“ಕೋರ್ಟ್‌ಗೆ ಹಾಜರಾಗಿ‌ ಇಲ್ಲಾಂದ್ರೆ ಪರಿಣಾಮ ಎದುರಿಸಿ” ಗೃಹಸಚಿವ ಅಮಿತ್ ಶಾಹ್ ಗೆ ನ್ಯಾಯಾಲಯದಿಂದ ಎದುರಾಯ್ತು ಸಂಕಷ್ಟ

in Kannada News/News 257 views

ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಮುನ್ನ ನಡೆಯುತ್ತಿರುವ ರಾಜಕೀಯ ಯು-ದ್ಧ-ವು ಈಗ ಕಾನೂನು ವಿವಾದವಾಗಿ ಬದಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಗೃಹ ಸಚಿವ ಅಮಿತ್ ಶಾ ವಿ-ರು-ದ್ಧ ಮಾ-ನ ನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಸಂಸದ-ಶಾಸಕರ ವಿಶೇಷ ನ್ಯಾಯಾಲಯ ಫೆಬ್ರವರಿ 22 ರಂದು ಅಮಿತ್ ಶಾ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಆದಾಗ್ಯೂ ಅಮಿತ್ ಶಾ ಅವರನ್ನು ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಅವರು ತಮ್ಮ ವಕೀಲರ ಮೂಲಕವೂ ತನ್ನ ಪ್ರಕರಣವನ್ನು ಪ್ರಸ್ತುತಪಡಿಸಬಹುದು ಎಂದು ಹೇಳಲಾಗಿದೆ.

Advertisement

ಅಭಿಷೇಕ್ ಬ್ಯಾನರ್ಜಿ ಪರ ವಕೀಲ ಸಂಜಯ್ ಬಸು ಮಾತನಾಡುತ್ತ, “ಫೆಬ್ರವರಿ 22 ರಂದು 10 ಗಂಟೆಗೆ ಅಮಿತ್ ಷಾ ಅವರನ್ನು ವೈಯಕ್ತಿಕವಾಗಿ ಅಥವಾ ಅವರ ವಕೀಲರ ಮೂಲಕ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಆದೇಶಿಸಿದೆ” ಎಂದಿದ್ದಾರೆ‌. ಈ ಪ್ರಕರಣ 2018 ರದ್ದಾಗಿದ್ದು ಅಮಿತ್ ಶಾಹ್ ಅಭಿಷೇಕ್ ಬ್ಯಾನರ್ಜಿ ವಿ-ರು-ದ್ಧ ಆ-ರೋ-ಪ-ಗಳನ್ನ ಮಾಡಿದ್ದರು. ಆಗಸ್ಟ್ 11, 2018 ರಂದು, ಬಿಜೆಪಿಯ ಯುವ ಸ್ವಾಭಿಮಾನ ರ್ಯಾಲಿಯಲ್ಲಿ, ಅಮಿತ್ ಶಾ ಮಮತಾ ಬ್ಯಾನರ್ಜಿಯ ಸೋದರಳಿಯನ ವಿರುದ್ಧ ಭ್ರ-ಷ್ಟಾ-ಚಾ-ರ-ದ ಆ-ರೋ-ಪ ಮಾಡಿದ್ದರು.

ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ ಮಾ-ನ ಹಾ-ನಿ ಪ್ರಕರಣದಲ್ಲಿ, ಅಮಿತ್ ಶಾ ತಮ್ಮ ಮೇಲೆ ಭ್ರ-ಷ್ಟಾ-ಚಾ-ರ-ದ ಆ-ರೋ-ಪ ಹೊರಿಸಿ ತಮ್ಮ ವ್ಯಕ್ತಿತ್ವಕ್ಕೆ ಕ-ಳಂ-ಕ ತಂದಿದ್ದಾರೆ ಎಂದು ಆ-ರೋ-ಪಿ-ಸಲಾಗಿದೆ. ರ‌್ಯಾಲಿಯಲ್ಲಿ ಅಮಿತ್ ಶಾಹ್ ಮಾತನಾಡುತ್ತಾ, “ನಾರದಾ, ಶಾರದಾ, ರೋಸ್ ವ್ಯಾಲಿ, ಸಿಂಡಿಕೇಟ್ ಭ್ರ-ಷ್ಟಾ-ಚಾ-ರ, ಸೋದರಳಿಯ ಭ್ರ-ಷ್ಟಾ-ಚಾ-ರ ಹೀಗೆ ಮಮತಾ ಬ್ಯಾನರ್ಜಿ ಸತತವಾಗಿ ಭ್ರ-ಷ್ಟಾ-ಚಾ-ರವನ್ನು ಮಾಡಿದ್ದಾರೆ” ಎಂದು ಹೇಳಿದ್ದರು. ಕೋಲ್ಕತ್ತಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ ಹೀಗೆ ಹೇಳಿದ್ದರು. ಇದಲ್ಲದೆ, ಅಮಿತ್ ಷಾ ಅವರ ಮತ್ತೊಂದು ಹೇಳಿಕೆಯನ್ನೂ ಅಭಿಷೇಕ್ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ.

ಈ ಹೇಳಿಕೆಯಲ್ಲಿ, ಅಮಿತ್ ಶಾ, “ಬಂಗಾಳದ ಹಳ್ಳಿಗಳ ಜನರೇ ನಿಮ್ಮ ಗ್ರಾಮದವರೆಗೆ ಸರ್ಕಾರದ ಹಣ ತಲುಪುತ್ತದೆಯೇ? ಜೋರಾಗಿ ಹೇಳಿ. ಹಣವು ನಿಮ್ಮ ಗ್ರಾಮವನ್ನು ತಲುಪುತ್ತದೆಯೇ? ಅದು ಎಲ್ಲಿಗೆ ಹೋಗುತ್ತದೆ? ಮೋದಿ ಜಿ ಕಳಿಸಿದ 3,59,000 ಕೋಟಿ ರೂ ಎಲ್ಲಿಗೆ ಹೋಯಿತು? ಅದನ್ನು ಸೋದರಳಿಯ ಮತ್ತು ಸಿಂಡಿಕೇಟ್‌ಗೆ ಉಡುಗೊರೆಯಾಗಿ ನೀಡಲಾಗಿದೆಯೇ ಅಥವಾ ತೃಣಮೂಲ ಕಾಂಗ್ರೆಸ್‌ನ ಭ್ರ-ಷ್ಟಾ-ಚಾ-ರ ಮಾಡಿ ನುಂ-ಗಿ ಹಾಕಿತಾ?” ಎಂದು ಹೇಳಿದ್ದರು.

ಇದನ್ನೂ ಓದಿ: ಮತಾಂತರವಾಗುವವರಿಗೆ ಬಿಗ್ ಶಾಕ್ ಕೊಟ್ಟ ಅಮಿತ್ ಶಾಹ್

ದೇಶದ ಗೃಹಮಂತ್ರಿ ಅಮಿತ್ ಶಾಹ್ ಮಹತ್ವದ ಹೆಜ್ಜೆಯೊಂದನ್ನ ಇಡುವುದರ ಮೂಲಕ ಖಡಕ್ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯದಿಂದಾಗಿ ವಿದೇಶಿ ಮೂಲದಿಂದ ಫಂಡಿಂಗ್ ಬರುತ್ತಿದ್ದ ಎನ್‌ಜಿಓ ಗಳಿಗೆ ಭಾರೀ ಹೊಡೆತ ಬಿದ್ದಿದೆ. ಹೌದು ಎನ್‌ಜಿಓ ಗಳ ಹೆಸರಿನಲ್ಲಿ ಹಿಂದುಗಳನ್ನ ಮತಾಂತರಿಸಲು ವಿದೇಶದಿಂದ ದುಡ್ಡು ಹರಿದುಬರುತ್ತಲೇ ಇದೆ. ಇದೀಗ ಗೃಹಸಚಿವ ಅಮಿತ್ ಶಾಹ್ ರವರು ದೇಶದ ಇಂತಹ ನಾಲ್ಕು ದೊಡ್ಡ ಕ್ರಿಶ್ಚಿಯನ್ ಸಂಘಟನೆಗಳ ವಿದೇಶಿ ಫಂಡಿಂಗ್‌ ಪಡೆಯುತ್ತಿದ್ದ ಎನ್‌ಜಿಓ ಗಳ ಲೈಸೆನ್ಸ್ ರದ್ದು ಮಾಡಿದ್ದಾರೆ. ಭಾರತ ಸರ್ಕಾರ ಇತ್ತೀಚೆಗಷ್ಟೇ ನಾಲ್ಕು ಮಿಷನರಿ ಸಂಘಟನೆಗಳ FCRA ಲೈಸೆನ್ಸ್ ರದ್ದು ಮಾಡಿದೆ.

ಗೃಹ ಸಚಿವಾಲಯದ DATA ಪ್ರಕಾರ, ಫೆಬ್ರವರಿ 10 ರಂದು New Life Fellowship Associationನ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿದೆ!  ಎಫ್‌ಸಿಆರ್‌ಎ ಪರವಾನಗಿಗಳನ್ನು ಅಮಾನತುಗೊಳಿಸಿದ ಆರು ಎನ್‌ಜಿಒಗಳಲ್ಲಿ ನಾಲ್ಕು ಶಾಶ್ವತ ಸಂಘಗಳೂ ಇವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ಝಾರ್ಖಂಡ್‌ನ ಇಕೋಸೌಲಿಸ್ ನಾರ್ತ್ ವೆಸ್ಟರ್ನ್ ಗೋಸ್ನರ್ ಇವಾಂಜೆಲಿಕಲ್, ಮಣಿಪುರದ ಇವಾಂಜೆಲಿಕಲ್ ಚರ್ಚ್ ಅಸೋಸಿಯೇಷನ್ ​​(ಇಸಿಎ), ಝಾರ್ಖಂಡ್‌ನ ನಾರ್ದರ್ನ್ ಇವಾಂಜೆಲಿಕಲ್ ಲೂಥರನ್ ಚರ್ಚದ ಹಾಗು ಮುಂಬೈನ ನ್ಯೂ ಲೈಫ್ ಫೆಲೊಶಿಪ್ ಅಸೋಸಿಯೇಷನ್ NLLA ಕೂಡ ಇವೆ.

ಇದು ಮಾತ್ರವಲ್ಲದೆ ಯುಎಸ್ಎ ಮೂಲದ ಇಬ್ಬರು ಕ್ರಿಶ್ಚಿಯನ್ ಡೋನರ್‌ಗಳು (ದಾನಿಗಳು) ಕೂಡ MHA ರಡಾರ್ ‌ಲ್ಲಿದ್ದಾರೆ.!  ಈ ಎರಡು ಡೊನರ್ ಗಳು ಕೆಳಕಂಡಂತಿವೆ – ಸೆವೆಂತ್ ಡೇ ಎಡ್ವೆಂಟಿಸ್ಟ್ ಚರ್ಚ್ ಮತ್ತು ಬ್ಯಾಪ್ಟಿಸ್ಟ್ ಚರ್ಚ್! ಪ್ರಸ್ತುತ ಇವುಗಳ ಫಂಡಿಂಗ್ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, 2017 ರಲ್ಲಿ, ಯುಎಸ್ ಮೂಲದ ಮತ್ತೊಂದು ಪ್ರಬಲ ಕ್ರಿಶ್ಚಿಯನ್ ಡೋನರ್ ಕಂಪ್ಯಾಷನ್ ಇಂಟರ್ನ್ಯಾಷನಲ್ ಅನ್ನು ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಾಗಿತ್ತು.

ಈ‌ ಸಂಸ್ಥೆಯು ಭಾರತದಲ್ಲಿ ಹಿಂದುಗಳನ್ನ ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಲು ಎನ್‌ಜಿಓ ಮೂಲಕ ಹಣದ ಸರಬರಾಜು ಮಾಡಿತ್ತು ಎಂಬ ಮಾಹಿತಿ ದೇಶದ ಗೃಹ ಸಚಿವಾಲಯಕ್ಕೆ ಸಿಕ್ಕಿತ್ತು. ಏತನ್ಮಧ್ಯೆ, ಎನ್‌ಸಿಒಗಳಲ್ಲಿ ಲೈಸೆನ್ಸ್ ರದ್ದುಪಡಿಸಲಾಗಿರುವ ಎಫ್‌ಸಿಆರ್‌ಎ ಗಳಲ್ಲಿ ಇನ್ನೆರಡು ಸಂಸ್ಥೆಗಳಿದ್ದು ಅವುಗಳು ರಾಜನಂದಗಾಂವ್ ಲೆಪ್ರೋಸಿ ಹಾಸ್ಪಿಟಲ್ & ಕ್ಲಿನಿಕ್ ಮತ್ತು ಡಾನ್ ಬಾಸ್ಕೊ ಟ್ರೈಬಲ್ ಡೆವಲಪ್ಮೆಂಟ್ ಸೊಸೈಟಿ ಆಗಿವೆ.

Advertisement
Share this on...