“ಹಿಂದುಗಳು ತಮ್ಮ ಶಕ್ತಿ ತೋರಿಸಿ ಬೀದಿಗಿಳಿದು ಆತನನ್ನ‌‌….. ಆಗ ಶಾರುಖ್ ಖಾನ್ ಬೀದಿಗೆ ಬರ್ತಾನೆ”: ಶಾರುಖ್ ಖಾನ್‌ಗೆ ನೇರಾನೇರ ಎಚ್ಚರಿಕೆ ಕೊಟ್ಟ ಯೋಗಿ ಆದಿತ್ಯನಾಥ್

in Uncategorized 644 views

Yogi Adityanath viral video says about shahrukh khan: ಈ ಹಿಂದೆ ಕರೋನಾ ವೈರಸ್ ಮಸೀದಿಗಳಿಂದ ಹರಡಿದ್ದರ (ದೆಹಲಿಯ ಮರ್ಕಜ್ ಪ್ರಕರಣ) ಬಗ್ಗೆ ದೇಶಾದ್ಯಂತ ಜನರಲ್ಲಿ ಭಾರೀ ಆಕ್ರೋಶ ಕಂಡುಬಂದಿತ್ತು. ಆ ಸಮಯದಲ್ಲಿ, ಜನರು ತಮ್ಮ ಕೋಪವನ್ನ ಸೋಶಿಯಲ್ ಮೀಡಿಯಾಗಳ ಮೂಲಕ ಹೊರಹಾಕಿದ್ದರು. ಇದೀಗ ಲಾಲ್ ಸಿಂಗ್ ಚಡ್ಡಾ ಚಿತ್ರದ ಬಳಿಕ ಶಾರುಖ್ ಖಾನ್ ಅವರ ಮುಂದಿನ ಚಿತ್ರ ‘ಪಠಾಣ್’ ಬಹಿಷ್ಕರಿಸಲು ಜನ ಕ್ಯಾಂಪೇನ್ ಈಗಿನಿಂದಲೇ ಶುರುಮಾಡಿದ್ದಾರೆ. ಇದೇ ಸಂದ್ರಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಹಳೆಯ ವೀಡಿಯೊ ಇಂಟರ್ನೆಟ್ ನಲ್ಲಿ ವೈರಲ್ ಆಗಲು ಬಹುಶಃ ಇದೂ ಕಾರಣವಾಗಿರಬಹುದು. ಆದರೆ ಈ ವಿಡಿಯೋ ಬಾಯ್‌ಕಾಟ್ ಬಾಲಿವುಡ್ ಅಥವ ಪಠಾಣ್‌ಗೆ ಸಂಬಂಧಿಸಿದ್ದಾಗಿದೆ ಎಂದು ಅಂದುಕೊಂಡಿದ್ದರೆ, ಆ ರೀತಿಯದ್ದೇನೂ ಇಲ್ಲ, ಈ ವೀಡಿಯೋ ಬಹಳ ಹಳೆಯದು.

Advertisement

ಯೋಗಿ ಆದಿತ್ಯನಾಥ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಯೋಗಿ ಆದಿತ್ಯನಾಥ್ ಕೆಲ ಜನರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ದೇಶದಲ್ಲಿ ಕೆಲ ವಿಚಾರಧಾರೆಯ ಕೆಲವು ಬರಹಗಾರರು ಮತ್ತು ಕಲಾವಿದರು ಈಗ ಭಾರತ ವಿರೋಧಿ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ದುರದೃಷ್ಟವಶಾತ್ ಇಂತಹ ಜನರ ಜೊತೆ ನಟ ಶಾರುಖ್ ಖಾನ್ ಕೂಡ ನಿಂತಿದ್ದಾರೆ. ಶಾರುಖ್ ಖಾನ್ ಈ ರೀತಿ ಮಾಡಿದ್ದು ಮೊದಲೇನಲ್ಲ ಆತ ಈ ಹಿಂದೆಯೂ ಇಂಥಾ ಕೃತ್ಯಗಳನ್ನ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳುತ್ತಿದ್ದಾರೆ.

ಯೋಗಿ ಆದಿತ್ಯನಾಥ್ ಮುಂದೆ ಮಾತನಾಡುತ್ತ ಶಾರುಖ್ ಖಾನ್‌ಗೆ, ದೇಶದಲ್ಲಿ ಬಹುಸಂಖ್ಯಾತ ಜನ ಅವರ ಫಿಲಂ ಬಹಿಷ್ಕಾರ ಮಾಡಿದರೆ ಆತ ಒಬ್ಬ ಸಾಮಾನ್ಯ ಮುಸಲ್ಮಾನನ ರೀತಿಯಲ್ಲಿ ಬೀದಿಯಲ್ಲಿ ತಿರುಗಾಡಬೇಕಾಗುತ್ತದೆ. ಸಮಸ್ಯೆಗಳ ಕುರಿತು, ಫ್ಯಾಕ್ಟ್ಸ್ ಗಳ ಬಗ್ಗೆ ಚರ್ಚೆಯಾಗಬೇಕು ಆದರೆ ಭಾರತವನ್ನ ಅಪಮಾನಗೊಳಿಸಲು ಅಂತರರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಒಂದು ವೇಳೆ ಈ ಷಡ್ಯಂತ್ರ ಯಾವುದಾದರೂ ವ್ಯಕ್ತಿ ಅಥವ ಪಕ್ಷವನ್ನ ಗುರಿಯಾಗಿಸಲು ಅಥವ ಬಹುಸಂಖ್ಯಾತ ಸಮಾಜವನ್ನ ಗುರಿಯಾಗಿಸಲು ನಡೆಸುತ್ತಿದ್ದರೆ ಅದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ ಹಾಗು ಹಿಂದುಗಳು ತಕ್ಕ ಉತ್ತರ ಕೊಡಲಿದ್ದಾರೆ ಎಂದಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾ’ರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿ

“ಈತನ ಚಿತ್ರ ಎಲ್ಲೂ ಬಿಡುಗಡೆ ಮಾಡೋಕೆ ಬಿಡಲ್ಲ, ಈ ಶಾರುಖ್ ಖಾನ್ ನಮ್ಮ ಇಸ್ಲಾಂನ್ನ….”: ಹಿಂದುಗಳಾಯ್ತು ಈಗ ಶಾರುಖ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಸಂಘಟನೆಗಳು

ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಬಗ್ಗೆ ಜನರ ಅಸಮಾಧಾನ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕ ರಾಮ್ ಕದಂ ಕೂಡ ‘ಪಠಾಣ್’ ವಿರುದ್ಧ ಹರಿಹಾಯ್ದಿದ್ದಾರೆ. ಚಿತ್ರ ನಿರ್ಮಾಪಕರು ತಮ್ಮ ನಿಲುವನ್ನು ಮಂಡಿಸುವಂತೆ ಅವರು ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ರಾಮ್ ಕದಮ್ 2 ಟ್ವೀಟ್ ಮಾಡಿದ್ದಾರೆ. ದೇಶದ ಋಷಿಮುನಿಗಳು ಮತ್ತು ಸಂತರ ಹೊರತಾಗಿ ಅನೇಕ ಹಿಂದೂ ಸಂಘಟನೆಗಳು ಈ ಚಿತ್ರವನ್ನು ವಿರೋಧಿಸುತ್ತಿವೆ ಎಂದು ರಾಮ್ ಕದಮ್ ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದುತ್ವ ಸಿದ್ಧಾಂತದ ಸರ್ಕಾರವಿದೆ. ನಿರ್ಮಾಪಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರೆ ಉತ್ತಮ. ಅವರು ತಮ್ಮ ಮುಂದಿನ ಟ್ವೀಟ್‌ನಲ್ಲಿ ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿ ಮಹಾರಾಷ್ಟ್ರದಲ್ಲಿ ಓಡಲು ಸಾಧ್ಯವಾಗುವುದಿಲ್ಲ ಎಂದು ಬರೆದಿದ್ದಾರೆ. ಜೆಎನ್‌ಯುನ ಜನರು ಉದ್ದೇಶಪೂರ್ವಕವಾಗಿ ಜನಿವಾರಧಾರಿ ಸಿದ್ಧಾಂತವನ್ನು ನೋಯಿಸುವ ಧೈರ್ಯ ಮಾಡುತ್ತಿದ್ದಾರೆಯೇ ಎಂದು ಅವರು ಕೇಳಿದ್ದಾರೆ.

ಇದಕ್ಕೂ ಮುನ್ನ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ದೀಪಿಕಾ ಪಡುಕೋಣೆ ಅವರ ವೇಷಭೂಷಣ ಮತ್ತು ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ಚಿತ್ರೀಕರಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಠಾಣ್ ಚಿತ್ರದ ಹಾಡಿನಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಬೆಂಬಲಿಗರಾದ ನಟಿ ದೀಪಿಕಾ ಪಡುಕೋಣೆ ವೇಷಭೂಷಣವು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಭ್ರಷ್ಟ ಮನಸ್ಥಿತಿಯಿಂದಲೇ ಈ ಹಾಡನ್ನು ಚಿತ್ರೀಕರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ‘ಬೇಷರಂ ರಂಗ್’ ಹಾಡಿನ ಸಾಹಿತ್ಯ, ದೃಶ್ಯಾವಳಿಗಳು ಮತ್ತು ಕೇಸರಿ ಮತ್ತು ಹಸಿರು ಬಣ್ಣದ ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮಧ್ಯಪ್ರದೇಶದಲ್ಲಿ ಚಿತ್ರ ತೆರೆಕಾಣಬೇಕೋ ಬೇಡವೋ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದಿದ್ದರು.

ಮತ್ತೊಂದೆಡೆ ಇಲ್ಲಿಯವರೆಗೂ ಹಿಂದೂ ಸಂಘಟನೆಗಳಿಂದ ವಿರೋಧ ಎದುರಿಸುತ್ತಿರುವ ಶಾರುಖ್ ಖಾನ್ ಚಿತ್ರ ಪಠಾಣ್ ಚಿತ್ರಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧವೂ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ಉಲೇಮಾ ಬೋರ್ಡ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಪಠಾಣ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಂಡಳಿಯಿಂದ ಹೇಳಲಾಗಿದೆ.

ಉಲೇಮಾ ಮಂಡಳಿಯ ಹೊರತಾಗಿ ಅಖಿಲ ಭಾರತ ಮುಸ್ಲಿಂ ತ್ಯೋಹಾರ್ ಕಮಿಟಿ ಕೂಡ ಶಾರುಖ್ ಅಭಿನಯದ ‘ಪಠಾಣ್’ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ಮುಸ್ಲಿಂ ತ್ಯೋಹಾರ್ ಕಮಿಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಧ್ಯಪ್ರದೇಶ ಬಿಟ್ಟು ದೇಶದ ಎಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಘೋಷಿಸಿದೆ. ಪಠಾಣ್ ಚಿತ್ರವನ್ನು ವಿರೋಧಿಸುತ್ತಿರುವ ಮುಸ್ಲಿಂ ಸಂಘಟನೆಗಳು ಶಾರುಖ್ ಖಾನ್ ಇಸ್ಲಾಂಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿವೆ.

ಇತ್ತೀಚೆಗೆ, ಪಠಾಣ್ ಚಿತ್ರದ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾಗಿತ್ತು. ಹಾಡು ಬಿಡುಗಡೆಯಾದಾಗಿನಿಂದ ಚಿತ್ರದ ಬಾಯ್‌ಕಾಟ್ ಕೂಗು ತೀವ್ರಗೊಂಡಿದೆ. ಹಾಡಿನ ಹಲವು ದೃಶ್ಯಗಳಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದನ್ನು ತೋರಿಸಲಾಗಿದೆ. ಇದರ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ.

Advertisement
Share this on...