ಕೊರೋನಾದಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ ಕಂಡುಬರುತ್ತಿದೆ MIS ಎಂಬ ಅಪಾಯಕಾರಿ ಕಾಯಿಲೆ: ಏನಿದರ ಲಕ್ಷಣಗಳು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 28,665 views

ಕೊರೊನಾದ 2ನೇ ಅಲೆ ಇನ್ನೂ ಕಡಿಮೆಯಾಗಿಲ್ಲ, ಎರಡನೇ ಅಲೆಯಲ್ಲಿ ಸಮಧಾನಕರ ಸಂಗತಿಯೆಂದರೆ ಮಕ್ಕಳಿಗೆ ಅಷ್ಟೇನು ಸೋಂಕು ತಗುಲಿಲ್ಲ, ಆದರೆ ಇದೀಗ ಮಕ್ಕಳ ವಿಷಯದಲ್ಲಿ ಒಂದು ಆತಂಕ ಎದುರಾಗಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ MIS ಸಮಸ್ಯೆ ಅಂದ್ರೆ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್‌ ಕಂಡು ಬರುತ್ತಿದೆ.

Advertisement

ಮಹಾರಾಷ್ಟ್ರದಲ್ಲಿ ಈ ಕೇಸ್‌ಗಳು ಪತ್ತೆಯಾಗಿದ್ದು ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ನ ಮಕ್ಕಳ ತಜ್ಞರಾದ ಡಾ. ಸಂಜೀವ್‌ ಜೋಶಿ MIS ಸಮಸ್ಯೆ 2-12 ವರ್ಷ ಪ್ರಾಯದ 6 ಮಕ್ಕಳಲ್ಲಿ ಕಂಡು ಬಂದಿರುವುದಾಗಿ ಹೇಳಿದ್ದಾರೆ.

ಆದ್ದರಿಂದ ಕೋವಿಡ್‌ನಿಂದ ಗುಣಮುಖರಾದ ಪೋಷಕರು ಮಕ್ಕಳಲ್ಲಿ MIS ಲಕ್ಷಣಗಳು ಕಂಡು ಬರುತ್ತಿದೆಯೇ ಎಂದು ಗಮನ ಇಡುವಂತೆ ಸೂಚಿಸಲಾಗಿದೆ.

MIS ಲಕ್ಷಣಗಳೇನು?

ಕವಾಸಕಿ ಕಾಯಿಲೆಯ ಲಕ್ಷಣಗಳೇ ಇದರಲ್ಲಿಯೂ ಕಂಡು ಬರುತ್ತಿದೆ. ಮಕ್ಕಳಲ್ಲಿ ಉರಿಯೂತದ ಸಮಸ್ಯೆ ಕಂಡು ಬರುತ್ತಿದೆ. ಜೊತೆಗೆ ಈ ಲಕಗ್ಷಣಗಳೂ ಕಂಡು ಬರುವುದು

ಜ್ವರ, ಉಸಿರಾಟದಲ್ಲಿ ತೊಂದರೆ, ಹೊಟ್ಟೆ ನೋವು, ತ್ವಚೆ ಬಣ್ಣದಲ್ಲಿ ವ್ಯತ್ಯಾಸ, ಉಗುರಿನ ಬಣ್ಣದಲ್ಲಿ ವ್ಯತ್ಯಾಸ, ಆದರೆ ಕೊರೊನಾ ಪರೀಕ್ಷೆ ಮಾಡಿದಾಗ ನೆಗೆಟಿವ್‌ ಬರುತ್ತದೆ.

ಇತರ ಲಕ್ಷಣಗಳು

ವಾಂತಿ, ಬೇಧಿ, ತುಂಬಾ ಸುಸ್ತು, ಜೋರಾದ ಎದೆ ಬಡಿತ, ಕಣ್ಣುಗಳು ಕಂಪಾಗುವುದು, ತುಟಿ ಮತ್ತು ನಾಲಗೆಯಲ್ಲಿ ಊತ, ಕಾಲು, ಪಾದಗಳಲ್ಲಿ ಊತ, ತಲೆನೋವು

ಈ ಲಕ್ಷಣಗಳು ಬಂದ್ರೆ ಎಚ್ಚರಿಕೆ

ತುಂಬಾ ಹೊಟ್ಟೆ ನೋವು, ಉಸಿರಾಟದಲ್ಲಿ ತೊಂದರೆ, ಬಿಳುಚಿದ ಅಥವಾ ನೀಲಿ ಬಣ್ಣದ ತುಟಿ, ಗೊಂದಲ, ಎದ್ದೇಳಲು ಸಾಧ್ಯವಾಗದಿರುವುದು

ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ನೀಡಬೇಕು.

ಕಾರಣಗಳು

MISಗೆ ನಿಖರ ಕಾರಣವೇನೆಂದು ವೈದ್ಯರಿಗೆ ಗೊತ್ತಿಲ್ಲ… ಅತ್ಯಧಿಕ ಪ್ರತಿರೋಧಕ ಪ್ರತಿಕ್ರಿಯೆಯಿಂದಾಗಿ ಈ ರೀತಿಯಾಗುವುದು, MIS ಇರುವ ಮಕ್ಕಳಲ್ಲಿ ಕೋವಿಡ್‌ ಆ್ಯಂಟಿಬಾಡೀಸ್‌ ಕಂಡು ಬಂದಿದೆ.

ಅಪಾಯವೇನು?

ಈ ಲಕ್ಷಣಗಳನ್ನು ಪ್ರಾರಂಭದ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುವುದು. ಅಲ್ಲದೆ ಮಕ್ಕಳ ಹೃದಯ, ಕಿಡ್ನಿ, ಶ್ವಾಸಕೋಶಕ್ಕೆ ಶಾಶ್ವತ ಹಾನಿಯುಂಟಾಗಬಹುದು, ಇದರಿಂದ ಸಾವು ಕೂಡ ಸಂಭವಿಸಬಹುದು.

ಆದ್ದರಿಂದ ಪೋಷಕರು ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಡೆ ಮಾಡದೆ ಚಿಕಿತ್ಸೆ ಕೊಡಿಸಬೇಕು.

ವ್ಯಾಕ್ಸಿನ್ ಸಿಕ್ಕಿತೋ ಇಲ್ವೋ ಗೊತ್ತಿಲ್ಲ ಆದರೆ ಈ ಮೂರನ್ನ ಪಾಲಿಸಿ ನಿಮ್ಮನ್ನ ಕರೋನಾದಿಂದ ರಕ್ಷಿಸಿಕೊಳ್ಳಿ

ದೇಶದಲ್ಲಿ ಕೊರೋನಾ ಎರಡನೇ ಅಲೆ ದಾಳಿ ಇಟ್ಟಿದೆ. ಹೀಗಿರುವಾಗಲೇ ದೇಶಾದ್ಯಂತ 18 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಿ ಆಗಿದೆ. ಲಸಿಕೆ ಪಡೆದ ಬಳಿಕ ಕೊರೋನಾ ಮಾರ್ಗಸೂಚಿ ಪಾಲಿಸಿ, ಇಲ್ಲದಿದ್ದರೆ ಕೊರೋನಾ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಟ್ವೀಟ್ ಮಾಡಿ ಕೊರೋನಾ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಲಸಿಕೆ ಹಾಕಿಸಿಕೊಂಡಿದ್ದೀರೋ, ಇಲ್ವೋ ಮಾಸ್ಕ್ ತಪ್ಪದೇ ಹಾಕಿ

ನೀವು ಲಸಿಕೆ ಹಾಕಿಸಿಕೊಂಡಿದ್ದೀರೋ ಇಲ್ವೋ.. ಆದರೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ವೆಂಟಿಲೇಷನ್ ಈ ಮೂರು ವಿಚಾರಗಳು ಕೊರೋನಾ ತಡೆಯಲು ಅತ್ಯಗತ್ಯ. ಜನರು ತಮ್ಮ ಈ ಮೂರು ಸುರಕ್ಷಾ ಕವಚ ಎಂದಿಗೂ ದೂರ ಮಾಡಬೇಡಿ ಎಂದು ರಾಘವನ್ ಟ್ವೀಟ್ ಮಾಡಿದ್ದಾರೆ.

ಕೊರೋನಾ ಪ್ರಕರಣದಲ್ಲಿ ಇಳಿಕೆ

ಭಾರತದಲ್ಲಿ ಶುಕ್ರವಾರ 3,26,098 ಹೊಸ ಕೊರೋನಾ ಪ್ರಕರಣ ಹಾಗೂ 3,980 ಪ್ರಕರಣ ದಾಖಲಾಗಿವೆ. ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಈ ಅಂಕಿ ಅಂಶಗಳು ಕಳೆದ 24 ಗಂಟೆಯಲ್ಲಿ 31,000 ಪ್ರಕರಣಗಳು ಕಡಿಮೆಯಾಗಿರುವುದಾಗಿ ತಿಳಿಸಿದೆ.

ಕೊರೋನಾ ಮೂರನೇ ಅಲೆ ಬರುವುದು ಖಚಿತ

ಕೇಂದ್ರ ಸರ್ಕಾರ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೊರೋನಾದ ಮೂರನೇ ಅಲೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇದು ಯಾವಾಗ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ನಾವು ಮೊದಲೇ ತಯಾರಾಗಿರಬೇಕು. ಸೋಂಕು ಹೆಚ್ಚುತ್ತಿದ್ದಂತೆಯೇ ಜನರ ರೋಗ ನಿರೋಧಕ ಶಕ್ತಿಯೂ ಹೆಚ್ಚಲಿ ಎಂದಿದ್ದಾರೆ.

Advertisement
Share this on...