ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ನಂತರ ಇದೀಗ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಪ್ತ ಸ್ವಾಮಿ ಪ್ರಸಾದ್ ಮೌರ್ಯ ಕೂಡ ರಾಮಚರಿತಮಾನಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹಿಂದೂಗಳ ಪವಿತ್ರ ಗ್ರಂಥ ರಾಮಚರಿತಮಾನಸ್ ಪುಸ್ತಕವನ್ನು ಅಸಂಬದ್ಧ ಪುಸ್ತಕ ಎಂದು ಕರೆದು ನಿಷೇಧಿಸುವಂತೆ ಒತ್ತಾಯಿಸಿದ್ದಾನೆ. ಸ್ವಾಮಿ ಪ್ರಸಾದ ಮೌರ್ಯ ರಾಮಚರಿತ ಮಾನಸ್ ಅನ್ನು ತುಳಸಿದಾಸರು ತಮ್ಮ ಸಂತೋಷಕ್ಕಾಗಿ ಬರೆದ ಪುಸ್ತಕ ಎಂದು ಹೇಳಿದ್ದಾನೆ. ಸ್ವಾಮಿ ಪ್ರಸಾದ್ ಭಾನುವಾರ (ಜನವರಿ 22, 2023) ಈ ಹೇಳಿಕೆ ನೀಡಿದ್ದಾನೆ.
ಮಾಧ್ಯಮ ವರದಿಗಳ ಪ್ರಕಾರ, ಸ್ವಾಮಿ ಪ್ರಸಾದ್ ಮೌರ್ಯ ಮಾತನಾಡುತ್ತ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಆದರೆ ಜಾತಿಯ ಹೆಸರಿನಲ್ಲಿ ನಿರ್ದಿಷ್ಟ ವರ್ಗವನ್ನು ಅವಮಾನಿಸುವವರನ್ನು ಆಕ್ಷೇಪಿಸುತ್ತೇನೆ ಎಂದು ಹೇಳಿದ್ದಾನೆ. ರಾಮಚರಿತಮಾನಸ್ ಹೆಸರನ್ನು ನೇರವಾಗಿ ತೆಗೆದುಕೊಂಡ ಮೌರ್ಯ, ಈಗ ಕೋಟಿಗಟ್ಟಲೆ ಜನರು ಈ ಪುಸ್ತಕವನ್ನು ಓದುವುದಿಲ್ಲ ಮತ್ತು ಇದೆಲ್ಲವೂ ಕಸ ಎಂದು ಹೇಳಿದನು. ಇದು ಆಕ್ಷೇಪಾರ್ಹ ಎಂದು ಹೇಳಿದ ಸ್ವಾಮಿ ಪ್ರಸಾದ್ ಮೌರ್ಯ, ರಾಮಚರಿತಮಾನಸದ ಕೆಲವು ಭಾಗವನ್ನು ತೆಗೆದುಹಾಕುವಂತೆ ಸರ್ಕಾರವನ್ನು ಒತ್ತಾಯಿಸಿದ. ಆ ಭಾಗಗಳನ್ನು ತೆಗೆಯಲು ಸಾಧ್ಯವಾಗದಿದ್ದರೆ ಇಡೀ ಪುಸ್ತಕವನ್ನೇ ಬ್ಯಾನ್ ಮಾಡಬೇಕು ಎಂದೂ ಹೇಳಿದ್ದಾನೆ.
ಇಷ್ಟಕ್ಕೇ ನಿಲ್ಲದ ಲ ಸ್ವಾಮಿ ಪ್ರಸಾದ್ ರಾಮಾಯಣದ ವಿರುದ್ಧ ವಾಗ್ದಾಳಿಯನ್ನ ಮುಂದುವರೆಸುತ್ತ, ರಾಮಚರಿತಮಾನಸವನ್ನು ಧಾರ್ಮಿಕ ಗ್ರಂಥವೆಂದು ಪರಿಗಣಿಸುವುದಿಲ್ಲ ಏಕೆಂದರೆ ತುಳಸೀದಾಸರು ತನ್ನ ಖುಷಿಗಾಗಿ ಈ ಪುಸ್ತಕವನ್ನು ಬರೆದಿದ್ದಾರೆ ಎಂದು ಹೇಳಿದನು. ರಾಮಚರಿತಮಾನಸದಲ್ಲಿ ಕೆಲವು ಶ್ಲೋಕಗಳಿದ್ದು ಅದರಲ್ಲಿ ಶೂದ್ರರಿಗೆ ಕೀಳು ಎಂಬ ಪ್ರಮಾಣಪತ್ರ ನೀಡಲಾಗಿದೆ ಎಂದು ಸ್ವಾಮಿ ಪ್ರಸಾದ್ ಆರೋಪಿಸಿದ್ದಾನೆ. ಕೆಲ ಚೌಪಾಯಿಗಳನ್ನ ಒಂದು ವರ್ಗಕ್ಕೆ ನಿಂದನೆ ಎಂದು ಮೌರ್ಯ ಹೇಳಿದ್ದಾನೆ. ರಾಮಚರಿತಮಾನಸದ ಪ್ರಕಾರ ಬ್ರಾಹ್ಮಣ ಎಷ್ಟೇ ತಪ್ಪು ಮಾಡಿದರೂ ಅದು ಸರಿ, ಶೂದ್ರರು ಎಷ್ಟೇ ಸರಿ ಮಾಡಿದರೂ ಅದು ತಪ್ಪು ಎಂದು ಹೇಳಿದನು. ಮೌರ್ಯನ ಪ್ರಕಾರ, ಅದನ್ನು ಧರ್ಮ ಎಂದು ಕರೆದರೆ, ಅಂತಹ ಧರ್ಮವನ್ನು ನಿರ್ಮೂಲನೆ ಮಾಡಲೇಬೇಕು ಮತ್ತು ಅಂತಹ ಧರ್ಮವನ್ನು ನಾನು ದೂರದಿಂದ ನಮಸ್ಕರಿಸುತ್ತೇನೆ ಎಂದಿದ್ದಾನೆ.
ತನ್ನ ಹೇಳಿಕೆಯಲ್ಲಿ, ಎಸ್ಪಿ ನಾಯಕ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರ ಶಾಸ್ತ್ರಿ ಅವರ ಬಗ್ಗೆಯೂ ನಕಾರಾತ್ಮಕ ಟೀಕೆಗಳನ್ನು ಮಾಡಿದ್ದಾನೆ. ಸ್ವಾಮಿ ಪ್ರಸಾದ್ ಮೌರ್ಯ ಪ್ರಕಾರ, ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಸನಾತನ ಧರ್ಮವನ್ನು ಪ್ರಚಾರ ಮಾಡುತ್ತಿಲ್ಲ ಬದಲಾಗಿ ಅದನ್ನು ಸಮಾಧಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಧೀರೇಂದ್ರ ಶಾಸ್ತ್ರಿಯವರ ಕಾರ್ಯಗಳನ್ನು ಬೂಟಾಟಿಕೆ ಮತ್ತು ವಂಚನೆ ಎಂದು ಕರೆದ ಸ್ವಾಮಿ ಪ್ರಸಾದ್ ಮೌರ್ಯ ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ಮೂಢನಂಬಿಕೆಯನ್ನು ಹರಡಿದ ಆರೋಪದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದನು. ಏತನ್ಮಧ್ಯೆ, 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಹೇಳಿಕೆಯನ್ನು ಮೌರ್ಯ ‘ಮುಂಗೇರಿ ಲಾಲ್ ಕಾ ಸಪ್ನಾ’ ಎಂದು ಲೇವಡಿ ಮಾಡಿದ್ದಾನೆ.
ಕೆಲ ದಿನಗಳ ಹಿಂದೆ ಬಿಹಾರದ ಶಿಕ್ಷಣ ಸಚಿವನೂ ರಾಮಚರುತಮಾನಸ್ ಬಗ್ಗೆ ವಿಷ ಕಕ್ಕಿದ್ದ
ರಾಮಾಯಣ, ರಾಮಚರಿತಮಾನಸ ದ್ವೇಷ ಹರಡುವ ಪುಸ್ತಕ ಎಂದು ಹೇಳಿರುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಇದನ್ನು ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣದ ಭಾಗ ಎಂದು ಕರೆದಿತ್ತು. ಮತ್ತೊಂದೆಡೆ, ಅಯೋಧ್ಯೆಯ ಮಹಂತ್ ಜಗದ್ಗುರು ಪರಮಹಂಸ ಆಚಾರ್ಯ ರವರು ಚಂದ್ರಶೇಖರನ ನಾಲಿಗೆ ಕತ್ತರಿಸಿ ತಂದ ವ್ಯಕ್ತಿಗೆ 10 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದರು.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನವಾಲಾ ಅವರು ವಿಡಿಯೋವನ್ನು ಟ್ವೀಟ್ ಮಾಡಿ “ಬಿಹಾರದ ಶಿಕ್ಷಣ ಸಚಿವರು ರಾಮಚರಿತಮಾನಸವು ದ್ವೇಷವನ್ನು ಹರಡುವ ಪುಸ್ತಕ ಎಂದು ಹೇಳುತ್ತಾರೆ. ಕೆಲ ದಿನಗಳ ಹಿಂದೆ ಜಗದಾನಂದ್ ಸಿಂಗ್ ರಾಮ ಜನ್ಮಭೂಮಿಯನ್ನು ‘ದ್ವೇಷದ ನಾಡು’ ಎಂದು ಕರೆದಿದ್ದರು. ಇದು ಕಾಕತಾಳೀಯವಲ್ಲ, ಇದು ವೋಟ್ ಬ್ಯಾಂಕ್ ಉದ್ಯಮವಾಗಿದೆ. ಮತ ಪಡೆಯಲು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದರು. SIMI ಮತ್ತು PFI ಪರ ವಹಿಸಿ ಮಾತನಾಡಿದರು. ಹಿಂದೂ ನಂಬಿಕೆಗೆ ಧಕ್ಕೆ ತರುವ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ?” ಎಂದಿದ್ದರು.
बिहार के शिक्षा मंत्री “ रामचरितमानस नफ़रत फ़ैलाने वाला ग्रन्थ है”
कुछ दिन पहले जगदानंद सिंह ने राम जन्मभूमि को “नफ़रत की ज़मीन” बताया
यह संयोग नहीं यह वोट बैंक का उद्योग है
हिंदू आस्था पर करो चोट ताकि मिले वोटSIMI और PFI की पैरवी,हिंदू आस्था पर चोट
क्या कार्यवाही होगी? https://t.co/NiUrJ0Yugt pic.twitter.com/S20ODPca8l
— Shehzad Jai Hind (@Shehzad_Ind) January 11, 2023
ಪೂನಾವಾಲಾ ತಮ್ಮ ಟ್ವೀಟ್ ನಲ್ಲಿ, “ಇದು ಕಾಕತಾಳೀಯವಲ್ಲ, ವೋಟ್ ಬ್ಯಾಂಕ್ ರಾಜಕಾರಣ ಅತ್ಯಂತ ಅಸಹ್ಯಕರ ಉದ್ಯಮವಾಗಿದೆ. ಕೆಲವು ದಿನಗಳ ಹಿಂದೆ, ಆರ್ಜೆಡಿಯ ಬಿಹಾರ ಅಧ್ಯಕ್ಷರು ರಾಮ ಜನ್ಮಭೂಮಿಯನ್ನು ದ್ವೇಷದ ಭೂಮಿ ಎಂದು ಕರೆದಿದ್ದರು. ಭಗವಾನ್ ಶ್ರೀರಾಮನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈಗ ಬಿಹಾರದ ಶಿಕ್ಷಣ ಸಚಿವ ಮತ್ತು ಆರ್ಜೆಡಿ ನಾಯಕ ರಾಮಚರಿತಮಾನಸವು ದ್ವೇಷದ ಪುಸ್ತಕ ಎಂದು ಹೇಳುತ್ತಾರೆ. ಸಿಮಿ ಮತ್ತು ಪಿಎಫ್ಐನಲ್ಲಿ ಯಾವುದೇ ಭಯೋತ್ಪಾದಕರನ್ನು ಬೆಂಬಲಿಸಿದ್ದು ಇದೇ ಆರ್ಜೆಡಿ. ಇದೇ ಇಕೋ ಸಿಸ್ಟಮ್ ಹಿಂದೂ ನಂಬಿಕೆಯ ಮೇಲೆ ಪದೇ ಪದೇ ದಾಳಿ ಮಾಡುತ್ತದೆ. ಆರ್ಜೆಡಿ ನಾಯಕರು ಪದೇ ಪದೇ ಹಿಂದೂಗಳನ್ನು ಅವಮಾನಿಸುತ್ತಾರೆ. ಇತ್ತೀಚಿನ ಹೇಳಿಕೆಗೆ ಆರ್ಜೆಡಿ ನಾಯಕ ಕ್ಷಮೆಯಾಚಿಸುತ್ತಾರಾ?” ಎಂದಿದ್ದರು.
ಮತ್ತೊಂದೆಡೆ, ಚಂದ್ರಶೇಖರ್ ಹೇಳಿಕೆಗೆ ಅಯೋಧ್ಯೆಯ ಮಹಂತ್ ಜಗತ್ಗುರು ಪರಮಹಂಸ ಆಚಾರ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಹಾರದ ಶಿಕ್ಷಣ ಸಚಿವರ ಹೇಳಿಕೆಯು ಸನಾತನ ಧರ್ಮಕ್ಕೆ ಮಾಡಿದ ಘೋರ ಅವಮಾನ ಎಂದು ಅವರು ಹೇಳಿದ್ದಾರೆ. ಒಂದು ವಾರದೊಳಗೆ ಶಿಕ್ಷಣ ಸಚಿವರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರು ಕ್ಷಮೆಯಾಚಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಇದು ಆಗದಿದ್ದರೆ ಬಿಹಾರದ ಶಿಕ್ಷಣ ಸಚಿವರ ನಾಲಿಗೆ ಕಡಿಯುವವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದಿದ್ದರು. ಇದೇ ವೇಳೆ ರಾಮಚರಿತಮಾನಸ ವಿಭಜಿಸುವ ಪುಸ್ತಕವಲ್ಲ, ಜೋಡಿಸುವ ಪುಸ್ತಕ ಎಂದರು.
#WATCH मनुस्मृति को क्यों जलाया गया क्योंकि उसमें एक बड़े तबके के खिलाफ अनेको गालियां दी गई। रामचरितमानस का क्यों प्रतिरोध हुआ और किस अंश का प्रतिरोध हुआ?: रामचरितमानस पर बिहार के शिक्षा मंत्री चंद्रशेखर, पटना pic.twitter.com/bW2pB8Eg3P
— ANI_HindiNews (@AHindinews) January 11, 2023
‘ನಳಂದ ಓಪನ್ ಯೂನಿವರ್ಸಿಟಿ’ಯ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ರಾಮಚರಿತಮಾನಸವು ಸಮಾಜವನ್ನು ವಿಭಜಿಸುವ ಪುಸ್ತಕ ಎಂದು ಕರೆದಿದ್ದರು. ರಾಮಚರಿತಮಾನಸ್ ದಲಿತರು ಮತ್ತು ಹಿಂದುಳಿದವರು ಶಿಕ್ಷಣ ಪಡೆಯುವುದನ್ನು ತಡೆಯುತ್ತದೆ ಎಂದು ಹೇಳಿದ್ದರು. ಭಾಷಣದ ನಂತರ, ಬಿಹಾರದ ಶಿಕ್ಷಣ ಸಚಿವರು ಮಾಧ್ಯಮಗಳ ಮುಂದೆಯೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.