“ಅಯೋಧ್ಯೆಯಲ್ಲಿನ ರಾಮನಿಗೂ ನಮ್ಮೂರಿಗೂ ಏನ್ ಸಂಬಂಧ? ಅಲ್ಲಿನ ರಾಮನನ್ನ ಇಲ್ಯಾಕೆ ಪೂಜೆ ಮಾಡ್ಬೇಕು?”: ರಾಮಮಂದಿರದ ವಿರುದ್ಧ ತಿರುಗಿಬಿದ್ದ ನಟ ಕಿಶೋರ್

in Uncategorized 503 views

ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ನಟ ಕಿಶೋರ್ ಕುಮಾರ್ ಅವರು ವರ್ಣಾಶ್ರಮದ ಬಗ್ಗೆ ತಮ್ಮ ತೀಕ್ಷ್ಣ ಟೀಕೆಯನ್ನು ಮಾಡಿದ್ದಾರೆ. ಮಾರಮ್ಮನ ದೇವಸ್ಥಾನದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಗೆ ಪೂಜೆ ಮಾಡಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು,”ಅಯೋಧ್ಯೆಯ ರಾಮನಿಗೂ ನಮ್ಮೂರ ಕೊಂಪೆಯ ಮಾರಿಗೂ ಎತ್ತಣಿಂದೆತ್ತಣ ನಂಟು? ರಾಮನ ಮಂದಿರದ ಅಕ್ಷತೆ ಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆಯೇ??” ಎಂದು ಪ್ರಶ್ನಿಸಿದ್ದಾರೆ.

Advertisement

“ನಮ್ಮ ಹಳ್ಳಿಯಲ್ಲಿ ನಡೆದ ಈ ಸೋಜಿಗ ಕಾಕತಾಳೀಯವಂತೂ ಅಲ್ಲ. ಇದು ಧರ್ಮದ ವ್ಯವಸ್ಥಿತ ರಾಜಕೀಕರಣದ ಸಾಕ್ಷಿಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಕಿಶೋರ್ ಅವರ ಪೋಸ್ಟ್ ನ ಪೂರ್ಣ ಬರಹ ಇಲ್ಲಿದೆ:

ಮಾರಮ್ಮನ ಜಾತ್ರೆಯೂ ರಾಮ ಮಂದಿರವೂ ಅಯೋಧ್ಯೆಯ ರಾಮನಿಗೂ ನಮ್ಮೂರ ಕೊಂಪೆಯ ಮಾರಿಗೂ ಎತ್ತಣಿಂದೆತ್ತಣ ನಂಟು? ರಾಮನ ಮಂದಿರದ ಅಕ್ಷತೆ ಕಾಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆಯೇ?? ನಮ್ಮ ಹಳ್ಳಿಯಲ್ಲಿ ನಡೆದ ಈ ಸೋಜಿಗ ಕಾಕತಾಳೀಯವಂತೂ ಅಲ್ಲ .. ಇದು ಧರ್ಮದ ವ್ಯವಸ್ಥಿತ ರಾಜಕೀಕರಣದ ಸಾಕ್ಷಿಯೇ?? ಈ ಸಾಕ್ಷಿಯ ದರ್ಶನವು ನಿಜವಾಗಿ ದೈವೇಚ್ಛೆಯೇ ಸರಿ.. ಅಂದು ಮಾರಿಯನ್ನೂ ಮಾರಿಯ ಜಾತ್ರೆಯನ್ನೂ ಬಳಸಿ ನಡೆದ ರಾಜಕೀಯ ಇಂದು ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ನಡೆಯುತ್ತಿದೆಯೇ?

ಬ್ರಾಹ್ಮಣನೆಂದು ಸುಳ್ಳು ಹೇಳಿ ವೇದ ಕಲಿತು, ಬ್ರಾಹ್ಮಣ ಕನ್ನೆಯನ್ನು ಮದುವೆಯಾಗಿ ಮಕ್ಕಳು ಪಡೆದು ಇವರ ವರ್ಣಾಶ್ರಮವನ್ನು ಮೀರಿದ ‘ಘೋರ ಅಪರಾಧ’ಕ್ಕೆ ಮಾರಿ ಕೊಟ್ಟ ಅದೇ ಶಿಕ್ಷೆ ಈಗ ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ಕೊಡುತ್ತಾರೆಯೇ?? . ಶೂದ್ರರೂ ದಲಿತರೂ ಮೇಲೇರುವ ಪ್ರಯತ್ನ ಮಾಡಿದರೆ.. ಇಲ್ಲವೇ ‘ಉತ್ತಮ’ರ ‘ಜಾತಿ ಕೆಡಿಸುವ’ ಪ್ರಯತ್ನ ಮಾಡಿದರೆ, ಮಾರಿಯಂತೆಯೇ ಶೂದ್ರನನ್ನೂ ಅವನ ಮಕ್ಕಳನ್ನೂ ಸುಟ್ಟು ಹಾಕುತ್ತಾರೆಯೇ?? ಮಾರಿಯ ಜಾತ್ರೆಯಲ್ಲಿ ಶೂದ್ರನೇ ತನ್ನದೇ ಸೂಚಕವಾದ ಕೋಣವನ್ನೂ ತನ್ನ ಮಕ್ಕಳ ಸೂಚಕವಾದ ಆಡು ಕುರಿಗಳನ್ನೂ ತಾನು ಮಾಡಿದ ‘ಘೋರ ಪಾಪಕ್ಕೆ’ ತನ್ನ ಕೈಯಲ್ಲೇ ಕಡಿದುಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹಾಗೆ..

ದಲಿತ ಶೂದ್ರರ ಮತ್ತು ದಲಿತ ಶೂದ್ರರ ಮಕ್ಕಳ ತಲೆಯನ್ನೂ ದಲಿತ ಶೂದ್ರರ ಕೈಯಲ್ಲೇ ಕಡಿಸುತ್ತಾರೆಯೇ??

ಶತಶತಮಾನಗಳು ಅದನ್ನೇ ಸಂಭ್ರಮಿಸುತ್ತಾ, ಜಾತ್ರೆ ಮಾಡುತ್ತಾ ಇವರ ಸಮಾಜದಲ್ಲಿ ನಮ್ಮ ಜಾಗವನ್ನು ನಮಗೆ ನೆನಪಿಸುವ ಹಾಗೆ .. ನಮ್ಮ ‘ಪಾಪ’ವನ್ನು ನಾವೇ ಒಪ್ಪಿಕೊಳ್ಳುವ ಹಾಗೆ.. ಅದನ್ನೇ ಸಂಭ್ರಮಿಸುತ್ತಾ , ತಮ್ಮನ್ನು ಒಳಗೆ ಸೇರಿಸಿಕೊಳ್ಳದ ಮಂದಿರದ ಹೆಸರಲ್ಲಿ ದಲಿತರೂ ಶೂದ್ರರೂ ಶತಶತಮಾನಗಳು ಓಟು ಒತ್ತಿ ಇವರನ್ನು ಅಧಿಕಾರಕ್ಕೆ ತರುತ್ತಲೇ ಇರುತ್ತೇವೆಯೇ???

 

View this post on Instagram

 

A post shared by Kishore Kumar Huli (@actorkishore)

Advertisement
Share this on...