ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಾರಾ ನಟ ಸೋನು‌ ಸೂದ್? ಅರವಿಂದ್ ಕೇಜ್ರಿವಾಲ್ ಭೇಟಿಯಾಗಿ ಹೇಳಿದ್ದೇನು ನೋಡಿ

in Kannada News/News 85 views

ನವದೆಹಲಿ :

Advertisement
ನಟ ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವನ್ನು ಇಂದು(ಶುಕ್ರವಾರ, ಆಗಸ್ಟ್ 27) ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ನಟ ಸೋನು ಸೂದ್ ಇಬ್ಬರೂ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ದೆಹಲಿ ಸರ್ಕಾರದ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ರಾಯಭಾರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ದೆಹಲಿ ಸರ್ಕಾರದಿಂದ ಅತೀ ಶೀಘ್ರದಲ್ಲಿ ಕಾರ್ಯ ರೂಪಕ್ಕೆ ಬರುವ ‘ದೇಶ್ ಕೆ ಮೆಂಟರ್ಸ್’ ಗೆ ಸೋನು ಜಿ ರಾಯಭಾರಿಯಾಗಿ ಸರ್ಕಾರದೊಂದಿಗೆ ಇರುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೋನು, ದೇಶದ ಭವಿಷ್ಯ ಎಂದೇ ಹೇಳಬಹುದಾದ ಸಹಸ್ರ ಸಹಸ್ರ ವಿದ್ಯಾರ್ಥಿಗಳ ಬಳಗಕ್ಕೆ ಈ ಕಾರ್ಯಕ್ರಮದ ಮೂಲಕ ದೆಹಲಿ ಸರ್ಕಾರ ಸಲಹೆ ಸೂಚನೆಗಳನ್ನು ನೀಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದಕ್ಕಿಂತ ದೊಡ್ಡ ಅವಕಾಶ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇನ್ನು, ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ನಾನು ಸಂಕಷ್ಟದಲ್ಲಿರುವ ಹಲವಾರು ವಲಸೆ ಕಾರ್ಮಿಕರನ್ನು ಸಂಪರ್ಕ ಮಾಡುವುದಕ್ಕೆ ಪ್ರಯತ್ನ ಪಟ್ಟೆ. ಆಗ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ತಿಳಿಯಿತು. ಅದೆಷ್ಟೋ ವಲಸೆ ಕಾರ್ಮಿಕರ ಮಕ್ಕಳಲ್ಲಿ ಇದೊಂದು ದೊಡ್ಡ ಸಮಸ್ಯೆ. ಅಲ್ಪ ಪ್ರಮಾಣದಲ್ಲಿ ಆ ವರ್ಗದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಅಷ್ಟೇ. ಆದರೇ, ಸರಿಯಾದ ಮಾರ್ಗದರ್ಶನ ಆ ಮಕ್ಕಳಿಗೆ ಇಲ್ಲ. ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಒಂದು ಉತ್ತಮ ಯೋಜನೆಯನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ನಾನು ಭಾಗಿದಾರನಾಗಿರಲಿದ್ದೇನೆ ಎನ್ನುವುದಕ್ಕೆ ಸಂತೋಷ ಇದೆ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುವಿರೇ..? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋನು, ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನೀವು ರಾಜಕೀಯಕ್ಕೆ ಬರಬೇಕು ಎಂದು ಜನರು ಯಾವಾಗಲೂ ಹೇಳುತ್ತಾರೆ. ಆದರೇ, ಒಳ್ಳೆಯ ಕೆಲಸ ಮಾಡುವುದಕ್ಕೆ ರಾಜಕೀಯ ಬೇಕೆಂದಿಲ್ಲ. ನನಗೇ ಈಗಾಗಲೇ ರಾಜಕೀಯಕ್ಕೆ ಅನೇಕ ರಾಜಕೀಯ ಪಕ್ಷಗಳು ಆಹ್ವಾನಿಸಿದ್ದವು. ಆದರೇ, ನಾನು ಈವರೆಗೆ ಆ ಬಗ್ಗೆ ಯೋಚನೆ ಮಾಡಿಲ್ಲ. ಕೇಜ್ರಿವಾಲ್ ಜಿ ಅವರೊಂದಿಗೂ ನಾನು ಈವರೆಗೆ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Advertisement
Share this on...