ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ (AMU, Aligarh) ಮುಸ್ಲಿಂ ವಿದ್ಯಾರ್ಥಿಗಳು ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿದರು ಮತ್ತು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು. ಈ ವೇಳೆ ವಿದ್ಯಾರ್ಥಿಗಳು ‘ಮಸೀದಿ ಇತ್ತು, ಇದೆ, ಮುಂದೆಯೂ ಅಲ್ಲೇ ಇರಲಿದೆ’ ಎಂಬ ಘೋಷಣೆಗಳನ್ನು ಕೂಗಿ, ‘ಜಬ್ ಅರ್ಜೆ ಖುದಾ ಕೆ ಕಾಬ್ ಸೇ, ಸಬ್ ಬೂತ್ ಉತ್ರಾವಾಯೇ ಜಾಯೇಂಗೆ’ ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ (6 ಡಿಸೆಂಬರ್ 2022) ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಮೊಹಮ್ಮದ್ ಫರೀದ್ ನೇತೃತ್ವದಲ್ಲಿ ಕ್ಯಾಂಟೀನ್‌ನಲ್ಲಿ ಭಾರೀ ಸಂಖ್ಯೆಯ ಮುಸ್ಲಿಂ ವಿದ್ಯಾರ್ಥಿಗಳು ಜಮಾಯಿಸಿದರು ಮತ್ತು ಅಲ್ಲಿಂದ ಡಕ್ ಪಾಯಿಂಟ್ ತಲುಪಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, “ಬಾಬರಿ ಮಸೀದಿ ಇನ್ನೂ ಜೀವಂತವಾಗಿದೆ. ಮಸೀದಿ ಇತ್ತು, ಅದು ಇದೆ ಮತ್ತು ಇನ್ಶಾ ಅಲ್ಲಾ ಅದು ಮುಂದೆಯೂ ಇರುತ್ತದೆ” ಎಂಬ ಘೋಷಣೆಗಳನ್ನ ಕೂಗಿದರು.
ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ “ಜಬ್ ಅರ್ಜೆ ಖುದಾ ಕೆ ಕಾಬ್ ಸೇ, ಸಬ್ ಬೂತ್ ಉತರವಾಯೆ ಜಾಯೇಂಗೆ” ಎಂಬ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು. ಬಾಬರಿ ಮಸೀದಿಯನ್ನು ಎಂದಿಗೂ ಮುಗಿಸಲು ಸಾಧ್ಯವಿಲ್ಲ ಮತ್ತು ಅಲ್ಲಿಯೇ ಇರುತ್ತದೆ ಎಂದು ಹೇಳಿದರು. ಅವರು ತಮ್ಮನ್ನ ತಾವು ಮುಂದಿನ ಪೀಳಿಗೆಯೆಂದು ಹೇಳಿಕೊಳ್ಳುತ್ತ ಬಾಬರಿ ಮಸೀದಿ ಅಲ್ಲೇ ಇದೆ ಎಂದು ಹೇಳುತ್ತಿದ್ದರು.
ವಿದ್ಯಾರ್ಥಿಗಳು ‘ತೇರಾ-ಮೇರಾ ರಿಶ್ತಾ ಕ್ಯಾ, ಲಾ ಇಲಾಹ ಇಲ್ಲಲ್ಲಾಹ್’ ಎಂಬ ಘೋಷಣೆಗಳನ್ನು ಕೂಗಿದರು. ಕಾಶ್ಮೀರದಲ್ಲಿ ಭ-ಯೋ-ತ್ಪಾ-ದಕರು ಕೂಗುತ್ತಿದ್ದ ಘೋಷಣೆಗಳೂ ಇವೇ ಆಗಿದ್ದವು. ‘ಜಬ್ ಅರ್ಜೆ ಖುದಾ ಕೆ ಕಾಬಾ ಸೇ, ಸಬ್ ಬೂತ್ ಉತರವಾಯೇ ಜಾಯೇಂಗೆ’ ಎಂಬುದು ವಿವಾದಾತ್ಮಕ ಘೋಷಣೆಯಾಗಿದೆ, ಅಂದರೆ ‘ಒಂದು ದಿನ ಅಲ್ಲಾನ ಈ ಭೂಮಿಯಿಂದ ಎಲ್ಲಾ ವಿಗ್ರಹಗಳನ್ನು ನಿರ್ಮೂಲನೆ ಮಾಡಲಾಗುತ್ತೆ ಮತ್ತು ಅಲ್ಲಾನ ಹೆಸರು ಮಾತ್ರ ಉಳಿಯುತ್ತದೆ’ ಎಂಬುದಾಗಿದೆ.
ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆದಾಗಲೆಲ್ಲ ಈ ಘೋಷವಾಕ್ಯ ಹೆಚ್ಚಾಗಿ ಕೇಳಿಬರುತ್ತಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ, ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಾಣದ ನಂತರವೂ ‘ಮಸೀದಿ ಇತ್ತು, ಇದೆ, ಮುಂದೆಯೂ ಇರುತ್ತದೆ’ ಎಂಬ ಮೂಲಭೂತವಾದಿಗಳ ಮಾತು ಈ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.
AMU ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಅಲಿಗಢ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೌರವ್ ಶರ್ಮಾ ಮಾತನಾಡಿ, ಡಿಸೆಂಬರ್ 6 ರಂದು ಕರಾಳ ದಿನಾಚರಣೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಇದಾದ ನಂತರವೂ AMU ನಲ್ಲಿ ಕರಾಳ ದಿನವನ್ನಾಗಿ ಆಚರಿಸಲಾಯಿತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಡಿಸೆಂಬರ್ 2019 ರಲ್ಲಿ IIT ಕಾನ್ಪುರದಲ್ಲಿ ಈ ಘೋಷಣೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಪ್ರತಿಭಟನೆಯ ವೇಳೆ ಈ ಘೋಷಣೆ ಅಲ್ಲಿಯೂ ಮೊಳಗಿತ್ತು. ಆ ಸಮಯದಲ್ಲಿ ಐಐಟಿ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ಈ ಸಾಲುಗಳು “ಎಲ್ಲಾ ವಿಗ್ರಹಗಳನ್ನು ನಾಶಮಾಡಲು ಕರೆ ನೀಡುತ್ತವೆ” (ಇಸ್ಲಾಂನಲ್ಲಿ ವಿಗ್ರಹ ಪೂಜೆಯನ್ನು ನಿಷೇಧಿಸಲಾಗಿದೆ) ಮತ್ತು ಒತ್ತಿಹೇಳುತ್ತ “ಅಲ್ಲಾಹನ ಆರಾಧನೆ ಮಾತ್ರ ಇರಬೇಕು” ಎಂದು ಹೇಳಲಾಗಿತ್ತು.
ನಂತರ ಲಿಬರಲ್ ಗ್ಯಾಂಗ್ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿತು ಮತ್ತು ಫೈಜ್‌ನನ್ನ ನಾಸ್ತಿಕ ಮತ್ತು ಎಡಪಂಥೀಯ ಎಂದು ಕರೆಯುವ ಮೂಲಕ ಆತನ ಕೃತ್ಯಗಳನ್ನ ಸಮರ್ಥಿಸಿಕೊಂಡಿತ್ತು. ಫೈಜ್ ನಾಸ್ತಿಕನಾಗಿದ್ದರೆ ಧರ್ಮದ ಆಧಾರದಲ್ಲಿ ರೂಪುಗೊಂಡ ಪಾಕಿಸ್ತಾನಕ್ಕೆ ಏಕೆ ಹೋಗಿದ್ದಾನೆ ಎಂದು ಜನರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಫೈಜ್‌ನ್ನ ಸಮರ್ಥಿಸಿಕೊಂಡವರಲ್ಲಿ ಬಾಲಿವುಡ್‌ನ ಸ್ವಯಂಘೋಷಿತ ಬುದ್ಧಿಜೀವಿ ಜಾವೇದ್ ಅಖ್ತರ್ ಕೂಡ ಒಬ್ಬರಾಗಿದ್ದರು.