿರುವ ಸ್ವಿಟ್ಜರ್ಲೆಂಡ್ ಬಳಿ ಬರೋಬ್ಬರಿ 1,040 ಟನ್ ಬಂಗಾರವಿದ್ದು ಇದು ಜಗತ್ತಿನ ಅತಿ ಹೆಚ್ಚು ಚಿನ್ನವಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7 ನೆಯ ಸ್ಥಾನದಲ್ಲಿದೆ.
6. ರಷ್ಯಾ: ರಷ್ಯಾ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಒಂದು. ಅಲ್ಲಿನ ಭೂಪ್ರದೇಶದ ಪ್ರಕಾರ ರಷ್ಯಾ ಅತಿ ದೊಡ್ದ ದೇಶ. ರಷ್ಯಾದ ಬಳಿಕ ಅಧಿಕೃತ ರೂಪದಲ್ಲಿರುವ ರಿಜರ್ವ್ ಚಿನ್ನ ಸುಮಾರು 1,842 ಟನ್ ಇದ್ದು ಇದು 6 ನೆಯ ಸ್ಥಾನದಲ್ಲಿದೆ.
5. ಚೀನಾ: ಏಷ್ಯಾದ ಶಕ್ತಿಶಾಲಿ ಹಾಗು ಭಾರತದ ನೆರೆ ರಾಷ್ಟ್ರ ಚೀನಾ ಆಗಿದ್ದು, ಜನಸಂಖ್ಯೆಯಲ್ಲಿ ಚೀನಾ ಪ್ರಪಂಚದ ನಂಬರ್ 1 ಸ್ಥಾನ ಪಡೆದಿದೆ. ರಷ್ಯಾ ಬಳಿಕ ಚೀನಾ ಭೂಭಾಗದಲ್ಲಿ ದೊಡ್ಡದು. ಚೀನಾದ ಬಳಿ ಒಟ್ಟು 1,890 ಟನ್ ಚಿನ್ನವಿದ್ದು ಅತಿ ಹೆಚ್ಚು ಚಿನ್ನವಿರುವ ರಾಷ್ಟ್ರಗಳ ಪಟ್ಟಿಯಲ್ಲಿ 5 ನೆಯ ಸ್ಥಾನದಲ್ಲಿದೆ.
4. ಫ್ರಾನ್ಸ್: ಇದೊಂದು ಜಗತ್ತಿನ ಅತ್ಯದ್ಭುತ ದೇಶವೆಂದೇ ಖ್ಯಾತಿ ಪಡೆದಿದೆ. ಫ್ರಾನ್ಸ್‌ನ ಬಳಿ ಒಟ್ಟು 2,436 ಟನ್ ಚಿನ್ನದ ಭಂಡಾರವಿದೆ. ಚಿನ್ನದ ಭಂಡಾರ ಹೊಂದಿರುವ ರಾಷ್ಟ್ರಗಳ ಪೈಕಿ ಫ್ರಾನ್ಸ್ 4 ನೆಯ ಸ್ಥಾನದಲ್ಲಿದೆ.
3. ಇಟಲಿ: ಯೂರೋಪಿಯನ್ ದೇಶಗಳ ಪೈಕಿ ಇಟಲಿ ಸುಂದರ ದೇಶವಾಗಿದೆ. ವಿಶ್ವದ ಚಿನ್ನ ಹೊಂದಿರುವ ರಾಷ್ಟ್ರಗಳ ಪೈಕಿ ಇಟಲಿ 3 ನೆಯ ಸ್ಥಾನದಲ್ಲಿದ್ದು ಇದರ ಬಳಿ 2,452 ಟನ್ ಚಿನ್ನವಿದೆ.
2. ಜರ್ಮನಿ: ಜಗತ್ತಿನ ಸರ್ವಾಧಿಕ ಚಿನ್ನ ಹೊಂದಿರುವ ದೇಶಗಳ ಪೈಕಿ ಜರ್ಮನಿ 2 ನೆಯ ಸ್ಥಾನದಲ್ಲಿದೆ. ಈ ರಾಷ್ಟ್ರ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿದೆ ಹಾಗು ಈ ರಾಷ್ಟ್ರದ ಬಳಿ 3,381 ಟನ್ ಚಿನ್ನವಿದೆ.
1. ಅಮೆರಿಕಾ (USA): ಜಗತ್ತಿನ ಬಲಿಷ್ಟ ರಾಷ್ಟ್ರಗಳ ಪೈಕಿ ನಂಬರ್ 1 ಹಾಗು ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕಾದಲ್ಲಿ ಅಲ್ಲಿನ ಜನ ಚಿನ್ನವನ್ನ ಬಳಸದೇ ಇದ್ದರೂ ಕೂಡ ಅಲ್ಲಿ ಜಗತ್ತಿನ ಅತಿ ಹೆಚ್ಚು ಚಿನ್ನವಿದೆ. ವರ್ಲ್ಡ ಗೋಲ್ಡ್ ಕೌನ್ಸಿಲ್ ರಿಪೋರ್ಟ್‌ನ ಪ್ರಕಾರ ಅಮೇರಿಕಾದ ಬಳಿಕ 8,133 ಟನ್ ಚಿನ್ನವಿದೆ.
ಭಾರತದ ಬಗ್ಗೆ ಖಂಡಿತವಾಗಿಯೂ ನೀವು ತಿಳಿದುಕೊಳ್ಳಲೇಬೇಕು, ವರ್ತಮಾನದಲ್ಲಿ ಭಾರತ ಚಿನ್ನ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 11 ನೆಯ ಸ್ಥಾನದಲ್ಲಿದ್ದು ಭಾರತದ ಬಳಿ 558 ಟನ್ ಚಿನ್ನವಿದೆ. ಸದ್ಯ ಉತ್ತರಪ್ರದೇಶದ ಸೋನಭದ್ರ್ ದಲ್ಲಿ ಮೂರುವರೆ ಸಾವಿರ ಟನ್ ಚಿನ್ನದ ಗಣಿ ಪತ್ತೆಯಾಗಿದ್ದು ಭಾರತದ ಸ್ಥಾನ ಕೂಡ ಟಾ>ಪ್ 5 ನಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.