ಯುಪಿಯ ಇಟಾಹ್ ಜಿಲ್ಲೆಯ ದರ್ಗಾದಲ್ಲಿ ಉತ್ಖನನದ ಸಮಯದಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ ಎಂದು ವರದಿಯಾಗಿದೆ, ಈ ದರ್ಗಾ ಒಂದು ಕಾಲದಲ್ಲಿ ಪುರಾತನ ಹಿಂದೂ ಮಂದಿರವಾಗಿತ್ತು ಎಂದು ಸ್ಥಳೀಯ ಜನರು ಹೇಳಿದ್ದಾರೆ. ಜಲೇಸರ ಪೊಲೀಸ್ ಠಾಣಾ ವ್ಯಾಪ್ತಿಯ ದರ್ಗಾದಲ್ಲಿ ಭದ್ರತೆಗಾಗಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವಾಗ ಈ ವಿಗ್ರಹಗಳು ಪತ್ತೆಯಾಗಿವೆ. ಈ ವಿಗ್ರಹಗಳ ಮೆರವಣಿಗೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಘೋಷಿಸಿವೆ. ಇದೇ ವೇಳೆ ಪುರಾತತ್ವ ಇಲಾಖೆ ವಿಗ್ರಹಗಳ ಪ್ರಾಚೀನತೆಯನ್ನು ಪತ್ತೆ ಮಾಡುತ್ತಿದೆ. ಈ ಉತ್ಖನನವು ಏಪ್ರಿಲ್ 15, 2022 ರಂದು ನಡೆದಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಉದ್ದೇಶಿತ ಪೊಲೀಸ್ ಪೋಸ್ಟ್ನ ಅಡಿಪಾಯವನ್ನು ಬಡೇ ಮಿಯಾನ್ ಮಜಾರ್ ನಿಂದ ಸುಮಾರು 10 ಮೀಟರ್ ದೂರದಲ್ಲಿ ಅಗೆಯಲಾಗುತ್ತಿತ್ತು. ಈ ವೇಳೆ ಹನುಮಾನ್ ಮತ್ತು ಶನಿದೇವರ ವಿಗ್ರಹಗಳು ನೆಲದಿಂದ ಹೊರಬಂದಿವೆ. ಸ್ಥಳೀಯ ಬಿಜೆಪಿ ಶಾಸಕ ಸಂಜೀವ್ ದಿವಾಕರ್ ಕೂಡ ವಿಗ್ರಹಗಳ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದರು. ಅವರ ಸಮ್ಮುಖದಲ್ಲಿ ಹನುಮಂತನ ವಿಗ್ರಹವನ್ನು ನೀರಿನಿಂದ ಮತ್ತು ಶನಿದೇವನ ವಿಗ್ರಹವನ್ನು ಎಣ್ಣೆಯಿಂದ ತೊಳೆಯಲಾಯಿತು.
ಈ ಘಟನೆಯನ್ನು ಸ್ಥಳೀಯ ಬಿಜೆಪಿ ಶಾಸಕ ಸಂಜೀವ್ ದಿವಾಕರ್ ಕೂಡ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು, “ಇಂದು, 15 ನೇ ಏಪ್ರಿಲ್ 2022 ರಂದು, ಜಲೇಸರ್ ಶನಿ ದೇವ್ ದೇವಸ್ಥಾನದಲ್ಲಿ ಪೊಲೀಸ್ ಪೋಸ್ಟ್ ನಿರ್ಮಾಣಕ್ಕಾಗಿ ಉತ್ಖನನದ ಸಮಯದಲ್ಲಿ ಶನಿ ದೇವ್ ಮತ್ತು ವೀರ್ ಹನುಮಾನ್ ಜಿ ಅವರ ವಿಗ್ರಹವು ಹೊರಬಂದಿವೆ. ಇತರ ಮೂರ್ತಿಗಳೂ ಇರುವ ಸಾಧ್ಯತೆಯೂ ಇದೆ. ಶನಿದೇವನ ದರ್ಶನಕ್ಕೆ ಭಕ್ತರ ದಂಡು ನೆರೆದಿತ್ತು.” ಎಂದು ಬರೆದಿದ್ದಾರೆ. ಬಿಜೆಪಿ ಶಾಸಕರು ಶೇರ್ ಮಾಡಿರುವ ಚಿತ್ರಗಳಲ್ಲಿ ಹಲವಾರು ಜನರು ಸ್ಥಳದಲ್ಲಿ ನೆರೆದಿರುವುದನ್ನ ಕಾಣಬಹುದು.
‘ಬಡೇ ಮಿಯಾನ್ ಕಿ ಮಜಾರ್’ ನಿರ್ಮಿಸಿದ ಸ್ಥಳದಲ್ಲಿ ಈ ಹಿಂದೆ ದೇವಸ್ಥಾನವಿತ್ತು, ನಂತರ ದರ್ಗಾ ಕ್ರಮೇಣ ಅತಿಕ್ರಮಿಸಿ ದೇವಾಲಯದ ಅಸ್ತಿತ್ವವನ್ನು ನಾಶಪಡಿಸಿತು ಎಂದು ಬಿಜೆಪಿ ಶಾಸಕರ ಜೊತೆಗೆ ಸ್ಥಳೀಯ ಜನರು ಹೇಳಿದ್ದಾರೆ. ಇದೇ ವೇಳೆ ಏಪ್ರಿಲ್ 13ರಂದು ಇದೇ ದರ್ಗಾದಲ್ಲಿ ಕೇಸರಿ ಧ್ವಜ ಹಾರಿಸಿರುವ ಫೋಟೋ ಕೂಡ ವೈರಲ್ ಆಗಿತ್ತು. ಇದರ ಮೇಲೆ, ಅಲಿಗಂಜ್ನ ಎಸ್ಡಿಎಂ ಅಲಂಕಾರ್ ಅಗ್ನಿಹೋತ್ರಿ ಇದು ಕೆಂಪು ಬಣ್ಣದ ಶನಿ ದೇವನನ್ನು ಪೂಜಿಸಲು ಬರುವ ಹಿಂದೂ ಭಕ್ತರು ಅರ್ಪಿಸುವ ನೇಜಾ (ಧ್ವಜ) ಎಂದು ವಿವರಿಸಿದ್ದರು.
ಬಡೆ ಮಿಯಾನ್ ಛೋಟೆ ಮಿಯಾನ್ ದರ್ಗಾದಲ್ಲಿ ಭಗವಾ ಧ್ವಜ ಹಾರಿಸಿದ ಹಿಂದುಗಳು, ಹಿಂದುಗಳ ಪಾಲಾದ ದರ್ಗಾ
ಉತ್ತರ ಪ್ರದೇಶದ ಎಟಾ (Etah) ಜಿಲ್ಲೆಯ ಜಲೇಸರ್ನಲ್ಲಿರುವ ಬಡೇ ಮಿಯಾನ್ ಛೋಟೆ ಮಿಯಾನ್ ದರ್ಗಾದಲ್ಲಿ, ಶನಿಜಾತಕ್ಕೂ ಮೊದಲು ಹಸಿರು ಧ್ವಜದ ಬದಲಿಗೆ ಭಗವಾ ಧ್ವಜವನ್ನು ಹಾರಿಸಲಾಗಿದೆ. ಮರುದಿನ ಬುಧವಾರ ದಂದೂ ದರ್ಗಾ ಪರಿಸರದಲ್ಲಿ ಭಗವಾ ಧ್ವಜಗಳನ್ನ ಹಾಕಲಾಗುತ್ತಿದೆ. ಅದೇ ಸಮಯದಲ್ಲಿ, ಇಲ್ಲಿ ಮೊದಲು ಶನಿ ದೇವಾಲಯವಿತ್ತು ಮತ್ತು ನಂತರ ಅದನ್ನು ಅತಿಕ್ರಮಿಸಿ ದರ್ಗಾ ಮಾಡಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ತಮ್ಮದೂ ಒಂದು ಭಾಗ ದರ್ಗಾದಲ್ಲಿದೆ ಎಂದು ಜೈನ ಸಮಾಜದವರೂ ಹೇಳಿದ್ದಾರೆ.
ಜಾತ್ ಎಂದು ಕರೆಯಲ್ಪಡುವ ಶನಿ ದೇವನನ್ನು ಪೂಜಿಸಲು ಹೆಚ್ಚಿನ ಸಂಖ್ಯೆಯ ಹಿಂದೂ ಭಕ್ತರು ಇಲ್ಲಿಗೆ ಬರುತ್ತಾರೆ ಎಂದು ಅಲಿಗಂಜ್ ಎಸ್ಡಿಎಂ ಅಲಂಕಾರ್ ಅಗ್ನಿಹೋತ್ರಿ ಹೇಳಿದರು. ಈ ಸಮಯದಲ್ಲಿ ಅವರು ನೇಜಾ (ಧ್ವಜ) ಅರ್ಪಿಸುತ್ತಾರೆ. ಕೆಂಪು ಬಣ್ಣದ (ಅಥವಾ ಕೇಸರಿ) ಧ್ವಜವನ್ನು ಈ ಭಕ್ತರು ಅರ್ಪಿಸುತ್ತಾರೆ. ದೂರದೂರುಗಳಿಂದ ಜನ ಬುಧವಾರ ಮತ್ತು ಶನಿವಾರದಂದು ದರ್ಗಾಕ್ಕೆ ಜಾತ್ಗಾಗಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ಅದೇ ಸಮಯದಲ್ಲಿ, ಜಲೇಸರ್ ದೇಹಾತ್ ಗ್ರಾಮ ಪಂಚಾಯಿತಿಯ ಮುಖ್ಯಸ್ಥ ಶೈಲೇಂದ್ರ ಸಿಂಗ್ ಮಾತನಾಡುತ್ತ, ಈ ಸ್ಥಳದಲ್ಲಿ ಶನಿದೇವನ ಪುರಾತನ ದೇವಾಲಯವಿತ್ತು ಮತ್ತು ದರ್ಗಾದಿಂದ ಜಮಾಯಿಸಿದ ಜನರು ಕ್ರಮೇಣ ಇಡೀ ದೇವಾಲಯವನ್ನು ಅತಿಕ್ರಮಿಸಿದರು ಎಂದು ಹೇಳುತ್ತಾರೆ. ಈಗ ದೇವಸ್ಥಾನ ಅಸ್ತಿತ್ವ ಕಳೆದುಕೊಂಡಿದೆ. ಸ್ಥಳೀಯ ಶಾಸಕ ಸಂಜೀವ್ ದಿವಾಕರ್ ಕೂಡ ಇದನ್ನೇ ಹೇಳುತ್ತಾರೆ.
ಈ ದರ್ಗಾದಲ್ಲಿ ಶನಿಜಾತದ ಕಾಣಿಕೆಯಲ್ಲಿ ಬರುವ ಕೋಟ್ಯಂತರ ರೂಪಾಯಿ ಹಾಗೂ ಸಾಮಾನುಗಳ ಹಗರಣದ ಪ್ರಕರಣವೂ ಬಯಲಿಗೆ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ಆಡಳಿತ ಮಂಡಳಿ ದರ್ಗಾವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇಲ್ಲಿನ ವ್ಯವಸ್ಥೆಗೆ ಸಂಬಂಧಿಸಿದ ಪ್ರತಿಯೊಂದು ಜಾಗ ಹಾಗು ವಸ್ತುಗಳೂ ಈಗ ಆಡಳಿತ ಮಂಡಳಿಯ ಕೈಗೆ ಬಂದಿದೆ. ಇಲ್ಲಿಗೆ ವಾರ್ಷಿಕ ಸುಮಾರು 5 ಕೋಟಿ ರೂಪಾಯಿ ಕಾಣಿಕೆ ಬರುತ್ತದೆ. ಈಗ ಇಲ್ಲಿ ಕಾಣಿಕೆಯಾಗಿ ಏನೇ ಹಣ ಬಂದರೂ ಅದು ಸರ್ಕಾರದ ಖಜಾನೆಗೆ ಜಮೆಯಾಗಲಿದೆ.
ಮೊದಲು ಈ ದರ್ಗಾ ಬಡೇ ಮಿಯಾನ್ ದರ್ಗಾ ಸಮಿತಿಯ ಪದಾಧಿಕಾರಿಗಳ ಸಂಬಂಧಿಕರ ವಶದಲ್ಲಿತ್ತು. ಈ ಕುಟುಂಬವು ಬಡಾ ಮಿಯಾನ್ ಮತ್ತು ಚೋಟಾ ಮಿಯಾನ್ ದರ್ಗಾಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿತ್ತು. ಹಗರಣದ ನಂತರ ಆಡಳಿತವು ಕ್ರಮ ಕೈಗೊಳ್ಳಲು ಪ್ರಾರಂಭಿಸಿದಾಗ, ಅವರು ಜಲೇಸರ್ ಅನ್ನು ಬಿಟ್ಟು ಓಡಿಹೋದರು. ಆಡಳಿತ ದರ್ಗಾ ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಕೆಲವರಿಗೆ ವಹಿಸಿದೆ.
ದರ್ಗಾ ಮತ್ತು ಶನಿ ದೇವಸ್ಥಾನದಲ್ಲಿರುವ ಬಡೇ ಮಿಯಾನ್ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ಇದೇ ವೇಳೆ ಬುಧವಾರ ನಡೆಯುವ ಜಾತ್ ನಿರ್ವಹಣೆಯನ್ನು ಜೈನ ಸಮಾಜದವರು ನೋಡಿಕೊಳ್ಳುತ್ತಾರೆ. ಇಲ್ಲಿ ಹಗರಣ ಮತ್ತು ರಿಗ್ಗಿಂಗ್ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಹೇಳಿದೆ.
ಗ್ರಾಮ್ ಪ್ರಧಾನ್ (ಗ್ರಾಮದ ಮುಖ್ಯಸ್ಥ) ಶೈಲೇಂದ್ರ ಸಿಂಗ್ ರಜಪೂತ್ ಅವರು ಈ ಹಗರಣದ ಬಗ್ಗೆ 14 ಮಾರ್ಚ್ 2022 ರಂದು ದೂರು ದಾಖಲಿಸಿದ್ದರು ಮತ್ತು ಸಮಿತಿಯ ವಿರುದ್ಧ ತನಿಖೆಗೆ ಒತ್ತಾಯಿಸಿದ್ದರು. ಆ ನಂತರ ಜಾಲೇಸರ ದರ್ಗಾ ಸಮಿತಿ ಸದಸ್ಯರ ವಿರುದ್ಧ ಸುಮಾರು 99 ಕೋಟಿ ರೂ. ಗುಳುಂ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತಿ. ಈ ಸಂಬಂಧ ದರ್ಗಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಕ್ಬರ್ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ದರ್ಗಾದ ಹಣವನ್ನು ದುರುಪಯೋಗಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಸಂಗ್ರಹಿಸಿರುವ ಆರೋಪ ಅವರ ಮೇಲಿದೆ.
ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಎಸ್ಎಚ್ಒ ಜಲೇಸರ್ ಇನ್ಸ್ಪೆಕ್ಟರ್ ಶಂಭುನಾಥ್, “ಸ್ಥಳದಲ್ಲಿ ಸಾಕಷ್ಟು ಪೊಲೀಸ್ ಬಲದೊಂದಿಗೆ ಪಿಎಸಿಯನ್ನು ಸಹ ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕಂಟ್ರೋಲ್ ನಲ್ಲಿದೆ” ಎಂದು ತಿಳಿಸಿದ್ದಾರೆ.