ಒಬ್ಬ ಅಣ್ಣನಿಗೆ ಡ್ರಗ್ಸ್ ಕೊಟ್ಟು ಹುಚ್ಚನನ್ನಾಗಿ ಮಾಡಿ, ಮತ್ತೊಬ್ಬ ಅಣ್ಣನನ್ನ ಮನೆಯಿಂದ ಹೊರಹಾಕಿದ್ದ ಅಮೀರ್ ಖಾನ್: ಇಬ್ಬರೂ ಅಣ್ಣಂದಿರು ಬಿಚ್ಚಿಟ್ಟರು ಅಮೀರ್ ಖಾನ್ ಕರಾಳಮುಖ

in Uncategorized 21,284 views

ಬಾಲಿವುಡ್ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಅಮೀರ್ ಮತ್ತು ಕುಟುಂಬದೊಂದಿಗಿನ ತನ್ನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆತನನ್ನು ಮನೆಯಲ್ಲಿ ಹೇಗೆ ಲಾಕ್ ಮಾಡಲಾಯಿತು ಮತ್ತು ಬಲವಂತವಾಗಿ ಹೇಗೆ ಔಷಧಿಗಳನ್ನು ನೀಡಲಾಯಿತು ಎಂದು ಅವರು ಹೇಳಿದ್ದಾರೆ. ನವಭಾರತ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಅವರು ಅಮೀರ್ ಅವರನ್ನು ಕ್ಷಮಿಸಿದ್ದರೂ, ಆ ಘಟನೆಯನ್ನು ಮಾತ್ರ ಇಡೀ ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ

Advertisement

ಫೈಸಲ್ ಮಾತನಾಡುತ್ತ, “ಆ ಸಮಯದಲ್ಲಿ ನಾನು ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತಿರಲಿಲ್ಲ, ಏಕೆಂದರೆ ನಾನು ಭೇಟಿಯಾದರೆ ಜಗಳಗಳು ನಡೆದುಬಿಡುತ್ತವೆ ಎಂದು ನಾನು ಭಾವಿಸಿದ್ದೆ, ಹಾಗಾಗಿ ನಾನು ಕುಟುಂಬದಿಂದ ದೂರವಿದ್ದೆ. ಆದರೆ ಅವರು ನಾನು ಹುಚ್ಚನಾಗಿದ್ದಾನೆ ಎಂದು ಹೇಳಿಬಿಟ್ಟರು. ಅವರು ನನಗೆ ಬಲವಂತವಾಗಿ ಔಷಧಿ ಕೊಡಲು ಆರಂಭಿಸಿದರು. ಅಮೀರ್ ನನ್ನನ್ನು 1 ವರ್ಷ ಗೃಹ ಬಂಧನದಲ್ಲಿರಿಸಿದ್ದ‌. ಬಾಡಿಗಾರ್ಡ್ ನ್ನ ನೇಮಿಸಿದ್ದ, ನನ್ನ ಫೋನ್ ಕಸಿದುಕೊಂಡಿದ್ದ, ನನ್ನನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಲಿಲ್ಲ, ಬಲವಂತವಾಗಿ ಔಷಧಿಗಳನ್ನು ನೀಡುತ್ತಿದ್ದರು. ನಾನು 103 ಕೆಜಿ ತಿರುಗಿದೆ. ನಂತರ ಅವರು ನನಗೆ ಸ್ವಲ್ಪ ಸ್ವಾತಂತ್ರ್ಯವನ್ನು ನೀಡಲು ಪ್ರಾರಂಭಿಸಿದರು, ನಂತರ ಅವರು ಬದಲಾಗಿದ್ದಾರೆ ಎಂದು ನಾನು ಭಾವಿಸಿದೆ, ಆದರೆ ಅದು ಆಗಲಿಲ್ಲ”

ಫೈಸಲ್ ಮುಂದೆ ಮಾತನಾಡುತ್ತ, “ನಾನು 2004 ರಲ್ಲಿ ಬಲವಂತವಾಗಿ ಅವರ ಕೈಗೆ ಸಿಕ್ಕಿಬಿದ್ದೆ. ಅಮೀರ್ ಏನೇನು ಮಾಡಿದ್ದನೋ ಅದೆಲ್ಲವೂ ಕಾನೂನುಬಾಹಿರವಾಗಿತ್ತು. ಅವನು ಪೋಲಿಸರೊಡನೆ ಬಂದು ನೀನು ನಡೆಯಬೇಕು, ನೀನು ನಡೆಯದಿದ್ದರೆ ಇಂಜೆಕ್ಷನ್ ಕೊಡಬೇಕಾಗುತ್ತೆ ಎಂದರು. ಹಾಗಾಗಿ ಇದನ್ನೆಲ್ಲ ಮಾಡುವ ಅಗತ್ಯವಿಲ್ಲ ನಾನೇ ನಾನು ಹೊರಡುತ್ತೇನೆ ಎಂದೆ. ನನ್ನನ್ನ ನರ್ಸಿಂಗ್ ಹೋಂಗೆ ಹೋಗಿ ಪರೀಕ್ಷೆ ಮಾಡಿಸುತ್ತಾರೆ, ನಂತರ ವೈದ್ಯರು ಮನೆಗೆ ಹೋಗುವಂತೆ ಹೇಳ್ತಾರೆ ಅಂದುಕೊಂಡೆ, ಆದರೆ ಅವರು ನನ್ನನ್ನು ಹೌಸ್ ಅರೆಸ್ಟ್ ಮಾಡಿಬಿಟ್ಟರು. ಅವರು ನನಗೆ ನೀರಿನಲ್ಲಿ ಇಂಜೆಕ್ಷನ್ ಹಾಕುವ ಮೂಲಕ ಔಷಧಿ ನೀಡಲು ಆರಂಭಿಸಿದರು. ನಾನು 18-18 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದೆ. ಆಗ ನನ್ನ ಜೀವಕ್ಕೂ ಅಪಾಯವಿತ್ತು”

“1 ವರ್ಷದ ನಂತರ ಅಮೀರ್ ನನ್ನನ್ನ ಬಂಧಮುಕ್ತಗೊಳಿಸಿದ. ಅದರ ನಂತರ ನಾನು ಸಾಮಾನ್ಯ ಜೀವನ ನಡೆಸಲು ಆರಂಭಿಸಿದೆ. ಈಗ ಎಲ್ಲವೂ ಸಾಮಾನ್ಯವಾಗಿದೆ ಎಂದು ನಾನು ಭಾವಿಸಿದ್ದೆ, ಆದರೆ 2007 ರಲ್ಲಿ ಒಂದು ದಿನ ಮತ್ತೊಮ್ಮೆ ಅಮೀರ್ ನನಗೆ ಕರೆ ಮಾಡಿ ನನಗೆ ನಿಮ್ಮ ಸಹಿ ಹಕ್ಕುಗಳು ಬೇಕು ಎಂದು ಹೇಳಿದನು. ನೀವು ನಾಳೆ ನ್ಯಾಯಾಲಯಕ್ಕೆ ಹೋಗಬೇಕು ಮತ್ತು ನಿಮಗೆ ಹುಚ್ಚು ಇದೆ ಎಂದು ಹೇಳಬೇಕು, ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆಗ ನಿಮಗೆ ಮಾತ್ರ ಒಬ್ಬ ಗಾರ್ಡಿಯನ್ (ಗಾರ್ಡಿಯನ್) ಸಿಗುತ್ತದೆ, ಆಗ ನಾನು ನಿಮ್ಮ ಸಹಿಯ ಹಕ್ಕನ್ನು ತೆಗೆದುಕೊಳ್ಳುತ್ತೇನೆ, ನಿಮಗೆ ಸಹಿ ಮಾಡೋಕೆ ಸಾಧ್ಯವಿಲ್ಲ ಅಂತ ಹೇಳಬೇಕು ಎಂದನು. ಏನಾಗುತ್ತಿದೆ ಅಂತ ನನಗೆ ಗೊತ್ತೇ ಆಗದೆ ನಾನು ಶಾಕ್ ಆದೆ. ಆ ಸಮಯದಲ್ಲಿ ನಾನು ಹೌದು ಎಂದು ಹೇಳಿದೆ, ಆದರೆ ನಂತರ ನನ್ನ ಕುಟುಂಬವು ನನ್ನನ್ನು ಕೊಲ್ಲಲು ಬಯಸಿದೆ ಎಂದು ನನಗೆ ಅರ್ಥವಾಯಿತು, ಹಾಗಾಗಿ ನಾನು ಮನೆ ಬಿಟ್ಟು ಹೊರಟು ಹೋದೆ” ಎಂದು ಫೈಸಲ್ ಹೇಳಿದ್ದಾರೆ.

ಫೈಸಲ್ ಮುಂದೆ ಮಾತನಾಡುತ್ತ, “ನಾನು ಅಮೀರ್ ಖಾನ್‌ನ್ನ ಕ್ಷಮಿಸಿದ್ದೇನೆ, ಆದರೆ ನನ್ನ ಜೊತೆ ನಡೆದ ಆ ಭಯಾನಕ ಘಟನೆಯನ್ನ ‌ನಾನು ಜೀವನಪರದೊಡ್ ಮರೆಯಲು ಸಾಧ್ಯವಿಲ್ಲ. ಅಮೀರ್ ಖಾನ್ ನನ್ನ ಜೊತೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾನೆ, ಅದನ್ನ ನೆನೆಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ” ಎಂದಿದ್ದಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಶೀಘ್ರದಲ್ಲೇ ಫೈಸಲ್ ನಟ ಮತ್ತು ನಿರ್ದೇಶಕರಾಗಿ ‘ಫ್ಯಾಕ್ಟರಿ’ ಹೆಸರಿನ ಚಲನಚಿತ್ರದೊಂದಿಗೆ ಮತ್ತೆ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ಗಮನಿಸುವ ಅಂಶವೇನೆಂದರೆ, ಫೈಸಲ್ ಖಾನ್ ಈ ಹಿಂದೆ 2007 ರಲ್ಲೇ ಅಮೀರ್ ಖಾನ್ ಮತ್ತು ಆತನ ಕುಟುಂಬದವರ ಮೇಲೆ ಉದ್ದೇಶಪೂರ್ವಕವಾಗಿ ತನಗೆ ಮಾನಸಿಕ ಖಾಯಿಲೆಗೆ ಸಂಬಂಧಿಸಿದ ಔಷಧಿಗಳನ್ನು ನೀಡಿದರು ಮತ್ತು 1 ವರ್ಷ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದರು. ಇದನ್ನು ನೆನಪಿಸಿಕೊಂಡ ಫೈಸಲ್, ಆತನನ್ನು ಬಲವಂತವಾಗಿ ಹುಚ್ಚ ಎಂದು ಘೋಷಿಸುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು. ತನ್ನ ಸಹೋದರ ಅಮೀರ್ ಖಾನ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಕರಣ್ ಜೋಹರ್ ತನ್ನನ್ನು ಅವಮಾನಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ತನ್ನ ಮತ್ತೊಬ್ಬ ಅಣ್ಣನನ್ನೇ ಮೋಸ ಮಾಡಿ ಕಾಡಿಗೆ ಅಟ್ಟಿದ್ದ ಅಮೀರ್ ಖಾನ್

ಅಮೀರ್ ಖಾನ್ ಜನಿಸಿದ್ದು ಮುಂಬೈನಲ್ಲಿ. ಅಮಿರ್ ಖಾನ್ ತಾಯಿಯ ಹೆಸರು ಝೀನತ್ ಹುಸೇನ್ ಮತ್ತು ತಂದೆಯ ತಂದೆಯ ಹೆಸರು ತಾಹಿರ್ ಹುಸೇನ್. ಅಮೀರ್ ಖಾನ್‌ನ ಮೊದಲ ಸೂಪರ್ ಹಿಟ್ ಚಿತ್ರ ‘ಕಯಾಮತ್ ಸೆ ಕಯಾಮತ್ ತಕ್’ ಆಗಿತ್ತು ಮತ್ತು ಈ ಚಿತ್ರದಿಂದಾಗಿ ಅಮೀರ್ ಸೋದರಸಂಬಂಧಿ (ಅಣ್ಣ) ಮನ್ಸೂರ್ ಖಾನ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಆಗಿ ಮಾಡಿತ್ತು. ಆದರೆ ಮನ್ಸೂರ್ ಖಾನ್ ಹಲವಾರು ವರ್ಷಗಳಿಂದ ಫಿಲ್ಮಿ ದುನಿಯಾದಿಂದ ದೂರವಾಗಿದ್ದಾರೆ.

ನಿರ್ದೇಶಕರಾಗಿ, ಅವರು 1988 ರಲ್ಲಿ ‘ಕಯಾಮತ್ ಸೆ ಕಯಾಮತ್ ತಕ್’ ಚಿತ್ರದಿಂದ ಚಿತ್ರರಂಗಕ್ಕೆ ಪ್ರವೇಶಿಸಿದರು ಮತ್ತು 2008 ರಲ್ಲಿ ನಿರ್ಮಾಪಕರಾಗಿ ಅವರು ತಮ್ಮ ಮೊದಲ ಮತ್ತು ಕೊನೆಯ ಚಿತ್ರ ‘ಜಾನೆ ತು… ಯಾ ಜಾನೆ’ ಮಾಡಿದರು. ಆದರೆ ಮನ್ಸೂರ್ ಈಗ ಫಿಲಂ ಇಂಡಸ್ಟ್ರಿಯಿಂದ ಹೊರಹಾಕಲ್ಪಟ್ಟಿದ್ದು ಅವರು ಈಗ ಸೌಥ್ ಇಂಡಿಯಾದಲ್ಲಿ ಚೀಜ್ ತಯಾರಿಸುವವ ಬ್ಯುಸಿನೆಸ್ ಮಾಡುತ್ತಿದ್ದಾರೆ. ಮನ್ಸೂರ್ ಈಗ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಸಣ್ಣ ಪಟ್ಟಣವಾದ ಕೂನೂರಿನಲ್ಲಿರುವ ಪರ್ವತಗಳ ಮೇಲೆ ಸುಮಾರು 15 ವರ್ಷಗಳಿಂದ ವಾಸಿಸುತ್ತಿದ್ದಾರೆ ಮತ್ತು ಅವರು ಚೀಸ್ ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಉತ್ತಮ ನಿರ್ದೇಶಕ, ನಿರ್ಮಾಪಕನಾಗಿ ಹಿಟ್ ಚಿತ್ರಗಳನ್ನ ಕೊಟ್ಟ ಮನ್ಸೂರ್ ಖಾನ್ ಚಿತ್ರರಂಗವನ್ನ ಬಿಟ್ಟುಹೋಗಿದ್ದಾದರೂ ಯಾಕೆ?

ಸಂದರ್ಶನವೊಂದರಲ್ಲಿ, ಈ ಪ್ರಶ್ನೆಗೆ ಉತ್ತರಿಸಿದ ಮನ್ಸೂರ್, “ಇದು ಹಠಾತ್ ನಿರ್ಧಾರವಾಗಿರಲಿಲ್ಲ, ಬದಲಿಗೆ ಬಾಲ್ಯದಿಂದಲೂ ಅಂತಹ ಬ್ಯುಸಿನೆಸ್ ಮಾಡುವ ಬಯಕೆ ಇತ್ತು. ಮುಂಬೈನ ಪನ್ವೆಲ್‌ನ ಬಳಿ ನಮಗೆ ಸ್ವಲ್ಪ ಜಮೀನು ಇತ್ತು, ಆ ಜಮೀನಿಗೂ ನನಗೂ ತುಂಬಾ ಅಟ್ಯಾಚಮೆಂಟ್ ಇತ್ತು. ನಾನು ಮತ್ತು ನನ್ನ ತಂಗಿ ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದೆವು ಮತ್ತು ನನ್ನ ಸ್ವಂತ ಕೈಗಳಿಂದ ಆ ಭೂಮಿಯಲ್ಲಿ ಬೆಂಡೆಕಾಯಿ ಗಿಡಗಳನ್ನ ನೆಡುತ್ತಿದ್ದೆವು. ನಾನು ವಿದೇಶದಲ್ಲಿ ಕಾರ್ನೆಲ್ ಮತ್ತು ಎಂಐಟಿಗೆ ಹೋಗಿದ್ದೆ, ಆದರೆ ನನಗೆ ಅಲ್ಲಿ ಖುಷಿ ಸಿಗಲಿಲ್ಲ”

“ತದನಂತರ ಇದ್ದಕ್ಕಿದ್ದಂತೆ ಪಾಪಾ (ನಾಸಿರ್ ಹುಸೇನ್) ಚಲನಚಿತ್ರ ರಂಗಕ್ಕೆ ಬರಲು ಸಲಹೆ ನೀಡಿದರು. ಆಗಲೂ ನನ್ನ ಮುಖ್ಯ ಉದ್ದೇಶ ಕೃಷಿಯ ಸಂಪರ್ಕದಲ್ಲಿರುವುದೇ ಆಗಿತ್ತು. ಫಿಲಂ ಜೀವನ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಆ ಜೀವನಕ್ಕೆ ನಾನು ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಹೇಗೆ ಜೀವನ ನಡೆಸಬೇಕೆಂದು ಅಂದುಕೊಂಡಿದ್ದನೋ ಆ ರೀತಿಯಾಗಲಿ ನನ್ನ ಜೀವನ ಸಾಗಲಿಲ್ಲ ಹಾಗಾಗಿ ನಾನು ಈ ಕ್ಷೇತ್ರಕ್ಕೆ ಕಾಲಿಟ್ಟೆ” ಎಂದು ಹೇಳಿದ್ದರು.

ಆದರೆ ಗಾಸಿಪ್ ಗಳ ಪ್ರಕಾರ ತನ್ನ ಸೋದರಸಂಬಂಧಿಯ ಯಶಸ್ಸನ್ನ ಅಮಿರ್ ಖಾನ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗದೆ, ನನಗಿಂತ ಈತನೇ ಫೇಮಸ್ ಆದರೆ ನನ್ನ ಕೆರೆಯರ್ ಗೆ ಇವನು ಅಡ್ಡಲಾಗುತ್ತಾನೆಂದು ಅಮಿರ್ ಖಾನ್‌ನೆ ಮನ್ಸೂರ್ ಖಾನ್ ಕೆರಿಯರ್ ಬರ್ಬಾದ್ ಮಾಡಿದ್ದ ಎಂದೂ ಹೇಳಲಾಗುತ್ತದೆ.

Advertisement
Share this on...