ಕನ್ನಡಿಗರ ಹೆಮ್ಮೆ ರಂಗಣ್ಣ ಅವರ ಕುಟುಂಬ ಹೇಗಿದೆ, ಪತ್ನಿ ಮಕ್ಕಳು ಯಾರು, ಹೇಗಿದ್ದಾರೆ, ಮನೆ ಹೇಗಿದೆ ನೋಡಿ

in Kannada News/ಕನ್ನಡ ಮಾಹಿತಿ/ಮನರಂಜನೆ 1,779 views

ಪ್ರಸ್ತುತ ಇರುವ ನ್ಯೂಸ್ ಚಾನೆಲ್ ಗಳಲ್ಲಿ ವೀಕ್ಷಕರಿಗೆ ಸರಿಯಾದ ಮಾಹಿತಿಗಳನ್ನು ನೀಡುತ್ತಿರುವ ವಾಹಿನಿಯಲ್ಲಿ ಮುಖ್ಯವಾದುದು ಪಬ್ಲಿಕ್ ಟಿವಿ. ಹೆಚ್.ಆರ್.ರಂಗನಾಥ್ ಅವರು ಪಬ್ಲಿಕ್ ಟಿವಿಯನ್ನು ಆರಂಭ ಮಾಡಿದ್ದೆ ಒಂದು ರೋಚಕ ಕಥೆ. ರಂಗನಾಥ್ ಅವರು ಮೂಲತಃ ಮೈಸೂರಿನವರು. ಮಾಧ್ಯಮದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಬೆಂಗಳೂರಿಗೆ ಬಂದು, ಹಲವಾರು ದೈನಂದಿನ ಪತ್ರಿಕೆಗಳಿಗೆ ವರದಿಗಾರನಾಗಿ, ಚೀಫ್ ಎಡಿಟರ್ ಆಗಿ ಕೆಲಸ ಮಾಡಿದರು ರಂಗನಾಥ್ ಅಲಿಯಾಸ್ ರಂಗಣ್ಣ. ನಿಜ ಜೀವನದಲ್ಲಿ ರಂಗನಾಥ್ ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ರಂಗನಾಥ್ ಅವರ ಕುಟುಂಬ ಹೇಗಿದೆ! ತಿಳಿಯಲು ಮುಂದೆ ಓದಿ..

Advertisement

ಹೆಚ್.ಆರ್ ರಂಗನಾಥ್ ಅವರ ಪೂರ್ತಿ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್. ಇವರ ನಿಕ್ ನೇಮ್ ಕ್ಯಾಪ್ಟನ್, ರಂಗಣ್ಣ. ಇವರು ಹುಟ್ಟಿದ್ದು ಮೇ 12, 1966 ರಲ್ಲಿ. ಇವರಿಗೆ ಈಗ 54 ವರ್ಷ ವಯಸ್ಸು. ಇವರು ಹುಟ್ಟಿದ್ದು ಮೈಸೂರಿನಲ್ಲಿ. ಮೊದಲಿಗೆ ಜರ್ನಲಿಸ್ಟ್ ಆಗಿ ವೃತ್ತಿ ಶುರು ಮಾಡಿದ ಇವರು ಹಲವಾರು ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಪಬ್ಲಿಕ್ ಟಿವಿ ಸಂಸ್ಥೆಯ ಒಬ್ಬರೇ ಸಂಸ್ಥಾಪಕ ರಂಗನಾಥ್ ಅವರು. ಪ್ರಸ್ತುತ ರಂಗನಾಥ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಂಗನಾಥ್ ಅವರ ಮನೆ ಹೇಗಿದೆ ಎಂದೂ ನೀವು ಇಲ್ಲಿ ನೋಡಬಹುದು.

ರಂಗನಾಥ್ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಇವರ ತಂದೆ ರಾಮಕೃಷ್ಣಯ್ಯ ಮತ್ತು ತಾಯಿ ಲೀಲಾ. ಇವರಿಗೆ ಕಾತ್ಯಾಯಿನಿ, ಮಣಿಕರ್ಣಿಕ, ಸರ್ವಮಂಗಳ ಮತ್ತು ವೈದೇಹಿ ಹೆಸರಿನ ನಾಲ್ವತು ಸಹೋದರಿಯರು, ವೆಂಕಟೇಶ್ ಮತ್ತು ಕೇಶವ ಇಬ್ಬರು ಸಹೋದರರಿದ್ದಾರೆ. ಇವರ ಪತ್ನಿಯ ಹೆಸರು ಶಾರದ. ಇವರ ಮಗಳ ಹೆಸರು ವೈಸ್ವಿನಿ. ಕನ್ನಡ ಪ್ರಭ ನ್ಯೂಸ್ ಪೇಪರ್ ನಲ್ಲಿ ಜರ್ನಲಿಸ್ಟ್ ಆಗಿ ಕೆಲಸ ಶುರು ಮಾಡಿದರು ರಂಗನಾಥ್ ಅವರು. ನೇರನುಡಿ ಮಾತನಾಡುವ ಶೈಲಿ ಮತ್ತು ಸತ್ಯವನ್ನು ಇದ್ದಹಾಗೆ ಹೇಳುವ ಇವರ ಮಾತಿನ ಧಾಟಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ.

ಸರಳತೆಗೆ ಹೆಸರಾಗಿರುವವರು ರಂಗಣ್ಣ. 2016 ರಲ್ಲಿ ಜೀಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎನ್ನುವ ಅವಾರ್ಡ್ ಅನ್ನು ಇವರಿಗೆ ನೀಡಿ ಗೌರವಿಸಿತು. ಯಾವಾಗದರು ಒಮ್ಮೆ ಅವಾರ್ಡ್ ಅನ್ನು ಒಪ್ಪಿಕೊಳ್ಳುವ ರಂಗನಾಥ್ ಅವರು ಹಲವಾರು ಬಾರಿ ಅವಾರ್ಡ್ ಗಳನ್ನು ರಿಜೆ-ಕ್ಟ್ ಮಾಡಿದ್ದಾರೆ. ಜರ್ನಲಿಸ್ಟ್ ಆಗುವ ಮೊದಲು ವೃಂದ ತರಂಗ ಎನ್ನುವ ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ದರು. ವಾಯ್ಸ್ ಆಫ್ ಕರ್ನಾಟಕ, ಫೇಸ್ ಆಫ್ ಬೆಂಗಳೂರು ಮತ್ತು true journalist ಎಂದು ಇವರನ್ನು ಕರೆಯುತ್ತಾರೆ.

ಸದ್ಯ ಪಬ್ಲಿಕ್ ಟಿವಿ ಕನ್ನಡದ ಅತೀ ಹೆಚ್ಚು ಟಿ ಆರ್ ಪಿ ಹೊಂದಿರುವ ಏಕೈಕ ಕನ್ನಡದ ನ್ಯೂಸ್ ಮಾಧ್ಯಮ. ಕಷ್ಟ ಪಟ್ಟು ಪಬ್ಲಿಕ್ ಟಿವಿಯನ್ನು ಕಟ್ಟಿ ಬೆಳಿಸಿದ್ದಾರೆ ನಮ್ಮ ರಂಗಣ್ಣ! ರಂಗಣ್ಣ ಅವರ ಈ ಅದ್ಭುತ ಸಾಧನೆ ಅದೆಷ್ಟೋ ಯುವಕರಿಗೆ ಸ್ಫೂರ್ತಿ ಎಂದೂ ಹೇಳಿದರೆ ತಪ್ಪಾಗಲಾರದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ಕೃಪೆ: KarnatakaWeb

Advertisement
Share this on...