ಚೆನ್ನೈ: ಡಿಎಂಕೆ ನಾಯಕ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವ (1 ಲಕ್ಷ 76 ಕೋಟಿ 2G ಸ್ಪೆಕ್ಟ್ರಮ್ ಹಗರಣ ಆರೋಪಿ ಹಾಗು ಜೈಲುಪಾಲಾಗಿದ್ದ) ನಾಗಿದ್ದ ಎ.ರಾಜಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಹಿಂದೂ ಧರ್ಮದ ವಿರುದ್ಧ ಹಲವು ಮಾತುಗಳನ್ನು ಹೇಳಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ದ್ರಾವಿಡ ಕಳಗಂ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಎ. ರಾಜಾ, ”ಹಿಂದೂ ಎಂದರೆ ಯಾರು? ಹೇಳಿಕೊಳ್ಳುವ ಹಕ್ಕು ನಮಗಿರಬೇಕು. ನಮಗೆ ಹಿಂದುವಾಗಲು ಇಷ್ಟವಿಲ್ಲ, ನನ್ನನ್ನು ಹಿಂದೂ ಎಂದು ಏಕೆ ನೋಡುತ್ತಿದ್ದೀರಿ?” ಎಂದಿದ್ದಾರೆ.
ಅವರು ಮಾತನಾಡುತ್ತ, “ಅಂತಹ (ಹಿಂದೂ) ಯಾವುದೇ ಧರ್ಮವನ್ನೂ ನಾನು ನೋಡಿಲ್ಲ. ಕರ್ನಾಟಕದಲ್ಲಿ ಲಿಂಗಾಯತರ ಆರಾಧನಾ ವಿಧಾನ ಮತ್ತು ಧಾರ್ಮಿಕ ತತ್ವಗಳು ವಿಭಿನ್ನವಾಗಿವೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ತಮ್ಮನ್ನು ಹಿಂದೂ ಎಂದು ಕರೆಯಬೇಡಿ ಎಂದು ಕೇಳುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಏನು ಹೇಳುತ್ತಿದೆ? ನೀವು ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಅಲ್ಲದಿದ್ದರೆ ನೀವು ಹಿಂದೂ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಇಷ್ಟು ಕ್ರೌರ್ಯ ಇರುವ ದೇಶ ಬೇರೆ ಯಾವುದಾದರೂ ಇದೆಯೇ?” ಎಂದರು.
ಎ.ರಾಜಾ ಮುಂದೆ ಮಾತನಾಡುತ್ತ, “ಎಲ್ಲಿಯವರೆಗೆ ನೀವು ಹಿಂದೂ ಆಗಿರುವಿರೋ ಅಲ್ಲಿಯವರೆಗೆ ನೀವು ಶೂದ್ರರು. ನೀವು ವೇಶ್ಯೆಯ ಮಗನಾಗಿರುವವರೆಗೆ ನೀವು ಶೂದ್ರರೇ. ನೀವು ಪಂಜಾಯತು (ದಲಿತ) ಮತ್ತು ಅಸ್ಪೃಶ್ಯರಾಗಿರುವವರೆಗೆ ನೀವು ಹಿಂದೂ ಅಲ್ಲ. ನಿಮ್ಮಲ್ಲಿ ಎಷ್ಟು ಮಂದಿ ವೇಶ್ಯೆಯರ ಮಕ್ಕಳಾಗಲು ಬಯಸುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಅಸ್ಪೃಶ್ಯರಾಗಿ ಉಳಿಯಲು ಬಯಸುತ್ತೀರಿ? ಈ ಪ್ರಶ್ನೆಗಳ ಬಗ್ಗೆ ನಾವು ಧ್ವನಿ ಎತ್ತಿದರೆ, ಅದು ಸನಾತನವನ್ನು (ಸನಾತನ ಧರ್ಮ) ಒಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದರು.
ಎ. ರಾಜಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ, ಕೊಯಮತ್ತೂರಿನ ಶಾಸಕರೂ ಆಗಿರುವ ವನತಿ ಶ್ರೀನಿವಾಸನ್ ಟ್ವೀಟ್ ಮಾಡಿ, “ಡಿಎಂಕೆ ಸಂಸದ ಎ.ಕೆ. ರಾಜಾ ಹಲವಾರು ಸಂದರ್ಭಗಳಲ್ಲಿ ಮಹಿಳೆಯರು ಮತ್ತು ಹಿಂದೂಗಳನ್ನು ಅವಮಾನಿಸಿದ್ದಾರೆ. ಈ ಬಾರಿಯೂ ಶೂದ್ರರು ವೇಶ್ಯೆಯರ ಮಕ್ಕಳು, ಅವರು ಹಿಂದೂ ಧರ್ಮದಲ್ಲಿ ಇರುವವರೆಗೂ ಹಾಗೇ ಇರುತ್ತಾರೆ ಎಂದು ವಿಷ ಕಕ್ಕಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:
“ಯಾರು ರಾಮ ಅಂದ್ರೆ? ನಾವ್ಯಾವತ್ತೂ ರಾಮನನ್ನ ಪೂಜಿಸಿಲ್ಲ ಪೂಜಿಸೋದೂ ಇಲ್ಲ, ರಾಮ ಅನ್ನೋ ವ್ಯಕ್ತಿಯೇ ಇರಲಿಲ್ಲ”: ಕಾಂಗ್ರೆಸ್ ಸಂಸದೆ
ತಮಿಳುನಾಡಿನ ಕಾಂಗ್ರೆಸ್ ಮಹಿಳಾ ಸಂಸದೆ ಜ್ಯೋತಿಮಣಿ ಅವರು ಶ್ರೀರಾಮನ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅವರು ಟೈಮ್ಸ್ ನೌ ಜೊತೆಗಿನ ಸಂವಾದದಲ್ಲಿ ನಮ್ಮ ರಾಜ್ಯದಲ್ಲಿ ರಾಮ ಅಂದ್ರೆ ಯಾರು ಅಂತ ಯಾರಿಗೂ ಗೊತ್ತಿಲ್ಲ, ರಾಮನಿಗಾಗಿ ನಮ್ಮ ರಾಜ್ಯದಲ್ಲಿ ಒಂದು ದೇವಸ್ಥಾನವೂ ಇಲ್ಲ ಎಂದು ಹೇಳುವುದನ್ನು ಕೇಳಬಹುದು.
I’m from Tamil Nadu, I don’t know Ram
You ask anybody in Tamil Nadu
We don’t see any Ram TempleTN Congress MP, Jothimani pic.twitter.com/cmCTevhCwP
— Tinku | ಟಿಂಕು (@tweets_tinku) April 19, 2022
ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಮಾತನಾಡುತ್ತ, “ನಾನು ತಮಿಳುನಾಡಿನವಳು. ರಾಮ ಯಾರೆಂದು ನನಗೆ ಗೊತ್ತೇ ಇಲ್ಲ. ನಾವು ಸ್ಥಳೀಯರು ಮತ್ತು ನಾವು ನಮ್ಮ ಪೂರ್ವಜರನ್ನು ಅನುಸರಿಸುತ್ತೇವೆ. ನೀವು ತಮಿಳುನಾಡಿನಲ್ಲಿ ಯಾರನ್ನಾದರೂ ಕೇಳಿ – ನಾವು ತಮಿಳುನಾಡಿನಲ್ಲಿ ರಾಮಮಂದಿರವನ್ನ ನೋಡೇ ಇಲ್ಲ ಅಂತ ಹೇಳ್ತಾರೆ. ಪ್ರತಿ ವಾರ ನಾನು ನನ್ನ ದೇವಸ್ಥಾನಕ್ಕೆ ಹೋಗುತ್ತೇನೆ … ನನ್ನ ಪೂರ್ವಜರು ಪೂಜಿಸುತ್ತಿದ್ದರು. ದಲಿತರಾಗಲಿ, ಒಬಿಸಿವಗಳಾಗಲಿ ಆದಿವಾಸಿಗಳಾಗಲಿ ನಾವು ಮೂಲನಿವಾಸಿಗಳಷ್ಟೇ ಮತ್ತು ನಾವು ನಮ್ಮ ಪೂರ್ವಜರನ್ನಷ್ಟೇ ಪೂಜಿಸುತ್ತೇವೆ” ಎಂದು ಹೇಳುತ್ತಾರೆ.
ಆಕೆ ಮುಂದೆ ಮಾತನಾಡುತ್ತ, “ರಾಷ್ಟ್ರೀಯ ರಾಜಕೀಯಕ್ಕೆ ಸೇರುವ ಮೊದಲು ನನಗೂ ಇದು ತಿಳಿದಿರಲಿಲ್ಲ. ನಾನು ರಾಮಾಯಣವನ್ನು ಓದುತ್ತೇನೆ, ನಾನು ಮಹಾಭಾರತವನ್ನು ಓದುತ್ತೇನೆ … ಆದರೆ ಪೂಜಾಪಾಠದ ವಿಷಯಕ್ಕೆ ಬಂದಾಗ ನಾವು ನಮ್ಮ ಪೂರ್ವಜರನ್ನು ಪೂಜಿಸುತ್ತೇವೆ” ಎಂದು ಹೇಳುತ್ತಾರೆ.
ತಮಿಳುನಾಡಿನಲ್ಲಿ ಶ್ರೀರಾಮನಿಗೆ ಸಮರ್ಪಿತವಾದ ಮಂದಿರ
ಕಾಂಗ್ರೆಸ್ ಸಂಸದರ ಈ ವಿಡಿಯೋವನ್ನು ಟಿಂಕಿ ವೆಂಕಟೇಶ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವುದು ಗಮನಿಸಬೇಕಾದ ಸಂಗತಿ. Times Now Summit ಬ್ಯಾನರ್ ಅನ್ನು ವೀಡಿಯೊದ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದೆ. ಈ ವಿಡಿಯೋ ನೋಡಿದ ಬಳಿಕ ಕಾಂಗ್ರೆಸ್ ಮಹಿಳಾ ನಾಯಕಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ತಮಿಳುನಾಡಿನಲ್ಲಿ ರಾಮನ ದೇಗುಲವಿಲ್ಲ ಎಂದು ಅವರು ಹೇಳಿದ್ದು ನಿಜವಾಗಿದ್ದರೆ ತಿರುಚ್ಚಿ ಬಳಿಯ ಶ್ರೀ ರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ತಿರುವಣ್ಣಾಮಲೈ ಬಳಿಯ ಆದಿ ಶ್ರೀ ರಂಗಂ ದೇವಸ್ಥಾನ, ಪಲ್ಲಿಕೊಂಡದ ಶ್ರೀ ರಂಗನಾಥರ ದೇವಸ್ಥಾನ, ಏರಿ ಕಥಾ ರಾಮರ್ ಎಂದು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಮಧುರಂತಗಾಂನಲ್ಲಿರುವ ದೇವಾಲಯ, ರಾಮೇಶ್ವರಂನಲ್ಲಿರುವ (ಈ ಊರಿನ ಹೆಸರಲ್ಲೇ ರಾಮ ಅನ್ನೋದಿದೆ) ರಾಮನಾಥ ಸ್ವಾಮಿ ದೇವಾಲಯ… ಇತ್ಯಾದಿಗಳೇನು? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಶ್ರೀರಾಮನ ಅಸ್ತಿತ್ವವನ್ನ ಪ್ರಶ್ನಿಸಿ ಹಿಂದುಗಳ ಭಾವನೆಗಳ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್
ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಮೊದಲ ಕಾಂಗ್ರೆಸ್ ನಾಯಕಿ ಜ್ಯೋತಿಮಣಿ ಒಬ್ಬರೇ ಅಲ್ಲ. 2020 ರ ಆರಂಭದಲ್ಲಿ, ಕಾಂಗ್ರೆಸ್ ನಾಯಕ ಕುಮಾರ್ ಕೇತ್ಕರ್ ಕೂಡ ಶ್ರೀರಾಮನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು ರಾಮ ಕೇವಲ ಸಾಹಿತ್ಯದ ಸೃಷ್ಟಿ ಎಂದು ಕರೆದಿದ್ದರು.
2007 ರಲ್ಲಿ ಕಾಂಗ್ರೆಸ್ ನೇತೃತ್ವದ UPA ಸರ್ಕಾರವು ರಾಮಸೇತುವನ್ನ ಒಡೆಯುವ ಪ್ರಾಜೆಕ್ಟ್ ಗಾಗಿ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಅನ್ನು ಸಲ್ಲಿಸಿತ್ತು, ಅದರಲ್ಲಿ “ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತಮಾನಗಳು ಪ್ರಾಚೀನ ಭಾರತೀಯ ಸಾಹಿತ್ಯದ ಪ್ರಮುಖ ಭಾಗವಾಗಿದೆ, ಆದರೆ ಅದರಲ್ಲಿ ಚಿತ್ರಿಸಿದ ಪಾತ್ರಗಳು ಮತ್ತು ಘಟನೆಗಳ ‘ಅಸ್ತಿತ್ವ’ವನ್ನು ಸಾಬೀತುಪಡಿಸಲು ಇದನ್ನು ಐತಿಹಾಸಿಕ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ” ಎಂದು ಹೇಳಿತ್ತು.