ಶ್ರದ್ಧಾ ವಾಕರ್ ಹ-ತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಪಾಲಿಗ್ರಾಫ್ ಟೆಸ್ಟ್ ನ ನಂತರ ಮೊದಲ ಬಾರಿಗೆ ಆಘಾತಕಾರಿ ಹೇಳಿಕೆ ನೀಡಿದ್ದಾನೆ. ದೆಹಲಿಯಲ್ಲಿ ತನ್ನ ಲಿವ್-ಇನ್ ಪಾರ್ಟ್ನರ್ ಶೃದ್ಧಾಳನ್ನು ಕೊಂ-ದ ಅಫ್ತಾಬ್, ತಾನು ಮಾಡಿದ ಕೃತ್ಯಗಳಿಗೆ ನಾನು ಪಶ್ಚಾತ್ತಾಪಪಡುವುದಿಲ್ಲ. ಗಲ್ಲಿಗೇರಿದರೂ ಜನ್ನತ್ ಸಿಗುತ್ತದೆ ಎಂದು ಪೊಲೀಸರಿಗೆ ಹೇಳಿದ್ದಾನೆ ಎಂದು ಹೇಳಲಾಗಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ಹೇಳಿದ್ದಾರೆ. ‘ಶ್ರದ್ಧಾಳನ್ನು ಕೊಂ-ದ ಕಾರಣಕ್ಕೆ ನೇಣಿಗೇರಿದರೂ ಪಶ್ಚಾತ್ತಾಪ ಪಡುವುದಿಲ್ಲ, ಏಕೆಂದರೆ ಜನ್ನತ್ಗೆ ಹೋದಾಗ 72 ಕನ್ಯೆಯರು ಸಿಗುತ್ತಾರೆ’ ಎಂದು ಅಫ್ತಾಬ್ ಹೇಳಿರುವುದಾಗಿ ಅಧಿಕಾರಿ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ, ಶ್ರದ್ಧಾಳ ದೇ-ಹವನ್ನು 35 ತುಂ-ಡುಗಳಾಗಿ ಕ-ತ್ತ-ರಿಸಿದ ನಂತರವೂ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಅವರು ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾನೆ. ಮುಂಬೈನಲ್ಲಿಯೇ ಶ್ರದ್ಧಾಳನ್ನು ಕೊಂ-ದು ತುಂ-ಡು ತುಂ-ಡಾಗಿ ಕ-ತ್ತ-ರಿಸಲು ನಿರ್ಧರಿಸಿದ್ದಾಗಿ ಆರೋಪಿ ಪೊಲೀಸರಿಗೆ ಸ್ಪಷ್ಟವಾಗಿ ಹೇಳಿದ್ದಾನೆ.
ಅಷ್ಟೇ ಅಲ್ಲ, ಶ್ರದ್ಧಾ ಜೊತೆ ಸಂಬಂಧ ಹೊಂದಿದ್ದಾಗಲೇ ಇನ್ನೂ 20ಕ್ಕೂ ಹೆಚ್ಚು ಹಿಂದೂ ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಬಂಬಲ್ ಆಪ್ ನಲ್ಲಿ ಹಿಂದೂ ಯುವತಿಯರನ್ನ ಹುಡುಕಿ ಬಲೆಗೆ ಬೀಳಿಸುತ್ತಿದ್ದ. ಶ್ರದ್ಧಾ ಹ-ತ್ಯೆ-ಯ ನಂತರ ಮನಶ್ಶಾಸ್ತ್ರಜ್ಞರನ್ನು ತಮ್ಮ ಕೋಣೆಗೆ ಕರೆತಂದಿದ್ದ, ಆಕೆಯೂ ಹಿಂದೂ ಯುವತಿಯಾಗಿದ್ದಳು ಎಂದು ದೆಹಲಿ ಪೊಲೀಸರು ಈ ಹಿಂದೆ ಬಹಿರಂಗಪಡಿಸಿದ್ದರು. ಈ ಯುವತಿಗೆ ಶ್ರದ್ಧಾಗೆ ನೀಡಿದ್ದ ಉಂಗುರವನ್ನೇ ಉಡುಗೊರೆಯಾಗಿ ನೀಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಆ ಉಂಗುರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ, “ಪಾಲಿಗ್ರಾಫ್ ಟೆಸ್ಟ್ ನಲ್ಲಿ ಅಫ್ತಾಬ್ ಎಂತೆಂಥಾ ಸತ್ಯಗಳನ್ನು ಬಹಿರಂಗಪಡಿಸಿದ್ದಾನೆಂದರೆ ಅದು ತುಂಬಾ ಆಘಾತಕಾರಿಯಾಗಿದೆ. ನಾರ್ಕೋ ಟೆಸ್ಟ್ ನ ನಂತರ ನಮ್ಮ ತಂಡವು ಈ ಸಂಗತಿಗಳನ್ನು ಖಚಿತಪಡಿಸಲು ಬಯಸುತ್ತದೆ. ಪಾಲಿಗ್ರಾಫ್ ಟೆಸ್ಟ್ ನಲ್ಲಿ ಆತ ಬಾಯ್ಬಿಟ್ಟ ಸತ್ಯ ತನಿಖೆಯಲ್ಲಿ ನಮಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಈ ಮೂಲಕ ಆತನ ಮನೆಯಿಂದ 5 ಚಾ-ಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ಸಾಕ್ಷ್ಯಗಳನ್ನು ಸಹ ಸಂಗ್ರಹಿಸಲಾಗುವುದು ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ. ಅದೇ ವೇಳೆ ಶ್ರದ್ಧಾ ಹ-ತ್ಯೆಯಾದ ದಿನ ಅಫ್ತಾಬ್ ಆಕೆಯೊಂದಿಗೆ ಜಗಳವಾಡಿದ್ದಲ್ಲದೆ ಗಾಂ-ಜಾ ಸೇವಿಸಿದ್ದ ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶ್ರದ್ಧಾ ಹತ್ಯೆ ಪ್ರಕರಣದ ಚದುರಿದ ಕೊಂಡಿಗಳನ್ನು ಜೋಡಿಸುವ ಕಾರ್ಯದಲ್ಲಿ ತೊಡಗಿದ್ದ ಪಾಲಿಗ್ರಾಫ್ ಟೆಸ್ಟ್ ನಲ್ಲೂ ಅಫ್ತಾಬ್ ಪೊಲೀಸರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಆತ ಮೂರು ಬಾರಿ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ, ಆದರೆ ಆತ ಪ್ರಶ್ನೆಗಳಿಗೆ ಅರ್ಧಂಬರ್ಧ ಉತ್ತರ ನೀಡಿದ್ದಾನೆ. ಅಫ್ತಾಬ್ನ ನಾರ್ಕೋ ಟೆಸ್ಟ್ ನ್ನ ಡಿಸೆಂಬರ್ 5, 2022 ರಂದು ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಪರೀಕ್ಷೆಗಾಗಿ ಪೊಲೀಸರು ಈಗಾಗಲೇ ತಮ್ಮ ಪ್ರಶ್ನೆಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಅಫ್ತಾಬ್ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ತಲ್ವಾರ್ ನಿಂದ ದಾ-ಳಿ
ಗಮನಿಸುವ ಸಂಗತಿಯೇನೆಂದರೆ, ಅಫ್ತಾಬ್ನನ್ನ ಪಾಲಿಗ್ರಾಫ್ ಟೆಸ್ಟ್ ಗಾಗಿ ಸೋಮವಾರ (ನವೆಂಬರ್ 28, 2022) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕರೆತರಲಾಯಿತು. ಈ ಪರೀಕ್ಷೆಯ ನಂತರ ಪೊಲೀಸರು ಆತನನ್ನು ವ್ಯಾನ್ನಲ್ಲಿ ತಿಹಾರ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಅಲ್ಲಿದ್ದ ಜನರು ಕಲ್ಲು ತೂರಾಟ ನಡೆಸುತ್ತಿದ್ದಾಗ ತಲ್ವಾರ್ ಹ-ಲ್ಲೆ ನಡೆಸಿದ್ದಾರೆ. ಈ ದಾ-ಳಿಯ ವಿಡಿಯೋ ಕೂಡ ಹೊರಬಿದ್ದಿದೆ. ವೀಡಿಯೋದಲ್ಲಿ, ಪೊಲೀಸ್ ವ್ಯಾನ್ ಬಳಿ ನಿಂತಿರುವ ಜನರು ಮೊದಲು ತಲ್ವಾರ್ ಗಳನ್ನ ಬೀಸುತ್ತಿರುವುದನ್ನು ಕಾಣಬಹುದು ಮತ್ತು ನಂತರ ವ್ಯಾನ್ ಮೇಲೆ ತಲ್ವಾರ್ ನಿಂದ ದಾಳಿ ಮಾಡುತ್ತಿದ್ದಾರೆ.