ತೆಲುಗು ಸಿನಿ ರಂಗ ಮಾತ್ರವೇ ಅಲ್ಲದೆ ಭಾರತೀಯ ಸಿನಿಮಾ ರಂಗದ ಅತ್ಯದ್ಭುತ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ರಾಜಮೌಳಿ. ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳ ದೊಡ್ಡ ಯಶಸ್ಸು ಅವರನ್ನು ದೇಶದ ಸ್ಟಾರ್ ನಿರ್ದೇಶಕರನ್ನಾಗಿ ಮಾಡಿದೆ. ಆದರೆ ಅವರ ಈ ಹೆಸರಿನ ಹಿಂದೆ ಅವರ ತಂದೆ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರ ಪಾತ್ರ ಕೂಡಾ ಬಹಳವಾಗಿದೆ. ಏಕೆಂದರೆ ರಾಜಮೌಳಿ ಅವರ ನಿರ್ದೇಶನದ ಸಿನಿಮಾಗಳ ಚಿತ್ರಕಥೆಯ ರೂವಾರಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು. ಎನ್ನುವುದು ವಾಸ್ತವ. ವಿಜಯೇಂದ್ರ ಪ್ರಸಾದ್ ಅವರು ಸಿನಿಮಾರಂಗದಲ್ಲಿ ಒಬ್ಬ ಯಶಸ್ವಿ ಕಥೆಗಾರ ಎನಿಸಿಕೊಂಡಿದ್ದಾರೆ. ಅವರ ಕಥೆಗಳು ಸಿನಿಮಾಗಳಾಗಿ ಸೂಪರ್ ಡೂಪರ್ ಹಿಟ್ ಆಗಿವೆ. ಅವರ ಲೇಖನಿಯಲ್ಲಿ ಮಗಧೀರ, ಸಿಂಹಾದ್ರಿ, ಛತ್ರಪತಿ, ಬಾಹುಬಲಿ ಇತ್ಯಾದಿ ಅದ್ಭುತ ಕಥೆಗಳು ಮೂಡಿ ಬಂದಿವೆ.
ಟಾಲಿವುಡ್ ಮಾತ್ರವೇ ಅಲ್ಲದೆ ಬಾಲಿವುಡ್ ನಲ್ಲೂ ತಾನು ಯಶಸ್ಸನ್ನು ಪಡೆಯಬಲ್ಲೆ ಎಂಬುದನ್ನು ವಿಜಯೇಂದ್ರ ಪ್ರಸಾದ್ ಅವರು ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್, ಕಂಗನಾ ನಟನೆಯ ಮಣಿಕರ್ಣಿಕಾ ಸಿನಿಮಾದ ಮೂಲಕ ಸಾಬೀತು ಮಾಡಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಇತ್ತೀಚೆಗೆ ತೆಲುಗು ಚಿತ್ರರಂಗದ ಪ್ರಮುಖ ಹಾಸ್ಯ ನಟ ಎನಿಸಿಕೊಂಡಿರುವ ಆಲಿ ಅವರು ನಡೆಸಿಕೊಡುವ ಜನಪ್ರಿಯ ಟಾಕ್ ಶೋ ಒಂದಕ್ಕೆ ಅತಿಥಿಯಾಗಿ ಆಗಮಿಸಿ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ಆಲಿಯವರು ಕೆಲವು ಸಿನಿಮಾ ನಟರ ಹೆಸರನ್ನು ಹೇಳುತ್ತಾ ಇವರಿಗಾಗಿ ಎಂತಹ ಕಥೆಯನ್ನು ಬರೆಯುವಿರಿ ಎಂದು ಕೇಳಿದ್ದಾರೆ.
ಆಲಿ ಕೇಳಿದ ಪ್ರಶ್ನೆಗೆ ವಿಜಯೇಂದ್ರ ಪ್ರಸಾದ್ ಅವರು ಬಹಳ ಆಸಕ್ತಿಕರವಾದ ಉತ್ತರವನ್ನು ನೀಡಿದ್ದಾರೆ. ಈ ವೇಳೆಯಲ್ಲಿ ಆಲಿ ಅವರು ನಟ ರಾಜನಿಕಾಂತ್ ಅವರಿಗೆ ಯಾವ ಕಥೆ ಬರೆಯುವಿರಿ ಎಂದು ಕೇಳಿದಾಗ ಅವರು ರಾವಣನನಂತೆ ಕಾಣುವ ಕಥೆ ಸಿದ್ದಪಡಿಸುವೆ ಎಂದು ಉತ್ತರ ನೀಡಿದ್ದಾರೆ. ಟಾಲಿವುಡ್ ನ ಯುವ ನಾಯಕ ನಟ ವಿಜಯದೇವರಕೊಂಡ ಗಾಗಿ ಯಾವ ಕಥೆ ಬರೆಯುವಿರಿ ಎಂದಾಗ, ವಿಜಯ್ ದೇವರಕೊಂಡ ಅವರಲ್ಲಿರುವ ಆಂಗ್ರಿ ಯಂಗ್ ಮ್ಯಾನ್ ಸೈಡ್ ಅನ್ನು ತೋರಿಸುವ ಕಥೆಯನ್ನು ಬರೆಯುತ್ತೇನೆ ಎಂದು ಹೇಳಿದ್ದಾರೆ. ಎಲ್ಲದಕ್ಕಿಂತ ಆಲಿ ಅವರು ಕಮಲಹಾಸನ್ ಗಾಗಿ ಯಾವ ಕಥೆ ಬರೆಯುವಿರಿ ಎಂದು ಕೇಳಿದ ಪ್ರಶ್ನೆಗೆ ವಿಜಯೇಂದ್ರ ಪ್ರಸಾದ್ ಅವರು ನೀಡಿದ ಉತ್ತರ ಆಸಕ್ತಿಕರವಾಗಿತ್ತು.
ಈ ವೇಳೆ ವಿಜಯೇಂದ್ರ ಪ್ರಸಾದ್ ಅವರು ಕಮಲಹಾಸನ್ ಗಾಗಿ ಕಥೆಯನ್ನು ಬರೆಯುವುದು ವ್ಯರ್ಥ ಎಂದಿದ್ದಾರೆ. ಆ ಉತ್ತರ ಕೇಳಿದ ತಕ್ಷಣ ನಟ ಆಲಿ ಶಾ ಕ್ ಆಗಿದ್ದಾರೆ. ಅವರು ಏಕೆ ಹಾಗೆಂದು ಬಿಟ್ಟಿರಿ ಎಂದು ಕೇಳಿದಾಗ, ವಿಜಯೇಂದ್ರ ಪ್ರಸಾದ್ ಅವರು ಕಮಲಹಾಸನ್ ಈಗಾಗಲೇ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿಬಿಟ್ಟಿದ್ದಾರೆ. ಅವರಿಗಾಗಿ ಯಾವ ಕಥೆಯನ್ನು ಬರೆಯಲು ಸಾಧ್ಯವಿಲ್ಲ ಎಂದು ಹೇಳಿದಾಗ ಆಲಿ ಸ್ವಲ್ಪ ನಿರಾಳವಾಗಿದ್ದಾರೆ. ಅಲ್ಲದೇ ಅವರು ನೀವು ಮೊದಲು ಅವರು ಎಲ್ಲಾ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವ ಮಾತನ್ನು ಹೇಳಿ ಅನಂತರ ಅವರಿಗಾಗಿ ಕಥೆ ಬರೆಯುವುದು ವ್ಯರ್ಥ ಎನ್ನಬೇಕು, ಇಲ್ಲದಿದ್ದರೆ ಇದೇ ಒಂದು ದೊಡ್ಡ ವಿ ವಾ ದ ಆಗಬಹುದು ಎಂದು ಹೇಳಿದ್ದಾರೆ.