ನವದೆಹಲಿ:
ಹಾಗಾದರೆ ಕಪ್ಪುಹಣ ಮತ್ತು ಭ್ರಷ್ಟಾಚಾರದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಈ ಬಾರಿ ಹೇಗೆ ನಡೆಯುತ್ತದೆ ಎಂಬುದು ಪ್ರಶ್ನೆ. ಅದಕ್ಕೆ ಉತ್ತರ ಡಿಜಿಟಲ್ ಕರೆನ್ಸಿ. ಹೌದು. ಸರ್ಕಾರ ಮಸೂದೆ ತರಲಿದೆ. ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಈ ಮಸೂದೆಯನ್ನು ತರಲಾಗಿದ್ದರೂ, ಈ ಮಸೂದೆಯ ಒಂದು ಭಾಗವು ಡಿಜಿಟಲ್ ಕರೆನ್ಸಿಯನ್ನ ಶುರು ಮಾಡುವ ಬಗ್ಗೆಯೂ ಇರುತ್ತದೆ.
ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಯೋಜನೆಯನ್ನು ಮುಂದಿನ ವರ್ಷ ರಿಸರ್ವ್ ಬ್ಯಾಂಕ್ ಪ್ರಾರಂಭಿಸಲಿದೆ. ಅದು ಯಶಸ್ವಿಯಾದರೆ ದೇಶಾದ್ಯಂತ ಜಾರಿಯಾಗಲಿದೆ. ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಿದ ನಂತರ, ಜನರು ತಮ್ಮ ಬ್ಯಾಂಕಿಂಗ್ ವ್ಯಾಲೆಟ್ನಲ್ಲಿ ಡಿಜಿಟಲ್ ರೂಪದಲ್ಲಿ ಹಣವನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕರೆನ್ಸಿಯ ವಹಿವಾಟನ್ನು ವ್ಯಾಲೆಟ್ ಮೂಲಕ ಮಾತ್ರ ಮಾಡಲಾಗುತ್ತದೆ. ಡಿಜಿಟಲ್ ಕರೆನ್ಸಿಯನ್ನು ದೊಡ್ಡ ಮಟ್ಟದಲ್ಲಿ ತರುವ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ನೋಟುಗಳನ್ನು ಬ್ಯಾನ್ ಮಾಡುವ ಕೆಲಸವನ್ನು ಸರ್ಕಾರ ಮಾಡಬಹುದು ಎನ್ನುತ್ತವೆ ಮೂಲಗಳು. ಇಂತಹ ಸಂದರ್ಭದಲ್ಲಿ ಕಪ್ಪುಹಣ ಸಂಗ್ರಹಿಸಿ ಕರೆನ್ಸಿ ಪಡೆದು ಭ್ರಷ್ಟಾಚಾರ ಮಾಡುವವರ ಬೆನ್ನು ಮುರಿಯಲಿದೆ.
ಡಿಜಿಟಲ್ ಕರೆನ್ಸಿಯ ವಹಿವಾಟು ವ್ಯಾಲೆಟ್ನಿಂದ ವ್ಯಾಲೆಟ್ ಮೂಲಕ ಆಗುವುದರಿಂದ, ಯಾರೂ ಯಾರಿಂದಲೂ ನೋಟುಗಳನ್ನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಡಿಜಿಟಲ್ ಕರೆನ್ಸಿಯನ್ನು ಖಾತೆಯಿಂದ ಖಾತೆಗೆ ವರ್ಗಾಯಿಸಲಾಗುತ್ತದೆ. ಅದರಲ್ಲಿ ಕರೆನ್ಸಿ ನೋಟುಗಳಿಗೆ ಜಾಗ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಪ್ಪುಹಣ ಸಂಗ್ರಹ ಅಸಾಧ್ಯವಾಗುತ್ತದೆ. ಕಪ್ಪು ಹಣ ಹೆಚ್ಚಾಗಿ ಹೆಚ್ಚಿನ ಮುಖಬೆಲೆಯ ನೋಟುಗಳ ಮೂಲಕವೇ ಹೆಚ್ಚಾಗುತ್ತ ಹೋಗುತ್ತೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಡಿಜಿಟಲ್ ಕರೆನ್ಸಿಗೆ ಪರಿವರ್ತಿಸಿದರೆ ಕಪ್ಪುಹಣ ಹೊಂದಿರುವವರ ಬೆನ್ನುಮೂಳೆಯೇ ಮುರಿಯಲಿದೆ.
ಈ ಹಿಂದೆ ಮೋದಿ ಸರ್ಕಾರವು 2016ರಲ್ಲಿ ಕಪ್ಪುಹಣದ ವಿರುದ್ಧ ನೋಟು ಅಮಾನ್ಯೀಕರಣದಂತಹ ಕ್ರಮ ಕೈಗೊಂಡಿತ್ತು, ಆದರೆ ನಂತರ 500 ಮತ್ತು 1000 ನೋಟುಗಳನ್ನು ಬ್ಯಾನ್ ಮಾಡುವ ಮೂಲಕ ಹೊಸ 2000 ನೋಟು ಜಾರಿಗೆ ತರಲಾಗಿತ್ತು. 2000 ನೋಟು ಕಪ್ಪುಹಣವನ್ನು ಹೆಚ್ಚಿಸಲಿದೆ ಎಂದು ಆರ್ಥಿಕ ತಜ್ಞರು ಅಂದು ಹೇಳಿದ್ದರು. ನಂತರ 2000 ನೋಟುಗಳ ಮುದ್ರಣವನ್ನು ನಿಲ್ಲಿಸಲಾಯಿತು. ಈಗ ಮಾರುಕಟ್ಟೆಯಲ್ಲಿ 2000 ನೋಟುಗಳು ಕಾಣಸಿಗುವುದು ಅಪರೂಪ. ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಂದ ಸ್ವೀಕರಿಸುವುದನ್ನೂ ನಿಲ್ಲಿಸಲಾಗಿದೆ.