“ಎಲ್ಲಿಯವರೆಗೆ ನಾ ಜೀವಂತ ಇರ್ತೇನೋ ಅಲ್ಲಿವರೆಗೆ ಈ ದೇಶವನ್ನ ಹಿಂದೂ ರಾಷ್ಟ್ರ ಮಾಡೋಕೆ ಬಿಡಲ್ಲ, ಆ ಮೋದಿ-ಯೋಗಿಯನ್ನ…”: ಕಾಂಗ್ರೆಸ್ ಶಾಸಕ

in Uncategorized 11,537 views

ತೆಲಂಗಾಣ ಕಾಂಗ್ರೆಸ್ ಶಾಸಕ ರಶೀದ್ ಖಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಾರಿ ಅವರುvದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸುವ ವಿಷಯವನ್ನಿಟ್ಟುಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ವಿಶ್ವ ಹಿಂದೂ ಪರಿಷತ್ (VHP), ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಭಾರತವನ್ನು ಹಿಂದೂ ರಾಷ್ಟ್ರ’ ಮಾಡುವ ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ರಶೀದ್ ಖಾನ್ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ವಿಶ್ವ ಹಿಂದೂ ಪರಿಷತ್ (VHP), ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

Advertisement

ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಮಾತನಡಿದ ರಶೀದ್ ಖಾನ್, “ನಾನು ಬದುಕಿರುವವರೆಗೂ ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ. ನರೇಂದ್ರ ಮೋದಿ, (ಕೇಂದ್ರ ಗೃಹ ಸಚಿವ) ಅಮಿತ್ ಶಾ, ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಬಜರಂಗದಳ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕನಸುಗಳು ಎಂದಿಗೂ ಈಡೇರಲು ಸಾಧ್ಯವಿಲ್ಲ” ಎಂದಿದ್ದಾರೆ.

ರಶೀದ್ ಖಾನ್ ಹೇಳಿಕೆಗೆ ಬಿಜೆಪಿ ನಾಯಕ ಮತ್ತು ತೆಲಂಗಾಣ ರಾಜ್ಯದ (ಹೈದ್ರಾಬಾದ್‌ನ ಗೋಶಾಮಹಲ್) ಶಾಸಕ ಟಿ ರಾಜಾ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಶೀದ್ ಖಾನ್ ಅವರಂತಹವರು ಹಿಂದೂ ರಾಷ್ಟ್ರದ ಕನಸಿಗಾಗಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಿದ್ದಾರೆ ಎಂದು ಅವರು ಹೇಳಿದರು. ಟಿ ರಾಜಾ ಸಿಂಗ್ ಮುಂದೆ ಮಾತನಾಡುತ್ತ, “ಭಾರತವು ಹಿಂದೂ ರಾಷ್ಟ್ರವಾಗಲು ಸಿದ್ಧವಾಗಿದೆ, ರಶೀದ್ ಖಾನ್ ಅವರಂತಹ ಜನರು ಈ ಕನಸನ್ನು ಸಾಧಿಸಲು ಶ್ರಮಿಸಲು ನಮಗೆ ಸ್ಫೂರ್ತಿ ನೀಡುತ್ತಾರೆ” ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಂ ರಿಜ್ವಿ ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರವೂ ಕಾಂಗ್ರೆಸ್ ನಾಯಕ ರಶೀದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜಿತೇಂದ್ರ ನಾರಾಯಣ ತ್ಯಾಗಿ ಆದ ವಾಸಿಂ ರಿಜ್ವಿಯ ಕ ತ್ತು ಸೀ ಳಿ ತಂದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಶೀದ್ ಖಾನ್ ಘೋಷಿಸಿದ್ದರು.

ಆಗ ಮಾತನಾಡಿದ್ದ ರಶೀದ್ ಖಾನ್, “ವಾಸಿಂ ರಿಜ್ವಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಇಸ್ಲಾಂಗೆ ಅಗೌರವ ತೋರಿದ್ದಾನೆ” ಎಂದಿದ್ದರು. ಇಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ತೆಲಂಗಾಣ ಕಾಂಗ್ರೆಸ್ ನಾಯಕ ಫಿರೋಜ್ ಖಾನ್, ಇಸ್ಲಾಂಗೆ ಅಗೌರವ ತೋರಿದ್ದಕ್ಕಾಗಿ ವಸೀಂ ರಿಜ್ವಿ ತಲೆಗೆ 50 ಲಕ್ಷ ರೂಪಾಯಿ ಪ್ರತ್ಯೇಕ ಬಹುಮಾನ ನೀಡುವುದಾಗಿ ಫಿರೋಜ್ ಖಾನ್ ಘೋಷಿಸಿದ್ದಾರೆ. ಈ ಹಿಂದೆ, ವಸೀಂ ರಿಜ್ವಿ ವಿರುದ್ಧ ತೆಲಂಗಾಣ ಬಂದ್‌ಗೆ ಕರೆ ನೀಡಿದ್ದ ರಶೀದ್ ಖಾನ್, ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಹೆಸರಿನಲ್ಲಿ ವಾಸಿಂ ರಿಜ್ವಿಯ ಶಿ ರ ಚ್ಛೇ ದದ ಬಗ್ಗೆಯೂ ಮಾತನಾಡಿದ್ದರು.

ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ‘ವಾಸಿಂ ರಿಜ್ವಿ’ ಡಿಸೆಂಬರ್ 6, 2021 ರಂದು ಡಾಸ್ನಾ ದೇವಿ ಮಂದಿರದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ಬಳಿಕ ಅವರು ತಮ್ಮ ಹೆಸರನ್ನು ಜಿತೇಂದ್ರ ನಾರಾಯಣ ಸ್ವಾಮಿ / ತ್ಯಾಗಿ ಎಂದು ಬದಲಾಯಿಸಿಕೊಂಡಿದ್ದರು. ಈ ಪ್ರಕ್ರಿಯೆಯ ಸಮಯದಲ್ಲಿ, ದೇವಸ್ಥಾನದಲ್ಲಿ ಹವನ ಪೂಜೆ ಮತ್ತು ಆಚರಣೆಗಳು ನಡೆದವು ಮತ್ತು ಜಲಾಭಿಷೇಕವನ್ನು ‘ರಿಜ್ವಿ’ ಮಾಡಿದ್ದರು. ದೇವಸ್ಥಾನದ ಮಹಂತ್, ಯತಿ ನರಸಿಂಹಾನಂದ ಅವರು, ಜಾತಿ ವ್ಯವಸ್ಥೆ ಹಿಂದೂ ಧರ್ಮದಲ್ಲಿ ದೌರ್ಬಲ್ಯವಲ್ಲ ಎಂದು ಹೇಳಲು ಬಯಸಿದ ಕಾರಣ ವಾಸಿಂ ಅವರಿಗೆ ತ್ಯಾಗಿ ಉಪಜಾತಿಯನ್ನು ನೀಡಿದರು ಎಂದು ಹೇಳಿದ್ದರು. ಮತ್ತೊಂದೆಡೆ, “ನಾನು ಈಗ ಯತಿಯ ಸೈನಿಕನಾಗಿದ್ದೇನೆ, ನಾನು ಸನಾತನದ ಶ ತ್ರು ಗಳೊಂದಿಗೆ ಹೋರಾಡುತ್ತೇನೆ” ಎಂದು ರಿಜ್ವಿ ಹೇಳಿದ್ದರು.

Advertisement
Share this on...