ಒಂದು ಲೀಟರ್ ಪೆಟ್ರೋಲ್‌ಗೆ ಒಂದು ಏರೋಪ್ಲೇನ್ ಎಷ್ಟು ಮೈಲೇಜ್ ಕೊಡುತ್ತೆ? ಇಲ್ಲಿದೆ ಅದರ ಶಾಕಿಂಗ್ ಮಾಹಿತಿ

in Kannada News/News/ಕನ್ನಡ ಮಾಹಿತಿ 503 views

ವಿಮಾನಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ನೋಡಿರುತ್ತಾರೆ ಎಂದು ಹೇಳಬಹುದು, ಹಕ್ಕಿಯಂತೆ ಆಕಾಶದಲ್ಲಿ ಹಾರುವ ಕನಸನ್ನು ರೈಟ್‌ ಸಹೋದರರು 1903ರಲ್ಲಿ ವಿಮಾನದ ಆವಿಷ್ಕಾರದ ಮೂಲಕ ನನಸು ಮಾಡಿಕೊಂಡರು. ಒಬ್ಬರು ಇಲ್ಲವೇ ಇಬ್ಬರು ಪ್ರಯಾಣಿಸಬಹುದಾಗಿದ್ದ ವಿಮಾನದಿಂದ ಶುರುವಾದ ಈ ಪಯಣ ಇಂದು ನೂರಾರು ಜನರನ್ನು ಏಕ ಕಾಲಕ್ಕೆ ಹೊತ್ತೂಯ್ಯುವ ಸಾಮರ್ಥ್ಯವನ್ನು ಪಡೆದಿವೆ. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಭಾರಿ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ ಎಂದು ಹೇಳಬಹುದು. ಇನ್ನು ವಿಮಾನ ಪ್ರಯಾಣ ಅನ್ನುವುದು ದೊಡ್ಡ ದೊಡ್ಡ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಬಡಜನರಿಗೆ ವಿಮಾನ ಪ್ರಯಾಣ ಬಹಳ ವೆಚ್ಚದಾಯವಾಗಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ವಿಮಾನ ಪ್ರಯಾಣ ಬಹಳ ವೆಚ್ಚದಾಯಕವಾದದ್ದು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಕಾರಣ ಜನರು ಹೆಚ್ಚಾಗಿ ವಿಮಾನಗಳಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಹೇಳಬಹುದು.

Advertisement

ಇನ್ನು ಹೆಚ್ಚಿನ ಜನರಿಗೆ ಜನರಿಗೆ ವಿಮಾನ ಪ್ರಯಾಣ ಬಹಳ ಎಚ್ಚರಿಕೆಯ ಪ್ರಯಾಣ ಆಗಿದ್ದು ಕೆಲವು ಬಾರಿ ನಮ್ಮ ಜೀವಕ್ಕೆ ಆಪತ್ತು ಬಂದರೆ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣ ವಿಮಾನದಲ್ಲಿ ಪ್ರಯಾಣ ಮಾಡಲು ಭಯಪಡುತ್ತಾರೆ ಎಂದು ಹೇಳಬಹುದು. ಇನ್ನು ಜನರು ವಿಮಾನದಲ್ಲಿ ಹೆಚ್ಚಾಗಿ ಪ್ರಯಾಣ ಮಾಡದ ಕಾರಣ ವಿಮಾಗಳ ಕುರಿತಾಗಿ ಹೆಚ್ಚಿನ ವಿಷಯಗಳನ್ನ ತಿಳಿದುಕೊಂಡಿರುವುದಿಲ್ಲ ಎಂದು ಹೇಳಬಹುದು. ಆ ಆಕಾಶದಲ್ಲಿ ಹಾರಾಡುವ ವಿಮಾನ ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದು ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ. ಹಾಗಾದರೆ ಒಂದು ವಿಮಾನದ ಎಷ್ಟು ಮೈಲೇಜ್ ಕೊಡುತ್ತದೆ ಮತ್ತು ಎಷ್ಟು ದೂರ ಪ್ರಯಾಣ ಮಾಡಲು ಎಷ್ಟು ಇಂಧನ ಬೇಕಾಗುತ್ತದೆ? ಎಂದು ನೋಡುವುದಾದರೆ , ಬೋಯಿಂಗ್ 747 ತರಹದ ವಿಮಾನಗಳು ಹಾರಾಟವನ್ನ ಶುರು ಮಾಡಿದರೆ ಇಂತಹ ವಿಮಾನಗಳಿಗೆ ಪ್ರತಿ ಸೆಕೆಂಡ್ ಗೆ 4 ಲೀಟರ್ ಪೆಟ್ರೋಲ್ ಬೇಕಾಗುತ್ತದೆ ಮತ್ತು ಪ್ರತಿ ಒಂದು ಕಿಲೋ ಮೀಟರ್ ಪ್ರಯಾಣ ಮಾಡಲು ಈ ವಿಮಾನಗಳಿಗೆ 12 ಲೀಟರ್ ಪೆಟ್ರೋಲ್ ಬೇಕಾಗುತ್ತದೆ.

ಇನ್ನು ಈ ವಿಮಾನದ ಸುಮಾರು 10 ಘಂಟೆ ಸತತವಾಗಿ ಪ್ರಯಾಣವನ್ನ ಮಾಡಿದರೆ ಸುಮಾರು 1.5 ಲಕ್ಷ ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಇನ್ನು ಒಂದು ವಿಮಾನಕ್ಕೆ 1.5 ಲಕ್ಷ ಲೀಟರ್ ಪೆಟ್ರೋಲ್ ಬೇಕು ಅಂದರೆ ನಿಮಗೆ ಶಾಕ್ ಆಗುವುದು ಸಹಜ.

ಆದರೆ ನಾವು ಇಲ್ಲಿ ಬರಿ ಪೆಟ್ರೋಲ್ ಖರ್ಚಿನ ಬಗ್ಗೆ ಮಾತ್ರ ಗಮನವನ್ನ ಕೊಡದೆ ಆ ವಿಮಾನ ಎಷ್ಟು ಕಿಲೋ ಮೀಟರ್ ಪ್ರಯಾಣ ಮಾಡಿದೆ ಅನ್ನುವುದನ್ನ ಕೂಡ ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ. ಇನ್ನು ಲೆಕ್ಕ ಹಾಕುವುದಾದರೆ, ಈ ವಿಮಾನ ಒಂದು ಬಾರಿ ಸುಮಾರು 500 ಮಂದಿ ಪ್ರಯಾಣಿಕರನ್ನ ಹೊತ್ತು ಸಾಗುತ್ತದೆ ಮತ್ತು 500 ಮಂದಿ ಪ್ರಯಾಣಿಕರನ್ನ ಹೊತ್ತ ವಿಮಾನ 1 ಕಿಲೋ ಮೀಟರ್ ಸಾಗಲು ಸುಮಾರು 12 ಲೀಟರ್ ಪೆಟ್ರೋಲ್ ಖರ್ಚು ಮಾಡುತ್ತದೆ ಮತ್ತು ಒಬ್ಬ ವ್ಯಕ್ತಿಗೆ ಪ್ರತಿ ಕಿಲೋ ಮೀಟರ್ ಗೆ 0.024 ಲೀಟರ್ ಪೆಟ್ರೋಲ್ ಖರ್ಚು ಮಾಡುತ್ತದೆ.

ಇನ್ನು ಒಂದು ಕಾರಿಗೆ ಹೋಲಿಕೆ ಮಾಡುವುದಾದರೆ, ಒಂದು ಕಾರ್ ನಮ್ಮನ್ನ 1 ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 15 ಕಿಲೋ ಮೀಟರ್ ಕರೆದುಕೊಂಡು ಹೋಗುತ್ತದೆ, ಆದರೆ ಕಾರಿನಲ್ಲಿ 5 ಜನ ಮಾತ್ರ ಪ್ರಯಾಣ ಮಾಡಬಹುದು ಆದರೆ ವಿಮಾನದಲ್ಲಿ ಒಂದೇ ಸಲಕ್ಕೆ 500 ಜನ ಪ್ರಯಾಣ ಮಾಡಬಹುದಾಗಿದೆ. ಒಂದು ವಿಮಾನ ಪ್ರತಿ ಘಂಟೆಗೆ ಸುಮಾರು 900 ಕಿಲೋ ಮೀಟರ್ ಚಲಿಸುತ್ತದೆ ಮತ್ತು ಕಾರಿಗೆ ಹೋಲಿಕೆ ಮಾಡಿದರೆ ವಿಮಾನ ಒಳ್ಳೆಯದು ಅನ್ನುವುದು ನಮ್ಮ ಅನಿಸಿಕೆ.

ಇನ್ನೂ ಮುಖ್ಯವಾಗಿ ನಾವು ತಿಳಿಯಬೇಕಾದ ಅಚ್ಚರಿಯ ವಿಷಯವೆಂದರೆ ವಿಮಾನದ ಆಯುಸ್ಸನ್ನು ವರ್ಷಗಳ ಮೂಲಕ ಅಳೆಯಲಾಗುವುದಿಲ್ಲ. ಬದಲಾಗಿ ವಿಮಾನ ಗಗನಕ್ಕೇರುವ(ಟೇಕಾಫ್) ಮತ್ತು ಇಳಿಯುವ(ಲ್ಯಾಂಡಿಂಗ್‌) ಸಂಖ್ಯೆಯ ಮೇಲೆ ಅವಲಂಬಿತವಾಗಿದೆ. ಅಂದರೆ ಒಂದು ವಿಮಾನವನ್ನು ಎಷ್ಟು ಬಾರಿ ಟೇಕಾಫ್ ಮತ್ತು ಲ್ಯಾಂಡಿಂಗ್‌ ಮಾಡಬಹುದು ಎನ್ನುವುದನ್ನು ಸಂಸ್ಥೆಯೇ ನಿಗದಿ ಪಡಿಸಿರುತ್ತದೆ. ಆ ಸಂಖ್ಯೆ ಮುಗಿದ ನಂತರವೂ ವಿಮಾನವನ್ನು ಬಳಸಿದರೆ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಒಂದು ವಿಮಾನ ಬಳಕೆಗೆ ಅನರ್ಹ ಎಂದು ಪರಿಗಣಿತವಾದಾಗ ಅದು ಗೋಡೌನ್‌ ಸೇರುತ್ತದೆ. ಅದನ್ನು ಇತರೆ ವಿಮಾನಯಾನ ಸಂಸ್ಥೆಗಳು ಅದನ್ನು ಖರೀದಿಸುತ್ತವೆಯೇ ಎಂದು ಒಂದಷ್ಟು ಸಮಯ ಕಾಯುತ್ತವೆ. ಯಾರೂ ಖರೀದಿಗೆ ಮುಂದಾಗದಿದ್ದರೆ ಆ ವಿಮಾನದಲ್ಲಿನ ವಿದ್ಯುನ್ಮಾನ ಉಪಕರಣಗಳನ್ನು ಪ್ರತ್ಯೇಕಿಸಿ, ಅಗತ್ಯಗಳಿಗೆ ತಕ್ಕಂತೆ ಮರುಬಳಕೆ ಮಾಡಲಾಗುತ್ತದೆ.

ಒಂದು ವಿಮಾನದ ಬೆಲೆ ಯಾವಾಗ ಅವುಗಳ ಬಿಡಿಭಾಗಗಳಿಗಿಂತ ಕೆಳಕ್ಕೆ ಇಳಿಯುತ್ತದೋ ಆವಾಗ ವಿಮಾನದವನ್ನು ಗುಜರಿಗೆ ಹಾಕಿ ಬಿಡಿಭಾಗಗಳನ್ನು ಪ್ರತ್ಯೇಕಿಸಿ ರೀಸೈಕಲ್‌ ಮಾಡಲಾಗುತ್ತದೆ. ಮನುಷ್ಯರು ತಮ್ಮ ನಿವೃತ್ತ ಜೀವನವನ್ನು ಕಳೆಯಲು ವಿಶ್ರಾಂತಿ ಧಾಮಗಳ ಮೊರೆ ಹೋಗುತ್ತಾರೆ. ಅದೇ ರೀತಿ ಹಾರಾಟದಿಂದ ನಿವೃತ್ತಿಯಾದ ವಿಮಾನಗಳಿಗೂ ಒಂದು ತಂಗುಧಾಮವಿದೆ. ಅದನ್ನು “ಏರ್‌ಕ್ರಾಫ್ಟ್ ಬೋನ್‌ ಯಾರ್ಡ್‌’ ಎಂದು ಕರೆಯಲಾಗುತ್ತದೆ. ಇಂಥ ಒಂದು ಬೋನ್‌ ಯಾರ್ಡ್‌ನಲ್ಲಿ ನೂರಾರು, ಅಷ್ಟೇ ಯಾಕೆ ಸಾವಿರಾರು ನಿಷ್ಕ್ರಿಯ ವಿಮಾನಗಳನ್ನು ಸಾಲಾಗಿ ನಿಲ್ಲಿಸಿರುತ್ತಾರೆ. ಜಗತ್ತಿನ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವಿಮಾನಗಳನ್ನು ಇಲ್ಲಿ ಕಾಣಬಹುದು. ಬೋನ್‌ಯಾರ್ಡ್‌ಗಳನ್ನು ಎಲ್ಲೆಂದರಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಆ ಜಾಗದಲ್ಲಿ ಒಣ ಹವೆ ಇರಬೇಕಾಗುತ್ತದೆ. ಇದರಿಂದ ವಿಮಾನಗಳು ಬೇಗನೆ ತುಕ್ಕು ಹಿಡಿಯುವುದಿಲ್ಲ. ಬಿಡಿಭಾಗಗಳು ಬೇಗನೆ ನಿಷ್ಕ್ರಿಯವಾಗುವುದಿಲ್ಲ.

Advertisement
Share this on...