“ಆಕೆಯನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ” ಎಂದು ಆಕೆಯ ಜೊತೆಗೇ ಮೂರು ಬಾರಿ ಮದಯವೆಯಾದ ಸ್ಟಾರ್ ನಟ

in FILM NEWS/Kannada News/News/ಸಿನಿಮಾ 460 views

Shah Rukh Khan: ಶಾರುಖ್ ಖಾನ್  1991ರಲ್ಲಿ ಗೌರಿ ಖಾನ್​​ ಅನ್ನು ವರಿಸಿದರು. ಮದುವೆಯಾದ ಒಂದು ವರ್ಷಗಳ ನಂತರ ಶಾರುಖ್ ಖಾನ್​​ಗೆ ಬಾಲಿವುಡ್​ನಿಂದ ಆಫರ್​​ಗಳು ಬಂದವು.

Advertisement

ಇವರದ್ದು ಕಾಲೇಜು ದಿನಗಳಿಂದ ಹುಟ್ಟಿಕೊಂಡ ಪ್ರೀತಿ. ದೆಹಲಿಯಲ್ಲಿ ಇಬ್ಬರು ಓದುವ ಸಮಯದಲ್ಲಿ ಗೌರಿ ಖಾನ್ ಮತ್ತು ಶಾರುಖ್ ಖಾನ್ ನಡುವೆ ಪ್ರೀತಿ ಚಿಗುರೊಡೆಯುತ್ತದೆ. 6 ವರ್ಷಗಳ ಕಾಲ ಈ ಪ್ರೀತಿ ಹಾಗೆಯೇ ಸಾಗುತ್ತದೆ.

ಎಲ್ಲರಿಗೂ ಶಾರುಖ್ ಖಾನ್ ಮತ್ತು ಗೌರಿ ಖಾನ್ ಪ್ರೀತಿಸಿ ಮದುವೆಯಾಗಿದ್ದಾರೆ ಎಂಬುದು ಗೊತ್ತಿದೆ. ಆದರೆ ಎಷ್ಟು ಬಾರಿ ಮದುವೆಯಾಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಇವರಿಬ್ಬರ ಪ್ರೇಮ ಕಥೆ ಆಸಕ್ತಿದಾಯಕವಾಗಿದೆ.

ಶಾರುಖ್ ಖಾನ್  1991ರಲ್ಲಿ ಗೌರಿ ಖಾನ್​​ ಅನ್ನು ವರಿಸಿದರು. ಮದುವೆಯಾದ ಒಂದು ವರ್ಷಗಳ ನಂತರ ಶಾರುಖ್ ಖಾನ್​​ಗೆ ಬಾಲಿವುಡ್​ನಿಂದ ಆಫರ್​​ಗಳು ಬಂದವು.

ಆದರೆ ಈ ಜೋಡಿ ಮೂರು ಬಾರಿ ಮದುವೆಯಾಗಿದ್ದರು ಎಂದರೆ ನಂಬುತ್ತೀರಾ? ಹೌದು. ಮೊದಲು ಶಾರುಖ್ ಖಾನ್​ ಮತ್ತು ಗೌರಿ ಖಾನ್ ರಿಜಿಸ್ಟರ್ ಮದುವೆಯಾಗುತ್ತಾರೆ. ಎರಡನೆ ಬಾರಿ ಮುಸ್ಲಿಂ ಪದ್ಧತಿ ಪ್ರಕಾರ ಮದುವೆಯಾಗುತ್ತಾರೆ. ಮೂರನೇ ಬಾರಿ ಪಂಜಾಬಿ ಶೈಲಿಯಲ್ಲಿ ಮದುವೆಯಾಗುತ್ತಾರೆ.

ಶಾರುಖ್, ಗೌರಿ ಅವರನ್ನು ಮೊದಲು ಭೇಟಿ ಮಾಡಿದ್ದು ದೆಹಲಿ ಕ್ಲಬ್​ವೊಂದರಲ್ಲಿ. ಇಬ್ಬರು ಒಟ್ಟಿಗೆ ಕೂತು ಜ್ಯೂಸ್ ಕುಡಿದಿದ್ದರಂತೆ. ಅದಾಗಿ ಮೂರು ದಿನಗಳ ನಂತರ ಗೌರಿ ಬಳಿ ಫೋನ್ ನಂಬರ್ ತೆಗೆದುಕೊಳ್ಳುತ್ತಾರೆ. ಅಲ್ಲಿಂದ ಇವರಿಬ್ಬರ ಪ್ರೀತಿ ಗಟ್ಟಿಯಾಗುತ್ತಾ ಹೋಗುತ್ತದೆ.

ಇವರಿಬ್ಬರ ಪ್ರೀತಿಗೆ ಮನೆಯವರ ಸಮ್ಮತಿ ಇರಲಿಲ್ಲ. ಆನಂತರ ಎರಡು ಕುಟುಂಬಗಳು ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿತು. ಸದ್ಯ ಈ ಜೋಡಿ 29 ವರ್ಷಗಳನ್ನು ಒಟ್ಟಾಗಿ ಕಳೆದಿದೆ. ಮುಂದಿನ ವರ್ಷ 30ನೇ ವೆಡ್ಡಿಂಗ್ ಆ್ಯನಿವರ್ಸರಿ ಮಾಡಿಕೊಳ್ಳಲಿದ್ದಾರೆ ಈ ಜೋಡಿ.

Advertisement
Share this on...