ಗುಜರಾತಿನ ಛೋಟಾ ಉದಯಪುರದ ನಿವಾಸಿಯಾದ ಜಾಕಿರ್ ಮೆಮನ್ ತಲೆ ದೊಡ್ಡದಿರುವುದರಿಂದ ಹೆಲ್ಮೆಟ್ ಧರಿಸಲು ಸಾಧ್ಯವಿಲ್ಲ ಮತ್ತು ಕಳೆದ 12 ವರ್ಷಗಳಿಂದ ಈತನಿಗೆ ಈ ಸಮಸ್ಯೆ ಕಾಡುತ್ತಿದೆ.
ಹೊಸ ಮೋಟಾರ್ ವೆಹಿಕಲ್ ಆ್ಯಕ್ಟ್ ನಡಿ ದಂಡದ ಮೊತ್ತವನ್ನು ಹೆಚ್ಚಿಸಿದ್ದಕ್ಕಾಗಿ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಚಲನ್ ಮೊತ್ತವನ್ನು ಕಡಿತಗೊಳಿಸಿದ್ದವು. ಇದೆಲ್ಲದರ ನಡುವೆ ಗುಜರಾತ್‌ನ ಛೋಟಾ ಉದಯಪುರದಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಝಾಕಿರ್ ಮೆಮನ್ ಎಂಬ ವ್ಯಕ್ತಿ ಹೆಲ್ಮೆಟ್ ಇಲ್ಲದೆ ರಸ್ತೆಗಳಲ್ಲಿ ಓಡಾಡುತ್ತಾನೆ ಮತ್ತು ಪೊಲೀಸರು ಆತನಿಗೆ ಫೈನ್ ಮಾಡಲು ಹೋದಾಗ ಆತನ ಸಮಸ್ಯೆಯನ್ನು ಕೇಳಿ ಅವರು ತುಂಬಾ ಗೊಂದಲಕ್ಕೊಳಗಾಗುತ್ತಾರೆ.
ತಲೆ ದೊಡ್ಡದಾಗಿರುವ ಕಾರಣ ಜಾಕೀರ್‌ಗೆ ಹೆಲ್ಮೆಟ್ ಧರಿಸಲು ಸಾಧ್ಯವಾಗಲ್ಲ
ವಾಸ್ತವವಾಗಿ, ಝಾಕಿರ್ ಮೆಮನ್‌ಗೆ ದೊಡ್ಡ ಸಮಸ್ಯೆ ಇದೆ, ಇದರಿಂದಾಗಿ ಆತ ಹೆಲ್ಮೆಟ್ ಧರಿಸಲು ಸಾಧ್ಯವಿಲ್ಲ ಹೀಗಾಗಿಯೇ ಆತ ಹೆಲ್ಮೆಟ್ ಹಾಕಿಕೊಳ್ಳದೇ ರಸ್ತೆಗಳಲ್ಲಿ ಇಳಿಯಬೇಕಾಗುತ್ತದೆ. ಹೆಲ್ಮೆಟ್ ಧರಿಸದೇ ಇರಲು ಝಾಕಿರ್ ನ ಅನಿವಾರ್ಯತೆಯೇ ಆತನ ತಲೆ, ಹೆಲ್ಮೆಟ್ ಹಾಕಲೂ ಸಾಧ್ಯವಾಗದಷ್ಟು ಆತನ ತಲೆ ದೊಡ್ಡದಾಗಿದೆ. ಇದರಿಂದಾಗಿ ಈ ವ್ಯಕ್ತಿಗೆ ಫೈನ್ ಹಾಕಬೇಕೋ ಬೇಡವೋ ಎಂಬ ಗೊಂದಲ ಪೊಲೀಸರಿಗೂ ಕಾಡುತ್ತಿದೆ.
ಹಲವು ಅಂಗಡಿಗಳಿಗೆ ತೆರಳಿ ಹಲವಾರು ಹೆಲ್ಮೆಟ್ ಟೆಸ್ಟ್ ಮಾಡಿದ ಪೋಲಿಸರು
ಸೋಮವಾರ ಝಾಕಿರ್ ಮೆಮನ್‌ನ್ನ ಹೆಲ್ಮೆಟ್ ಧರಿಸದೇ ಡ್ರೈವ್ ಮಾಡುತ್ತಿದ್ದಾಗ ಪೊಲೀಸರು ಹಿಡಿದ್ದಾರೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ಪೊಲೀಸರು ಆತನನ್ನು ನಿಲ್ಲಿಸಿದ್ದರು. ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹೊಂದಿದ್ದ ಝಾಕೀರ್ ಹೆಲ್ಮೆಟ್ ಧರಿಸಿರಲಿಲ್ಲ. ದಂಡವನ್ನು ಪಾವತಿಸುವಂತೆ ಪೊಲೀಸರು ಆತನನ್ನು ಕೇಳಿದರು, ಆದರೆ ಜಾಕಿರ್ ತನ್ನ ಸಮಸ್ಯೆಯನ್ನು ಹೇಳಿದಾಗ, ಪೋಲಿಸರ ಗೊಂದಲವು ಹೆಚ್ಚಾಯಿತು. ತಲೆಗೆ ಹೆಲ್ಮೆಟ್ ಬರದ ಕಾರಣ ಹೆಲ್ಮೆಟ್ ಧರಿಸಲು ಸಾಧ್ಯವಾಗಲ್ಲ ಎಂದು ಜಾಕೀರ್ ಹೇಳಿದ್ದಾನೆ.
ತನ್ನ ಸಮಸ್ಯೆಯ ಕುರಿತು ಜಾಕೀರ್ ಹೇಳೋದೇನು?
ಕಳೆದ 12 ವರ್ಷಗಳಿಂದ ಝಾಕಿರ್‌ಗೆ ಈ ಸಮಸ್ಯೆ ಇದೆ. ಪೊಲೀಸರು ಝಾಕಿರ್‌ನನ್ನು ಹತ್ತಿರದ ಹಲವಾರು ಅಂಗಡಿಗಳಿಗೆ ಕರೆದೊಯ್ದು ನೋಡಿದಾಗ ಅವನ ತಲೆಗೆ ಒಂದು ಹೆಲ್ಮೆಟ್ ಕೂಡ ಫಿಟ್ ಆಗಲಿಲ್ಲ. ಈ ಸಮಸ್ಯೆಗೆ ಸಂಬಂಧಿಸಿದಂತೆ ಝಾಕಿರ್, ನಾನು ಕಾನೂನು ಪಾಲಿಸುವ ವ್ಯಕ್ತಿ, ನನಗೂ ಹೆಲ್ಮೆಟ್ ಧರಿಸಬೇಕು ಎಂಬುದಿದೆ, ಆದರೆ ನನ್ನ ತಲೆಗೆ ಸರಿಹೊಂದುವ ಹೆಲ್ಮೆಟ್ ನನಗೆ ಸಿಗುತ್ತಿಲ್ಲ ಎಂದು ಝಾಕಿರ್ ಹೇಳುತ್ತಾರೆ, ಜಾಕೀರ್ ವೃತ್ತಿಯಲ್ಲಿ ಹಣ್ಣು ಮಾರಾಟಗಾರರಾಗಿದ್ದು, ಅವರ ಕುಟುಂಬವು ಈಗ ಚಿಂತೆಗೀಡಾಗಿದೆ. ಈತ ಇನ್ನೂ ಅದೆಷ್ಟು ದಿನ ಹೀಗೇ ದಂಡ ಕಟ್ಟುತ್ತಿರುತ್ತಾನೆ ಎನ್ನುತ್ತಾರೆ.
ಬೋಡೇಲಿಯ ಟ್ರಾಫಿಕ್ ಬ್ರಾಂಚ್‌ನ ಸಬ್ ಇನ್ಸ್‌ಪೆಕ್ಟರ್ ವಸಂತ ರಾಠವಾ ಮಾತನಾಡುತ್ತ, ಇದೊಂದು ವಿಚಿತ್ರ ಸಮಸ್ಯೆ. ಝಾಕಿರ್‌ನ ಸಮಸ್ಯೆಯನ್ನು ನೋಡುತ್ತ ನಾವು ಅವರಿಗೆ ಫೈನ್ ಹಾಕುವುದಿಲ್ಲ. ಅವರು ಕಾನೂನನ್ನು ಗೌರವಿಸುವ ವ್ಯಕ್ತಿ. ಅವರ ಬಳಿ ಎಲ್ಲಾ ಡಾಕ್ಯುಮೆಂಟ್ಸ್ ಗಳಿವೆ ಆದರೆ ಹೆಲ್ಮೆಟ್ ಸಮಸ್ಯೆಯೇ ಆತನ ವಿಚಿತ್ರ ಸಮಸ್ಯೆಯಾಗಿದೆ ಎಂದರು.
ಈ ವಿಷಯದಿಂದ ನೊಂದ ಝಾಕೀರ್ ನನಗೆ ದಾರಿ ತೋರಿಸಿ ಸಹಾಯ ಮಾಡಿ ಎಂದು ಪೊಲೀಸ್ ಪೇದೆಗೆ ಹೇಳಿದ್ದ. ಆ ವೇಳೆಗೆ ಪೊಲೀಸರು ಕೂಡ ಈ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಆದರೆ ಇನ್ನೂ ತ್ರಾಸದಾಯಕ ವಿಷಯವೆಂದರೆ ಝಾಕಿರ್‌ನ ತಲೆಯ ಗಾತ್ರದ ಹೆಲ್ಮೆಟ್ ಎಲ್ಲಿಂದ ಸಿಗುತ್ತೆ?. ಆದರೆ ಸಂಚಾರಿ ನಿಯಮ ಪಾಲಿಸದಿದ್ದರ ಹಿಂದಿನ ನಿಜವಾದ ಕಾರಣವನ್ನು ಝಾಕೀರ್ ಪೊಲೀಸರಿಗೆ ತಿಳಿಸಿದಾಗ ಇದಕ್ಕೆ ಒಪ್ಪಿ ಆತನಿಗೆ ಚಲನ್ ಹರಿಯದೇ ಬಿಟ್ಟು ಕಳಿಸಿದರು. ಈ ವ್ಯಕ್ತಿಯ ಹೆಲ್ಮೆಟ್ ಧರಿಸದಿರುವ ಕಾರಣ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.