ಈ ವರ್ಷದ ಜನವರಿ 22ನೇ ತಾರೀಖು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲಾಗಿದೆ, ಏಕೆಂದರೆ ಆ ದಿನದಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಪೂಜೆಯನ್ನು ನೆರವೇರಿಸಿ ರಾಮ ಮಂದಿರವನ್ನು ಉದ್ಘಾಟಿಸಲಾಯಿತು. ಈ ಪವಿತ್ರವಾದ ದಿನದಂದು ಅನೇಕ ಜನ ಭಕ್ತಾದಿಗಳು ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಪೂಜೆಯನ್ನು ಭಕ್ತಿಭಾವದಿಂದ ನೋಡಿ ಕಣ್ತುಂಬಿಕೊಂಡರು.
ಈ ಪ್ರಾಣ ಪ್ರತಿಷ್ಠಾ ಪೂಜೆಗೆ ಇಡೀ ರಾಮ ಮಂದಿರವನ್ನು ಹೂವುಗಳಿಂದ ಮತ್ತು ಅಲಂಕಾರಿಕ ದೀಪಗಳಿಂದ ಅಲಂಕರಿಸಲಾಗಿತ್ತು. ಈ ಪೂಜೆಗೆ ದೇಶದ ಎಲ್ಲಾ ರಾಜ್ಯಗಳ ಚಿತ್ರೋದ್ಯಮದ ನಟ ನಟಿಯರು, ಕ್ರೀಡಾಪಟುಗಳು, ರಾಜಕಾರಿಣಿಗಳು ಮತ್ತು ದೇಶದ ಶ್ರೀಮಂತ ಉದ್ಯಮದಾರರು ಸಹ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಭಾರತದ ಇತಿಹಾಸದಲ್ಲಿಯೇ ಮಹತ್ವದ ದಿನಗಳಲ್ಲಿ ಈ ದಿನ ಸಹ ಒಂದಾಗಿದೆ..
ಒಟ್ಟಿನಲ್ಲಿ ಹೇಳುವುದಾದರೆ ಅನೇಕ ವರ್ಷಗಳಿಂದ ಹೊಸ ರಾಮ ಮಂದಿರದ ನಿರ್ಮಾಣಕ್ಕಾಗಿ ಕಾದು ಕುಳಿತ್ತಿದ್ದ ಜನರ ಕಾತುರತೆಗೆ ಈ ಹೊಸ ರಾಮ ಮಂದಿರ ನಿರ್ಮಾಣದ ಮೂಲಕ ಕಾಯುವಿಕೆಯನ್ನು ಅಂತ್ಯಗೊಳಿಸಿದೆ ಅಂತ ಹೇಳಬಹುದು.
ಈಗ ರಾಮ ಮಂದಿರಕ್ಕೆ ಅನೇಕ ಕಡೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಎಲ್ಲರೂ ಹೊಸದಾಗಿ ನಿರ್ಮಾಣಗೊಂಡ ರಾಮ ಮಂದಿರದ ಅದ್ಭುತತೆಯನ್ನು ನೋಡಿ ಭಕ್ತಿಪರವಶರಾಗುತ್ತಿದ್ದಾರೆ ಅಂತ ಹೇಳಬಹುದು.
ಭಾರತದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಲ್ಲಿ ಈ ದಿನ ಸಹ ಒಂದಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ಆದರೆ ಈ ಪ್ರಾಣ ಪ್ರತಿಷ್ಠಾ ಪೂಜೆಯಲ್ಲಿ ಭಾಗಿಯಾಗಿರುವ ಅನೇಕ ಅರ್ಚಕರಲ್ಲಿ ಒಬ್ಬ ಅರ್ಚಕರು ಬರೀ 22 ವರ್ಷ ವಯಸ್ಸಿನವರಾಗಿದ್ದಾರಂತೆ. ಹೌದು.. ಅರ್ಚಕರಾದ ಮೋಹಿತ್ ಪಾಂಡೆ ಅವರು ಸೋಮವಾರ ಹೊಸದಾಗಿ ನಿರ್ಮಾಣಗೊಂಡ ರಾಮ ಮಂದಿರದ ದೇವಾಲಯದಲ್ಲಿ ಪೂಜೆಯನ್ನು ಮಾಡುವ ಅವಕಾಶವನ್ನು ಪಡೆದರು.
ಯಾರು ಈ 22 ವರ್ಷ ವಯಸ್ಸಿನ ಅರ್ಚಕ ಮೋಹಿತ್ ಪಾಂಡೆ?
ಅರ್ಚಕ ಮೋಹಿತ್ ಪಾಂಡೆ ಅವರು ಗಾಜಿಯಾಬಾದ್ನ ದೂದೇಶ್ವರ ವೇದ ವಿದ್ಯಾಲಯದಿಂದ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ 2020-21 ಶೈಕ್ಷಣಿಕ ವರ್ಷದಲ್ಲಿ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಕೋರ್ಸ್ಗೆ ಸೇರಿಕೊಂಡರು.
ನಂತರ, ಅವರು ತಮ್ಮ ಸ್ನಾತಕೋತ್ತರ (ಆಚಾರ್ಯ) ಪದವಿಗಾಗಿ ತಿರುಪತಿಯ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು ಮತ್ತು ಈಗ ಅವರು ತಮ್ಮ ಪಿಎಚ್ಡಿ ಅಧ್ಯಯನಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.
ಈ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಯ್ಕೆ ಮಾಡಲಾದ 29 ಅರ್ಚಕರಲ್ಲಿ ಮೋಹಿತ್ ಪಾಂಡೆ ಸಹ ಒಬ್ಬರಾಗಿದ್ದರು ಮತ್ತು ಸಂದರ್ಶನಗಳನ್ನು ಒಳಗೊಂಡಂತೆ ಕಠಿಣ ಪ್ರಕ್ರಿಯೆಯ ನಂತರ ದೇಶಾದ್ಯಂತ 3,000 ಅರ್ಚಕ ಅರ್ಜಿದಾರರಿಂದ ಇವರು ಆಯ್ಕೆಯಾದರು. ಅವರ ನೇಮಕಾತಿಗೆ ಮುನ್ನ ಅವರು ಪ್ರಸ್ತುತ ಆರು ತಿಂಗಳ ಕಾಲ ಇಲ್ಲಿ ತರಬೇತಿಯನ್ನು ಸಹ ಪಡೆಯಬೇಕಾಯಿತು.
ತಮ್ಮ ವಿದ್ಯಾರ್ಥಿ ಅರ್ಚಕನಾಗಿ ಆಯ್ಕೆಯಾದದ್ದು ಅವರ ಗುರುವಿಗೆ ಸಂತೋಷ ತಂದಿದೆ..
“ನಮ್ಮ ವಿದ್ಯಾರ್ಥಿಯು ಅಯೋಧ್ಯೆ ರಾಮ ಮಂದಿರದಲ್ಲಿ ಅರ್ಚಕನಾಗಿ ಆಯ್ಕೆಯಾಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ, ನಾವು ಅವರಿಗೆ 10 ವರ್ಷಗಳ ಕಾಲ ತರಬೇತಿ ನೀಡಿದ್ದೇವೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಷ್ಟೊಂದು ಸುಲಭಲ್ಲ. ಆದರೆ ಸಂಸ್ಕೃತ ಮತ್ತು ಉಚ್ಚಾರಣೆಯ ಮೇಲೆ ಅವರ ಹಿಡಿತ ಭಗವಂತನನ್ನು ಪೂಜಿಸುವ ಒಂದು ಅವಕಾಶವನ್ನು ಅವರಿಗೆ ಗಿಟ್ಟಿಸಿಕೊಟ್ಟಿತು.
ಅವರು ಈ ಎಲ್ಲದರಲ್ಲೂ ತರಬೇತಿ ಪಡೆದಿದ್ದಾರೆ ಎಂದು ದೂದೇಶ್ವರ ವೇದ ವಿದ್ಯಾಲಯದ ಮುಖ್ಯ ಪೋಷಕ ಮಹಂತ್ ನಾರಾಯಣ ಗಿರಿ ಅವರು ಹೇಳುತ್ತಾರೆ.