ಕೊರೋನಾ ಸಂಕಷ್ಟದ ಮಧ್ಯೆ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿರುವ ದೇಶದ ಜನರಿಗೆ ಗುಡ್ ನ್ಯೂಸ್: ಜೀವನಪರ್ಯಂತ ನಿಮ್ಮನ್ನ ಕಾಪಾಡಲಿದೆ ವ್ಯಾಕ್ಸಿನ್

in Helath-Arogya/Kannada News/ಕನ್ನಡ ಆರೋಗ್ಯ 374 views

ಕೊರೊನಾ ವೈರಸ್ ಎರಡನೇ ಅಲೆ ಬಿಕ್ಕಟ್ಟಿನ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯುಎಸ್ ಮೂಲದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಕೊರೊನಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ದೇಹವು ಯಾವಾಗಲೂ ಕೊರೊನಾ ವಿರುದ್ಧ ಹೋರಾಡಲು ಸಿದ್ಧವಾಗಿರುತ್ತದೆ ಎಂದಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ರಕ್ಷಾಕವಚವಾಗಿರುವ ಪ್ರತಿಕಾಯಗಳು ಸದಾ ನಿಮ್ಮ ಜೊತೆಗಿರುತ್ತವೆ. ಕೊರೊನಾದಿಂದ ಚೇತರಿಸಿಕೊಂಡ 11 ತಿಂಗಳ ನಂತ್ರ ಮತ್ತೆ ಪ್ರತಿಕಾಯಗಳು ಬೆಳೆಯುತ್ತವೆ. ಸೌಮ್ಯ ಲಕ್ಷಣದಿಂದ ಚೇತರಿಸಿಕೊಂಡವರ ದೇಹದಲ್ಲಿ ಒಂದು ತಿಂಗಳ ನಂತ್ರವೂ ರೋಗನಿರೋಧಕ ಕೋಶಗಳು ವೈರಸ್ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

Advertisement

ಆಶ್ಚರ್ಯಕರ ಸಂಗತಿಯೆಂದರೆ ಈ ಪ್ರತಿಕಾಯಗಳು ಜೀವಿತಾವಧಿಯಲ್ಲಿ ಮಾನವ ದೇಹದಲ್ಲಿ ಉಳಿಯಬಹುದು. ಸ್ವಲ್ಪ ಕಾಳಜಿ ವಹಿಸಿದ್ರೆ ಕೊರೊನಾಕ್ಕೆ ಭಯಪಡದೆ ಇಡೀ ಜೀವನವನ್ನು ಕಳೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಹಿಂದೆ ಕೊರೊನಾ ಕಾಡಿದ ನಂತ್ರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎನ್ನಲಾಗಿತ್ತು. ಆದ್ರೆ ಅದು ತಪ್ಪು. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಪ್ರತಿಕಾಯಗಳು ದುರ್ಬಲವಾದ್ರೂ ಶೀಘ್ರವೇ ಅವು ಬಲಪಡೆಯುತ್ತವೆ ಎನ್ನಲಾಗಿದೆ.

ಈ ಬಗ್ಗೆ ICMR ಹೇಳಿದ್ದೇನು?

ದೇಶಾದ್ಯಂತ ಕೊರೋನಾ ಪ್ರಕರಣಗಳು ಏರುತ್ತಿರುವ ನಡುವೆ ನೆಮ್ಮದಿಯ ವಿಚಾರವೊಂದು ಬಯಲಾಗಿದೆ. ಇಂಡಿಯನ್‌ ಕೌನ್ಸಿಲ್ ಆಫ್‌ ಮೆಡಿಕಲ್ ರಿಸರ್ಚ್(ICMR) ಅಧ್ಯಯನದಲ್ಲಿ ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್, ರೂಪಾಂತರಗೊಳ್ಳುತ್ತಿರುವ ಕೊರೋನಾ ವೈರಸ್‌ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂಬುವುದು ಸಾಬೀತಾಗಿದೆ.

ICMR ಅನ್ವಯ ಈ ಲಸಿಕೆ ಕೊರೋನಾದ ಬ್ರಿಟನ್, ಬ್ರೆಜಿಲ್, ಹಾಗೂ ಆಫ್ರಿಕನ್ ವೇರಿಯಂಟ್‌ ಮಣಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಡಬಲ್ ರೂಪಾಂತರಿ ಕೊರೋನಾ ಅಪಾಯವನ್ನೂ ದೂರ ಮಾಡುತ್ತದೆ.

ಒಂದು ವರ್ಷದಲ್ಲಿ 70 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲಿದೆ ಬಯೋಟೆಬಯೋಟೆಕ್

ಇನ್ನು ಭಾರತ್‌ ಬಯೋಟೆಕ್ ಲಸಿಕೆ ಉತ್ಪಾದನೆ ಕುರಿತು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಇದು ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿದೆ ಎಂದಿದೆ. ಕಂಪನಿಯನ್ವಯ ಒಂದು ವರ್ಷದಲ್ಲಿ ಇದು ಒಂದು ವರ್ಷದಲ್ಲಿ 70 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲಿದೆ.

ಭಾರತದಲ್ಲಿ ಈವರೆಗೂ 13 ಕೋಟಿ ಮಂದಿಗೆ ಲಸಿಕೆ

ಭಾರತದಲ್ಲಿ ಈವರೆಗೆ ಒಟ್ಟು 13 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನು ಭಾರತ ಕೇವಲ 95 ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಲಸಿಕೆ ನೀಡಿದೆ ಎಂಬುವುದು ಮತ್ತೊಂದು ಗಮನಾರ್ಹ ವಿಚಾರ. ಅಮೆರಿಕದಲ್ಲಿ 13 ಡೋಸ್ ಲಸಿಕೆ ನೀಡಲು 101 ದಿನಗಳು ತಗುಲಿತ್ತು. ಚೀನಾದಲ್ಲಿ 109 ದಿನಗಳು ತಗುಲಿತ್ತು.

ವ್ಯಾಕ್ಸಿನ್ ತೆಗೆದುಕೊಳ್ಳಲು ಉತ್ತೇಜಿಸುತ್ತಿರುವ ಕೇಂದ್ರ ಸರ್ಕಾರ ನೀಡಲಿದೆ 5000 ರೂ. ನೀವು ಮಾಡಬೇಕಾದ್ದು ಇಷ್ಟೇ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಿದೆ. ಈಗ ಈ ಅಭಿಯಾನಕ್ಕೆ ಇನ್ನಷ್ಟು ಜೋರನ್ನು ನೀಡಲು, ಅದರ ವೇಗವನ್ನು ಹೆಚ್ಚಿಸಲು ಕೆಲವು ವಿಶೇಷ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಪ್ರಸ್ತುತ ಲಸಿಕೆಯ ಅಭಿಯಾನದಲ್ಲಿ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ಇನ್ನೂ ಕೂಡಾ ಕೆಲವರಲ್ಲಿ ಲಸಿಕೆಯ ಕುರಿತಾಗಿ ಅನುಮಾನಗಳು ಹಾಗೂ ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿ ಇರುವುದರಿಂದ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಆದರೆ ಇದೆಲ್ಲದರ ನಡುವೆ ಕೇಂದ್ರ ಸರ್ಕಾರವು ಲಸಿಕೆಯನ್ನು ಹಾಕಿಸಿಕೊಳ್ಳಲು ಜನರಿಗೆ ಸ್ಪೂರ್ತಿಯನ್ನು ನೀಡಲು ಮುಂದಾಗಿದೆ.

ಕೋವಿಡ್ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿರುವ ಈ ಸಂದರ್ಭದಲ್ಲಿ ದೇಶದ ನಾಗರಿಕರು ಮನೆಯಲ್ಲಿ ಕುಳಿತುಕೊಂಡು ಐದು ಸಾವಿರ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ಸರ್ಕಾರವು ನೀಡಲು ಮುಂದಾಗಿದೆ. ಯಾವ ವ್ಯಕ್ತಿಯು ತಾನು ಕೋವಿಡ್ ಲಸಿಕೆಯನ್ನು ಪಡೆದಿರುವ ಒಂದು ಫೋಟೋವನ್ನು ಶೇರ್ ಮಾಡಿಕೊಂಡು, ಅದರ ಜೊತೆಗೆ ಒಂದು ಅರ್ಥಗರ್ಭಿತವಾದ ಹಾಗೂ ಆಕರ್ಷಕವಾದ ಟ್ಯಾಗ್ ಲೈನ್ ಹಾಕಿದರೆ ಅಂತಹವರಿಗೆ ಬಹುಮಾನವಾಗಿ ಸರ್ಕಾರದ ವತಿಯಿಂದ ₹5000 ಸಿಗಲಿದ್ದು, ಇದು ನಗದು ಬಹುಮಾನ ವಾಗಿರಲಿದೆ ಎನ್ನಲಾಗಿದೆ

ಮನೆಯಲ್ಲೇ ಕುಳಿತುಕೊಂಡು 5000 ರೂಪಾಯಿಗಳ ಬಹುಮಾನ ಗೆಲ್ಲುವುದು ಹೇಗೆ ಎನ್ನುವ ವಿಷಯವನ್ನು ತಿಳಿಯೋಣ ಬನ್ನಿ. Mygovtindia ದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೀಡಲಾಗಿದೆ. ಟ್ವೀಟ್ ನಲ್ಲಿ,” ನೀವು ಇತ್ತೀಚಿಗಷ್ಟೇ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ, ನೀವು ದೇಶದ ಲಕ್ಷಗಟ್ಟಲೆ ನಾಗರಿಕರಿಗೆ ವ್ಯಾಕ್ಸಿನ್ ಪಡೆಯಲು ಪ್ರೇರಣೆಯನ್ನು ನೀಡಬಹುದು. ನೀವು ಲಸಿಕೆಯನ್ನು ಪಡೆದಂತಹ ಫೋಟೋ ಹಾಗೂ ಅದರ ಜೊತೆಗೆ ಒಂದು ಆಕರ್ಷಕವಾದ ಟ್ಯಾಗ್ ಲೈನ್ ಹಾಕುವ ಮೂಲಕ ಐದು ಸಾವಿರ ರೂಪಾಯಿಗಳನ್ನು ಗೆಲ್ಲಬಹುದು” ಎಂದು ತಿಳಿಸಲಾಗಿದೆ.

ಮೈ ಗೌರ್ನಮೆಂಟ್ ಇಂಡಿಯಾ ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವುದಕ್ಕಾಗಿ ಒಂದು ಲಿಂಕ್ ಶೇರ್ ಮಾಡಿದ್ದು ಅದರಲ್ಲಿ ಲಸಿಕೆಯನ್ನು ಪಡೆದ ಫೋಟೋವನ್ನು ಶೇರ್ ಮಾಡಿಕೊಳ್ಳಬೇಕಿದೆ. ಪ್ರತಿ ತಿಂಗಳು ಆಕರ್ಷಕವಾಗಿರುವ ಟ್ಯಾಗ್ ಲೈನ್ ಗಳನ್ನು ಹೊಂದಿರುವ ಹತ್ತು ಜನರ ಫೋಟೋಗಳನ್ನು ಆಯ್ಕೆ ಮಾಡಿ, ಅವರಿಗೆ ತಲಾ 5000 ರೂಪಾಯಿಗಳ ಬಹುಮಾನವನ್ನು ನೀಡಲಾಗುವುದು. ಕೋವಿಡ್ ವ್ಯಾಕ್ಸಿನ್ ಪಡೆಯುವ ವಿಚಾರವಾಗಿ ಜನರಿಗೆ ಪ್ರೇರಣೆ ನೀಡುವಂತಹ ಟ್ಯಾಗ್ ಲೈನ್ ಹಾಕಿದ್ದರೆ ಖಂಡಿತ ಬಹುಮಾನ ಸಿಗುತ್ತದೆ ಎನ್ನಲಾಗಿದೆ. ಇದಕ್ಕಾಗಿ Mygovtindia ಪೋರ್ಟಲ್ ನಲ್ಲಿ ಎಲ್ಲಾ‌ ಮಾಹಿತಿಗಳು ಲಭ್ಯವಿದೆ.

 

Advertisement
Share this on...