ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇ ನಾ ಪ ಡೆ ಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉ ಗ್ರ ರು ಇಡೀ ಅಫ್ಘಾನಿಸ್ತಾನವನ್ನು ವ ಶ ಕ್ಕೆ ಪಡೆಯುವಂತಾಗಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ- ಬೈಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಅಫ್ಘಾನಿಸ್ತಾನಕ್ಕೆ ಜೋ- ಬೈಡೆನ್ ಯಾವುದಕ್ಕೆ ಅವಕಾಶ ನೀಡಿದ್ದಾರೋ ಅದಕ್ಕೆ ಅ ಪ ಮಾ ನಿ ತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಇದಾಗಿದೆ ಎಂದು ಹೇಳಿರುವ ಟ್ರಂಪ್, ಅಮೆರಿಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳ, ದೇಶೀಯ ವಲಸೆ, ಆರ್ಥಿಕ ಮತ್ತು ಇಂಧನ ನೀತಿಗಳ ವಿ ರು ದ್ಧ ತೀ ವ್ರ ವಾ ಗ್ದಾ ಳಿ ನಡೆಸಿದ್ದಾರೆ.
ಅಮೆರಿಕ ನೇತೃತ್ವದ ಸೇ ನಾ ಪ ಡೆ ಗಳು ಮ ಟ್ಟ ಹಾಕಿದ್ದ ತಾಲಿಬಾನ್ ಗಳು 20 ವರ್ಷಗಳ ನಂತರ ಇದೀಗ ಹಠಾತ್ ಬೆಳಕಿಗೆ ಬಂದಿದ್ದು, ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ್ನು ವ ಶ ಕ್ಕೆ ಪಡೆದುಕೊಂಡಿದ್ದಾರೆ.ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಸಂಪೂರ್ಣ ಅಮೆರಿಕ ಸೇ ನೆ ಯನ್ನು ವ ಶ ಕ್ಕೆ ಪಡೆಯುವುದಾಗಿ ಜೋ ಬೈಡನ್ ಡೆಡ್ ಲೈನ್ ನೀಡಿದ್ದರು. ಆದರೆ, ಆ ಗ ಡು ವಿ ಗೆ ಇನ್ನೂ ಎರಡು ವಾರ ಇರುವಾಗಲೇ ತಾಲಿಬಾನ್ ಕಾಬೂಲ್ ನನ್ನು ವ ಶ ಕ್ಕೆ ಪಡೆದಿದೆ.
ದೋಹಾದಲ್ಲಿ 2020ರಲ್ಲಿ ತಾಲಿಬಾನ್ ಜೊತೆಗೆ ನಡೆದ ಒಪ್ಪಂದದ ಸಂದರ್ಭದಲ್ಲಿ ಮೇ 2021ರೊಳಗೆ ಅಮೆರಿಕ ತನ್ನ ಎಲ್ಲಾ ಸೇ ನೆ ಯನ್ನು ವಶಕ್ಕೆ ಪಡೆಯುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಉ ಗ್ರ ರಿಂದ ಕೆಲವೊಂದು ಭದ್ರತಾ ಗ್ಯಾರಂಟಿ ಕೂಡಾ ವಿನಿಮಯ ಮಾಡಿಕೊಳ್ಳಲಾಗಿತ್ತು. ಜೋ- ಬೈಡನ್ ಅಧಿಕಾರಕ್ಕೆ ಬಂದಾಗ ನೀಡಲಾಗಿದ್ದ ಗ ಡು ವನ್ನು ಮುಂದಕ್ಕೆ ಹಾಕಿದ್ದರಲ್ಲದೇ, ಅದಕ್ಕಾಗಿ ಯಾವುದೇ ಷರತ್ತು ವಿಧಿಸಲಿಲ್ಲ. ಈ ನಡೆ ವಿ ರು ದ್ಧ ಟ್ರಂಪ್ ಆಗಾಗ್ಗೆ ವಾ ಗ್ದಾ ಳಿ ನಡೆಸುತ್ತಿದ್ದರು.
ಅಫ್ಘಾನಿಸ್ತಾನದೊಂದಿಗೆ ಜೋ ಬೈಡನ್ ಏನು ಮಾಡಿದ್ದಾರೆ ಎಂಬುದು ಐತಿಹ್ಯವಾಗಿದೆ. ಇದು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸೋ ಲು ಎಂದು ಟ್ರಂಪ್ ಮತ್ತೊಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಕ್ಷೀಪ್ರಗತಿಯಲ್ಲಿ ಪ್ರತಿಕ್ರಿಯಿಸಿರುವ ಬೈಡನ್ ಆಡಳಿತ, ದೋಹಾ ಒಪ್ಪಂದವನ್ನು ಪ್ರಸ್ತಾಪಿಸಿದೆ. ಅಫ್ಘಾನಿಸ್ತಾನದಿಂದ ಸೇ ನಾ ಹಿಂತೆಗತ ವಿಚಾರದಲ್ಲಿ ಅಮೆರಿಕಾದಲ್ಲಿ ಬೈಡನ್ ಟೀ ಕೆ ಗೆ ಗುರಿಯಾಗಿದ್ದಾರೆ.
ತಾಲಿಬಾನ್ ಬಳಿ ಇರೋ ಸಂಪತ್ತೆಷ್ಟು? ಅವರ ಆದಾಯದ ಮೂಲವೇನು ಗೊತ್ತಾ?
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವೇಗವಾಗಿ ತನ್ನ ನೆಲೆಯನ್ನು ವಿಸ್ತರಿಸುತ್ತಿದೆ ಮತ್ತು ಮುಂದಿನ ಮೂರು ತಿಂಗಳಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವ ಶ ಪ ಡಿ ಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ತಾಲಿಬಾನಿಗಳು 12 ಪ್ರಾಂತ್ಯಗಳ ರಾಜಧಾನಿಗಳ ಮೇಲೆ ಹಿಡಿತ ಸಾಧಿಸಿವೆ ಮತ್ತು ದೇಶದ ಹಲವು ಪ್ರಾಂತ್ಯಗಳಲ್ಲಿ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸೆ ರೆ ಹಿ ಡಿ ಯಲಾಗಿದೆ. ಆದರೆ, 2021 ರ ತಾಲಿಬಾನ್ 1990 ರ ಅಂತ್ಯದ ತಾಲಿಬಾನ್ಗಿಂತ ಭಿನ್ನವಾಗಿ ಕಾಣುತ್ತದೆ. ತಾಲಿಬಾನ್ ಬಿಡುಗಡೆ ಮಾಡಿರುವ ವೀಡಿಯೋ ಮತ್ತು ವಿವಿಧ ಮಾಧ್ಯಮ ಮೂಲಗಳಿಂದ ತಾಲಿಬಾನ್ ಉಲ್ಲೇಖಿಸಿದ ವೀಡಿಯೋ ತುಣುಕುಗಳು, ತಾಲಿಬಾನ್ ನಾಯಕರ ಉಡುಗೆ ಮತ್ತು ಕಾರ್ಯ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಎಷ್ಟು ಬದಲಾಗಿದೆ ಗೊತ್ತಾ ತಾಲಿಬಾನ್?
ತಾಲಿಬಾನ್ ಕುರಿತಾಗಿ ಬರುತ್ತಿರುವ ರಿಪೋರ್ಟ್ ಗಳು ಮತ್ತು ಲಭ್ಯವಿರುವ ವಿಡಿಯೋ ತುಣುಕುಗಳು ತಾಲಿಬಾನ್ ಅತ್ಯಾಧುನಿಕ ಶ ಸ್ತ್ರಾ ಸ್ತ್ರ ಗಳನ್ನು ಹೊಂದಿದೆ ಮತ್ತು ಅವರು ಆಧುನಿಕ SUV ವಾಹನಗಳನ್ನು ಹೊಂದಿದ್ದಾರೆ ಎಂದು ಸ್ಪಷ್ಟವಾಗಿ ಕಾಣಬಹುದಾಗಿದೆ. ಈಗಿನ ತಾಲಿಬಾನ್ ಫೈಟರ್ಸ್ ಗಳು ಧರಿಸಿರುವ ಬಟ್ಟೆಗಳು ಹೊಸದಾಗಿ ಮತ್ತು ಹೆಚ್ಚಿನ ಮಟ್ಟಿಗೆ ಸ್ವಚ್ಛವಾಗಿ ಕಾಣುತ್ತವೆ, ಆದರೆ 90 ರ ದಶಕದ ತಾಲಿಬಾನಿಗಳ ವಸ್ತ್ರವೂ ಹಳೆಯದಾಗಿತ್ತು ಮತ್ತು ಅವರ ಜೀವನಶೈಲಿಯು ಕೂಡ ಬುಡಕಟ್ಟುಗಳಂತೆಯೇ ಇತ್ತು. ಸೈದ್ಧಾಂತಿಕ ಮಟ್ಟದಲ್ಲಿ, ತಾಲಿಬಾನ್ನ ಚಿಂತನೆಯು ಇನ್ನೂ ಹಳೆಯ ತಾಲಿಬಾನ್ಗೆ ಹೋಲುತ್ತದೆ ಮತ್ತು ಮಹಿಳೆಯರ ಬಗ್ಗೆ ತಾಲಿಬಾನ್ನ ದೃಷ್ಟಿಕೋನಗಳು ಅಪಾಯಕಾರಿಯಾಗೇ ಇದೆ. ಆದರೆ 2021 ರ ತಾಲಿಬಾನ್ಗಳು 1990 ರ ತಾಲಿಬಾನಿಗಳಂತೆ ಹುಚ್ಚುತನವನ್ನು ತೋರಿಸುವುದಿಲ್ಲ. ತಾಲಿಬಾನ್ ಫೈಟರ್ಸ್ ಗಳು ಈಗ ಶಿಸ್ತುಬದ್ಧವಾಗಿ ಕಾಣಲು ಇಷ್ಟಪಡುತ್ತಾರೆ ಹಾಗು ಅವರು ಉತ್ತಮವಾದ ಟ್ರೇನಿಂಗ್ ಪಡೆದಿದ್ದು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ಕಾರಣ ಅವರ ಬಳಿಯ ಬೊಕ್ಕಸವು ಈಗ ಹಣದಿಂದ ತುಂಬಿ ತುಳುಕುತ್ತಿದೆ.
2016 ರಲ್ಲಿ 5 ನೆಯ ಸ್ಥಾನದಲ್ಲಿದ್ದ ತಾಲಿಬಾನ್
ಹಾಗಾದರೆ ತಾಲಿಬಾನ್ ಬಳಿ ಎಷ್ಟು ಹಣವಿದೆ ಮತ್ತು ಈ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. 2016 ರಲ್ಲಿ, ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಶ್ರೀಮಂತ ಭ ಯೋ ತ್ಪಾ ದ ಕ ಸಂಘಟನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಇದರಲ್ಲಿ ತಾಲಿಬಾನ್ ಐದನೇ ಶ್ರೀಮಂತ ಭ ಯೋ ತ್ಪಾ ದ ಕ ಸಂಘಟನೆಯಾಗಿದೆ. ಆ ಸಮಯದಲ್ಲಿ ಭ ಯೋ ತ್ಪಾ ದ ಕ ಸಂಘಟನೆ ಐಸಿಸ್ ಅತ್ಯಂತ ಶ್ರೀಮಂತ ಭ ಯೋ ತ್ಪಾ ದ ಕ ಸಂಘಟನೆ ಎಂದು ಹೇಳಲಾಗುತ್ತಿತ್ತು ಮತ್ತು ಅದರ ಆಸ್ತಿ ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಐಸಿಸ್ ಇರಾಕ್ನ ಹೆಚ್ಚಿನ ಭಾಗಗಳನ್ನು ಆ ಕ್ರ ಮಿ ಸಿ ಕೊಂಡಿದ್ದರೂ ಮತ್ತು ಅನೇಕ ದೇಶಗಳಲ್ಲಿರುವ ಇ ಸ್ಲಾ ಮಿ ಕ್ ಉ ಗ್ರ ಸಂಘಟನೆಗಳಿಂದ ಹಣವನ್ನು ಪಡೆದಿದ್ದರೂ, ಅಮೇರಿಕಾ ಐಸಿಸ್ ಅನ್ನು ನಾ ಶ ಪ ಡಿ ಸಿ ತು ಮತ್ತು ಅದರ ನಾಯಕ ಅಬು ಬಕರ್ ಅಲ್-ಬಾಗ್ದಾದಿಯನ್ನು ಯುಎಸ್ ಬಾಂ ಬ್ ನಿಂದ ಉ ಡಾ ಯಿ ಸಿ ತ್ತು. ಆದರೆ, ಫೋರ್ಬ್ಸ್ ವರದಿಯ ಪ್ರಕಾರ, 2016 ರಲ್ಲಿ ತಾಲಿಬಾನ್ ನ ವಾರ್ಷಿಕ ವಹಿವಾಟು ಸುಮಾರು 400 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ತಾಲಿಬಾನ್ ಬಳಿ ಎಷ್ಟಿದೆ ಸಂಪತ್ತು?
ಮಾ ದ ಕ ದ್ರ ವ್ಯ ಕ ಳ್ಳ ಸಾ ಗ ಣೆ, ಭದ್ರತೆ ಒದಗಿಸುವ ಹೆಸರಿನಲ್ಲಿ ಸು ಲಿ ಗೆ, ವಿವಿಧ ಉ ಗ್ರ ಸಂಘಟನೆಗಳಿಂದ ದೇಣಿಗೆ ಮತ್ತು ತಾಲಿಬಾನ್ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಸಂಗ್ರಹಿಸಿದ ಹಣ ತಾಲಿಬಾನಿಗಳ ಹಣದ ಮೂಲ ಎಂದು ಫೋರ್ಬ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಫೋರ್ಬ್ಸ್ 2016 ರಲ್ಲಿ 400 ಮಿಲಿಯನ್ ಡಾಲರ್ ವಾರ್ಷಿಕ ‘ವ್ಯಾಪಾರ’ ವರದಿಯನ್ನು ಬಿಡುಗಡೆ ಮಾಡಿತು ಮತ್ತು ಆ ಸಮಯದಲ್ಲಿ ತಾಲಿಬಾನ್ ತುಂಬಾ ದುರ್ಬಲವಾಗಿತ್ತು ಮತ್ತು ಕೆಲವು ಸಣ್ಣ ಪ್ರದೇಶಗಳನ್ನು ಮಾತ್ರ ನಿಯಂತ್ರಿಸುತ್ತಿತ್ತು. ಆದರೆ ಈಗ ಅಫ್ಘಾನಿಸ್ತಾನದ ಹಲವು ದೊಡ್ಡ ಮತ್ತು ಪ್ರಮುಖ ನಗರಗಳ ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ ಮತ್ತು ಅದರ ಸಂಪತ್ತು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಭಾರೀ ಪ್ರಮಾಣದಲ್ಲಿ ಹೆಚ್ಚಾದ ತಾಲಿಬಾನ್ ಸಂಪತ್ತು
ನ್ಯಾಟೊದ ಗೌಪ್ಯ ವರದಿಯನ್ನು ಉಲ್ಲೇಖಿಸಿ ರೇಡಿಯೋ ಫ್ರೀ ಯುರೋಪ್ / ರೇಡಿಯೋ ಲಿಬರ್ಟಿ ತಾಲಿಬಾನ್ ಆಸ್ತಿಗಳ ಬಗ್ಗೆ ದೊಡ್ಡ ವಿಷಯವನ್ನ ಬಹಿರಂಗಪಡಿಸಿದೆ. ತಾಲಿಬಾನ್ ನ ಆಸ್ತಿ ಹಲವು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2019-2020 ಹಣಕಾಸು ವರ್ಷದಲ್ಲಿ ತಾಲಿಬಾನ್ನ ವಾರ್ಷಿಕ ಬಜೆಟ್ 1.6 ಬಿಲಿಯನ್ ಡಾಲರ್ ನಷ್ಟಿತ್ತು. 2016 ರ ಫೋರ್ಬ್ಸ್ ಅಂಕಿಅಂಶಗಳಿಗೆ ಹೋಲಿಸಿದರೆ ನಾಲ್ಕು ವರ್ಷಗಳಲ್ಲಿ 400 ಪ್ರತಿಶತ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. ಈ ವರದಿಯಲ್ಲಿ, ತಾಲಿಬಾನಿಗಳು ಎಲ್ಲಿಂದ ಹೆಚ್ಚು ಹಣವನ್ನು ಪಡೆಯುತ್ತಾರೆ ಮತ್ತು ತಾಲಿಬಾನ್ ಈ ಹಣವನ್ನು ಎಲ್ಲಿ ಯಾವ ವಸ್ತುಗಳ ಮೇಲೆ ಖರ್ಚು ಮಾಡುತ್ತಾರೆ ಎಂಬ ಪಟ್ಟಿಯನ್ನು ಮಾಡುವ ಮೂಲಕ ತೋರಿಸಲಾಗಿದೆ.
ತಾಲಿಬಾನ್ನ ಆದಾಯದ ಮೂಲ
ನ್ಯಾಟೋನ ಗು ಪ್ತ ಚ ರ ದಾಖಲೆಯಿಂದ ರೇಡಿಯೋ ಫ್ರೀ ಯುರೋಪ್ / ರೇಡಿಯೋ ಲಿಬರ್ಟಿಯಿಂದ ಪಡೆದ ವರದಿಯಲ್ಲಿ ತಾಲಿಬಾನ್ ಗಳಿಕೆಯ ಸಂಪೂರ್ಣ ಕಥೆಯನ್ನು ದಾಖಲಿಸಲಾಗಿದೆ. ಗಣಿಗಾರಿಕೆಯಿಂದ ತಾಲಿಬಾನ್ 464 ಮಿಲಿಯನ್ ಡಾಲರ್ ಮತ್ತು ಮಾ ದ ಕ ವ ಸ್ತು ಕ ಳ್ಳ ಸಾಗಣೆಯಿಂದ 416 ಮಿಲಿಯನ್ ಡಾಲರ್ ಗಳಿಸುತ್ತದೆ ಎಂದು ವರದಿ ಹೇಳುತ್ತದೆ. ಅದೇ ಸಮಯದಲ್ಲಿ, ತಾಲಿಬಾನ್ ವಿವಿಧ ಉ ಗ್ರ ಸಂಘಟನೆಗಳಿಂದ 240 ಮಿಲಿಯನ್ ಡಾಲರ್ ದೇಣಿಗೆಯನ್ನು ಪಡೆಯುತ್ತದೆ ಮತ್ತು ತಾಲಿಬಾನ್ ಜನರಿಂದ ಸುಮಾರು 240 ಮಿಲಿಯನ್ ಡಾಲರ್ಗಳನ್ನು ವಿವಿಧ ರೀತಿಯಲ್ಲಿ ಸಂಗ್ರಹಿಸುತ್ತದೆ. ಅದೇ ಸಮಯದಲ್ಲಿ, ತಾಲಿಬಾನ್ ಆ ಕ್ರ ಮಿ ತ ಪ್ರದೇಶಗಳಿಂದ, ತಾಲಿಬಾನ್ ಸುಮಾರು 160 ಮಿಲಿಯನ್ ಡಾಲರ್ ತೆರಿಗೆಯನ್ನು ಸಂಗ್ರಹಿಸುತ್ತದೆ, ಇದರಲ್ಲಿ ರಕ್ಷಣೆಯ ಹಣ ಮತ್ತು ಸು ಲಿಗೆ ಹಣ ಕೂಡ ಒಳಗೊಂಡಿದೆ. ಅದೇ ಸಮಯದಲ್ಲಿ, ತಾಲಿಬಾನ್ ರಿಯಲ್ ಎಸ್ಟೇಟ್ ನಿಂದ 80 ಮಿಲಿಯನ್ ಡಾಲರ್ ಗಳಿಸುತ್ತದೆ.
ಸ್ವಾವಲಂಬಿಯಾಗುವ ಪ್ರಯತ್ನದಲ್ಲಿ ತಾಲಿಬಾನ್
ಗೌಪ್ಯ ನ್ಯಾಟೋ ವರದಿಯು ತಾಲಿಬಾನ್ ನಾಯಕತ್ವವು ಸ್ವತಂತ್ರ ರಾಜಕೀಯ ಮತ್ತು ಸೇನಾ ಘಟಕವಾಗಲು ಸ್ವಾವಲಂಬನೆಯತ್ತ ಸಾಗುತ್ತಿದೆ ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ, ಹಣಕ್ಕಾಗಿ ಬೇರೆ ಯಾವುದೇ ದೇಶ ಅಥವಾ ಸಂಘಟನೆಯನ್ನು ಅವಲಂಬಿಸದಿರಲು ಪ್ರಯತ್ನಿಸುತ್ತಿದೆ. ವರದಿಯ ಪ್ರಕಾರ, ಹಲವು ವರ್ಷಗಳಿಂದ ತಾಲಿಬಾನಿಗಳು ಹಣಕ್ಕಾಗಿ ವಿದೇಶಿ ಸಂಘಟನೆಗಳು ಮತ್ತು ವಿದೇಶಗಳ ಮೇಲೆ, ಅದರಲ್ಲೂ ಪಾಕಿಸ್ತಾನದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನ್ಯಾಟೋ ಗುಪ್ತಚರ ವರದಿಗಳ ಪ್ರಕಾರ, ತಾಲಿಬಾನ್ 2017-18ರಲ್ಲಿ ಅಂದಾಜು 500 ಮಿಲಿಯನ್ ಡಾಲರ್ಗಳನ್ನು ವಿದೇಶಿ ಮೂಲಗಳಿಂದ ಪಡೆದಿದೆ, ಇದು ತಾಲಿಬಾನ್ 2020 ರಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ.
ಅಫ್ಘಾನಿಸ್ತಾನ ಸರ್ಕಾರದ ಮೇಲೆ ಅನುಮಾನ
ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, 2020 ರಲ್ಲಿ ಬಿಡುಗಡೆಯಾದ ಬಜೆಟ್ ಪ್ರಕಾರ, ಅಫ್ಘಾನ್ ಸರ್ಕಾರದ ಅಧಿಕೃತ ಬಜೆಟ್ 5.5 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ 2% ಕ್ಕಿಂತಲೂ ಕಡಿಮೆ ಹಣವನ್ನ ರಕ್ಷಣಾ ಬಜೆಟ್ ಗೆ ನೀಡಲಾಗಿದೆ. ಅಫ್ಘಾನಿಸ್ತಾನದ ಗ ಡಿ ಯಿಂದ ತಾಲಿಬಾನ್ನ್ನ ಹೊರಹಾಕಲು ಅಮೆರಿಕವು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದರೂ, ತಜ್ಞರು ಹೇಳುವಂತೆ ಅಫ್ಘಾನ್ ಸರ್ಕಾರವು ರಕ್ಷಣಾ ಬಜೆಟ್ ಗಾಗಿ ಹಣವನ್ನು ಖರ್ಚು ಮಾಡಿಲ್ಲ. ಇದರಿಂದಾಗಿ ಪರಿಸ್ಥಿತಿ ಇಂದು ಸಂಪೂರ್ಣವಾಗಿ ಬದಲಾಗಿದೆ ಮತ್ತು ಅಫ್ಘಾನ್ ಸರ್ಕಾರ ತಾಲಿಬಾನ್ನ್ನ ತಡೆಯಲು ಸಂಪೂರ್ಣವಾಗಿ ವಿಫಲವಾಗಿದೆ.
ಇದುವರೆಗೆ ಬರೋಬ್ಬರಿ 1 ಟ್ರಿಲಿಯನ್ ಡಾಲರ್ ಖರ್ಚು ಮಾಡಿದ ಅಮೇರಿಕಾ
ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿ ರು ದ್ಧ ಹೋ ರಾ ಡು ವುದು ಸೇರಿದಂತೆ ತರಬೇತಿ ಮತ್ತು ಶ ಸ್ತ್ರಾ ಸ್ತ್ರ ನೀಡುವುದಕ್ಕಾಗಿ ಸುಮಾರು ಒಂದು ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ಅಮೇರಿಕಾ ಹೇಳಿಕೊಂಡಿದೆ. ಆದರೆ, ಅಮೆರಿಕ ಇನ್ನೂ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆದಿಲ್ಲ. ತಾಲಿಬಾನ್ನ ಕಾಬೂಲ್ ಮು ತ್ತಿ ಗೆ ಯು ಅಮೆರಿಕದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವ್ಯವಹಾರದ ದೃಷ್ಟಿಯಿಂದ, ತಾಲಿಬಾನ್ ಸ್ಥಿರವಾದ ಪ್ರಗತಿಯನ್ನು ಸಾಧಿಸಿದೆ ಮತ್ತು ಹಣದ ಮೂಲವನ್ನು ಉಳಿಸಿಕೊಂಡಿದೆ. ಈ ಕಾರಣದಿಂದಾಗಿ, ಇಂದಿನ ತಾಲಿಬಾನ್ ಬಹಳಷ್ಟು ಬದಲಾದಂತೆ ತೋರುತ್ತದೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ತನ್ನ ಸಿದ್ಧಾಂತವನ್ನು ಬದಲಿಸುವ ಮೂಲಕ ಮಾತುಕತೆ ಆರಂಭಿಸಿದೆ. ಏಕೆಂದರೆ ತಾಲಿಬಾನ್ ಅದು ಈಗ ಜಾಗತಿಕ ವೇದಿಕೆಯಲ್ಲಿ ಇರಲು ಬಯಸಿದರೆ, ಅದು ಮಾತುಕತೆ ನಡೆಸಬೇಕು ಮತ್ತು ತನ್ನ ಸಂಘಟನೆಯನ್ನು ಜೀವಂತವಾಗಿಡಲು ಬಯಸಿದರೆ, ಅದು ಹಣದ ವಿವಿಧ ಮೂಲಗಳ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಈಗ ಅದಕ್ಕೆ ತಿಳಿಯಲು ಆರಂಭಿಸಿದೆ.