ಭಾರತೀಯ ಕಾನೂನು ಸಂಸ್ಥೆಗಳ ಭಯದಿಂದ ದೇಶ ಬಿಟ್ಟು ಓಡಿ ಹೋಗಿರುವ ಇಸ್ಲಾಮಿಕ್ ಮೂಲಭೂತವಾದಿ ಝಾಕಿರ್ ನಾಯಕ್ ಆಗಾಗ್ಗೆ ವಿವಾದಾತ್ಮಕ ಮತ್ತು ಧಾರ್ಮಿಕ ಟೀಕೆಗಳನ್ನು ಮಾಡುತ್ತಲೇ ಇರುತ್ತಾನೆ. ಸದ್ಯ ಈತನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವೀಡಿಯೊ ಏಪ್ರಿಲ್ 2019 ರದ್ದಾಗಿದ್ದು, ಇದರಲ್ಲಿ ಅದೆಲ್ ಅಹ್ಮದ್ ಎಂಬ ಯುವಕನಿಗೆ ‘ಪಾಪ’ ಮಾಡದಂತೆ ಎಚ್ಚರಿಸುತ್ತಿದ್ದಾನೆ.
ಅದೆಲ್ ಅಹ್ಮದ್‌ನ ತಪ್ಪೇನಿತ್ತೆಂದರೆ ಆತ ತನ್ನ ಗೆಳೆಯರಿಗೆ ‘ಮೆರಿ ಕ್ರಿಸ್ಮಸ್ (Merry Christmas)’ ಎಂದು ವಿಶ್ ಮಾಡಿದ್ದ. ಅಹ್ಮದ್ ವಾಸವಿರುವ ದೇಶ (ಯೂನೈಟೆಡ್ ಕಿಂಗ್ಡಮ್) ದಲ್ಲಿ ಕ್ರಿಶ್ಚಿಯನ್ನರೇ ಬಹುಸಂಖ್ಯಾತರಿದ್ದು ಅಲ್ಲಿ ಕ್ರಿಸ್ಮಸ್ ಗೆ ವಿಶ್ ಮಾಡೋದು ಸಾಮಾನ್ಯ ವಿಷಯ, ಅಲ್ಲಷ್ಟೇ ಯಾಕೆ ಇಲ್ಲಿ ಭಾರತದಲ್ಲಿ ಹಿಂದುಗಳೂ ಹಿಂದುಗಳಿಗೆ ಕ್ರಿಸ್ಮಸ್ ವಿಶ್ ಮಾಡ್ತಾರೆ. ಆದರೆ ಕಟ್ಟರಪಂಥೀ ಜಾಕೀರ್ ನಾಯಕ್‌ನ ಪ್ರಕಾರ ಹೀಗೆ ಹೇಳೋದು ಇಸ್ಲಾಂನ ತತ್ವಗಳ ವಿರುದ್ಧವಂತೆ.
ವಿಡಿಯೋದಲ್ಲಿ ಜಾಕೀರ್ ನಾಯಕ್, “ನಿಮ್ಮ ಗುರಿಯನ್ನು ತಲುಪಲು ನೀವು ತಪ್ಪು ಮಾರ್ಗವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಯಾವುದು ಹರಾಮ್ ಆಗಿದೆಯೋ ಅದು ನಿಮಗೂ ಹರಾಮ್ ಆಗಿದೆ. ಮೆರ್ರಿ ಕ್ರಿಸ್‌ಮಸ್ ಎಂದು ಹೇಳುವ ಮೂಲಕ ನೀವು ಯಾರನ್ನಾದರೂ ಅಭಿನಂದಿಸಿದರೆ, ಅವನು (ಯೇಸು) ದೇವರ ಮಗು ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಿ ಮತ್ತು ಹಾಗೆ ಮಾಡುವುದು ಶಿರ್ಕ್ (ಪಾಪ) ಎಂದು ಅರ್ಥ. ಏಕೆಂದರೆ ಅಲ್ಲಿನ ಜನರು ಯೇಸು ಕ್ರಿಸ್ತನು ದೇವರ ಮಗು ಎಂದು ನಂಬುತ್ತಾರೆ. ಅವರು (ಕ್ರಿಶ್ಚಿಯನ್ನರೇ ಆಗಿರಲಿ ಅಥವ ಹಿಂದುಗಳೇ ಆಗಿರಲಿ) ಕ್ರಿಶ್ಚಿಯನ್ ಆಚರಣೆಗಳ ಭಾಗವಾಗಲಿ ಅಥವಾ ಇಲ್ಲದಿರಲಿ, ಅವರು ಯೇಸುವಿನ ಜನ್ಮದಿನವಾದ್ದರಿಂದ ಅದನ್ನ ಆಚರಿಸುತ್ತಾರೆ”
‘ಮೆರ್ರಿ ಕ್ರಿಸ್‌ಮಸ್’ ಶುಭಾಶಯ ಕೋರುವುದು 100% ತಪ್ಪು: ಝಾಕಿರ್ ನಾಯಕ್
“ಅಲ್ಲಾಹ್ ಈ ಜಗತ್ತನ್ನು ಸೃಷ್ಟಿಸಿದ್ದಾನೆ ಎಂದು ಝಾಕಿರ್ ನಂಬುತ್ತಾರೆ, ಆದ್ದರಿಂದ ಅಲ್ಲಾಹ್ ನ ಬಿಟ್ಟುಬೇರೆ ಯಾರನ್ನ (ಜೀಸಸ್ ಕ್ರಿಸ್ತ ಸೇರಿದಂತೆ ಯಾವುದೇ ದೇವರಾಗಲಿ) ಪೂಜಿಸುವುದು ಹರಾಮ್ ಆಗಿದೆ. ಯೇಸು ದೇವರ ಮಗು ಎಂದು ಸ್ವತಃ ಯೇಸುವೇ ಹೇಳಿರುವ ಯಾವುದಾದರೂ ಹೇಳಿಕ ಅಥವ ದಾಖಲೆಗಳನ್ನ ಇಡೀ ಬೈಬಲ್‌ನ ಯಾವುದಾದರೂ ಒಂದು ಭಾಗದಲ್ಲಿ ತೋರಿಸಬಹುದೇ?. ಮೆರ್ರಿ ಕ್ರಿಸ್‌ಮಸ್ ಎಂದು ಹೇಳುವುದು ತಪ್ಪೇ? ಇದು ಸಂಪೂರ್ಣವಾಗಿ ತಪ್ಪು ಎಂದು ನಾನು ನಿಮಗೆ ಹೇಳುತ್ತೇನೆ! ನನ್ನ ಪ್ರಕಾರ ಇದು 100% ತಪ್ಪು”
‘ಹೀಗೆ ಮೆರ್ರಿ ಕ್ರಿಸ್ಮಸ್ ಅಂತ ನೀನು ವಿಶ್ ಮಾಡಿದರೆ ಜಹನ್ನುಮ್ (ನರಕ) ನಲ್ಲಿ ನಿನಗಾಗಿ ಒಂದು ಸೀಟನ್ನ ರಿಸರ್ವ್ ಮಾಡಿಕೊಳ್ತಿದೀಯ ಎಂದರ್ಥ’ ಎಂದು ಝಾಕಿರ್ ಹೇಳಿಕೊಂಡಿದ್ದಾನೆ.
ತನ್ನ ವಿಷಪೂರಿತ ಟೀಕೆಗಳನ್ನು ಮುಂದುವರಿಸುತ್ತಾ, ಮತಾಂಧ ಝಾಕಿರ್, “ಮೆರ್ರಿ ಕ್ರಿಸ್‌ಮಸ್‌ಗಾಗಿ ವಿಶ್ ಮಾಡುವ ಅರ್ಥವೇನೆಂದು ನಿಮಗೆ ತಿಳಿದಿಲ್ಲದಿದ್ದರೆ ಮತ್ತು ನೀವು ಹಾಗೆ ಮಾಡುತ್ತಿದ್ದರೆ, ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ನೀವು ಪೆಪ್ಸಿಯನ್ನು ಆಲ್ಕೋಹಾಲ್ ಆಗಿ ಸೇವಿಸಿದರೆ ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಆದರೆ ನೀವು ಕ್ರಿಸ್‌ಮಸ್ ಬಗ್ಗೆ ತಿಳಿದಿದ್ದರೂ ಸಹ ನೀವು ವಿಶ್ ಮಾಡಲು ಪ್ರಯತ್ನಿಸುತ್ತಿದ್ದರೆ, ನೀವು ನರಕದಲ್ಲಿ ನಿಮಗಾಗಿ ಸ್ಥಳವನ್ನು ರಿಸರ್ವ್ ಮಾಡುತ್ತಿದ್ದೀರಿ ಎಂದರ್ಥ. ನಿಮ್ಮ ಗುರಿಯನ್ನು ಸಾಧಿಸಲು ತಪ್ಪು ಮಾರ್ಗವನ್ನು ಅನುಸರಿಸಬೇಡಿ, ನೀವು ಖುರಾನ್ ಮತ್ತು ಸುನ್ನಾಹದ (ಪ್ರವಾದಿ ಮುಹಮ್ಮದ್ ಅವರ ಜೀವನವನ್ನು ಆಧರಿಸಿದ ಸಾಹಿತ್ಯ) ಮಾರ್ಗವನ್ನು ಅನುಸರಿಸಬೇಕು” ಎನ್ನುತ್ತಾನೆ.
ಜಾಕೀರ್ ನಾಯಕ್ ಹಾಗು ಆತನ ವಿಷಪೂರಿತ ಮಾತುಗಳು
ಇದಕ್ಕೂ ಮೊದಲು ಒಬ್ಬ ಮುಸ್ಲಿಮನು ಮಾತನಾಡುತ್ತ, “ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಒಬ್ಬ ಮುಸಲ್ಮಾನ ಅಧಿಕಾರಶಾಹಿಯ ಭಾಗವಾಗಬಹುದೇ?” ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಜಾಕೀರ್ ನಾಯಕ್, “ನೀವು ದೀನ್ (ಮಜಹಬ್ ಅಥವ ಇಸ್ಲಾಂ ಮತ) ಅನುಸರಿಸಲು ಸಾಧ್ಯವಾದರೆ ಅದು ಸ್ವೀಕಾರಾರ್ಹ, ಇಲ್ಲದಿದ್ದರೆ ಇಲ್ಲ” ಎನ್ನುತ್ತಾನೆ. ಇದಾದ ಬಳಿಕ ಮತ್ತೊಬ್ಬ ವ್ಯಕ್ತಿ, “ಅವರು ಭಾರತದ ಪ್ರಜಾಪ್ರಭುತ್ವದಲ್ಲಿ IAS ಆಗಲು ಸಾಧ್ಯವೇ?” ಎಂದು ಕೇಳಿದಾಗ, ಜಾಕೀರ್ ನಾಯಕ್ ಉತ್ತರಿಸುತ್ತ, “ಇದು ಅಸಾಧ್ಯವಲ್ಲ ಆದರೆ ಕಷ್ಟ” ಎನ್ನುತ್ತಾನೆ. ಒಂದು ನಿರ್ದಿಷ್ಟ ಸಮುದಾಯದ ಐಎಎಸ್ ಅಧಿಕಾರಿಯು ತನ್ನ ಸಹೋದ್ಯೋಗಿಗಳಿಂದ ಖಂಡಿತವಾಗಿಯೂ ಬೆದರಿಸಲ್ಪಡುತ್ತಾನೆ ಎಂಬ ಊಹೆಯ ಅಡಿಯಲ್ಲಿ ಜಾಕೀರ್ ಹೀಗೆ ಹೇಳುತ್ತಾನೆ.
“ಅವರು ನಿಮ್ಮ ಮೇಲೆ, ಇಸ್ಲಾಂ ಅಥವಾ ಪ್ರವಾದಿ ಮೇಲೆ ದಾ ಳಿ ಮಾಡಿದಾಗ, ನೀವು ಅವರಿಗೆ ಉತ್ತರಿಸಬಹುದೇ? ಉತ್ತರಿಸುವ ಧೈರ್ಯವಿದೆಯೇ? ನೀವು ಅಂಜುಬುರುಕವಾಗಿರುವ ಮತ್ತು ನಾಚಿಕೆಪಡುವವರಾಗಿದ್ದರೆ, ಈ ಕೆಲಸವನ್ನು ಮಾಡಬೇಡಿ. ನೀವು ಅವರಿಗೆ ಉತ್ತರಿಸಲು ಮತ್ತು ಧೈರ್ಯಶಾಲಿಯಾಗಿದ್ದರೆ, ಅದನ್ನು ಮುಂದುವರಿಸಿ” ಎನ್ನುತ್ತಾನೆ.
ಮೂಲಭೂತವಾದಿ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್‌ಗೆ ಇಂತಹ ಹೇಳಿಕೆಗಳನ್ನು ನೀಡುವುದು ಹೊಸತೇನಲ್ಲ. “ನಿರ್ದಿಷ್ಟ ಸಮುದಾಯದತ್ತ ಒಲವು” ಮತ್ತು “ದಮನಕಾರಿಗಳ ಕೊಳಕು ಮುಖವನ್ನು ತೋರಿಸುವ” ಅವರ ಪ್ರಯತ್ನಗಳ ಹೊರತಾಗಿಯೂ, ಎನ್‌ಡಿಟಿವಿಯ ಸ್ಟಾರ್ ಪತ್ರಕರ್ತ ರವೀಶ್ ಕುಮಾರ್ ಅವರು ‘ಜನ್ನತ್’ ನಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಅವರು ಒಮ್ಮೆ ಹೇಳಿದರು. ಇಸ್ಲಾಮೇತರರು ಎಷ್ಟೇ ಒಳ್ಳೆಯವರಾಗಿದ್ದರೂ ಅವರು ಜಹನ್ನುಮ್‌ಗೇ (ನರಕಕ್ಕೇ) ಹೋಗುತ್ತಾರೆ ಎಂದಿದ್ದ ಜಾಕೀರ್ ನಾಯಕ್.