ಒಂದಲ್ಲ ಎರಡಲ್ಲ ಬರೋಬ್ಬರಿ 16 ಕೋಟಿ ಕೊಟ್ಟು ಮಗುವಿನ ಪ್ರಾಣ ಉಳಿಸಿದ ವಿರಾಟ್ ಅನುಷ್ಕಾ ದಂಪತಿ

in Helath-Arogya/Kannada News/News/ಕ್ರೀಡೆ 168 views

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇತ್ತೀಚಿಗಷ್ಟೆ ಕೆಟ್ಟೊ ಅಭಿಯಾನದಡಿ ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ 11 ಕೋಟಿಯಲ್ಲಿ ವಿರುಷ್ಕಾ ದಂಪತಿಯದ್ದು 2 ಕೋಟಿ ದೇಣಿಗೆ ಕೂಡ ಇತ್ತು. ಇಷ್ಟು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ವಿರಾಟ್ ಕೊಹ್ಲಿ 6.67 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು.

Advertisement

ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದ ಮುಗ್ಧ ಮಗುವಿನ ಪ್ರಾಣ ಉಳಿಸುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ. ಅಯಾನ್ಷ್ ಗುಪ್ತಾ ಎಂಬ ಪುಟ್ಟ ಮಗು ಬೆನ್ನುಮೂಳೆಯ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿತ್ತು. ಈ ಖಾಯಿಲೆಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ಔಷಧಿಯ ಅಗತ್ಯವಿತ್ತು. ಹೀಗಾಗಿ ಮಗುವಿನ ಪೋಷಕರು ಹಣ ಸಂಗ್ರಹಿಸಲು ಆರಂಭಿಸಿದ್ದರು.

ಈ ವಿಷಯವನ್ನು ತಿಳಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಮಗುವಿನ ಪೋಷಕರಿಗೆ ಸರಿಯಾದ ಸಮಯಕ್ಕೆ ಒದಗಿಸಿ ಔಷಧಿ ಕೊಡಿಸುವುದರ ಮೂಲಕ ಮುಗ್ಧ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಾಡಿರುವ ಈ ಅತ್ಯುತ್ತಮ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ಬಾಣಂತನದ ವೇಳೆಯ ಬಟ್ಟೆಯನ್ನ ಹರಾಜಿಗಿಟ್ಟ ಅನುಷ್ಕಾ ಶರ್ಮಾ,  ಎರಡೂವರೆ ಲಕ್ಷ ಲೀಟರ್ ನೀರು ಉಳಿತಾಯ

ಪರಿಸರ ಪ್ರೇಮದ ಕುರಿತಂತೆ ಆಗಾಗ್ಗೆ ನಟಿ ಅನುಷ್ಕಾ ಶರ್ಮಾ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಪತಿ, ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜತೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಅನುಷ್ಕಾ ಈಗ ಇನ್ನೊಂದು ಹೊಸ ಟ್ರೆಂಡ್‌ ಶುರು ಮಾಡಿದ್ದಾರೆ.

ಅದೇನೆಂದರೆ ‘ಸರ್ಕ್ಯೂಲರ್‌-ಫ್ಯಾಷನ್’ ಎಂಬ ಟ್ರೆಂಡ್‌ ಇದು. ಬಳಸಿದ ಬಟ್ಟೆಗಳನ್ನು ಮರಳಿ ಬಳಸುವ ಸರ್ಕ್ಯೂಲರ್‌-ಫ್ಯಾಷನ್ ಎಂಬ ಟ್ರೆಂಡ್‌ ಇದು ಎಂದಿರುವ ನಟಿ, ಇದನ್ನು ಪ್ರಮೋಟ್‌ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಫ್ಯಾಷನ್‌ ಲೋಕದಿಂದ ಹೊಸದೊಂದು ಸೃಷ್ಟಿ ಮಾಡಲಿರುವುದಾಗಿ ಹೇಳಿದ್ದಾರೆ.

ಇದರ ಮೊದಲ ಹೆಜ್ಜೆಯಾಗಿ ತಮ್ಮ ಬಾಣಂತನದ ಅವಧಿಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಆನ್‌ಲೈನ್‌ ಮೂಲಕ ಹರಾಜು ಹಾಕಿದ್ದಾರೆ. ಸ್ನೇಹ ಪ್ರತಿಷ್ಠಾನದ ಮೂಲಕ ಹರಾಜು ಪ್ರಕ್ರಿಯೆ ನಡೆಸಿರುವ ನಟಿ ಇದರಿಂದಾಗಿ ತಮ್ಮಿಂದ 2.5 ಲಕ್ಷ ಲೀಟರ್‌ ನೀರು ಉಳಿತಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಬಟ್ಟೆ ತಯಾರಿಕೆಗೆ ಬಳಸುವ ನೀರನ್ನು ಉಳಿತಾಯ ಮಾಡಬಹುದು ಎನ್ನುವುದು ಅವರ ಮಾತು.

‘ದೇಶದಲ್ಲಿರುವ ಗರ್ಭಿಣಿಯರ ಪೈಕಿ ಶೇ. 1ರಷ್ಟು ಮಹಿಳೆಯರು ಮಾತ್ರ ಮರುಬಳಸಬಲ್ಲ ಬಾಣಂತನದ ಬಟ್ಟೆ ಖರೀದಿ ಮಾಡಿದರೆ, ನಾವೆಲ್ಲಾ ಸೇರಿಕೊಂಡು ವ್ಯಕ್ತಿಯೊಬ್ಬ 200 ವರ್ಷ ಬದುಕಿದರೆ ಆತನಿಗೆ ಬೇಕಾಗುವಷ್ಟು ನೀರನ್ನು ಉಳಿತಾಯ ಮಾಡಬಹುದಾಗಿದೆ. ಇಂಥ ಸಣ್ಣ ಪುಟ್ಟ ಕ್ರಿಯೆಗಳಿಂದ ದೊಡ್ಡ ಬದಲಾವಣೆ ತರಬಹುದಾಗಿದೆ’ ಎಂದು ತಮ್ಮ ಈ ಹೊಸ ಟ್ರೆಂಡ್‌ಗೆ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ಈ ದಂಪತಿಗೆ ಇದೇ ಜನವರಿಯಲ್ಲಿ ಹೆಣ್ಣುಮಗು ಜನಿಸಿದೆ. ಅದಕ್ಕೆ ವಮಿಕಾ ಎಂದು ನಾಮಕರಣ ಮಾಡಿದ್ದಾರೆ.

Advertisement
Share this on...