ಮುಂಬರುವ ಚುನಾವಣೆಗೆ ಈ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ ಯೋಗಿ ಆದಿತ್ಯನಾಥ್?: ಮುಸ್ಲಿಮರಿಂದ ಈ ಕ್ಷೇತ್ರವೂ ಮುಕ್ತವಾಗಲಿದೆ ಎಂದ ಹಿಂದುಗಳು

in Kannada News/News 257 views

ಲಕ್ನೋ:

Advertisement
ಉತ್ತರ ಪ್ರದೇಶದ ರಾಜ್ಯ ವಿಧಾನಸಭಾ ಚುನಾವಣೆಗೆ, ಎಲ್ಲಾ ಪಕ್ಷಗಳು ತಮ್ಮದೇ ಆದ ಮಟ್ಟದಲ್ಲಿ ತಯಾರಿ ಆರಂಭಿಸಿವೆ. ಇಂದಿನಿಂದ ಕೆಲವೇ ತಿಂಗಳ ನಂತರ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ ಉತ್ತರ ಪ್ರದೇಶ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ನಾವು ಭಾರತೀಯ ಜನತಾ ಪಕ್ಷದ ಬಗ್ಗೆ ಮಾತನಾಡಿದರೆ, ಅದು ಯಾವುದೇ ರೀತಿಯಲ್ಲಿ ಮತ್ತೆ ಅಧಿಕಾರಕ್ಕೆ ಶತಾಯಗತಾಯವಾಗಿ ಬರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಒಂದರ ಹಿಂದೆ ಒಂದು ಸಭೆಗಳು

ಮುಂಬರುವ ಸಮಯದಲ್ಲಿ, ಬಿಜೆಪಿಯಿಂದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆಯೋ, ಆ ಕ್ರಮಗಳು ಪಕ್ಷವನ್ನು ಬಲಪಡಿಸುವುದಲ್ಲದೆ, ಅದು ಪ್ರತಿಪಕ್ಷಗಳ ಎಲ್ಲಾ ಸಮೀಕರಣಗಳನ್ನು ತಲೆಕೆಳಗೆ ಮಾಡಲಿದೆ. ಬಿಜೆಪಿ ಸಂಘಟನೆಯ ಸಭೆಗಳನ್ನು ಉತ್ತರಪ್ರದೇಶದಲ್ಲಿ ಸಂಭವನೀಯ ಬದಲಾವಣೆಯಾಗಿ ಮಾಧ್ಯಮಗಳಲ್ಲಿ ನೋಡಲಾಗುತ್ತಿದೆ. ವಾಸ್ತವವಾಗಿ ಆ ಎಲ್ಲಾ ಸಭೆಗಳು ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದ್ದವು.

ಕಳೆದ ಹಲವು ದಿನಗಳಿಂದ ಈ ಚರ್ಚೆ ನಡೆಯುತ್ತಿತ್ತು, ಆದರೆ ಈಗ ಈ ಚರ್ಚೆ ವಾಸ್ತವದಲ್ಲಿ ಬದಲಾಗುತ್ತಿದೆ. ಹೌದು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಮೂಲಗಳ ಪ್ರಕಾರ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥರನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸಿದೆ. ಜನವರಿ 14 ರಂದು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಯೋಗಿ ಅವರ ಉಮೇದುವಾರಿಕೆ ಮತ್ತು ಯಾವ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂಬುದನ್ನ ಘೋಷಿಸಬಹುದು. ಮೂಲಗಳ ಪ್ರಕಾರ ಮಥುರಾ ವಿಧಾನಸಭಾ ಕ್ಷೇತ್ರದಿಂದ ಸಿಎಂ ಯೋಗಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಇದು ಯೋಗಿ ಆದಿತ್ಯನಾಥರಿಗೆ ಸುರಕ್ಷಿತ ಸ್ಥಾನ ಮಾತ್ರವಲ್ಲದೆ, ಈ ಸ್ಥಾನದಿಂದ ಅವರನ್ನು ಸ್ಪರ್ಧಿಸುವ ಮೂಲಕ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾಗೆ ಸ್ಟಿಕ್ ಆಗಿದೆ ಅನ್ನೋದನ್ನ ತೋರಿಸಲಿದೆ. ಇತ್ತೀಚಿನ ದಿನಗಳಲ್ಲಿ ಮಥುರಾ ವಿಷಯ ಹಾಟ್ ಟಾಪಿಕ್ ಆಗಿದೆ. ಇಲ್ಲಿನ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಔರಂಗಜೇಬ್ ನಿರ್ಮಿಸಿದ ಮಸೀದಿಗಳಲ್ಲಿ ಜಲಾಭಿಷೇಕ ಮಾಡುವುದಾಗಿ ಹಲವು ಹಿಂದೂ ಸಂಘಟನೆಗಳು ಘೋಷಿಸಿದ್ದವು. ಇದಲ್ಲದೆ, ಮಸೀದಿಯ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಶ್ರೀಕೃಷ್ಣನ ಪರವಾಗಿ ಅನೇಕರು ಅರ್ಜಿಗಳನ್ನು ಸಹ ಸಲ್ಲಿಸಿದ್ದಾರೆ.

ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯೋಗಿ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಲೇ ಇವೆ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. ಯೋಗಿ ಅವರು ತಮ್ಮ ಭದ್ರಕೋಟೆಯಾದ ಗೋರಖ್‌ಪುರದಿಂದ ಯಾವಾಗಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ಸಂಸದರೂ ಆಗುತ್ತಿದ್ದಾರೆ. ಈ ಹಿಂದೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗಿ, ಇಡೀ ಯುಪಿ ತನ್ನ ಕ್ಷೇತ್ರ ಎಂದು ಹೇಳಿದ್ದರು. ಯುಪಿಯ ಎಲ್ಲಾ ಜನರು ತಮ್ಮ ಕುಟುಂಬ ಎಂದು ಅವರು ನಿರಂತರವಾಗಿ ಹೇಳಿದ್ದಾರೆ. ಯೋಗಿ ಅವರು ಮಥುರಾದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ, ಪಶ್ಚಿಮ ಯುಪಿಯಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾದ ಆರ್‌ಎಲ್‌ಡಿ ಅಂದರೆ ರಾಷ್ಟ್ರೀಯ ಲೋಕದಳ ಮತ್ತು ಅದರ ಮೈತ್ರಿ ಪಾಲುದಾರ ಎಸ್‌ಪಿ ಅಂದರೆ ಸಮಾಜವಾದಿ ಪಕ್ಷವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು.

ಯೋಗಿ ಆದಿತ್ಯನಾಥರು ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿದ್ದಾರೆ. 2017ರಲ್ಲಿ ಯುಪಿಯಲ್ಲಿ ಪ್ರಚಂಡ ಬಹುಮತ ಗಳಿಸಿದ ಬಿಜೆಪಿ ಅವರನ್ನು ಗೋರಖ್‌ಪುರದಿಂದ ಕರೆಸಿ ಸಿಎಂ ಮಾಡಿತ್ತು. ಆಗ ಯೋಗಿ ಗೋರಖ್‌ಪುರದ ಸಂಸದರಾಗಿದ್ದರು. ಆರು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಯೋಗಿ ತೆರವಾದ ವಿಧಾನ ಪರಿಷತ್ತಿನ ಸ್ಥಾನಕ್ಕೆ ಸ್ಪರ್ಧಿಸಿದ್ದರು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ ಶ್ರೀಕಾಂತ್ ಶರ್ಮಾ ಅವರ ಮಥುರಾ ಟಿಕೆಟ್‌ಗೆ ಕತ್ತರಿ ಬೀಳಲಿದೆ. ಶ್ರೀಕಾಂತ್ ಶರ್ಮಾ ಪ್ರಸ್ತುತ ಯೋಗಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾರೆ. ಮಥುರಾದಲ್ಲಿ ಯೋಗಿಯ ಪ್ರತಿ ಕಾರ್ಯಕ್ರಮದಲ್ಲೂ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಯಾರಾಗಲಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ?

ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡದೆಯೇ ಚುನಾವಣಾ ಕಣಕ್ಕೆ ಇಳಿಯುವುದನ್ನು ತಪ್ಪಿಸುತ್ತಿದೆ. ಈವರೆಗೆ ಈ ಬಗ್ಗೆ ಬಿಜೆಪಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಅಂತಿಮ ತೀರ್ಮಾನ ಬಿಜೆಪಿ ಸಂಸದೀಯ ಮಂಡಳಿಯ ಕಡೆಯಿಂದಲೇ ಪ್ರಕಟವಾಗಲಿದೆ. ಆದರೆ ಯೋಗಿ ಆದಿತ್ಯನಾಥರನ್ನು ಮುಖ್ಯ ಮುಖವನ್ನಾಗಿ ಮಾಡುವ ಮೂಲಕ ಚುನಾವಣೆಯನ್ನು ನಡೆಸಲಾಗುವುದು ಎಂದು ಪಕ್ಷದ ಸಭೆಗಳಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಪಕ್ಷದ ದೊಡ್ಡ ಮುಖದ ಬಗ್ಗೆ ಮಾತನಾಡುವುದಾದರೆ ಅದು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರೇ ನಿರ್ಧಾರ ಮಾಡಲಿದ್ದಾರೆ. ಅವರು ಕೂಡ ಯೋಗಿ ಆದಿತ್ಯನಾಥರ ಹೆಸರನ್ನೇ ಎಲ್ಲ ಕಡೆ ಉಲ್ಲೇಖಿಸುತ್ತಿದ್ದಾರೆ.

Advertisement
Share this on...