ಥಾಣೆ: ಕರೊನಾ ಲಸಿಕಾ ಕೇಂದ್ರದ ನಿರ್ಲಕ್ಷ್ಯದಿಂದಾಗಿ ಮಹಾರಾಷ್ಟ್ರದ ಥಾಣೆ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಮೂರು ಡೋಸ್ ಕರೊನಾ ಲಸಿಕೆ ಪಡೆದಿರುವ ಆತಂಕಕಾರಿ ಘಟನೆ ನಡೆದಿದೆ.
ಜೂನ್ 25ರಂದು ಈ ಘಟನೆ ನಡೆದಿದೆ. 28 ವರ್ಷದ ರೂಪಾಲಿ ಸಲಿ ಎಂಬಾಕೆ ಕರೊನಾ ಲಸಿಕೆ ಪಡೆದುಕೊಳ್ಳಲು ಥಾಣೆಯಲ್ಲಿರುವ ಆನಂದ್ ನಗರ ಲಸಿಕಾ ಕೇಂದ್ರಕ್ಕೆ ತೆರಳಿದ್ದರು. ಕೇಂದ್ರದಲ್ಲಿದ್ದ ಆರೋಗ್ಯ ಕಾರ್ಯಕರ್ತೆಯು ರೂಪಾಲಿ ಅವರಿಗೆ ಒಂದರ ನಂತರ ಒಂದರಂತೆ ಮೂರು ಡೋಸ್ ಲಸಿಕೆ ನೀಡಿದ್ದು, ಅದನ್ನು ನೋಡಿ ರೂಪಾಲಿ ಗೊಂದಲಕ್ಕೆ ಒಳಗಾಗಿದ್ದಾರೆ.
ಒಂದು ಡೋಸ್ ಲಸಿಕೆ ಪಡೆದುಕೊಂಡ ಬಳಿಕ ಎರಡನೇ ಡೋಸ್ ಪಡೆಯಲು ಒಂದು ತಿಂಗಳ ಅಂತರವಿರಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಒಂದೇ ಬಾರಿ ಮೂರು ಡೋಸ್ ನೀಡಿದ್ದರಿಂದ ಹೆದರಿರುವ ರೂಪಾಲಿ ನಡೆದ ಘಟನೆಯನ್ನು ಗಂಡನ ಮುಂದೆ ಹೇಳಿಕೊಂಡಿದ್ದಾರೆ. ಬಳಿಕ ಆಕೆಯ ಪತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದೊಂದು ಲಸಿಕಾ ಕೇಂದ್ರದ ಸಿಬ್ಬಂದಿಯಿಂದಾಗಿರುವ ನಿರ್ಲಕ್ಷ್ಯ. ಮಹಿಳೆಗೆ ಲಸಿಕಾ ಪ್ರಕ್ರಿಯೆಯ ಬಗ್ಗೆ ಅರಿವಿರಲಿಲ್ಲ ಮತ್ತು ಆ ಸಮಯದಲ್ಲಿ ಡೋಸ್ ನೀಡುವಾಗ ಆಕೆ ವಿರೋಧಿಸಿಲ್ಲ. ಸದ್ಯ ರೂಪಾಲಿ ಅವರನ್ನ ಹಿರಿಯ ವೈದ್ಯರು ಪರೀಕ್ಷಿಸಿದ್ದಾರೆ ಮತ್ತು ಈಗ ಆಕೆ ಸಂಪೂರ್ಣವಾಗಿ ಉತ್ತಮವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂರು ಬಾರಿ ಲಸಿಕೆ ನೀಡಿರುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಟಿಎಂಸಿಯ ವೈದ್ಯಕೀಯ ಆರೋಗ್ಯ ಅಧಿಕಾರಿ ಡಾ.ವೈಜಂತಿ ದೇವಗಿಕರ್ ನಿರಾಕರಿಸಿದರೆ, ಮೂರು ಬಾರಿ ಲಸಿಕೆ ನೀಡಿರುವುದಾಗಿ ಥಾಣೆ ಮೇಯರ್ ಸುದ್ದಿಗಾರರಿಗೆ ದೃಢಪಡಿಸಿದರು.
ಇದೇ ಮೊದಲ ಬಾರಿಗೆ ಥಾಣೆಯಲ್ಲಿ ಇಂತಹ ಘಟನೆ ನಡೆದಿದೆ. ಈ ಪ್ರಮಾದವನ್ನು ಮುಚ್ಚಿಹಾಕಲು ಆರೋಗ್ಯ ಸಂಸ್ಥೆ ಯತ್ನಿಸುತ್ತಿದೆ ಎಂಬುದು ಸುಳ್ಳು. ಈ ಘಟನೆಯ ಬಗ್ಗೆ ನಾನೇ ರಾಜ್ಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಮತ್ತು ನಾನು ವೈದ್ಯರನ್ನು ಸಹ ಖಂಡಿಸಿದ್ದೇನೆ. ನಾನು ನೇರವಾಗಿ ಮಹಿಳೆಯ ಪತಿಯೊಂದಿಗೆ ಮಾತನಾಡಿದ್ದೇನೆ. ಆದ್ದರಿಂದ ಈ ಘಟನೆಯನ್ನು ನಿರ್ಲಕ್ಷಿಸಲಾಗದು ಎಂದು ನಾಯಕ ಮನೋಹರ್ ಡುಂಬಾರೆ ಹೇಳಿದರು.
ನಾಗರಿಕ ಸಂಸ್ಥೆಯ ಅಧಿಕಾರಿಗಳೀಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದಾರೆ.
ಶೀತ ಅಥವ ಬೇರೆ ಯಾವುದೇ ಕಾಯಿಲೆ ಇದ್ದಾಗ ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರುವ ಅವರು ಇಚ್ಛಿಸಿದರೆ ಈ ಲಸಿಕೆ ಪಡೆಯಬಹುದಾಗಿದೆ, ಅಲ್ಲದೆ ಕೊರೊನಾದಿಂದ ಚೇತರಿಸಿದವರು ಮೂರು ತಿಂಗಳ ಬಳಿಕ ಲಸಿಕೆ ಪಡೆಯುವಂತೆ ಸಿಡಿಸಿ ಹೇಳಿದೆ.
ಕೊರೊನಾದಿಂದ ಚೇತರಿಸಿದವರಲ್ಲಿ ನೈಸರ್ಗಿಕವಾಗಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಇರುತ್ತದೆ, ಇದು 6 ತಿಂಗಳವರೆಗೆ ಇರುವುದು, ಆದ್ದರಿಂದ ಅದರ ಬಳಿಕ ಲಸಿಕೆ ಪಡೆದರೂ ಸಾಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇನ್ನು ಅಲರ್ಜಿ ಸಮಸ್ಯೆ ಇರುವವರು ಹಾಗೂ ಇತರ ಆರೋಗ್ಯ ಸಂಬಂಧಿತ ಸಮಸ್ಯೆ ಇರುವವರು ವೈದ್ಯರು ಸೂಚಿಸಿದರಷ್ಟೇ ತೆಗೆದುಕೊಳ್ಳಬಹುದು, ಲಸಿಕೆ ಪಡೆಯಲು ಬಂದವರಿಗೆ ಜ್ವರ ಮತ್ತಿತರ ಆರೋಗ್ಯ ಸಮಸ್ಯೆ ಲಸಿಕೆ ನೀಡುವುದಿಲ್ಲ.
ಆದರೆ ಕೆಲವರು ಆರೋಗ್ಯವಾಗಿರುತ್ತದೆ, ಲಸಿಕೆ ಪಡೆಯುವ ಸಂದರ್ಭದಲ್ಲಿ ಶೀತದ ಸಮಸ್ಯೆ ಇರುತ್ತದೆ, ಅಂಥವರು ಲಸಿಕೆ ಪಡೆಯಬಹುದೇ, ಶೀತವಿದ್ದವರು ಲಸಿಕೆ ಪಡೆದರು ಅದರ ಪರಿಣಾಮ ಕುಗ್ಗುವುದೇ ಎಂಬೆಲ್ಲಾ ಮಾಹಿತಿ ಇಲ್ಲಿದೆ:
ಕಾಯಿಲೆ ಇದ್ದಾಗ ಲಸಿಕೆ ಪಡೆದರೆ ಏನಾಗುತ್ತೆ?
ಯಾವಾಗ ವ್ಯಕ್ತಿಗೆ ಕಾಯಿಲೆ ಬರುತ್ತದೋ ಆಗ ದೇಹಕ್ಕೆ ಯಾವುದಾದರೂ ಸೋಂಕಾಣು ಅಥವಾ ಬ್ಯಾಕ್ಟಿರಿಯಾ ದಾಳಿಯಿಂದ ಉಂಟಾಗಿರುತ್ತೆ, ರೋಗ ನಿರೋಧಕ ವ್ಯವಸ್ಥೆ ಆ ಸೋಂಕಾಣು ವಿರುದ್ಧ ಹೋರಾಡುತ್ತಿರುತ್ತಿದೆ.
ಮನುಷ್ಯ ಆರೋಗ್ಯವಾಗಿರುವಾಗ ಲಸಿಕೆ ಉತ್ತಮ ಪ್ರಯೋಜನ ಬೀರುತ್ತದೆ ಎಂಬುವುದು ಸಾಮಾನ್ಯ ಜ್ಞಾನ. ರೋಗ ನಿರೋಧಕ ವ್ಯವಸ್ಥೆ ಈಗಾಗಲೇ ದೇಹದೊಳಗಿರುವ ಅಪರಿಚಿತ ಸೊಂಕು ಅಥವಾ ಬ್ಯಾಕ್ಟಿರಿಯಾ ಜೊತೆ ಹೋರಾಡುತ್ತಿರುವಾಗ ಕೋವಿಡ್ 19 ಲಸಿಕೆ ನೀಡುವುದು ಸುರಕ್ಷಿತವಲ್ಲ.
ಶೀತ ಅಥವಾ ಜ್ವರ ಲಸಿಕೆಯ ಪ್ರಯೋಜನ ಕುಗ್ಗಿಸುವುದೇ?
ಸಣ್ಣ ಜ್ವರ ಅಥವಾ ಶೀತವಿದ್ದರೆ ಅದು ಲಸಿಕೆಯ ಪ್ರಯೋಜನ ಕುಗ್ಗಿಸುತ್ತೆ ಎಂಬುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ ನಿಮಗೆ ಯಾವ ಬಗೆಯ ಸೋಂಕು ತಗುಲಿದೆ ಅದರ ಮೇಲೆ ಲಸಿಕೆ ದೇಹದ ಮೇಲೆ ಪ್ರಭಾವ ಬೀರುತ್ತದೆ.
ಉದಾಹರಣೆಗೆ ಸಾಮಾನ್ಯ ಶೀತದ ಸಮಸ್ಯೆಯಿದ್ದರೆ ಅವರು ಲಸಿಕೆ ಪಡೆದರೆ ಆ ಚಿಕ್ಕ ಸೋಂಕು ಲಸಿಕೆಗೆ ಹಾನಿಯೇನು ಉಂಟು ಮಾಡುವುದಿಲ್ಲ, ಆದರೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದರೆ ಅಡ್ಡಪರಿಣಾಮ ಬೀರಬಹುದು.
ಅನಾರೋಗ್ಯವಿದ್ದಾಗ ಲಸಿಕೆ ಪಡೆದರೆ ಏನಾಗುತ್ತೆ?
ಮುಖ್ಯವಾದ ಅಪಾಯವೆಂದರೆ ಅನಾರೋಗ್ಯವಿದ್ದಾಗ ಲಸಿಕೆ ಪಡೆದರೆ ರೋಗ ಲಕ್ಷಣಗಳು ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಈ ಲಸಿಕೆಯ ರಿಯಾಕ್ಷನ್‌ನಿಂದ ಗಂಭೀರವಾದ ಅಡ್ಡಪರಿಣಾಮವೂ ಉಂಟಾಗುವ ಸಾಧ್ಯತೆ ಇದೆ.
ಆದ್ದರಿಂದ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಲಸಿಕೆ ಪಡೆಯಬಹುದೇ, ಇಲ್ಲವೇ ಎಂಬುವುದನ್ನು ನಿಮ್ಮ ವೈದ್ಯರ ಬಳಿ ಚರ್ಚಿಸಿದ ಬಳಿಕವಷ್ಟೇ ತೆಗೆಯಿರಿ.