ಸದ್ಯ ಇಡೀ ಪ್ರಪಂಚವನ್ನು ಕಾಡುತ್ತಿರುವ ಕೋವಿಡ್ 19 ವಿರುದ್ಧ ಹೋರಾಡಲು ಗ್ರೀನ್ ಟೀ ಸಹಾಯ ಮಾಡಬಹುದೇ?
ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡು ನಡೆಸಿದ ಅಧ್ಯಯನದಲ್ಲಿ ಹೊಸ ಮಾಹಿತಿಯೊಂದು ಹೊರಬಿದಿದ್ದೆ.
‘ಆರ್‌ಎಸ್‌ಸಿ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಚಹಾವು COVID-19 ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಗ್ಯಾಲೋಕಾಟೆಚಿನ್ ಎಂಬ ಹಸಿರು ಚಹಾದಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹಸಿರು ಚಹಾದಲ್ಲಿನ ಸಂಯುಕ್ತಗಳಲ್ಲಿ ಒಂದು ಕೋವಿಡ್-19 ರ ಹಿಂದಿನ ಕೊರೊನಾ ವೈರಸ್ ಅನ್ನು ಎದುರಿಸಬಹುದು ಎಂದು ನಮ್ಮ ಸಂಶೋಧನೆಗಳು ಸೂಚಿಸಿವೆ’ ಎಂದು ಡಾ. ಮೋಹನ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ಹೆಲ್ತ್ ಟಿಪ್: ಅಸ್ತಮಾ, ಕೆಮ್ಮು ಹಾಗು ಇನ್ನಿತರ ರೋಗಗಳಿಗೆ ನಿಮ್ಮ ಮನೆಯ ಅಡುಗೆ ಮನೆಯಲ್ಲೇ ಇದೆ ಪರಿಣಾಮಕಾರಿ ಔಷಧಿ: ಹೀಗೆ ಬಳಕೆ ಮಾಡಬೇಕಷ್ಟೇ
ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ.
– ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್, ಕ್ಯಾಲ್ಸಿಯಂ, ಕ್ಯಾರೊಟೀನ್ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ.
– ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
– ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
– ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಕರಗಿಸುವಲ್ಲಿ, ತೂಕ ನಿಯಂತ್ರಣದಲ್ಲಿ ಸಹಕಾರಿ.
– ಕರಿಬೇವಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
– ಕರಿಬೇವಿನಲ್ಲಿರುವ ಆಯಂಟಿ ಆಕ್ಸಿಡೆಂಟ್ಸ್ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸಬಲ್ಲದು.
– ಲಿವರ್ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ.
– ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.
– ಕರಿಬೇವಿನ ರಸವನ್ನು, ಬೆಲ್ಲದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಕುಡಿದರೆ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.
– ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣಮುಖವಾಗುತ್ತವೆ.
– ಅಪೌಷ್ಟಿಕತೆಯಿಂದ ಕೂದಲು ಬಿಳಿಯಾಗುವುದನ್ನು ಕರಿಬೇವು ತಡೆಯಬಲ್ಲದು.
-ಪ್ರತಿದಿನ ಬೆಳಗ್ಗೆ ಕರಿಬೇವಿನ ಎಲೆ ತಿನ್ನುವುದರಿಂದ, ಕೊಬ್ಬರಿ ಎಣ್ಣೆಯಲ್ಲಿ ಕರಿಬೇವನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಬಾಲ ನೆರೆ ತಡೆಯಬಹುದು.
-ಕೂದಲು ಸೊಂಪಾಗಿ ಬೆಳೆಯಲು, ಕರಿಬೇವಿನಲ್ಲಿರುವ ಕಬ್ಬಿಣಾಂಶ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪುದೀನಾ ಎಲೆಗಳನ್ನ ಮನೆಮದ್ದಾಗಿ ಬಳಸಲು ಈ ರೀತಿಯಾಗಿ ಮಾಡಿ
ಲಾಕ್ ಡೌನ್ ನಿಂದಾಗಿ ಮನೆಯಲ್ಲಿರುವವರಿಗೆ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಗೆ ಇದೊಂದು ಸುವರ್ಣಾವಕಾಶ. ಮನೆಯಲ್ಲಿರುವ ಪುದೀನಾ ಎಲೆಗಳಿಂದ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು.
ಪುದೀನಾ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಎ ಹೊಂದಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಪುದೀನದಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುತ್ತದೆ. ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ.
ಮುಖದ ಕೊಳೆಯನ್ನು ತೆಗೆದು ಹಾಕಲು ಪುದೀನ ಮಾಸ್ಕ್ ಹಾಕಿಕೊಳ್ಳಿ. ಇದಕ್ಕಾಗಿ ಅಡುಗೆ ಮನೆಯಲ್ಲೇ ಇರುವ ಸಾಮಗ್ರಿಗಳು ಸಾಕು. ಮನೆಯಲ್ಲಿ ಪುದೀನ ಮಾಸ್ಕ ತಯಾರಿಸಲು, ಪುದೀನ ಎಲೆಗಳು, ಸೌತೆಕಾಯಿ ಮತ್ತು ಮುಲ್ತಾನಿಯನ್ನು ಒಂದು ಪಾತ್ರೆಯಲ್ಲಿ ಪುಡಿಮಾಡಿ ಪೇಸ್ಟ್ ಮಾಡಿ. ಐದು ನಿಮಿಷ ಹಾಗೇ ಇಡಿ.
ಚರ್ಮದಲ್ಲಿನ ಜಿಡ್ಡಿನಂಶವನ್ನು ತೆಗೆದು ಹಾಕಲು ಮುಲ್ತಾನಿ ಮಿಟ್ಟಿ ಬಳಸಲಾಗುತ್ತದೆ. ನಂತರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಪೇಸ್ಟ್ ಒಣಗಿದ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮುಖಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಸೌತೆಕಾಯಿಯನ್ನು ಹಚ್ಚಲು ಇಷ್ಟಪಡದವರು ರೋಸ್ ವಾಟರ್ ಮತ್ತು ಜೇನುತುಪ್ಪದೊಂದಿಗೆ ಪುದೀನ ಎಲೆಗಳನ್ನು ಬಳಸಬಹುದು. ಪುದೀನ ಎಲೆಗಳನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ಪೇಸ್ಟ್ ಮುಖಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಮುಖ ಕಾಂತಿಯುಕ್ತವಾಗುವುದು.