ಕೈಯಲ್ಲಿ ಬಿಡಿಗಾಸು ಹಿಡಿದುಕೊಂಡು ಬಂದ ಹಳ್ಳಿಯ ಬಡ ಯುವತಿ ಈಗ ಕೋಟ್ಯಾಧೀಶ್ವರಳು: ಈಗ ಈಕೆಯ ಪ್ರತಿ ತಿಂಗಳ ಸಂಪಾದನೆ ಎಷ್ಟು ಕೋಟಿ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 78 views

Successful Life Story:ಗೀತಾ ಯೆಲ್ಲೊ ಕಾಯಿನ್ ಕಮ್ಯೂನಿಕೇಶನ್ ಎಂಬ ಪಿಆರ್ ಮತ್ತು ಕಮ್ಯೂನಿಕೇಶನ್ ಸಂಸ್ಥೆಯನ್ನು 2012 ರಲ್ಲಿ ಹುಟ್ಟುಹಾಕಿದರು. ಇದರ ಬಂಡವಾಳ ರೂ 50,000. ಒಬ್ಬರೇ ಉದ್ಯೋಗಿಯ ಮೂಲಕ ಗೀತಾ ಸಂಸ್ಥೆಯನ್ನು ಕಟ್ಟಿದರು.

Advertisement

ಏನಾದರೂ ಮಾಡಬೇಕು ಎನ್ನುವ ಛಲವೊಂದಿದ್ದರೆ ಯಾವುದೇ ಕೆಲಸವು ಕಷ್ಟವಲ್ಲ ಎಂಬುದನ್ನು ಉತ್ತರಾಖಾಂಡದ ಗೀತಾಸಿಂಗ್ ನಮಗೆ ತೋರಿಸಿಕೊಟ್ಟಿದ್ದಾರೆ. ಹೌದು ಹಳ್ಳಿಯಿಂದ ಬಂದ ಗೀತಾ ದಿಲ್ಲಿಯಲ್ಲಿ ತನ್ನದೇ ಆದ ಕಂಪೆನಿ ಕಟ್ಟಿದ ಪರಿಶ್ರಮದ ಕಥೆ ಇಂದಿನ ಲೇಖನದಲ್ಲಿದೆ. ಗೀತಾ ಉತ್ತರಾಖಾಂಡದ ದೂರದ ಹಳ್ಳಿಯಾದ ಮೀರತ್‌ನವರು. ಮಾಧ್ಯಮದಲ್ಲಿ ತಮ್ಮ ವೃತ್ತಿರಂಗವನ್ನು ಆರಂಭಿಸಿ ನಂತರ ದೆಹಲಿಯಲ್ಲಿ ತಮ್ಮದೇ ಆದ ಸಂಸ್ಥೆಯೊಂದನ್ನು ನಿರ್ಮಿಸಿದ್ದಾರೆ.

ಗೀತಾ ಯೆಲ್ಲೊ ಕಾಯಿನ್ ಕಮ್ಯೂನಿಕೇಶನ್ ಎಂಬ ಪಿಆರ್ ಮತ್ತು ಕಮ್ಯೂನಿಕೇಶನ್ ಸಂಸ್ಥೆಯನ್ನು 2012 ರಲ್ಲಿ ಹುಟ್ಟುಹಾಕಿದರು. ಇದರ ಬಂಡವಾಳ ರೂ 50,000. ಒಬ್ಬರೇ ಉದ್ಯೋಗಿಯ ಮೂಲಕ ಗೀತಾ ಸಂಸ್ಥೆಯನ್ನು ಕಟ್ಟಿದರು. ಆದರೆ ಸಾಧಿಸಬೇಕೆಂಬ ಕನಸನ್ನು ಹೊತ್ತಿದ್ದ ಗೀತಾ ಎದೆಗುಂದಲಿಲ್ಲಕೆಲವೊಂದು ದೊಡ್ಡ ಸಂಸ್ಥೆಗಳು ಆಕೆಗೆ ಪ್ರಾಜೆಕ್ಟ್ ಪಡೆಯುವಲ್ಲಿ ನೆರವನ್ನು ನೀಡಿದವು. ಈಗ ಸಂಸ್ಥೆಯು 7 ಕೋಟಿ ಆದಾಯವನ್ನು ಗಳಿಸುತ್ತಿದ್ದು 50 ಉದ್ಯೋಗಿಗಳಿಗೆ ಗೀತಾ ಉದ್ಯೋಗ ನೀಡಿದ್ದಾರೆ 2,200 ಸ್ಕ್ವೇರ್ ಫೀಟ್‌ನ ತಮ್ಮದೇ ಆದ ಸಂಸ್ಥೆಯನ್ನು ಜಸೋಲಾದಲ್ಲಿ ಗೀತಾ ನಿರ್ಮಿಸಿದ್ದಾರೆ.

ಮೊಬೈಲ್ ಇಂಡಿಯಾ ಎಂಬ ವೆಬ್ ಪೋರ್ಟಲ್ ಆಕೆಯ ಮೊದಲ ಪ್ರಾಜೆಕ್ಟ್ ಆಗಿತ್ತು. ಇದೊಂದು ವೆಬ್‌ಸೈಟ್ ಆಗಿದ್ದು ಅವರಿಗೆ ಇಂಗ್ಲೀಷ್ ಮತ್ತು ಹಿಂದಿಲ್ಲಿ ಸುದ್ದಿಗಳು ಬೇಕಾಗಿತ್ತು. ಹೀಗೆ ಗೀತಾ ತಮ್ಮ ಬ್ಯುಸಿನೆಸ್‌ನ ದಿನಗಳನ್ನು ನೆನಪಿಸುತ್ತಾರೆ. ಗೀತಾ ಅವರ ತಂದೆ ಅವರಿಗೆ ಏನೂ ಸಹಾಯ ಮಾಡಿರಲಿಲ್ಲ. ತಮ್ಮ ಮಗಳು ಕೂಡ ತಮ್ಮಂತೆಯೇ ಸರಕಾರಿ ಉದ್ಯೋಗಿಯಾಗಬೇಕೆಂದು ಅವರು ಬಯಕೆಯಾಗಿತ್ತು. ಆದರೆ ಗೀತಾ ತನ್ನದೇ ಆದ ಸಂಸ್ಥೆಯನ್ನು ನಿರ್ಮಿಸಬೇಕೆಂಬ ಗುರಿಯನ್ನು ಹೊತ್ತಿದ್ದಾರೆ ಎಂದು ತಿಳಿದೊಡನೆ ತಂದೆ ಅನುಮತಿ ನೀಡಿರಲಿಲ್ಲ ಹಾಗೆಯೇ ಧನ ಸಹಾಯವನ್ನು ಮಾಡಿರಲಿಲ್ಲ. ಗೀತಾಳ ಹಳ್ಳಿ ಕೂಡ ಪಟ್ಟಣದಿಂದ ತುಂಬಾ ದೂರದಲ್ಲಿತ್ತು.ಪ್ರತಿಯೊಂದು ಮನೆಗಳೂ ತುಂಬಾ ದೂರವಿರುತ್ತಿತ್ತು. ಯಾವುದೇ ಮೂಲ ಸೌಕರ್ಯಗಳನ್ನು ಹಳ್ಳಿ ಹೊಂದಿರಲಿಲ್ಲ. ಗೀತಾ ಅವರ ತಂದೆ ತಮ್ಮ ಪತ್ನಿ ಮತ್ತು ಮಕ್ಕಳು ತನ್ನಂತೆ ಕಷ್ಟದ ಜೀವನವನ್ನು ಅನುಭವಿಸಬಾರದು ಎಂದು ಬಯಸಿದ್ದರು. ಗೀತಾ ಅವರ ತಂದೆಯೇ ಆ ಹಳ್ಳಿಯಲ್ಲಿ ಸರಕಾರಿ ಉದ್ಯೋಗ ದೊರೆತ ಮೊದಲ ವ್ಯಕ್ತಿಯಾಗಿದ್ದರು.

ಗೀತಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೀರತ್‌ಗೆ ಬಂದಿದ್ದಾಗ ಅವರಿಗೆ ಹಿಂದಿ ಕೂಡ ಗೊತ್ತಿರಲಿಲ್ಲವಂತೆ. ಸಹಪಾಠಿಗಳು ಅವರನ್ನು ಗೇಲಿ ಮಾಡುತ್ತಿದ್ದರು. ಅಪಮಾನಗಳನ್ನು ಸಹಿಸಿಕೊಂಡೇ ಗೀತಾ ಯಶಸ್ಸಿನ ಶಿಖರವೇರಿದರು. ಗೀತಾ ಅವರ ತಂದೆ ಆಕೆಗೆ ಯಾವಾಗಲೂ ಯಶಸ್ವಿ ಮಹಿಳೆಯರ ಯಶೋಗಾಥೆಗಳನ್ನು ಹೇಳುತ್ತಿದ್ದರು. ಗೀತಾ ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ತಂದೆಯ ಬಯಕೆಯಾಗಿತ್ತು.

ಕಲಿಕೆಯ ಜೊತೆಗೆ ಗೀತಾ ವೀಡಿಯೊಗಳನ್ನು ಎಡಿಟ್ ಮಾಡುವಂತಹ ತರಬೇತಿಗಳನ್ನು ಪಡೆದುಕೊಂಡರು. ವಿದ್ಯಾಬ್ಯಾಸದ ನಂತರ ಆಕೆ ಬಿಬಿಸಿ ಡಾಕ್ಯುಮೆಂಟರಿ ವಿಭಾಗದಲ್ಲಿ ಕೆಲಸ ಮಾಡಿದರು. ಆಕೆಯ ಮೊಲದ ಸಂಬಳ ರೂ 16,000 ಅಂತೆಯೇ ಫ್ರಿಲ್ಯಾನ್ಸ್ ವೀಡಿಯೊ ಎಡಿಟಿಂಗ್ ಮಾಡಿ ಗಂಟೆಗೆ ರೂ 2000 ದುಡಿಯುತ್ತಿದ್ದರು.

ಆರಂಭಿಕ ದಿನಗಳಲ್ಲಿ ಅವರು ಎಷ್ಟೋ ಜನರಿಗೆ ಉಚಿತವಾಗಿ ಕೆಲಸಮಾಡಿಕೊಡುತ್ತಿದ್ದರು. ಸಂಸ್ಥೆ ಹುಟ್ಟುಹಾಕಿದ ನಂತರ ಅವರೇ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ನೀಡುವಲ್ಲಿ ಸಹಾಯಮಾಡಿದರು ಎಂದು ಗೀತಾ ನೆನಪಿಸಿಕೊಳ್ಳುತ್ತಾರೆ. ಮೊದಲಿಗೆ ಸಣ್ಣ ಪ್ರಾಜೆಕ್ಟ್‌ಗಳಿಂದ ತೊಡಗಿ ನಂತರ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಗೀತಾ ಕೈಗೆತ್ತಿಕೊಂಡರು. ಗೀತಾ ನಡೆದು ಬಂದ ದಾರಿ ಸುಲಭದ್ದಾಗಿರಲಿಲ್ಲ.ಕಷ್ಟದ ಹಾದಿಯನ್ನೇ ಅವರು ಸವೆಸಿ ಬಂದಿದ್ದಾರೆ. ಆದರೆ ಸಾಧಿಸಬೇಕೆನ್ನುವ ಛಲ ಅವರಿಗಿದ್ದದರಿಂದ ಆಕೆ ಯಶಸ್ಸನ್ನು ಪಡೆದುಕೊಂಡರು.

Advertisement
Share this on...