ನವದೆಹಲಿ: ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿವಿಧ ಚರ್ಚೆಗಳಲ್ಲಿ ಪಠಾಣ್ ಚಿತ್ರದ ಬಾಯ್ಕಾಟ್ ಚರ್ಚೆ ನಡೆಯುತ್ತಿದ್ದರೆ ಮತತೊಂದೆಡೆ ಶಾರುಖ್ ಖಾನ್ ತಮ್ಮ ಮುಂಬರುವ ಚಿತ್ರ ‘ಪಠಾಣ್’ ಟ್ರೇಲರ್ ಬಿಡುಗಡೆಯಾದ ನಂತರ ಅದನ್ನು ಬಾಯ್ಕಾಟ್ ಗ್ಯಾಂಗ್ ನಿಂದ ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಶಾರುಖ್ ಖಾನ್ ಅವರ ಪಠಾಣ್ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ದಕ್ಷಿಣದ ಎಲ್ಲಾ ಸೂಪರ್ಸ್ಟಾರ್ಗಳು ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ರೀಟ್ವೀಟ್ ಮಾಡಿದ್ದಾರೆ. ‘ಪಠಾಣ್’ ಚಿತ್ರದ ಟ್ರೈಲರ್ ಅನ್ನು ರಿಟ್ವೀಟ್ ಮಾಡಿದ ಎಲ್ಲಾ ನಟರಿಗೆ ಶಾರುಖ್ ಖಾನ್ ಕೂಡ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಈ ಅನುಕ್ರಮದಲ್ಲಿ, ಶಾರುಖ್ ಖಾನ್ ‘RRR’ ಚಿತ್ರದ ನಟ ರಾಮ್ ಚರಣ್ ಅವರಿಗೆ RRR ಚಿತ್ರ ಆಸ್ಕರ್ ಗೆದ್ದರೆ, ದಯವಿಟ್ಟು ಒಂದು ಬಾರಿ ಅದನ್ನ ಮುಟ್ಟೋಕೆ ಅವಕಾಶ ನೀಡಿ ಎಂದು ಹೇಳಿದ್ದಾರೆ.
Thank u so much my Mega Power Star @alwaysramcharan. When ur RRR team brings Oscar to India, please let me touch it!!
(Mee RRR team Oscar ni intiki tecchinappudu okkasaari nannu daanini touch cheyyanivvandi! )
Love you.— Shah Rukh Khan (@iamsrk) January 10, 2023
ದಕ್ಷಿಣದ ಸೂಪರ್ಸ್ಟಾರ್ ರಾಮ್ ಚರಣ್ ಪಠಾಣ್ ಚಿತ್ರದ ಟ್ರೈಲರ್ ಅನ್ನು ರೀಟ್ವೀಟ್ ಮಾಡುತ್ತ ಪಠಾಣ್ ಚಿತ್ರದ ಇಡೀ ತಂಡಕ್ಕೆ ಶುಭಾಶಯಗಳು, ಎಲ್ಲರಿಗೂ ಶುಭವಾಗಲಿ ಎಂದು ಬರೆದಿದ್ದಾರೆ. ಈ ಕುರಿತು, ಶಾರುಖ್ ಖಾನ್ ತಮ್ಮ ಟ್ವೀಟ್ನಲ್ಲಿ ರಾಮ್ ಚರಣ್ ಅವರನ್ನು ಟ್ಯಾಗ್ ಮಾಡಿ ಹೀಗೆ ಬರೆದಿದ್ದಾರೆ – ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ತುಂಬಾ ಧನ್ಯವಾದಗಳು. ನಿಮ್ಮ RRR ತಂಡವು ಭಾರತಕ್ಕೆ ಆಸ್ಕರ್ ಅನ್ನು ತಂದಾಗ, ದಯವಿಟ್ಟು ಅದನ್ನು ಸ್ಪರ್ಶಿಸಲು ನನಗೆ ಅವಕಾಶ ನೀಡಿ ಎಂದಿದ್ದಾರೆ.
Wishing the whole team of #Pathaan all the very best!@iamsrk Sir looking fwd to seeing you in action sequences like never before! #PathaanTrailerhttps://t.co/63G1CC4R20 @deepikapadukone | @TheJohnAbraham | #SiddharthAnand | @yrf pic.twitter.com/MTQBfYUfjg
— Ram Charan (@AlwaysRamCharan) January 10, 2023
ಆಸ್ಕರ್ ಗೆದ್ದು ಭಾರತಕ್ಕೆ ತರಲಿದೆಯೇ RRR?
ಗಮನಾರ್ಹವೆಂದರೆ ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆಗಿದ್ದು, ಈ ವರ್ಷದ ಆಸ್ಕರ್ನಲ್ಲಿ ಅತ್ಯುತ್ತಮ ಹಾಡು ವಿಭಾಗದಲ್ಲಿ 14 ಇತರ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ ಎಂದು ವರದಿಯಾಗಿದೆ. ಭಾರತೀಯ ಚಿತ್ರೋದ್ಯಮ ಮಾತ್ರವಲ್ಲದೆ ದೇಶದ ಕೋಟ್ಯಂತರ ಜನ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಮ್ ಚರಣ್ ಹೊರತುಪಡಿಸಿ, ಸೂಪರ್ಸ್ಟಾರ್ ವಿಜಯ್ ಕೂಡ ಶಾರುಖ್ ಖಾನ್ ಅವರ ಪಠಾಣ್ ಚಿತ್ರದ ಟ್ರೈಲರ್ ಅನ್ನು ರಿಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ಶಾರುಖ್ ಖಾನ್ ಹೀಗೆ ಬರೆದಿದ್ದಾರೆ – ಧನ್ಯವಾದಗಳು ನನ್ನ ಸ್ನೇಹಿತ ವಿಜಯ್. ಈ ಆಕರ್ಷಕ ಶೈಲಿಯಿಂದಾಗಿ ನೀವು ದಳಪತಿಯಾಗಿದ್ದೀರಿ. ಶೀಘ್ರದಲ್ಲೇ ರುಚಿಕರವಾದ ಭೋಜನದಲ್ಲಿ ಒಟ್ಟಿಗೆ ಕುಳಿತುಕೊಳ್ಳೋಣ ಎಂದಿದ್ದಾರೆ.
ಬರೀ RRR ಮಾತ್ರವಲ್ಲ ಕಾಂತಾರ, ವಿಕ್ರಾಂತ ರೋಣ ಕೂಡ ಆಸ್ಕರ್ ರೇಸ್ ನಲ್ಲಿ
ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿದೆ. ಸಬ್ಮಿಟ್ ಆದ 1000 ಕ್ಕೂ ಹೆಚ್ಚು ಸಿನಿಮಾಗಳಲ್ಲಿ 301 ಚಿತ್ರಗಳು qualified ಆಗಿವೆ. ಅದರಲ್ಲಿ ಭಾರತದ ಅದರಲ್ಲೂ ಕರ್ನಾಟಕದ ಎರಡು ಸಿನಿಮಾಗಳು ಶಾರ್ಟ್ ಲಿಸ್ಟ್ ಆಗಿವೆ.
ಶಾರ್ಟ್ ಲಿಸ್ಟ್ ಆದ 301 ಚಿತ್ರದಲ್ಲಿ ಕಿಚ್ಚನ ವಿಕ್ರಾಂತ್ ರೋಣ!
ಹೌದು, ಈ ಒಂದು ಲಿಸ್ಟ್ನಲ್ಲಿ ಕಾಂತಾರ ಚಿತ್ರ ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡ ಇದೆ. ಅಲ್ಲಿಗೆ ಈ ಚಿತ್ರವೂ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿರೋದು ವಿಶೇಷವೇ ಸರಿ.
ಭಾರತೀಯ ಚಿತ್ರಗಳಿಗೆ ಅಷ್ಟು ಬೇಗ ಆಸ್ಕರ್ ಸಿಗುತ್ತಾ?
ಈ ಒಂದು ಪ್ರಶ್ನೆ ಇದ್ದೇ ಇದೆ. ಆಸ್ಕರ್ ಅನ್ನೋದು ಅತಿ ದೊಡ್ಡ ಪ್ರಶಸ್ತಿನೇ ಆಗಿದೆ. ಈ ಪ್ರಶಸ್ತಿ ಸಿಗೋದು ಅಷ್ಟು ಸುಲಭ ಅಲ್ವೇ ಅಲ್ಲ. ಹಾಗಿರೋವಾಗ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗೋದೇ ಒಂದು ದೊಡ್ಡ ವಿಷಯವೇ ಆಗಿದೆ.
ಆಸ್ಕರ್ ಪ್ರಶಸ್ತಿಗೆ ಪ್ರಯತ್ನಿಸಿದ್ದ ಕನ್ನಡದ ರಂಗಿತರಂಗ!
ಈ ಹಿನ್ನೆಲೆಯಲ್ಲಿ ಕನ್ನಡದ ರಂಗಿತರಂಗ ಕೂಡ ಶಾರ್ಟ್ ಲಿಸ್ಟ್ ಆಗಿತ್ತು. 2015 ರಲ್ಲಿ ತೆರೆ ಕಂಡಿದ್ದ ರಂಗಿತರಂಗ ಚಿತ್ರ, 2016 ರಲ್ಲಿ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿತ್ತು.
ನಿಜ, ಈ ವಿಷಯವನ್ನ ನಾವು ಹೇಳ್ತಿಲ್ಲ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ಗೆ ಮಾತನಾಡಿದ ಅನೂಪ್ ಭಂಡಾರಿ, ತಮ್ಮ ಚಿತ್ರ ರಂಗಿತರಂಗ ಚಿತ್ರವೂ 2016 ರಲ್ಲಿ ಶಾರ್ಟ್ ಲಿಸ್ಟ್ ಆಗಿತ್ತು. ಅದೇ ರೀತಿ ಈ ವರ್ಷ ವಿಕ್ರಾಂತ್ ರೋಣ ಚಿತ್ರವೂ ಶಾರ್ಟ್ ಲಿಸ್ಟ್ ಆಗಿದೆ.
ಒಂದು ಪ್ರಶಸ್ತಿ ಹಲವು ಕ್ಯಾಟಗರಿ-ಸಾವಿರಕ್ಕೂ ಹೆಚ್ಚು ಸಿನಿಮಾಗಳು!
ಆಸ್ಕರ್ ಪ್ರಶಸ್ತಿ ಪ್ರಕ್ರಿಯೆ ವಿಶೇಷವಾಗಿಯೇ ಇದೆ. ಇದು ಆನ್ಲೈನ್ನಲ್ಲಿಯೇ ನಡೆಯುತ್ತದೆ. ಈ ಒಂದು ಪ್ರಶಸ್ತಿಗೆ ಪ್ರಯತ್ನ ಮಾಡಿರೋ ನಿರ್ದೇಶಕ ಅನೂಪ್ ಭಂಡಾರಿ ಹೀಗೆ ಹೇಳ್ತಾರೆ. ಅದು ಇಲ್ಲಿದೆ ಓದಿ.
ಆಸ್ಕರ್ ಪ್ರಶಸ್ತಿಗೆ ನಾವು ನಮ್ಮ ಸಿನಿಮಾದ ಎಲ್ಲ ಡಿಟೈಲ್ಸ್ ಕಳಿಸುತ್ತೇವೆ. ಸಿನಿಮಾ ರಿಲೀಸ್ ಆಗಿರೋ ಡಿಟೈಲ್ಸ್ ಅನ್ನೂ ಕಳಿಸುತ್ತೇವೆ. ನಮ್ಮ ಹಾಗೇನೆ ಇತರ ಕಡೆಯಿಂದಲೂ ಸಿನಿಮಾ ಬಂದಿರುತ್ತವೆ. 1000 ಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ಬಂದಿರುತ್ತವೆ.
ಹಾಗೆ 2016 ರಲ್ಲಿ ನಮ್ಮ ರಂಗಿತರಂಗ ಚಿತ್ರವನ್ನೂ ಕಳಿಸಿದ್ದೇವು. ಆಗ ನಮ್ಮ ಚಿತ್ರವೂ 301 ಚಿತ್ರಗಳಲ್ಲಿ ಆಗ ಶಾರ್ಟ್ ಲಿಸ್ಟ್ ಆಗಿತ್ತು. ಅದೇ ರೀತಿ ಈ ಸಲವೂ ಕಳಿಸಿದ್ದೇವು. ಅದೇ ರೀತಿ ಈ ವರ್ಷ ವಿಕ್ರಾಂತ್ ರೋಣ ಚಿತ್ರ 301 ಚಿತ್ರಗಳ ಶಾರ್ಟ್ ಲಿಸ್ಟ್ ನಲ್ಲಿ ಬಂದಿದೆ ಅನ್ನೋದೇ ಖುಷಿ ಅಂತಲೇ ಹೇಳಿಕೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿಗೆ ಉಳಿಯೋದು ಐದು ಸಿನಿಮಾ ಮಾತ್ರ!
ಆಸ್ಕರ್ ಪ್ರಶಸ್ತಿ ಪ್ರಕ್ರಿಯೆ ತುಂಬಾ ಗೌಪ್ಯವಾಗಿಯೇ ನಡೆಯುತ್ತದೆ. ಭಾರತದಲ್ಲಿಯೇ ಕುಳಿತು ಏನೋ ಮಾಡ್ತೀನಿ ಅಂದ್ರೆ ಏನೂ ಆಗೋದಿಲ್ಲ. ಯಾರ ಮಾತು ನಡೆಯೋದಿಲ್ಲ. ಹಾಗಾಗಿಯೇ ವಿವಿಧ ಕಡೆಯಿಂದ ಬರೋ ಸಿನಿಮಾಗಳು ಇಲ್ಲಿ ಕಡೆವರೆಗೂ ಶಾರ್ಟ್ ಲಿಸ್ಟ್ ಆಗ್ತಾನೇ ಇರುತ್ತವೆ.
ಅದೇ ರೀತಿ 301 ಸಿನಿಮಾಗಳಲ್ಲಿ ಮತ್ತೆ ಶಾರ್ಟ್ ಲಿಸ್ಟ್ ಆಗುತ್ತವೆ. ಇದಾದ್ಮೇಲೆ ಮತ್ತೆ ಮತ್ತೆ ಶಾರ್ಟ್ ಲಿಸ್ಟ್ ಆಗುತ್ತವೆ. ಅಲ್ಲಿಗೆ ಕೊನೆಯಲ್ಲಿ ಉಳಿಯೋದು ಕೇವಲ ಐದು ಸಿನಿಮಾ ಅಂತಲೇ ಅನೂಪ್ ಭಂಡಾರಿ ಹೇಳುತ್ತಾರೆ.