ಉಕ್ರೇನ್ ಯುದ್ಧ ಮುಗಿಯುವವರೆಗಷ್ಟೇ ಜೀವಂತವಿರಲಿದ್ದಾರೆ ಪುಟಿನ್? ರಷ್ಯಾ ಅಧ್ಯಕ್ಷ ಪುಟಿನ್ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ ಬಯಲು, ಈ ವ್ಯಕ್ತಿಯಾಗಲಿದ್ದಾರೆ ರಷ್ಯಾ ಅಧ್ಯಕ್ಷ?

in Uncategorized 1,135 views

ಉಕ್ರೇನಿಯನ್ ಮೀಡಿಯಾ ರಿಪೋರ್ಟ್ಸ್ ಗಳ ಪ್ರಕಾರ, ರಷ್ಯಾದ ಅಧ್ಯಕ್ಷ ಪುಟಿನ್ ತಮ್ಮ ಕ್ಯಾನ್ಸರ್ ಅನ್ನು ಗುಣಪಡಿಸಿಕೊಳ್ಳಲು ಮತ್ತು ಅದು ಗುಣಮುಖವಾಗದಿದ್ದರೂ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಅಡ್ವಾನ್ಸ್ಡ್ ವೆಸ್ಟರ್ನ್ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಒಂದು ವರ್ಷ ಕೂಡ ಬದುಕುವ ಸಾಧ್ಯತೆಯಿಲ್ಲ ಎಂದು ವೈದ್ಯರು ಹೇಳುತ್ತಾರೆ. ರಷ್ಯಾದ ರಾಜಕೀಯ ವಿಶ್ಲೇಷಕ ವ್ಯಾಲೆರಿ ಸೊಲೊವಿ ಮಾತನಡುತ್ತ, “ವಿದೇಶಿ ಚಿಕಿತ್ಸೆ ಇಲ್ಲದೆ, ರಷ್ಯಾದ ಅಧ್ಯಕ್ಷರು ಸಾರ್ವಜನಿಕ ಜೀವನದಲ್ಲಿ ಇನ್ನು ಬದುಕುಳಿಯಲು ಸಾಧ್ಯವಿಲ್ಲ ಎಂದು ನಾನು ಹೇಳಬಲ್ಲೆ. ಅವರಿಗೆ ವೆರಿ ಅಡ್ವಾನ್ಸ್ಡ್ ರೀತಿಯಲ್ಲಿ ಟ್ರೀಟ್ಮೆಂಟ್ ನೀಡಲಾಗುತ್ತಿದ್ದು, ಅವರಿಗೆ ನೀಡುತ್ತಿರುವ ಚಿಕಿತ್ಸೆಯು ರಷ್ಯಾದಲ್ಲಿ ಲಭ್ಯವಿಲ್ಲ. ಅವರ ಚಿಕಿತ್ಸೆಯು ಅತ್ಯಂತ ಯಶಸ್ವಿಯಾಗಿದೆ ಮತ್ತು ಅವರ ದೇಹವು ವೈದ್ಯಕೀಯ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ನಾನು ಹೇಳುತ್ತೇನೆ” ಎಂದು ಅವರು ಹೇಳಿದರು.

Advertisement

‘ಪುಟಿನ್ ಗುಣಮುಖರಾಗುವ ಸಾಧ್ಯತೆ ತೀರಾ ಕಡಿಮೆ’

ಮುಂದೆ ಮಾತನಾಡಿದ ವ್ಯಾಲೆರಿ ಸೊಲೊವಿ, “ಅಡ್ವಾನ್ಸ್ಡ್ ಟ್ರೀಟ್ಮೆಂಟ್‌ನ ಹೊರತಾಗಿಯೂ, ಅವರು ಚೇತರಿಸಿಕೊಳ್ಳುವ ನಿರೀಕ್ಷೆಯಿಲ್ಲ. ಅವರ ಅಂತ್ಯವು ಬಹಳ ಹತ್ತಿರದಲ್ಲಿದೆ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ಯಾವುದೇ ಔಷಧವು ಕೊನೆಯಲ್ಲಿ ಯಶಸ್ವಿಯಾಗುವುದಿಲ್ಲ ಮತ್ತು ಅವರು ಇನ್ನೂ ಒಂದು ವರ್ಷ ಕೂಡ ಬದುಕಲು ಸಾಧ್ಯವಿಲ್ಲ ಎಂದು ನಂಬುತ್ತಾರೆ” ಎಂದು ಅವರು ಹೇಳಿದರು. ವ್ಯಾಲೆರಿ ಸೊಲೊವಿ ಉಕ್ರೇನಿಯನ್ ಯೂಟ್ಯೂಬ್ ಚಾನೆಲ್ ಒಡೆಸ್ಸಾ ಫಿಲ್ಮ್ ಸ್ಟುಡಿಯೊ ಜೊತೆ ಮಾತನಡುತ್ತ, “ಹೌದು, ಅವರ ಲೆಗ್ ಮೂವ್ಮೆಂಟ್ ನಲ್ಲಿ ಹಾಗು ನಡೆಯಲೂ ಸಾಕಷ್ಟು ಕಷ್ಟವಿದೆ ಎಂಬುದು ಸ್ಪಷ್ಟವಾಗಿದೆ” ಎಂದರು.

ಪುಟಿನ್ ಹೊಟ್ಟೆಯಲ್ಲಿ ಕ್ಯಾನ್ಸರ್ ಆಗಿರುವ ಮಾಹಿತಿ

ಉಕ್ರೇನ್‌ನ ಬೇಹುಗಾರಿಕಾ ಏಜೆನ್ಸಿಗಳು ಉಕ್ರೇನ್ ಯುದ್ಧದ ಪ್ರಾರಂಭದಿಂದಲೂ ರಷ್ಯಾದ ಅಧ್ಯಕ್ಷರಿಗೆ ಹೊಟ್ಟೆಯ ಕ್ಯಾನ್ಸರ್ ಇದೆ, ಅದು ಈಗ ಹರಡಿದ್ದು ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿಕೊಂಡೇ ಬರುತ್ತಿವೆ. ಅದೇ ಸಮಯದಲ್ಲಿ, ಸೊಲೊವೇ ಪುಟಿನ್ ಅವರ ಚಿಕಿತ್ಸೆಯು ಪಾರ್ಕಿನ್ಸನ್‌ನ ಆರಂಭಿಕ ರೋಗಲಕ್ಷಣಗಳನ್ನು ಒಳಗೊಂಡಂತೆ ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ. ಅವರು ಮುಂದೆ ಮಾತನಾಡುತ್ತ, “ಪುಟಿನ್ ಅವರ ದೇಹದಲ್ಲಿ ಬಹಳ ಗಂಭೀರವಾದ ವೈದ್ಯಕೀಯ ಸಮಸ್ಯೆಗಳಿವೆ. ಅವುಗಳಲ್ಲಿ ಅತ್ಯಂತ ಗಂಭೀರವಾದದ್ದು ಅದನ್ನ ಆಂಕೊಲಾಜಿ ಎಂದು ಕರೆಯುತ್ತಾರೆ ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಅವರನ್ನು ರಷ್ಯನ್ ಅಲ್ಲದ ವೈದ್ಯರು ಚಿಕಿತ್ಸೆ ನೀಡುವ ಮೂಲಕ ಸುರಕ್ಷಿತವಾಗಿ ಇರಿಸಲಾಗಿದೆ ಎಂದರು. ಅವರು ಮುಂದೆ ಮಾತನಾಡುತ್ತ, “ರಷ್ಯಾದ ಹೊರಗೆ ಕೆಲವು ವೈದ್ಯರು ಇದ್ದಾರೆ, ಅವರು ಪುಟಿನ್ ಅವರ ಚಿಕಿತ್ಸೆಯನ್ನು ಆಳವಾಗಿ ತನಿಖೆ ಮಾಡುತ್ತಿದ್ದಾರೆ ಮತ್ತು ಅವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ತಂತ್ರವನ್ನು ಮಾಡುತ್ತಿದ್ದಾರೆ, ಆಂಕೊಲಾಜಿ ಪತ್ತೆಹಚ್ಚಿದ ನಂತರ ಫೆಬ್ರವರಿ 2020 ರಲ್ಲಿ ಅವರಿಗೆ ಆಪರೇಷನ್ ಮಾಡಿದ ವೈದ್ಯರೂ ಸೇರಿದ್ದಾರೆ” ಎಂದರು.

ರಷ್ಯಾ ಅಧ್ಯಕ್ಷ ಗದ್ದುಗೆಯನ್ನ ಬೇರೆಯವರಿಗೆ ವಹಿಸಲು ಸಿದ್ಧತೆ ನಡೆಸುತ್ತಿರುವ ಪುಟಿನ್

ಸೊಲೊವಿ ಪ್ರಕಾರ, ರಷ್ಯಾದ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ ಮತ್ತು ಅವರು ರಷ್ಯಾದ ಕೃಷಿ ಸಚಿವ ಡಿಮಿಟ್ರಿ ಪಟ್ರುಶೆವ್ (45) ಅವರಿಗೆ ಗದ್ದುಗೆಯನ್ನ ಹಸ್ತಾಂತರಿಸಬಹುದು, ಅವರು ರಷ್ಯಾದ ಉನ್ನತ ಭದ್ರತಾ ಸಹಾಯಕ ನಿಕೊಲಾಯ್ ಪಟ್ರುಶೆವ್ ಅವರ ಪುತ್ರರಾಗಿದ್ದಾರೆ. ಪೆಟ್ರುಶೆವ್ ಪಾಶ್ಚಿಮಾತ್ಯ ವಿರೋಧಿ ಮತ್ತು ಉಕ್ರೇನ್ ಯುದ್ಧದ ಬೆಂಬಲಿಗ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ರಷ್ಯಾದ ಅಧ್ಯಕ್ಷರ ಮಾಜಿ ಅಂಗರಕ್ಷಕ ಮತ್ತು ರಷ್ಯಾದ ಮಾಜಿ ಉಪ ರಕ್ಷಣಾ ಸಚಿವರಾಗಿದ್ದ 50 ವರ್ಷದ ಅಲೆಕ್ಸಿ ಡ್ಯುಮಿನ್ ಅವರು ಪುಟಿನ್ ಅವರ ಮರಣದ ನಂತರ ರಷ್ಯಾದ ಅಧ್ಯಕ್ಷರಾಗಬಹುದು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ತುಲಾ ಪ್ರದೇಶದ ಗವರ್ನರ್ ನೆ ಡ್ಯುಮಿನ್ ಶುಕ್ರವಾರ ಪುಟಿನ್ ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಭೇಟಿ ನೀಡಿದರು, ಅಲ್ಲಿ ಅವರು ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಹೆಚ್ಚಿಸಲು ಆದೇಶಿಸಿದರು.

ರಷ್ಯಾದಲ್ಲಿ ಆಂತರಿಕ ದಂಗೆಯ ಭಯ

ಇದಲ್ಲದೆ, ರಷ್ಯಾದ ರಾಜಕೀಯ ವಿಶ್ಲೇಷಕ ಸೊಲೊವಿ ರಷ್ಯಾದಲ್ಲಿ ಆಂತರಿಕ ದಂಗೆಯ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಟಿನ್ ಅವರಿಗೆ ಈಗ ಕೊನೆಯ ಅವಕಾಶವಿದೆ ಮತ್ತು ಪುಟಿನ್ ಅವರೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯದಿದ್ದರೆ ಅಥವಾ ನಿಧನರಾಗದಿದ್ದರೆ, ದೇಶದಲ್ಲಿ ಆಂತರಿಕ ಬಂಡಾಯ ಉಂಟಾಗಬಹುದು ಎಂದು ನಾನು ನಂಬುತ್ತೇನೆ. ರಷ್ಯಾದ ಗಣ್ಯರು ಪುಟಿನ್ ರಿಂದ ಬಹಳ ವೇಗವಾಗಿ ದೂರ ಹೋಗುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ರಷ್ಯಾದ ಗಣ್ಯರು ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಬಹುದು. ರಷ್ಯಾದಲ್ಲಿ ಪುಟಿನ್ ಅವರ ಉತ್ತರಾಧಿಕಾರಿ ಕೇವಲ ಒಬ್ಬ ವ್ಯಕ್ತಿ, ಡಿಮಿಟ್ರಿ ಪಟ್ರುಶೇವ್, ಅವರು ಪುಟಿನ್ ನಂತರ ರಷ್ಯಾದ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

Advertisement
Share this on...