ಫೇಕ್ ಆಧಾರ್ ಕಾರ್ಡ್ ತೋರಿಸಿ ಮಹಾಕಾಲೇಶ್ವರ ಮಂದಿರಕ್ಕೆ ನುಗ್ಗಿದ ಕರ್ನಾಟಕದ ಮುಸ್ಲಿಂ ಯುವಕ ಹಾಗು ಆತನ ಗರ್ಲ್‌ ಫ್ರೆಂಡ್: ಮುಂದೇನಾಯ್ತು ನೋಡಿ

in Kannada News/News 796 views

ಉಜ್ಜಯಿನಿ: ಮಧ್ಯಪ್ರದೇಶದ ವಿಶ್ವವಿಖ್ಯಾತ ಮಹಾಕಾಲ್ ಮಂದಿರದಲ್ಲಿ ಒಬ್ಬ ಯುವಕ ಹಾಗು ಯುವತಿ ಜೊತೆಗೆ ಹೋಗಿದ್ದರು. ‌ಆರತಿಯ ಸಮಯದಲ್ಲಿ ಇಬ್ಬರೂ ಜೊತೆಗೇ ಇದ್ದರು. ಅಲ್ಲಿ ಎಲ್ಲರ ಐಡಿ ಕಾರ್ಡ್ ಪರಿಶೀಲಿಸಲಾಯಿತು. ಐಡಿ ಪರಿಶೀಲಿಸಿದ ನಂತರವೇ ಎಲ್ಲರನ್ನೂ ಒಳಗೆ ಬಿಡಲಾಗಿತ್ತು. ಆದರೆ ಕೆಲ ಜನರಗೆ ಈ ಯುವಕನೊಬ್ಬನ ಹಾವಭಾವ, ಆತನ ವರ್ತನೆ ಕಂಡು ಅನುಮಾನ ಬಂದಿದೆ. ಈತ ಹಿಂದೂ ಆಗಿರಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಜನ ಆ ಯುವಕನ ವಿಚಾರಣೆ ಮಾಡಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಅಲ್ಲಿದ್ದ ಜನರಿಗೆ ತಿಳಿದ ಸತ್ಯ ಕೇಳಿ ಮಂದಿರ ಆಡಳಿತವೂ ದಂಗಾಗಿದೆ. ಬನ್ನಿ ಅಲ್ಲೇನಾಯ್ತು, ಆ ಯುವಕ ಯಾರಾಗಿದ್ದ? ಆತ ಯಾರ ಜೊತೆ ಬಂದಿದ್ದ ಅನ್ನೋದನ್ನ ನಿಮಗೆ ತಿಳಿಸುತ್ತೇವೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದ ಭಸ್ಮಾರತಿಯು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಪ್ರಸಿದ್ಧವಾಗಿದೆ, ಆದರೆ ಬುಧವಾರ ಇಲ್ಲಿ ನಡೆದ ಘಟನೆಯೊಂದರ ಬಳಿಕ ವಿಶ್ವಪ್ರಸಿದ್ಧ ಮಹಾಕಾಲೇಶ್ವರ ಮಂದಿರ ಚರ್ಚೆಯಲ್ಲಿದೆ. ವಾಸ್ತವವಾಗಿ, ಬುಧವಾರ ಬೆಳಿಗ್ಗೆ, ಒಬ್ಬ ಮುಸ್ಲಿಂ ವ್ಯಕ್ತಿ ನಕಲಿ ಐಡಿ ತೋರಿಸಿ ಮಂದಿರದೊಳಗೆ ಪ್ರವೇಶಿಸಿದ. ಈ ವೇಳೆ ಆತನ ಹಿಂದೂ ಗರ್ಲ್ ಫ್ರೆಂಡ್ ಕೂಡ ಆ ವ್ಯಕ್ತಿಯೊಂದಿಗೆ ಇದ್ದಳು. ಆ ವ್ಯಕ್ತಿಗೆ ದೇವಸ್ಥಾನ ಪ್ರವೇಶಿಸಲು ಸಹಾಯ ಮಾಡಿದ್ದು ಹಿಂದೂ ಗರ್ಲ್ ಫ್ರೆಂಡ್ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ದೇವಾಲಯದ ಸಮಿತಿಯ ದೂರಿನ ನಂತರ, ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಯಿತು ಮತ್ತು ನಂತರ ಅವರಿಬ್ಬರನ್ನೂ ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಬಂಧಿಸಲಾಯಿತು.

ಮಾಧ್ಯಮ ವರದಿಗಳು ಪ್ರಕಾರ ಬಂಧಿತ ವ್ಯಕ್ತಿಯನ್ನು ಕರ್ನಾಟಕದ ಮೊಹಮ್ಮದ್ ಯೂನುಸ್ ಮುಲ್ಲಾ ಎಂದು ಗುರುತಿಸಲಾಗಿದೆ. ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಭಸ್ಮಾರತಿಯಲ್ಲಿ ಪಾಲ್ಗೊಳ್ಳಲು ತನ್ನ ಗರ್ಲ್ ಫ್ರೆಂಡ್ ಖುಷ್ಬೂ ಯಾದವ್ ಜೊತೆಗೆ ಆತ ಅಲ್ಲಿಗೆ ಬಂದಿದ್ದನು. ಮಹಾಕಾಲೇಶ್ವರ ಮಂದಿರದಲ್ಲಿ ಆತನನ್ನು ಯಾರೂ ತಡೆಯಬಾರದು ಎಂಬ ಕಾರಣಕ್ಕೆ ಮೊಹಮ್ಮದ್ ಯೂನುಸ್ ಮುಲ್ಲಾ ಅಭಿಷೇಕ್ ದುಬೆ ಎಂಬ ನಕಲಿ ಆಧಾರ್ ಕಾರ್ಡ್ ಮೂಲಕ ಬುಕ್ಕಿಂಗ್ ಮಾಡಿದ್ದ. ಮೊಹಮ್ಮದ್ ಯೂನಸ್ ಮುಲ್ಲಾ ತನ್ನ ಗರ್ಲ್ ಫ್ರೆಂಡ್ ಖುಷ್ಬೂ ಯಾದವ್ ಜೊತೆಗೆ ವಿಐಪಿ ಗೇಟ್ ಸಂಖ್ಯೆ 6 ರಿಂದ ದೇವಾಲಯಕ್ಕೆ ಪ್ರವೇಶಿಸಿ ಮೀಸಲು ಸ್ಥಳದಲ್ಲಿ ಕುಳಿತಿದ್ದರು ಆದರೆ ದೇವಾಲಯದ ಸಿಬ್ಬಂದಿಗೆ ಈತನ ಬಗ್ಗೆ ಅನುಮಾನ ಬಂದು ಯುವಕನನ್ನು ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಲಾಯಿತು.

ಅದೇ ಸಮಯದಲ್ಲಿ, ಈ ಇಡೀ ಪ್ರಕರಣವನ್ನ ತನಿಖೆ ನಡೆಸುತ್ತಿರುವ ಸಿಎಸ್ಪಿ ಪಲ್ಲವಿ ಶುಕ್ಲಾ ಅವರು ಯೂನಸ್ ಜೊತೆ ಬಂದಿದ್ದ ಆತನ ಗರ್ಲ್ ಫ್ರೆಂಡ್‌ನ ತಮ್ಮನ ಹೆಸರು ಅಭಿಷೇಕ್ ದುಬೆ ಆಗಿದೆ ಎಂದು ಹೇಳುತ್ತಾರೆ. ಗರ್ಲ್ ಫ್ರೆಂಡ್ ನ ಸಹೋದರ ಅಭಿಷೇಕ್‌‌ನ ಆಧಾರ್ ಕಾರ್ಡ್ ಮೂಲಕವೇ ಯೂನುಸ್ ಮುಲ್ಲಾ ಭಸ್ಮಾರತಿಗೆ ಪ್ರವೇಶ ಪಡೆದಿದ್ದಾನೆ. ಇಬ್ಬರೂ ಮಹಾಕಾಲ್ ದೇವಸ್ಥಾನದ ಬಳಿಯ ಹೋಟೆಲ್‌ನಲ್ಲಿ ತಂಗಿದ್ದರು ಆದರೆ ಹೋಟೆಲ್‌ನಲ್ಲಿ ಯುವಕ ತನ್ನ ಒರಿಜಿನಲ್ ಆಧಾರ್ ಕಾರ್ಡ್ ತೋರಿಸಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಈ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ಫ್ಯಾಶನ್ ಡಿಸೈನರ್ ಆಗಿರುವ ಯುವತಿ

ಮಾಧ್ಯಮ ವರದಿಗಳ ಪ್ರಕಾರ ಯುವತಿಯ ಹೆಸರು ಖುಷ್ಬೂ ಎಂದು ತಿಳಿದುಬಂದಿದೆ. ಕರ್ನಾಟಕ ಮೂಲದ ಯೂನುಸ್ ಮುಲ್ಲಾ ಕಳೆದ 10 ವರ್ಷಗಳಿಂದ ಯುವತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮೊಹಮ್ಮದ್ ಯೂನೂಸ್ ಕರ್ನಾಟಕದ ಹಾವೇರಿ ಜಿಲ್ಲೆಯವನಾಗಿದ್ದಾನೆ. ಮಂಗಳವಾರದಂದು ಇಬ್ಬರೂ ಇಂದೋರ್‌ಗೆ ಬಂದಿದ್ದರು‌. ಬಳಿಕ ಅಲ್ಲಿಂದ ಅವರು ಉಜ್ಜಯಿನಿಯ ಮಹಾಕಾಲ್ ಮಂದಿರದಲ್ಲಿ ನಡೆಯುವ ಭಸ್ಮಾರತಿ ನೋಡಲು ಬಂದರು. ಮಹಾಕಾಲ್ ಮಂದಿರದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲದ ಕಾರಣ ಆತ ನಕಲಿ ಆಧಾರ್ ಕಾರ್ಡ್ ತೋರಿಸಿ ಮಂದಿರದೊಳಗೆ ಬಂದಿದ್ದ.

ಆದರೆ ಈ ಯುವಕನ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಆತ ಮುಸ್ಲಿಂ ಅಂತ ತಿಳಿಸದುಬಂದಿದೆ. ಬಳಿಕ ಆತನನ್ನ ಬಂಧಿಸಲಾಗಿದೆ. ಯುವತಿ ಖುಷ್ಬೂ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ.

Advertisement
Share this on...