ಅಮೀರ್ ಖಾನ್ ಅಷ್ಟೇ ಅಲ್ಲ ಆತನ ಅಳಿಯನೂ ತನ್ನ ಹೆಂಡತಿಗೆ ನೀಡಿದ್ದಾನೆ ತಲಾಕ್

in FILM NEWS/Kannada News/News/ಸಿನಿಮಾ 348 views

ಕಿರಣ್ ರಾವ್ ಅವರೊಂದಿಗಿನ ಅಮೀರ್ ಖಾನ್ ಅವರ ವಿಚ್ಛೇದನೆ ಹಾಗು ದೂರವಾಗುವ ಘಟನೆಯ ಮಧ್ಯೆ ಇದೀಗ ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ಅವರ ವೈವಾಹಿಕ ಜೀವನವು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುತ್ತಿದೆ.  ಇಮ್ರಾನ್ ಅವರ ಪತ್ನಿ ಅವಂತಿಕಾ ಮಲಿಕ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕೋಟ್ ಒಂದನ್ನ ಹಂಚಿಕೊಂಡಿದ್ದಾರೆ, ಇದು ಅವರ ವೈವಾಹಿಕ ಜೀವನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

Advertisement

ಬರಹಗಾರ ಜುನೋಟ್ ಡಯಾಜ್ ಅವರ ಕೋಟ್ ಒಂದನ್ನ ಅವಂತಿಕಾ ಹಂಚಿಕೊಂಡಿದ್ದಾರೆ. “ಇಷ್ಟು ವರ್ಷಗಳಲ್ಲಿ ನೀವು ಏನಾದರೂ ಪಾಠ ಕಲಿತಿದ್ದರೆ ಅದುವೇ ನೀವು ಎಂದೆಂದಿಗೂ ಓಡಿಹೋಗಲು ಸಾಧ್ಯವಿಲ್ಲ” ಎಂಬುದಾಗಿದೆ.

ಇದಕ್ಕೂ ಮೊದಲು, ಅವಂತಿಕಾ ತನ್ನ ಪೋಸ್ಟ್ ನಲ್ಲಿ ಜೀವನದ ಇತರ ಹಲವು ಅಂಶಗಳ ಬಗ್ಗೆ ಮಾತನಾಡಿದ್ದರು, ಅದರಲ್ಲಿ ಅವರು ಮದುವೆ ಮತ್ತು ವಿಚ್ಛೇದನೆಯನ್ನೂ ಉಲ್ಲೇಖಿಸಿದ್ದರು. “ಮದುವೆ ಕಠಿಣ, ವಿಚ್ಛೇದನ ಕಠಿಣ, ಬೊಜ್ಜು ಕರಗಿಸುವುದು ಕಷ್ಟ. ಫಿಟ್ ಆಗಿರುವುದು ತುಂಬಾ ಕಠಿಣ. ನಿಮ್ಮ ಸ್ವಂತ ಮಾರ್ಗವನ್ನು ನೀವು ಆರಿಸಿಕೊಳ್ಳಿ” ಎಂದು ಅವರು ಬರೆದುಕೊಂಡಿದ್ದರು.

“ಸಾಲದಲ್ಲಿರುವುದು ಕಷ್ಟ.  ಆರ್ಥಿಕವಾಗಿ ಸದೃಢವಾಗಿರುವುದು ಕಠಿಣ. ನಿಮ್ಮ ಸ್ವಂತ ಮಾರ್ಗವನ್ನು ನೀವು ಆರಿಸಿಕೊಳ್ಳಿ. ಸಂವಹನವನ್ನು ಇಟ್ಟುಕೊಳ್ಳುವುದು ಕಷ್ಟ. ಸಂವಹನವನ್ನು ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಸ್ವಂತ ಮಾರ್ಗವನ್ನು ನೀವು ಆರಿಸಿಕೊಳ್ಳಿ. ಜೀವನ ಎಂದಿಗೂ ಸುಲಭವಲ್ಲ. ಇದು ಯಾವಾಗಲೂ ಕಠಿಣ. ಆದರೆ ನಾವು ನಮ್ಮ ಕಠಿಣ ಮಾರ್ಗವನ್ನು ಆರಿಸಬೇಕಾಗುತ್ತದೆ. ನಿಮ್ಮ ಜೀವನವನ್ನ ಬುದ್ಧಿವಂತಿಕೆಯಿಂದ ಆರಿಸಿ” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೀರ್ ಖಾನ್ ಕಿರಣ್ ರಾವ್ ಡೈವೋರ್ಸ್‌ಗೆ ಪತ್ರಕರ್ತೆ ಬರ್ಖಾ ದತ್ ಕಾರಣ?

ಬಾಲಿವುಡ್ ನಟ ಅಮೀರ್ ಖಾನ್ ವಿಚ್ಛೇದನದ ನಂತರ, ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯ ಪ್ರಕಾರ, ಅಮೀರ್ ಮತ್ತು ಕಿರಣ್ ರಾವ್ ಅವರ ವಿಚ್ಛೇದನದ ಹಿಂದೆ ಪತ್ರಕರ್ತೆ ಬರ್ಖಾ ದತ್ ಇದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಗಿಲ್ ಪ್ರವಾಸದ ನಂತರ ಇಬ್ಬರ ನಡುವಿನ ‘ಸ್ನೇಹ’ ಗಾಢವಾಗಿತ್ತು ಎಂದು ವೈರಲ್ ಸಂದೇಶದೊಂದಿಗೆ ವೀಡಿಯೊವೊಂದು ಸದ್ಯ ವೈರಲ್ ಆಗುತ್ತಿದೆ.

ಈ ಪೋಸ್ಟ್ ನಲ್ಲಿ, “ದರಿದ್ರ ಬರ್ಖಾ ದತ್ತ್ ಳೇ ಅಮೀರ್ ಖಾನ್ ವಿಚ್ಛೇದನಕ್ಕೆ ಕಾರಣ. ಇದು ತಮಾಷೆಯ ವಿಷಯವಲ್ಲ. ಈ ವಿಡಿಯೋ ನೋಡಿ ಅಮೀರ್ ಖಾನ್ ಕಳೆದ ಕೆಲ ವರ್ಷಗಳಿಂದ ಕದ್ದುಮುಚ್ಚಿ ಹೇಗೆ ಬರ್ಖಾ ದತ್ ಳನ್ನ ಭೇಟಿಯಾಗುತ್ತಿದ್ದಾರೆ. ಈಗ ಬಂದಿರುವ ಸುದ್ದಿಯ ಪ್ರಕಾರ ಅಮೀರ್ ಕಿರಣ್ ದೂರವಾಗಿದ್ದಾರೆ. ಇಲ್ಲಿ ಯೋಚಿಸುವ ವಿಷಯವೆಂದರೆ ಪ್ರೀತಿ ಪ್ರೇಮದ ನಾಟಕವಾಡೋಕೆ ಅಮೀರ್ ಖಾನ್‌ಗೆ ಹಿಂದೂ ಹೆಣ್ಮಕ್ಕಳೇ ಸಿಗೋದು ಹೇಗೆ? ಈಗ ಬರ್ಖಾ ದತ್ ಅಂತೂ ಹಿಂದೂ ಅಲ್ವಲ್ಲ ಅಂತ ಕೇಳ್ಬೇಡಿ ಮತ್ತೆ” ಎಂದು ಬರೆಯಲಾಗಿದೆ.

ಈ ಸಂದೇಶದೊಂದಿಗೆ ಹಂಚಿಕೊಂಡಿರುವ ವೀಡಿಯೊದಲ್ಲಿ, ಜೆಸ್ಸಿಕಾ ಹೈನ್ಸ್ ಎಂಬ ಪತ್ರಕರ್ತೆಯೊಂದಿಗಿನ ಸಂಬಂಧದಿಂದಾಗಿ ಅಮೀರ್ ಖಾನ್ ಸುದ್ದಿಯಲ್ಲಿದ್ದರು ಮತ್ತು ಈಗ ಎನ್‌ಡಿಟಿವಿಯ (ಮಾಜಿ) ಪತ್ರಕರ್ತೆ ಬರ್ಖಾ ದತ್ ಅವರೊಂದಿಗಿನ ನಿಕಟತೆಯ ಕಾರಣದಿಂದಾಗಿ ಚರ್ಚೆಯಲ್ಲಿದೆ ಎಂದು ಹೋಸ್ಟ್ ಹೇಳುತ್ತಿದ್ದಾರೆ. ಕಾರ್ಗಿಲ್ ಚಿತ್ರೀಕರಣಕ್ಕೆ ತೆರಳುವಾಗ ಇಬ್ಬರ ನಡುವಿನ ಪ್ರೇಮಕಥೆ ಪ್ರಾರಂಭವಾಯಿತು ಎಂದು ಹೋಸ್ಟ್ ಹೇಳುತ್ತಿದ್ದಾರೆ.

ಇದಲ್ಲದೆ, ಹೋಸ್ಟ್ ಹೇಳುವ ಪ್ರಕಾರ ತಮ್ಮ ಕೆಲಸದ ಕಾರಣದಿಂದಾಗಿ, ಅಮೀರ್ ಅವರು ಬರ್ಖಾ ದತ್ ಅವರಿರುವ ದೆಹಲಿಗೆ ಹೋಗುತ್ತಿದ್ದರು ಎಂಬ ಹೇಳಿಕೆಯನ್ನು ಸಮರ್ಥಿಸಲು ವೀಡಿಯೊದಲ್ಲಿ ಹೇಳಿದ್ದಾರೆ, ಅಲ್ಲಿ ಇಬ್ಬರೂ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಂಡರು. ಬರ್ಖಾ ದತ್ ಪತ್ರಕರ್ತೆಯಾಗಿರುವುದರಿಂದ ಅವರ ಪ್ರೇಮಕಥೆಯನ್ನು ಹೆಚ್ಚು ಕಾಲ ಮರೆಮಾಡಲು ಸಾಧ್ಯವಿಲ್ಲ ಎಂದು ಹೋಸ್ಟ್ ಹೇಳುತ್ತಾರೆ.

ಈ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಒಪಿಇಂಡಿಯಾ ಇದರ ಫ್ಯಾಕ್ಟ್ ಚೆಕ್ ನಡೆಸಿದೆ. ಎನ್‌ಡಿಟಿವಿಯ ಜೈ ಜವಾನ್ ಧಾರಾವಾಹಿಗಾಗಿ ಬರ್ಖಾ ದತ್ ಮತ್ತು ಅಮೀರ್ ಖಾನ್ ಕಾರ್ಗಿಲ್‌ಗೆ ಒಟ್ಟಿಗೆ ಪ್ರಯಾಣಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅದರ ನಂತರ ಅನೇಕ ಗಾಸಿಪ್ ವೆಬ್‌ಸೈಟ್‌ಗಳು ಲಗಾನ್ ಚಿತ್ರೀಕರಣದ ಸಮಯದಲ್ಲಿ, ಒಬ್ಬ ಪತ್ರಕರ್ತೆ ಆಗಾಗ್ಗೆ ಅಮೀರ್ ಖಾನ್‌ನ್ನ ಸೆಟ್‌ನಲ್ಲಿ ಭೇಟಿಯಾಗಲು ಬರುತ್ತಿದ್ದರು ಎಂದು ತಿಳಿದುಬಂದಿದೆ.

ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಅವರ ವಿಚ್ಛೇದನಕ್ಕೆ ಈ ಅಮೀರ್ ಹಾಗು ಬರ್ಖಾ ದತ್ ನಡುವಿನ ಈ ನಿಕಟತೆಯೇ ಕಾರಣ ಎಂದು ಕೆಲವು ಸೈಟ್‌ಗಳು ಹೇಳಿಕೊಂಡಿವೆ. ಆದ್ದರಿಂದ, ಕಿರಣ್ ರಾವ್ ಅವರೊಂದಿಗೆ ಅಮೀರ್ ವಿಚ್ಛೇದನದ ಹಿಂದೆ ಬರ್ಖಾ ದತ್ ಇಲ್ಲ ಎಂಬುದು ಸ್ಪಷ್ಟವಾಗಿದೆ. ಹಳೆಯ ಹಕ್ಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2004 ರ ವರದಿಯ ಪ್ರಕಾರ, ಅಮೀರ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಬರ್ಖಾ ದತ್ ಅವರನ್ನು ಮಾಧ್ಯಮ ವ್ಯಕ್ತಿಯೊಬ್ಬರು ಕೇಳಿದಾಗ, ಅವರು ಕೋಪಗೊಂಡರು ಮತ್ತು ನೀನ್ಯಾರು? ಅಂತ ಕೇಳಿದ್ದರು.

ಅಮೀರ್ ಖಾನ್ ತಮ್ಮ ರಿಲೇಶನ್ಸ್ ಗಳಿಂದಾಗಿ ಸಾಕಷ್ಟು ವಿವಾದಗಳಲ್ಲಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅವರ ಚಿತ್ರ ಲಗಾನ್ 2001 ರಲ್ಲಿ ಬಿಡುಗಡೆಯಾಯಿತು. ನಂತರ ಅವರು ಡಿಸೆಂಬರ್ 2002 ರಲ್ಲಿ ರೀನಾ ದತ್ತಾ ಅವರೊಂದಿಗೆ ವಿಚ್ಛೇದನವನ್ನು ಘೋಷಿಸಿದರು. ನಂತರ ಅವರು ಕಿರಣ್ ರಾವ್ ಅವರನ್ನು ಫಿಲ್ಸ್ ಸೆಟ್‌ಗಳಲ್ಲಿ ಭೇಟಿಯಾದರು. ಈ ಮಧ್ಯೆ 2004 ರಲ್ಲಿ ಜೆಸ್ಸಿಕಾ ಎಂಬ ಪತ್ರಕರ್ತೆ ತಮ್ಮ ಮಗ ಜಾನ್ ಅಮೀರ್ ಅವರ ಮಗ ಎಂದು ಹೇಳಿಕೊಂಡರು, ಆತ ಸೆಪ್ಟೆಂಬರ್ 13, 2004 ರಂದು ಜನಿಸಿದನು ಎಂದು ಹೇಳಿದ್ದರು. ಆದರೆ, ಜೆಸ್ಸಿಕಾ ಹೇಳಿದ್ದನ್ನ ಅಮೀರ್ ಖಾನ್ ತಿರಸ್ಕರಿಸಿದ್ದರು. 2005 ರಲ್ಲಿ, ಅಮೀರ್ ಕಿರಣ್ ರಾವ್ ಅವರನ್ನು ವಿವಾಹವಾದರು ಮತ್ತು ಈಗ 15 ವರ್ಷಗಳ ನಂತರ ಆಕೆಯಿಂದಲೂ ದೂರವಾಗಿದ್ದಾರೆ. ಈಗ ಅವರು ದಂಗಲ್ ಸಹನಟಿ ಫಾತಿಮಾ ಸನಾ ಶೇಖ್ ಅವರೊಂದಿಗೆ ಸಂಬಧ ಹೊಂದಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅಮೀರ್ ಖಾನ್ ಅವರು 2002-2004ರಲ್ಲಿ ಬರ್ಖಾ ದತ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ಕೇವಲ ವದಂತಿಯಷ್ಟೇ ಎಂದು ಹೇಳಬಹುದು. ಆದರೆ ಈ ವಿಷಯದಲ್ಲಿ ಯಾವುದನ್ನೂ ಒಪ್ಪಿಕೊಳ್ಳುವ ಹಾಗೂ ಇಲ್ಲ ಅಥವ ತಳ್ಳಿಹಾಕುವಂತೂ ಇಲ್ಲ. ಈಗ ವೈರಲ್ ಆಗುತ್ತಿರುವ ವೀಡಿಯೋ ನಿಜವಾದದ್ದೇ ಆದರೆ ಅದು ಹಳೆಯದು ಮತ್ತು ಇತ್ತೀಚಿನ ವಿಚ್ಛೇದನಕ್ಕೂ ಬರ್ಖಾ ದತ್ ಗೂ ಯಾವುದೇ ಸಂಬಂಧವಿಲ್ಲ.

Advertisement
Share this on...