ಈ ವ್ಯಕ್ತಿಯಾಗಲಿದ್ದಾರೆ ದೇಶದ ಮುಂದಿನ ಪ್ರಧಾನಮಂತ್ರಿ: ಬಿಜೆಪಿ ಸಂಸದ ಹೇಳಿದ ಭವಿಷ್ಯವಾಣಿ ಕೇಳಿ ದಂಗಾದ ಕಾಂಗ್ರೆಸ್

in Kannada News/News 2,427 views

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಬಹಳ ಪ್ರಸಿದ್ಧವಾದ ಮುಖವಾಗಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ಉತ್ತರಾಧಿಕಾರಿ ಯಾರು ಗೊತ್ತಾ? ಯೋಗಿ ಆದಿತ್ಯ ನಾಥ್ 2024 ರಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧಿಯಾಗುತ್ತಾರೆಯೇ? ಅನೇಕ ಭಾರತೀಯ ನಾಗರಿಕರು ಪ್ರಧಾನಿ ಮೋದಿಯವರ ಉತ್ತರಾಧಿಕಾರಿಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಪ್ರಧಾನಿ ಮೋದಿ ಅವರು ಸತತ ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈಗಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನಾಗರಿಕರಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಎಂದರೆ ಅವರು ಮೂರನೇ ಬಾರಿಗೂ ಪ್ರಧಾನಿಯಾಗೇ ಆಗುತ್ತಾರೆ ಎನ್ನುತ್ತಾರೆ ದೇಶದ ಜನತೆ.

Advertisement

ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ಬಿಹಾರ ಬಿಜೆಪಿಯ ಉಪಾಧ್ಯಕ್ಷ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಿಹಾರ ರಾಜ್ಯ ಉಪಾಧ್ಯಕ್ಷ ಮತ್ತು ಮುಜಫರ್‌ಪುರ ಸಂಸದ ಅಜಯ್ ನಿಶಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಹಳ ಮಹತ್ವದ ಹೇಳಿಕೆ ನೀಡಿದ್ದಾರೆ. ಅಜಯ್ ನಿಶಾದ್ ಅವರ ಹೇಳಿಕೆಗಳಿಂದಾಗಿ ಈ ಹಿಂದೆಯೂ ಚರ್ಚೆಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರದ ಕುರಿತು ಹೇಳಿಕೆ ನೀಡಿರುವ ಅವರು, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ಮೋದಿಯವರ ಉತ್ತರಾಧಿಕಾರಿಯಾಗಿ ಕಾಣಬಹುದು ಎಂದು ಹೇಳಿದ್ದಾರೆ. ಅವರು ಹೇಳಿಕೆ ನೀಡಿದ ನಂತರವೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಮೂರನೆಯ ಬಾರಿಗೂ ಪ್ರಧಾನಿಯಾಗಲು ಬಯಸುತ್ತಿಲ್ಲ ಪ್ರಧಾನಿ ಮೋದಿ?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಅಭ್ಯರ್ಥಿಯಾಗಲು ಬಯಸುವುದಿಲ್ಲ ಎಂದು ಕೆಲವು ರಾಜಕೀಯ ತಜ್ಞರು ಊಹಿಸುತ್ತಿದ್ದಾರೆ. ಇದಕ್ಕೆ ಕಾರಣವನ್ನು ವಿವರಿಸಿದ ರಾಜಕೀಯ ತಜ್ಞರು, ಭಾರತೀಯ ಜನತಾ ಪಕ್ಷದಿಂದ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಒಬ್ಬರೇ ಆಯ್ಕೆಯಾಗಿದ್ದರು, ಅವರು ಕೆಲವು ದಿನಗಳ ಕಾಲ ಪ್ರಧಾನಿಯೂ ಆಗಿದ್ದರು ಅವರೇ ಅಟಲ್ ಬಿಹಾರಿ ವಾಜಪೇಯಿ, ಆದ್ದರಿಂದ ಪ್ರಧಾನಿ ಮೋದಿ ಅವರೇ ಮೂರನೇ ಬಾರಿಗೆ ಪ್ರಧಾನಮಂತ್ರಿ ಎಂದು ಹೇಳಿದರೆ ಅದು ಬಿಜೆಪಿಯ ನಿಯಮಕ್ಕೆ ವಿರುದ್ಧವಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಮಾತ್ರ ಬಿಜೆಪಿಯಿಂದ ಮೂರು ಬಾರಿ ಪ್ರಧಾನಿಯಾಗಿದ್ದರು.

ಬಿಜೆಪಿಯಲ್ಲಿ ಕುಟುಂಬ ರಾಜಕೀಯ ವ್ಯವಸ್ಥೆ ಇಲ್ಲ

ಭಾರತ ಒಂದು ಸ್ವತಂತ್ರ ದೇಶ. ಭಾರತದ ಯಾವ ಪ್ರಜೆಗಳೂ ಪ್ರಧಾನಿಯಾಗುವ ಅಧಿಕಾರ ಹೊಂದಿದ್ದಾರೆ. ಭಾರತವನ್ನು ಸುಮಾರು 70 ವರ್ಷಗಳ ಕಾಲ ಒಂದೇ ಕುಟುಂಬ ಆಳಿತು. ಹಾಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಸಹ ತಮ್ಮ ಕುಟುಂಬದ ಸದಸ್ಯರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬಹುದು ಅಂತ ನೀವು ಯೋಚಿಸಿದರೆ ಅದು ಸುಳ್ಳು. ಭಾರತೀಯ ಜನತಾ ಪಕ್ಷವು ಸ್ವತಂತ್ರ ಪಕ್ಷ (Free Party) ಆಗಿದೆ, ಯಾರಾದರೂ ನೇರವಾಗಿ ತನ್ನ ಕುಟುಂಬದ ಸದಸ್ಯರನ್ನು ನಾಯಕನನ್ನಾಗಿ ಮಾಡುವುದು ಬಿಜೆಪಿಯಲ್ಲಿ ನಡೆಯುವುದಿಲ್ಲ. ಇಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವೇ ಇಲ್ಲ. ಪ್ರಧಾನಮಂತ್ರಿ ಮಟ್ಟದಲ್ಲಂತೂ ಇಲ್ಲವೇ ಇಲ್ಲ.

ಯೋಗಿ 2024ರಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧಿಯಾಗುತ್ತಾರಾ?

2024 ರ ಲೋಕಸಭೆಗೆ ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿಯ ಬಗ್ಗೆ ನಾವು ಮಾತನಾಡಿದರೆ, ಈ ಪಟ್ಟಿಯಲ್ಲಿ ಅನೇಕ ಹೆಸರುಗಳಿವೆ. ಇದರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೆಸರು ಮುಂಚೂಣಿಯಲ್ಲಿದೆ. ಹೆಚ್ಚಿನ ಭಾರತೀಯ ನಾಗರಿಕರು ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತಾರೆ. ಮತ್ತೊಂದೆಡೆ, ನಾವು ಇತರ ನಾಯಕರ ಬಗ್ಗೆ ಮಾತನಾಡುವುದಾದರೆ, ದೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಕೂಡ ಪ್ರಧಾನಮಂತ್ರಿ ರೇಸ್ ನಲ್ಲಿದ್ದಾರೆ. ಅಂತಿಮವಾಗಿ ಯಾರು ಪ್ರಧಾನಿ ಮೋದಿಯವರ ಉತ್ತರಾಧಿಕಾರಿಯಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಕಾದು ನೋಡಬೇಕು

Advertisement
Share this on...