‘ಮದರ್’ ತೆರೆಸಾ ಕರಾಳಮುಖ ಬಿಚ್ಚಿಟ್ಟ ಹಿಂದೂ ಫೈರ್‌ಬ್ರ್ಯಾಂಡ್ ಯೋಗಿ ಆದಿತ್ಯನಾಥ್: ವಿಡಿಯೋ ವೈರಲ್

in Kannada News/News 22,363 views

ಭಾರತದಲ್ಲಿ ಕ್ರಿಶ್ಚಿಯನ್ ಮತಾಂತರದ ಬಗ್ಗೆ ಚರ್ಚೆಗಳು ಜೋರಾಗಿರುವುದರಿಂದ ಹಾಗು ಹಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥರು 7 ವರ್ಷಗಳ ಹಿಂದೆ (2016 ರಲ್ಲಿ) ಅವರಿನ್ನೂ ಮುಖ್ಯಮಂತ್ರಿಯಾಗುವ ಮುನ್ನ ಮದರ್ ತೆರೆಸಾ ಬಗ್ಗೆ ಮಾತನಾಡಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

Advertisement

ಆಗ ಉತ್ತರಪ್ರದೇಶದ ಗೋರಖ್‌ಪುರ್ ಕ್ಷೇತ್ರದ ಸಂಸದರಾಗಿದ್ದಾಗ ಯೋಗಿ ಆದಿತ್ಯನಾಥರು ಮಾತನಾಡುತ್ತ ಮದರ್ ತೆರೆಸಾ ಕರಾಳಮುಖವನ್ನ ಬಿಚ್ಚಿಟ್ಟಿದ್ದರು. ಅವರು ಮಾತನಾಡುತ್ತ ಮದರ್ ತೆರೆಸಾ ದೇಶದಲ್ಲಿ ಕ್ರಿಶ್ಚಿಯನೀಕರಣ ಮಾಡಲು ನಡೆಸುತ್ತಿರುವ ಮತಾಂತರದ ರೂವಾರಿ ಎಂದು ಹೇಳಿದ್ದರು.

ಉತ್ತರ ಪ್ರದೇಶದ ಬಸ್ತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, “ಮದರ್ ತೆರೆಸಾ ಹಿಂದೂಗಳನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸುವ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ಹೆಚ್ಚಿನ ಕ್ರೈಸ್ತೀಕರಣವು ದೇಶದ ಈಶಾನ್ಯ ಭಾಗದಲ್ಲಿ ನಡೆಯಿತು. ಅರುಣಾಚಲ ಪ್ರದೇಶ, ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳನ್ನು ಪ್ರಾರಂಭಿಸಲಾಯಿತು” ಎಂದು ಅವರು ಹೇಳಿದ್ದರು.

ಯೋಗಿ ಆದಿತ್ಯನಾಥರು ಮುಂದೆ ಮಾತನಾಡುತ್ತ, “ಇಲ್ಲಿ (ಅರುಣಾಚಲ ಪ್ರದೇಶ, ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ) ಹೆಚ್ಚು ಕ್ರಿಶ್ಚಿಯನ್ನರಿದ್ದಾರೆ, ಆದ್ದರಿಂದ ಈ ಸ್ಥಳಗಳಲ್ಲಿ ಹಿಂದೂಗಳ ಸ್ಥಿತಿ ಹೇಗಾಗಿಬಿಟ್ಟಿದೆ ಅನ್ನೋದನ್ನ ನೀವು ಊಹಿಸಲೂ ಸಾಧ್ಯವಿಲ್ಲ. ಅಲ್ಲಿನ ನೈಜ ಪರಿಸ್ಥಿತಿ ಹೇಗಿದೆ ಅಂತ ತಿಳಿದುಕೊಳ್ಳಬೇಕಾದರೆ, ನೀವು ಅಲ್ಲಿಗೆ ಹೋಗಿ ನೋಡಬೇಕು” ಎಂದಿದ್ದರು.

ವೀಡಿಯೋ ನೋಡಿ

ಯೋಗಿ ಆದಿತ್ಯನಾಥರ ಬೆಂಬಲಕ್ಕೆ ನಿಂತಿದ್ದ ಸುಬ್ರಮಣಿಯನ್ ಸ್ವಾಮಿ

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕ  ಸುಬ್ರಮಣಿಯನ್ ಸ್ವಾಮಿ “ಮದರ್ ತೆರೇಸಾ ಭಾರತವನ್ನು ಕ್ರೈಸ್ತೀಕರಣಗೊಳಿಸುವ ಷಡ್ಯಂತ್ರದ ಭಾಗವಾಗಿದ್ದಾರೆ” ಎಂಬ ಯೋಗಿ ಆದಿತ್ಯನಾಥ್ ರವರ ಹೇಳಿಕೆಗೆ ಬೆಂಬಲವನ್ನು ನೀಡಿದ್ದರು. ಯೋಗಿ ಆದಿತ್ಯನಾಥರ ಅಭಿಪ್ರಾಯಗಳು ವಿವಾದಾತ್ಮಕ ಅಲ್ಲವೇ ಅಲ್ಲ ಯಾಕಂದ್ರ ಈ ಬಗ್ಗೆ ಹಲವಾರು ಪುಸ್ತಕಗಳು ಪ್ರಕಟವಾಗಿವೆ ಎಂದಿದ್ದರು.

“ಯೋಗಿ ಆದಿತ್ಯನಾಥ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ವಿಷಯವು ಪ್ರತ್ಯೇಕ ದೃಷ್ಟಿಕೋನವಲ್ಲ. ಇದನ್ನ ಅನೇಕ ಪುಸ್ತಕಗಳಲ್ಲಿ ತಿಳಿಸಲಾಗಿದೆ, ಒಬ್ಬ ಬರಹಗಾರ ಕ್ರಿಸ್ಟೋಫರ್ ಹಿಚನ್ಸ್, ಅವರು ಪುಸ್ತಕವೊಂದನ್ನ ಬರೆದಿದ್ದು ಅದು ಹೆಚ್ಚು ಮಾರಾಟವಾದ ಪುಸ್ತಕವಾಗಿದೆ ಮತ್ತು ನೀವು Google ಗೆ ಹೋದರೆ ನೀವು ಮದರ್ ತೆರೆಸಾ ಬಗ್ಗೆ ಸಾಕಷ್ಟು ಪುಸ್ತಕಗಳ ಲಿಸ್ಟ್ ನೋಡಬಲ್ಲಿರಿ” ಎಂದು ಸ್ವಾಮಿ ANI ಗೆ ತಿಳಿಸಿದ್ದರು.

ಉದಾಹರಣೆಯನ್ನು ಉಲ್ಲೇಖಿಸಿ, ಸ್ವಾಮಿ ಒಮ್ಮೆ ಕ್ಯಾಲಿಫೋರ್ನಿಯಾದಲ್ಲಿ ಮಧ್ಯಮ ವರ್ಗದ ಜನರ ಪಿಂಚಣಿಯನ್ನು ದೋಚುತ್ತಿದ್ದ ಪ್ರಮುಖ ವಂಚಕನನ್ನು ಹಿಡಿಯಲಾಯಿತು ಮತ್ತು ವಿಚಾರಣೆ ನಡೆಯುತ್ತಿದೆ ಮತ್ತು ಮದರ್ ತೆರೇಸಾ ಅವರಿಗೆ ಕಾನೂನು ಕ್ರಮ ಜರುಗಿಸದಂತೆ ಪತ್ರ ಬರೆದಿದ್ದರು, ಏಕೆಂದರೆ ಅವರು ಅದಕ್ಕಾಗಿ ಲಕ್ಷಾಂತರ ಡಾಲರ್‌ಗಳನ್ನು ಪಡೆದಿದ್ದರು.

“ಆತ ಜೀಸಸ್‌ನ ಹೆಸರಿನಲ್ಲಿ ಕಷ್ಟಪಟ್ಟು ದುಡಿಯುವ ಜನರ ಪಿಂಚಣಿಯನ್ನು ದೋಚಿದ್ದಾನೆ ಮತ್ತು ಆತನ ಪರವಾಗಿ ಮದರ್ ತೆರೆಸಾ ಬರುತ್ತಿರುವುದು ಆಶ್ಚರ್ಯವಾಗಿದೆ, ಆ ಹಣವನ್ನು ಹಿಂದಿರುಗಿಸುವಂತೆ ನಾನು ಹೇಳಿದ್ದೆ, ಇದರಿಂದ ಅನ್ಯಾಯಕ್ಕೊಳಗಾದ ಜನರಿಗೆ ಪರಿಹಾರವನ್ನು ನೀಡಬಹುದು ಎಂದು ನಾನು ಹೇಳಿದ್ದೆ” ಎಂದು ನ್ಯಾಯಾಧೀಶರೇ ಮದರ್ ತೆರೆಸಾ ಬಗ್ಗೆ ಹೇಳಿದ್ದರು.

ಇಂಥಾ ಮದರ್ ತೆರೆಸಾ ಬಗ್ಗೆ ಯೋಗಿ ಆದಿತ್ಯನಾಥರು ಹೇಳಿದ್ದರಲ್ಲಿ ತಪ್ಪೇನಿದೆ? ಅದು ವಿವಾದಾತ್ಮಕ ಹೇಳಿಕೆ ಅಂತ ಯಾಕಾಗುತ್ತೆ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದರು.

Advertisement
Share this on...