ಅಮೇಜಾನ್ ನಲ್ಲಿ ಗೋವಿನ‌ ಸಗಣಿ ಬೆರಣಿಯನ್ನ ಮಾರಿ ಲಕ್ಷಾಂತರ ರೂ.‌ಸಂಪಾದಿಸುತ್ತಿದ್ದಾರೆ ಈ ಯುವಕರು: ನೀವೂ ಟ್ರೈ ಮಾಡಬಹುದು ಈ ಬ್ಯುಸಿನೆಸ್

in Kannada News/News/Story/ಕನ್ನಡ ಮಾಹಿತಿ 181 views

ಪಿಇಐ ಆರ್ಗ್ಯಾನಿಕ್ ಫುಡ್ಸ್ ಎಂದು ತುಂಬಾ ಹಿಂದೆಯೇ ಶುರು ಮಾಡಿದ್ದು, ಕೋಟಾ ಬಳಿ 40 ಎಕರೆ ಜಮೀನನ್ನು ಹೊಂದಿದ್ದು, ಅಲ್ಲಿ ಅವರು 120 ಹಸುಗಳನ್ನು ಹೊಂದಿದ್ದಾರೆ.

Advertisement

ಸ್ವಂತ ಉದ್ಯಮ ಮಾಡುವವರು ಹೊಸದಾದ ಮತ್ತು ವಿಶಿಷ್ಟವಾದ ರೀತಿಯಲ್ಲಿ ಆಲೋಚನೆಯನ್ನು ಮಾಡಿದರೆ ತಮ್ಮ ಸ್ವಂತ ಉದ್ಯಮದಲ್ಲಿಯೇ ಉನ್ನತ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಈಗಾಗಲೇ ಅನೇಕ ಯುವ ಉದ್ಯಮಿಗಳು ಸಾಬೀತು ಪಡಿಸಿರುವುದನ್ನು ನಾವು ನೋಡುತ್ತೇವೆ.

ರಾಜಸ್ಥಾನದ ಕೋಟಾ ನಗರದಲ್ಲಿ ವಾಸವಾಗಿರುವ ಮೂವರು ಯುವಕರು ತಮ್ಮ 15 ವರ್ಷದ ಕೌಟುಂಬಿಕ ವ್ಯವಹಾರವಾದ ಹೈನುಗಾರಿಕೆಯ ಜೊತೆಗೆ ಈಗ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಅಮೆಜಾನ್ ನಲ್ಲಿ ಮಾರುತ್ತಿದ್ದು, ಅದಕ್ಕೆ ತುಂಬಾ ಬೇಡಿಕೆ ಇರುವುದನ್ನು ಕಂಡುಕೊಂಡಿದ್ದಾರೆ. ಪಿಇಐ ಆರ್ಗ್ಯಾನಿಕ್ ಫುಡ್ಸ್ ಎಂದು ತುಂಬಾ ಹಿಂದೆಯೇ ಶುರು ಮಾಡಿದ್ದು, ಕೋಟಾ ಬಳಿ 40 ಎಕರೆ ಜಮೀನನ್ನು ಹೊಂದಿದ್ದು, ಅಲ್ಲಿ ಅವರು 120 ಹಸುಗಳನ್ನು ಹೊಂದಿದ್ದಾರೆ.

“ಕಳೆದ ಮೂರು ತಿಂಗಳಿಂದ ನಾವು ಅಮೆಜಾನ್‌ನಲ್ಲಿಸಗಣಿಯಬೆರಣಿಯನ್ನು ಮಾರಾಟ ಮಾಡುತ್ತಿದ್ದು, ನಾವು ಈವ್ಯವಹಾರದಲ್ಲಿ ಲಾಭವನ್ನು ಕಂಡುಕೊಂಡಿದ್ದೇವೆ, ” ಎಂದು ಪಿಇಐ ಆರ್ಗ್ಯಾನಿಕ್ ಫುಡ್ಸ್‌ನ ಮೂವರು ನಿರ್ದೇಶಕರಲ್ಲಿ ಒಬ್ಬರಾದ ಅಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಕಾಲು-ತಟ್ಟೆಯ ಗಾತ್ರದ ಈ ಸಗಣಿಯ ಬೆರಣಿಗಳಿಗೆ ಪ್ರತಿ ಡಜನ್‌ಗೆ 120 ರೂಪಾಯಿ ನಿಗದಿಪಡಿಸಿದ್ದು, ಅವರು ಪ್ರಸ್ತುತ ವಾರಕ್ಕೆ 500-1,000 ಇರುವ ಸಗಣಿ ಬೆರಣಿಗಳನ್ನು ಒಳಗೊಂಡಿರುವ 15 ಸರಕುಗಳನ್ನು ಮಾರಾಟ ಮಾಡುತ್ತಾರೆ. “ಮುಖ್ಯವಾಗಿ ನಾವು ಮುಂಬೈ, ದೆಹಲಿ ಮತ್ತು ಪುಣೆಯಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ,” ಎಂದು ಸಿಂಗ್ ಹೇಳಿದರು.

ಈ ಸಗಣಿ ಬೆರಣಿಗಳನ್ನು ಮುರಿದು ಹೋಗದಂತೆ ಜೋಪಾನವಾಗಿ ಪ್ಯಾಕ್ ಮಾಡಲಾಗುವುದು ಎಂದು ಸಹ ಇವರು ಹೇಳಿದ್ದಾರೆ. ಮೊದಲಿಗೆ ಕೊಂಚ ದ್ರವ ರೂಪದಲ್ಲಿರುವ ಸಗಣಿಯನ್ನು ಒಣಗಿಸಲಾಗುತ್ತದೆ. ನಂತರ ಅದನ್ನು ವೃತ್ತಾಕಾರದ ಡೈಗೆ ಹಾಕಲಾಗುತ್ತದೆ, ನಂತರ ಅವುಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ರವಾನಿಸಲಾಗುತ್ತದೆ.

ಯಾವುದೇ ಜಾನುವಾರುಗಳ ನಿರ್ವಹಣೆ ಮತ್ತು ಡೈರಿಗಳ ಕೊರತೆಯಿರುವ ನಗರಗಳಲ್ಲಿರುವ ಆನ್‌ಲೈನ್ ಖರೀದಿದಾರರನ್ನು ತಲುಪುವ ಆಲೋಚನೆ ಬಂತು ಎಂದು ಸಿಂಗ್ ಹೇಳಿದ್ದಾರೆ.

ಗಗನ್‌ದೀಪ್ ಸಿಂಗ್, ಅಮನ್‌ಪ್ರೀತ್ ಸಿಂಗ್ ಮತ್ತು ಉತ್ತಮ್‌ಜೋತ್ ಸಿಂಗ್ ಎಂಬ ಮೂವರು ನಿರ್ದೇಶಕರು ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಕುಟುಂಬವು ತುಂಬಾ ವರ್ಷಗಳಿಂದ ನಡೆಸಿಕೊಂಡು ಬಂದಂತಹ ಸಾವಯವ ಹಾಲಿನ ಬ್ರಾಂಡ್‌ಗೆ ಸೂಕ್ತವಾಗಿ “ಜಿಎಯು” ಎಂದು ಹೆಸರಿಡಲಾಗಿದೆ, ಇದರರ್ಥ ಹಸು ಎಂದು ಮತ್ತು ಇಂಗ್ಲೀಷ್ ನಲ್ಲಿ ಈ ಮೂರು ನಿರ್ದೇಶಕರ ಹೆಸರಿನ ಮೊದಲನೇ ಅಕ್ಷರವನ್ನು ಜೋಡಿಸಿ ಸಹ ಹೀಗೆ ಹೆಸರಿಡಲಾಗಿದೆ ಎಂದು ಹೇಳುತ್ತಾರೆ.

ಹೈನುಗಾರಿಕೆಯಿಂದ ಬರುವ ತ್ಯಾಜ್ಯವನ್ನು ವಿದ್ಯುತ್, ಅನಿಲ, ವರ್ಮಿಕಾಂಪೋಸ್ಟ್ ಮತ್ತು ಸಗಣಿಯ ಬೆರಣಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಕಂಪನಿಯು ಜಾನುವಾರುಗಳ ಮೇಲೆ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಅನ್ನು ಅಳವಡಿಸಲಾಗಿದ್ದು, ಇದು ಪ್ರಪಂಚದಾದ್ಯಂತ ಎಲ್ಲಿಂದಲಾದರೂ ದನಗಳ, ಹಸುಗಳ ಆರೋಗ್ಯ ಮತ್ತು ಪೋಷಣೆಯ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ.

ಇವರ ಫಾರ್ಮ್‌ನಲ್ಲಿ ರಾಜಸ್ಥಾನದ ಮೊದಲ ಜೈವಿಕ ಅನಿಲ ಸ್ಥಾವರವಿದೆ, ಅದು ವಿದ್ಯುತ್ ಉತ್ಪಾದಿಸುತ್ತದೆ. ಜಮೀನಿನಲ್ಲಿರುವ ಏಕೈಕ ವಿದ್ಯುತ್ ಮೂಲ ಇದಾಗಿದ್ದು, ದಿನಕ್ಕೆ 40 ಕಿಲೋ ವ್ಯಾಟ್ ಉತ್ಪಾದಿಸಬಹುದಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

Advertisement
Share this on...