“ಈಗ ಈ ಮುಸಲ್ಮಾನರಿಂದ ಕೆಲಸ ನಡೆಯಲ್ಲ, ಮೋದಿಯನ್ನ ಕೆಳಗಿಳಿಸಬೇಕಂದ್ರೆ ಹಿಂದುಗಳ ಹತ್ತಿರವಾಗೋಕೆ ಶುರುಮಾಡಿ”: ಎಕೆ ಆ್ಯಂಟನಿ, ಕಾಂಗ್ರೆಸ್ ನಾಯಕ

in Uncategorized 1,289 views

ನವದೆಹಲಿ: ಪ್ರಕರಣ ಕೇರಳದ ರಾಜಧಾನಿ ತಿರುವನಂತಪುರಂನಿಂದ ವರದಿಯಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟನಿ ತಿರುವನಂತಪುರದಲ್ಲಿ ಹಿಂದೂಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಅಲ್ಪಸಂಖ್ಯಾತರ ಬೆಂಬಲದ ಬಲದ ಮೇಲೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷವು ದೇಶದ ಬಹುಸಂಖ್ಯಾತ ಸಮುದಾಯವನ್ನೂ ತನ್ನೊಂದಿಗೆ ಕೊಂಡೊಯ್ಯಬೇಕು ಇಲ್ಲವಾದರೆ ಈ ಯುದ್ಧವನ್ನು ಗೆಲ್ಲಲಾಗುವುದಿಲ್ಲ ಎಂದು ಹಿಂದೂ ವೋಟ್ ಬ್ಯಾಂಕ್‌ನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಎ.ಕೆ.ಆಂಟನಿ ಪಕ್ಷದ ಸಂಸ್ಥಾಪನಾ ದಿನದಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು ಹಿಂದೂಗಳ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಅವರು ಕೇಳಿಕೊಂಡರು.

Advertisement

ಅವರು ತಮ್ಮ ಭಾಷಣದಲ್ಲಿ, “ಭಾರತದ ಬಹುಸಂಖ್ಯಾತ ಜನರು ಹಿಂದೂಗಳು ಮತ್ತು ಈ ಬಹುಸಂಖ್ಯಾತ ಸಮುದಾಯವು ನರೇಂದ್ರ ಮೋದಿ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು” ಎಂದು ಅವರು ಹೇಳಿದರು. ಅವರು “ಫ್ಯಾಸಿಸಂ ವಿರುದ್ಧದ ಹೋರಾಟ” ದಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಮತ್ತು ಬಹುಸಂಖ್ಯಾತ ಸಮುದಾಯದೊಂದಿಗೆ ಸೇರಬೇಕು ಎಂದು ಹೇಳಿದರು.

ಕಾಂಗ್ರೆಸ್ ಸಂಸ್ಥಾಪನಾ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದ ಎಕೆ ಆ್ಯಂಟನಿ, “ಸಾಫ್ಟ್ ಹಿಂದುತ್ವವನ್ನು ತೋರಿಸಬೇಡಿ. ತಿಲಕಧಾರಿ ಹಿಂದೂಗಳನ್ನೂ ನಿಮ್ಮವರಾಗಿಸಿಕೊಳ್ಳಿ. ಬರೀ ಅಲ್ಪಸಂಖ್ಯಾತರನ್ನು ಹಿಡಿದುಕೊಂಡು ಹೋದರೆ ಕೆಲಸ ನಡೆಯಲ್ಲ. ಕಾಂಗ್ರೆಸ್ ಕಾರ್ಯಕರ್ತರು ಹಿಂದೂಗಳನ್ನು ತಮ್ಮಿಂದ ದೂರವಾಗಲು ಬಿಡಬಾರದು. ಮಂದಿರಗಳನ್ನ ದೂರ ಮಾಡಬೇಡಿ. ಈ ರೀತಿ ಮಾಡಿದರೆ ಮಾತ್ರ ಮೋದಿ ಸರಕಾರವನ್ನು ಕಿತ್ತೊಗೆಯಲು ಸಾಧ್ಯ” ಎಂದು ಎಕೆ ಆ್ಯಂಟನಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಆ್ಯಂಟನಿ ಅವರ ಈ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಪ್ರಶ್ನೆ ಎತ್ತಿದ್ದಾರೆ. ಸುದ್ದಿವಾಹಿನಿ ಟೈಮ್ಸ್ ನೌ ಜೊತೆ ಮಾತನಾಡಿದ ಶಹಜಾದ್ ಪೂನಾವಾಲಾ, “ಕಾಂಗ್ರೆಸ್ ವೋಟ್ ಗಾಗಿ ಏನು ಬೇಕಾದರೂ ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಭಗವದ್ಗೀತೆಯನ್ನು ಜಿಹಾದ್‌ನೊಂದಿಗೆ ಹೋಲಿಸಿದ್ದರು. ಕಾಂಗ್ರೆಸ್ ನಾಯಕ ಹಿಂದುತ್ವವನ್ನು ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಮತ್ತು ಬೊಕೊ ಹರಾಮ್ ಜೊತೆ ಹೋಲಿಸಿದ್ದರು” ಎಂದು ಹೇಳಿದರು. ಆ್ಯಂಟನಿ ಅವರ ಹೇಳಿಕೆ ಮತ್ತು ಅದರ ಬಗ್ಗೆ ಶೆಹಜಾದ್ ಪೂನಾವಾಲಾ ಅವರ ಪ್ರತಿಕ್ರಿಯೆ ಹೇಗಿತ್ತು ನೋಡಿ.

ಶಹಜಾದ್ ಮಾತನಾಡುತ್ತ, “ಹಿಂದೂ ಭಯೋತ್ಪಾದನೆ ಮತ್ತು ಕೇಸರಿ ಭಯೋತ್ಪಾದನೆಯ ಮಾತು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೇ ಇತ್ತು. ಪಕ್ಷವು ನಿರ್ದಿಷ್ಟ ವರ್ಗವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದೆ ಎಂಬುದು ಹಿರಿಯ ಕಾಂಗ್ರೆಸ್ ನಾಯಕ ಆಂಟನಿ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ” ಎಂದು ಶಹಜಾದ್ ಹೇಳಿದರು. ಒಂದು ನಿರ್ದಿಷ್ಟ ವರ್ಗವನ್ನು ಸಂತೋಷಪಡಿಸುವ ಹಳೆಯ ಮಾರ್ಗವನ್ನು ಅನುಸರಿಸುತ್ತದೆಯೇ ಅಥವಾ ಎಲ್ಲರನ್ನೂ ಜೊತೆಗೆ ಕರೆದೊಯ್ಯುತ್ತದೆಯೇ ಎಂಬುದನ್ನು ಕಾಂಗ್ರೆಸ್ ಈಗ ಮಂಥನ ಮಾಡಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ಸೇ ಈಗ ಕಾಂಗ್ರೆಸ್‌‌ನ ಬಣ್ಣ ಬಯಲು ಮಾಡಿದೆ ಎಂದು ಶಹಜಾದ್‌ ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಕೂಡ ಆ್ಯಂಟನಿ ಅವರ ಹೇಳಿಕೆಯನ್ನ ವಿರೋಧಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಭಾರತದ ಜನರು ಭಾರತೀಯರಲ್ಲ, ಬದಲಿಗೆ ಅವರು ಭಾರತೀಯರನ್ನು ಬಹುಸಂಖ್ಯಾತ-ಅಲ್ಪಸಂಖ್ಯಾತ, ಹಿಂದೂ-ಮುಸ್ಲಿಂ ಎಂದು ವಿಂಗಡಿಸಿದ್ದಾರೆ ಎಂದು ಹೇಳಿದರು. ಇದೀಗ ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಮೋದಿ ಸರ್ಕಾರವನ್ನು ಬೀಳಿಸಲು ಅಲ್ಪಸಂಖ್ಯಾತರ ಬೆಂಬಲ ಮಾತ್ರ ಸಾಕಾಗುವುದಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಬೆಂಬಲವೂ ಬೇಕು ಎಂದು ಹೇಳುತ್ತಿದ್ದಾರೆ ಎಂದರು.

Advertisement
Share this on...