ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬಲವಂತದ ಮತಾಂತರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಆಳಂದಿ ಕ್ಷೇತ್ರದ ಮರ್ಕಲ್ ಗ್ರಾಮದಲ್ಲಿ ಕೆಲವರನ್ನು ಹಣದ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಪರಿವರ್ತಿಸುವ ಯತ್ನ ನಡೆದಿದೆ. ಈ ಸಂಬಂಧ ಆಲಂದಿ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತನೂ ಇದ್ದಾನೆ. ಆರೋಪಿಗಳ ವಿರುದ್ಧ ಎರಡು ಸಮುದಾಯಗಳ ನಡುವೆ ದ್ವೇಷ ಸೃಷ್ಟಸಿದ ಆರೋಪವೂ ಇದೆ.
ಎಫ್‌ಐಆರ್‌ನ ಪ್ರಕಾರ, ಈ ಸಂಬಂಧ ಭಾನುವಾರ (ಜನವರಿ 15) ಮರ್ಕಲ್‌ನ ಹಿಂದೂ ನಿವಾಸಿ ಪ್ರಸಾದ್ ಸಾಳುಂಕೆ ಅವರು ಆಲಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಅವರು ಪ್ರದೀಪ್ ವಾಘಮಾರೆ, ಪ್ರಶಾಂತ್ ವಾಘಮಾರೆ, ರೌನಕ್ ಶಿಂಧೆ, ಅಶೋಕ್ ಪಂಢರೆ, ತೇಜಸ್ ಚಾಂದನೆ, ಮುಖೇಶ್ ವಿಶ್ವಕರ್ಮ, ಲಕ್ಷ್ಮಣ್ ನಾಯ್ಡು, ಎಂಬಿ ಯೂನ್, ಜೆ ಯೂನ್ ಮತ್ತು ಇಶಾಲ್ ಸಾಳ್ವೆ ಅವರನ್ನು ಹೆಸರಿಸಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಮತ್ತು 17 ವರ್ಷದ ಹುಡುಗನ ಹೆಸರೂ ಇದೆ.
ಈ ಜನರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಲು ಸಾಕಷ್ಟು ಚಿತ್ರಹಿಂಸೆ ನೀಡಿದರು ಎಂದು ಸಾಳುಂಖೆ ಹೇಳಿದರು. ಜನವರಿ 15 ರಂದು ಇಬ್ಬರು ವ್ಯಕ್ತಿಗಳು – ಪ್ರದೀಪ್ ವಾಘಮಾರೆ ಮತ್ತು ಪ್ರಶಾಂತ್ ವಾಘಮಾರೆ ತಮ್ಮ ಪ್ರದೇಶಕ್ಕೆ ಬಂದು ಕ್ರಿಶ್ಚಿಯನ್ ಮತದ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಕೇಳಿದರು. ನಂತರ ಅವರು ಜನರಿಗೆ ಹಣದ ಆಮಿಷವೊಡ್ಡಿದರು, ಬಿಸಿನೆಸ್ ನಡೆಸಲು ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು ಮತ್ತು ನಂತರ ಸಾಲುಂಖೆಯ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುವಂತೆ ಹೇಳಿದರು ಎಂದು ತಿಳಿಸಿದ್ದಾರೆ.
ದೂರುದಾರರು ಮುಂದೆ ಮಾತನಾಡುತ್ತ, “ನಂತರ ಅವರು (ಆರೋಪಿಗಳು) ನಮ್ಮ ಮನೆಯಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ನೋಡುತ್ತಲೇ ಅವುಗಳನ್ನು ನಿಂದಿಸಲು ಪ್ರಾರಂಭಿಸಿದರು. ನಾವು ಚರ್ಚ್‌ಗೆ ಹೋಗಬೇಕು, ಯೇಸುವನ್ನು ಆರಾಧಿಸಬೇಕು ಎಂದು ಅವರು ಹೇಳಿದರು. ನಾವು ಹಿಂದೂಗಳು, ನಾವು ಶಿವಚರಿತ್ರೆ ಪಾರಾಯಣವನ್ನು ಮಾತ್ರ ಓದುತ್ತೇವೆ ಎಂದು ನಾನು ಅವರಿಗೆ ಹೇಳಿದೆ. ಈ ಕುರಿತು ಮಾತನಾಡಿದ ಅವರು, ಹಿಂದೂ ಧರ್ಮಗ್ರಂಥಗಳನ್ನು ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಿಂದೂಗಳ ದೇವರನ್ನು ಪೂಜಿಸುವುದರಿಂದ ಏನೂ ಆಗುವುದಿಲ್ಲ ಎಂದರು” ಎಂದು ತಿಳಿಸಿದ್ದಾರೆ.
ಸಾಳುಂಖೆ ನೀಡಿದ ದೂರಿನ ಪ್ರಕಾರ, ಈ ಜನರು ಹಿಂದೂ ದೇವರುಗಳನ್ನು ಭಿಕ್ಷುಕರು ಎಂದೂ ಕರೆದಿದ್ದಾರೆ. ದೂರಿನಲ್ಲಿ, “ಅವರು (ಆರೋಪಿಗಳು) ಹಗಲಿನಲ್ಲಿ ರಸ್ತೆಯಲ್ಲಿ ವಾಸುದೇವ್ ಅವತಾರವನ್ನು ನೋಡಿ ಇದು ಯಾರು? ಎಂದು ಕೇಳಿದರು. ಹಿಂದೂ ಸ್ಥಳೀಯರಿಂದ ಭಿಕ್ಷೆ ಪಡೆಯುವುದು ನಮ್ಮ ದೇವರು ಎಂದು ನಾವು ಹೇಳಿದ್ದೇವೆ. ಈ ಕುರಿತು ಅವರು ‘ನಿಮ್ಮ ದೇವರೇ ಭಿಕ್ಷೆ ಬೇಡುವವನದಾರೆ ನಿನ್ನನ್ನೇನು ಕಾಪಾಡುತ್ತಾನೆ’ ಎಂದರು. ಈ ಅವಮಾನವನ್ನು ಸಹಿಸಲಾಗಲಿಲ್ಲ. ನಾನು ನನ್ನ ಇಬ್ಬರು ಸ್ನೇಹಿತರಿಗೆ ಕರೆ ಮಾಡಿದೆ. ಅವರ ಜೊತೆಗೂ ಇದೇ ರೀತಿಯ ಘಟನೆ ನಡೆದಿದೆ, ಅವರ ಮುಂದೆಯೂ ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ ಎಂದು ನನ್ನ ಸ್ನೇಹಿತರು ತಿಳಿಸಿದರು. ನಾವೆಲ್ಲ ಸೇರಿ ಪೊಲೀಸರಿಗೆ ಕರೆ ಮಾಡಿ ದೂರು ಕೊಟ್ಟೆವು. ಹಿಂದೂಗಳಿಗೆ ಹಣದ ಆಮಿಷ ಒಡ್ಡಿ ಕ್ರೈಸ್ತರಾಗುವಂತೆ ಹೇಳುತ್ತಿದ್ದ 14 ಆರೋಪಿಗಳನ್ನು ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ), 298, 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ, ಆರೋಪಿಗಳು ಧರ್ಮ ಪ್ರಚಾರಕ್ಕಾಗಿ ಗ್ರಾಮಕ್ಕೆ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು. ಪ್ರಕರಣದಲ್ಲಿ ಇದುವರೆಗೆ ಯಾರ ಬಂಧನವೂ ಆಗಿಲ್ಲ. ಆರೋಪಿಗಳ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತಾಂತರ ಮಾಡುವ ದುಸ್ಸಾಹಸ ಎಷ್ಟು ಹೆಚ್ಚಾಗಿದೆಯೆಂದರೆ, ಘಟನೆಯ ಒಂದು ದಿನ ಮೊದಲು, ಶನಿವಾರ (ಜನವರಿ 14, 2023), ಹೆಚ್ಚುತ್ತಿರುವ ಮತಾಂತರದ ಘಟನೆಗಳ ವಿರುದ್ಧ ಪ್ರತಿಭಟಿಸಲು ಹಿಂದೂ ಸಂಘಟನೆಗಳು ಇಲ್ಲಿ ಮೆರವಣಿಗೆಯನ್ನು ನಡೆಸಿದವು. ಹೀಗಿದ್ದರೂ ಒಂದು ದಿನದ ನಂತರವೇ ಅಕ್ರಮ ಮತಾಂತರದ ಚಟುವಟಿಕೆ ಆರಂಭವಾಗಿದೆ. ಈ ಹಿಂದೆ ಆಲಂದಿ ಪ್ರದೇಶದಲ್ಲಿಯೇ ಕೆಂಪು ದ್ರಾಕ್ಷಿಯ ರಸವನ್ನು ಯೇಸುವಿನ ರಕ್ತವೆಂದು ಹೇಳಿ ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.