ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ಸರ್ಕಾರ್ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೂ ವಿವಾದಗಳೊಂದಿಗೂ ಹಳೆಯ ನಂಟಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನಾಗ್ಪುರದಲ್ಲಿ ತಮ್ಮ ಕಥಾವಾಚನ ಬಿಟ್ಟು ಹೋಗಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗುತ್ತಿದೆ. ಅದರ ನಂತರ ಅವರು ತಮ್ಮ ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡುತ್ತಿದ್ದಾರೆ.
ಬಾಗೇಶ್ವರ ಧಾಮಕ್ಕೆ ಭೇಟಿ ನೀಡುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಬಾಗೇಶ್ವರ ಧಾಮ ಸರ್ಕಾರ್ ನ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಥಾವಾಚನ ನಡೆಸಲು ಹಾಗು ಅವರ ದರ್ಶನ ಪಡೆಯಲು ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ. ಬಾಗೇಶ್ವರ ಧಾಮಕ್ಕೆ ಬರುವ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಬಾಗೇಶ್ವರ ಧಾಮ ಸರ್ಕಾರ್ ಪೀಠ ಪೂರೈಸುತ್ತದೆ ಎಂದು ಹೇಳಲಾಗುತ್ತದೆ.
ಅಷ್ಟಕ್ಕೂ ಯಾರು ಈ ಧೀರೇಂದ್ರ ಕೃಷ್ಣ ಶಾಸ್ತ್ರಿ?
ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಜುಲೈ 4, 1996 ರಂದು ಮಧ್ಯಪ್ರದೇಶದ ಛತ್ತರ್ಪುರ ಬಳಿಯ ಗಡಾಗಂಜ್ ಗ್ರಾಮದಲ್ಲಿ ಜನಿಸಿದರು. ಅವರ ಇಡೀ ಕುಟುಂಬವು ಪ್ರಾಚೀನ ಬಾಗೇಶ್ವರ ಧಾಮ್ ದೇವಾಲಯವಿರುವ ಅದೇ ಗಡಾಗಂಜ್ನಲ್ಲಿ ವಾಸಿಸುತ್ತಿದೆ. ಅವರ ಪೂರ್ವಿಕರ ಮನೆಯೂ ಇಲ್ಲೇ ಇದೆ.
ಅವರ ಅಜ್ಜ ಪಂಡಿತ್ ಭಗವಾನ್ ದಾಸ್ ಗರ್ಗ್ ಕೂಡ ಇಲ್ಲೇ ವಾಸಿಸುತ್ತಿದ್ದರು. ಕೃಷ್ಣ ಶಾಸ್ತ್ರಿಯವರ ಅಜ್ಜ ಚಿತ್ರಕೂಟದ ನಿರ್ಮೋಹಿ ಅಖಾಡದಿಂದ ದೀಕ್ಷೆ ಪಡೆದಿದ್ದರು. ನಂತರ ಅವರು ಗಡಾ ಗ್ರಾಮವನ್ನು ತಲುಪಿದರು. ಅಲ್ಲಿ ಅವರು ಬಾಗೇಶ್ವರ ಧಾಮ ದೇವಾಲಯವನ್ನು ನವೀಕರಿಸಿದರು. ಧೀರೇಂದ್ರ ಕೃಷ್ಣ ಅವರ ತಾತ ಕೂಡ ಇಲ್ಲಿ ದರ್ಬಾರ್ ನಡೆಸುತ್ತಿದ್ದರು. ಅವರು ಸನ್ಯಾಸ ಆಶ್ರಮವನ್ನು ತೆಗೆದುಕೊಂಡಿದ್ದರು.
ಧೀರೇಂದ್ರ ಕೃಷ್ಣ ಶಾಸ್ತ್ರಿ ಬಗ್ಗೆ ಏನಿದು ವಿವಾದ?
ಬಾಗೇಶ್ವರ ಧಾಮ ಸರ್ಕಾರ್ ನ ಪಂಡಿತ ಧೀರೇಂದ್ರ ಶಾಸ್ತ್ರಿ ಅವರ ಕಥಾವಾಚನ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾರೆ ಎಂದು ಹೇಳಲಾಗುತ್ತದೆ. ಧೀರೇಂದ್ರ ಶಾಸ್ತ್ರಿಯವರ ಕಥಾವಾಚನದ ಸಮಯದಲ್ಲಿ ದೆವ್ವ ಹಿಡಿದವರಿಂದ ಹಿಡಿದು ರೋಗಗಳವರೆಗೆ ಎಲ್ಲವೂ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ. ಬಾಬಾ ಬೆಂಬಲಿಗರು ಹೇಳುವಂತೆ ಬಾಗೇಶ್ವರ್ ಧಾಮ್ ಸರ್ಕಾರ್ ವ್ಯಕ್ತಿಯನ್ನ ನೋಡಿದ ತಕ್ಷಣವೇ ಅವರಿಗೆ ಯಾವ ರೀತಿಯ ಸಮಸ್ಯೆಯಿದೆ ಎಂಬುದು ಗೊತ್ತಾಗಿಬಿಡುತ್ತೆ, ಬಳಿಕ ಆ ಸಮಸ್ಯೆಗಳನ್ನ ಪರಿಹರಿಸುತ್ತಾರೆ ಎಂದು ಹೇಳುತ್ತಾರೆ.
ಮತ್ತೊಂದೆಡೆ, ಬಾಗೇಶ್ವರ ಧಾಮ ಸರ್ಕಾರವು ಜನರ ಅರ್ಜಿಗಳನ್ನು ದೇವರ (ಬಾಲಾಜಿ ಹನುಮಾನ್) ಬಳಿ ಕೊಂಡೊಯ್ಯುವ ಕೊಂಡಿಯಾಗಿದೆ, ಜನರ ಸಮಸ್ಯೆಯನ್ನು ಕೇಳಿ ದೇವರೇ ಆ ಸಮಸ್ಯೆಗಳನ್ನ ಪರಿಹರಿಸುತ್ತಾನೆ ಎಂದು ಹೇಳುತ್ತದೆ. ಆದರೆ ಬಾಗೇಶ್ವರ್ ಧಾಮ್ ಸರ್ಕಾರದ ಈ ಮಾತುಗಳನ್ನ ನಾಗಪುರದ ಆಂಧ್ ಶ್ರದ್ಧಾ ನಿರ್ಮೂಲನ ಸಮಿತಿಯು ಪ್ರಶ್ನಿಸಿದೆ. ಅಲ್ಲಿಂದಲೇ ಈ ಇಡೀ ವಿವಾದ ಶುರುವಾಯಿತು.
ಗಢಾ ಛತ್ತರ್ಪುರದ ಸಮೀಪವಿರುವ ಸ್ಥಳ. ಇಲ್ಲಿಯೇ ಬಾಗೇಶ್ವರ ಧಾಮವಿದೆ. ಇಲ್ಲಿ ಬಾಲಾಜಿ ಹನುಮಾನ್ ಜೀ ದೇವಸ್ಥಾನವಿದೆ. ಪ್ರತಿ ಮಂಗಳವಾರದಂದು ಬಾಲಾಜಿ ಹನುಮಾನ್ ಜೀ ದರ್ಶನ ಪಡೆಯಲು ಅಪಾರ ಜನಸ್ತೋಮ ಸೇರುತ್ತದೆ. ಕ್ರಮೇಣ ಜನರು ಈ ದರ್ಬಾರ್ ನ್ನ ಬಾಗೇಶ್ವರ್ ಧಾಮ್ ಸರ್ಕಾರ್ ಎಂದು ಕರೆಯಲು ಪ್ರಾರಂಭಿಸಿದರು. ಈ ದೇವಾಲಯವು ನೂರಾರು ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.
ಈ ದೇವಾಲಯವನ್ನು 1986 ರಲ್ಲಿ ನವೀಕರಿಸಲಾಯಿತು. 1987 ರ ಸುಮಾರಿಗೆ, ಒಬ್ಬ ಸಂತ ಬಾಬಾ ಜಿ ಸೇತು ಲಾಲ್ ಜಿ ಮಹಾರಾಜ್ ಇಲ್ಲಿಗೆ ಬಂದರು. ಅವರನ್ನು ಭಗವಾನ್ ದಾಸ್ ಜಿ ಮಹಾರಾಜ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಪ್ರಸ್ತುತ ಧಾಮದ ಮುಖ್ಯಸ್ಥರಾದ ಪಂಡಿತ ಧೀರೇಂದ್ರ ಶಾಸ್ತ್ರಿ ಅವರು ಭಗವಾನ್ ದಾಸ್ ಜಿ ಮಹಾರಾಜ್ ಅವರ ಮೊಮ್ಮಗ.
ಇದರ ನಂತರ, 1989 ರಲ್ಲಿ, ಬಾಬಾ ಜಿ ಅವರು ಬಾಗೇಶ್ವರ ಧಾಮದಲ್ಲಿ ಬೃಹತ್ ಮಹಾಯಜ್ಞವನ್ನು ಆಯೋಜಿಸಿದ್ದರು. 2012ರಲ್ಲಿ ಬಾಗೇಶ್ವರ ಧಾಮದ ಸಿದ್ಧ ಪೀಠದಲ್ಲಿ ಭಕ್ತರ ಸಮಸ್ಯೆಗಳ ನಿವಾರಣೆಗಾಗಿ ದರ್ಬಾರ್ ಆರಂಭಿಸಲಾಗಿತ್ತು. ಇದರ ನಂತರ, ಕ್ರಮೇಣ ಬಾಗೇಶ್ವರ ಧಾಮದ ಭಕ್ತರು ಈ ದರ್ಬಾರ್ ನೊಂದಿಗೆ ಸಂಪರ್ಕ ಹೊಂದಲು ಪ್ರಾರಂಭಿಸಿದರು. ಇಲ್ಲಿಗೆ ಬರುವ ಜನರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿಕೊಳ್ಳುತ್ತಾರೆ.